ಕನ್ನಡದಲ್ಲಿ ಹೆಸರು ಮಾಡಿದ್ದ ಹಾಸ್ಯನಟ ನರಸಿಂಹರಾಜು ಮಗಳು ಕೂಡ ಕನ್ನಡದ ದೊಡ್ಡ ನಟಿ …ನೋಡಿ ಎಷ್ಟು ಕ್ಯೂಟ್

179

ನಮ್ಮ ಕನ್ನಡ ಇಂಡಸ್ಟ್ರಿ ಅಲ್ಲಿ ತಮ್ಮದೇ ಆದ ನಟನೆಯಿಂದ ಇಡೀ ಜಗತ್ತನ್ನೇ ನಕ್ಕುನಲಿಸಿದ ಇವರು ಇವತ್ತಿಗೂ ಇವರ ಹೆಸರು ಅಜರಾಮರ ಹೌದು ಕನ್ನಡ ಇಂಡಸ್ಟ್ರಿಯಲ್ಲಿ ಇವರನ್ನು ಮೀರಿಸುವ ಮತ್ತೊಬ್ಬ ಕಲಾವಿದ ತೊಟ್ಟಿಲ ಮುಂದೆ ಹುಟ್ಟುವುದಿಲ್ಲಾ. ಹೌದು ಅವರೇ ನಮ್ಮ ಸ್ಯಾಂಡಲ್ ವುಡ್ ನ ಚಾರ್ಲಿ ಚಾಪ್ಲಿನ್ ಆಗಿರುವ ನಟ ನರಸಿಂಹರಾಜು ಅವರು ಹಾಸ್ಯ ದಿಗ್ಗಜ ಹಾಗೂ ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರ ಕುರಿತು ಈ ದಿನದ ಲೇಖನದಲ್ಲಿ ನ ಒಂದಿಷ್ಟು ಮಾಹಿತಿ ಬಗ್ಗೆ ತಿಳಿಯೋಣ, ಇನ್ನೂ ಅವರ ಮಗಳು ಯಾರು? ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ.

ಹೌದು  ಜುಲೈ ೨೪ ೧೯೨೩ ರಲ್ಲಿ ತುಮಕೂರಿನ ತಿಪಟೂರಿನಲ್ಲಿ ಜನಿಸಿದರು ಅದ್ಭುತ ಹಾಸ್ಯ ಕಲಾವಿದ ನರಸಿಂಹ ರಾಜು ಇವರ ತಂದೆಯ ಹೆಸರು ರಾಮ ರಾಜು ಮತ್ತು ಇವರು ಪೋಲಿಸ್ ಇಲಾಖೆಯಲ್ಲಿ ಮೊದಲು ನೌಕರರಾಗಿ ಕೆಲಸ ಮಾಡುತ್ತಾ ಇದ್ದರೂ. ಇನ್ನೂ ನರಸಿಂಹರಾಜು ಅವರು ತಮ್ಮ ನಾಲ್ಕನೆಯ ವಯಸ್ಸಿನಲ್ಲಿ ಸಿ ಬಿ ಮಲ್ಲಪ್ಪ ಅವರ ಶ್ರೀ ಚಂದ್ರಮೌಳೇಶ್ವರ ಎಂಬ ನಾಟಕ ಸಭಾದಲ್ಲಿ ಬಾಲ ಕಲಾವಿದನಾಗಿ ಸೇರಿಕೊಂಡಿದ್ದು ಅಲ್ಲಿಯೇ ಬದುಕಿನ ಶಿಕ್ಷಣವಾಗುತ್ತದೆ. ಹಾಸ್ಯ ಪಾತ್ರಗಳಿಗೆ ಹೇಳಿ ಮಾಡಿಸಿದಂತಹ ಮುಖ ಹಾಗೂ ಶರೀರವನ್ನು ಸಹಜವಾಗಿಯೆ ಪಡೆದಿದ್ದ ನರಸಿಂಹರಾಜು ಅವರಿಗೆ ಹಾಸ್ಯ ಪಾತ್ರದ ನಿರ್ವಹಣೆ ಬಹಳ ಸಹಜವಾಗಿಯೇ ಇತ್ತು ಅಂತಾನೇ ಹೇಳಬಹುದು.

ನರಸಿಂಹರಾಜು ಅವರು ರಂಗಮಂಚದ ಮೇಲೆ ಬಂದು ನಿಂತರೆ ಸಾಕು ಅವರ ಪ್ರೇಕ್ಷಕರ ನಗೆಹೊನಲು ನಿಲ್ಲುತ್ತಲೇ ಇರಲಿಲ್ಲ ಅಷ್ಟು ನಕ್ಕು ನಲಿಸುತ್ತಿದ್ದ ನರಸಿಂಹರಾಜು ಅವರು ಪೌರಾಣಿಕ ಪಾತ್ರವನ್ನು ನೀರುಕುಡಿದಂತೆ ಅಭಿನಯ ಮಾಡುತ್ತಿದ್ದರಂತೆ.ನರಸಿಂಹರಾಜು ಅವರು ಬೇಡರ ಕಣ್ಣಪ್ಪ ಎಂಬ ಸಿನಿಮಾದ ಮೂಲಕ ತಮ್ಮ ಸಿನಿ ಜೀವನದ ಆರಂಭ ಮಾಡಿದರು ಇನ್ನು ನರಸಿಂಹರಾಜು ಅವರು ಪ್ರೊಫೆಸರ್ ಹುಚ್ಚೂರಾಯ ಎಂಬ ಚಲನಚಿತ್ರದಲ್ಲಿ ನಾಯಕ ನಟನಾಗಿಯೂ ಕೂಡ ಅಭಿನಯ ಮಾಡಿರುವುದು ವಿಶೇಷ ಎಂದು ಹೇಳಬಹುದು. ಹೌದು ನಟ ನರಸಿಂಹರಾಜು ಅವರು ನಟನೆ ಮಾಡಿರುವ ಹುಚ್ಚೂರಾಯ ಪಾತ್ರವನ್ನ ಅಭಿಮಾನಿಗಳು ಮರೆತಿಲ್ಲ ಇವತ್ತಿಗೂ ಹುಚ್ಚೂರಾಯ ಪಾತ್ರವನ್ನ ಕಂಡರೆ ಜನರು ಇವರನ್ನು ಮೆಚ್ಚಿಕೊಳ್ಳದೇ ಇರಲು ಸಾಧ್ಯವೇ ಇಲ್ಲ ಅಂತಾ ಹೇಳಬಹುದು ಅಷ್ಟು ಅದ್ಬುತವಾಗಿ ಅಭಿನಯ ಮಾಡಿದರೂ ನರಸಿಂಹರಾಜು ಅವರು ಈ ಪಾತ್ರವನ್ನು.

ಇನ್ನೂ  ನರಸಿಂಹರಾಜು ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ನರಸಿಂಹರಾಜು ಅವರ ಮೊದಲ ಮಗಳ ಹೆಸರು ಸುಧಾ ನರಸಿಂಹರಾಜು ಎಂದು ಮತ್ತು ಮತ್ತೊಬ್ಬ ಮಗಳ ಹೆಸರು ಧರ್ಮಾವತಿ ನರಸಿಂಹರಾಜು. ನರಸಿಂಹರಾಜು ಅವರ ಮೊದಲ ಮಗಳು ಆಗಿರುವ ಸುಧಾ ನರಸಿಂಹರಾಜು ಅವರು ಸಿನಿಮಾಗಳಲ್ಲಿ ಅಭಿನಯ ಮಾಡಿದ್ದಾರೆ ಹೌದು ಸುಮಾರು 25ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯ ಮಾಡಿರುವ ಇವರು ರಥಸಪ್ತಮಿ ಅನುರಾಗ ಶ್ರುತಿ ಸೇರಿದಾಗ ಶುಭಮಿಲನ ಪೊಲೀಸನ ಹೆಂಡತಿ ಮಾಲಾಶ್ರೀ ಮಾಮಾಶ್ರೀ ಸಿನೆಮಾಗಳಲ್ಲಿ ಸುಧಾ ನರಸಿಂಹರಾಜು ಅವರು ಅದ್ಭುತವಾಗಿ ನಟನೆ ಮಾಡಿದ್ದಾರೆ ಹಾಗೂ ನಾಯಕ ನಟಿಯಾಗಿ ಪೋಷಕ ಪಾತ್ರದಲ್ಲಿ ಉತ್ತಮ ಅಭಿನಯ ಮಾಡಿದ್ದಾರೆ.

ನಟಿ ಸುಧಾ ಅವರು 1986 ರಲ್ಲಿ ಮೊದಲ ಚಿತ್ರವಾದ ಅರುಣಾ ರಾಗ ಎಂಬ ಚಿತ್ರದಲ್ಲಿ ನಟನೆ ಮಾಡಿದ್ದು  ಅವರ ಕೊನೆಯ ಚಿತ್ರ 1995 ರಲ್ಲಿ ಬಿಡುಗಡೆ ಆದ ಕಲ್ಯಾಣೋತ್ಸವವಾಗಿದೆ. ಆ ನಂತರ ಸುಧಾ ನರಸಿಂಹ ರಾಜು ಅವರು ಯಾವುದೇ ಸಿನಿಮಾ ಗಳಲ್ಲಿ ಹಾಗೂ ಯಾವುದೇ ಕಿರುತೆರೆ ಕಾರ್ಯಕ್ರಮದಲ್ಲಿ, ರಿಯಾಲಿಟಿ ಶೋಗಳಲ್ಲಿ ಮತ್ತು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಸುಮಾರು 20 ವರ್ಷಗಳ ಕಾಲ ಚಲನಚಿತ್ರ ರಂಗದಿಂದ ದೂರ ಉಳಿದಿದ್ದ ಸುಧಾ ನರಸಿಂಹರಾಜು ಅವರು ಕನ್ನಡದ ಖ್ಯಾತ ಧಾರಾವಾಹಿಯಾಗಿರುವ ಹೌದು ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ಗಟ್ಟಿಮೇಳ ಎಂಬ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ನಟನೆ ಮಾಡುತ್ತಿದ್ದಾರೆ.

ಹಾಸ್ಯ ಚಕ್ರವರ್ತಿ ನರಸಿಂಹರಾಜು ಬಹಳ ಜನಪ್ರಿಯತೆ ಪಡೆದುಕೊಂಡಿದ್ದ ಹಾಗೂ ಸ್ಯಾಂಡಲ್ ವುಡ್ ನಲ್ಲಿ ಮರೆಯಲಾಗದ ಮಾಣಿಕ್ಯ ಇವರ ಹಾಸ್ಯಕ್ಕೆ ಮತ್ತೊಬ್ಬರು ಸಾಟಿಯಿಲ್ಲ ಇವರಂತೆ ಅಭಿನಯ ಮಾಡಲು ಮತ್ತೊಬ್ಬರಿಂದ ಸಾಧ್ಯವಿಲ್ಲಾ. ಇದೀಗ ಗಟ್ಟಿಮೇಳ ಧಾರವಾಹಿಯಲ್ಲಿ ತಾಯಿ ಪಾತ್ರವನ್ನು ನಿರ್ವಹಿಸುತ್ತಾ ಇರುವ ಸುಧಾ ನರಸಿಂಹರಾಜು ಅವರು ಪರಿಮಳ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಅಭಿಮಾನಿಗಳ ಫೇವರೆಟ್ ನಟಿಯಾಗಿದ್ದಾರೆ. ಬಹು ಸಂಸ್ಕೃತಿ ಇಂದು ಬೆಳೆದು ಬಂದ ನರಸಿಂಹರಾಜು ಅವರ ಮಗಳು ಸುಧಾ ನರಸಿಂಹರಾಜು ಅವರು ಗಟ್ಟಿಮೇಳ ಧಾರಾವಾಹಿಯಲ್ಲಿಯೂ ತಹ ಸಾಂಸ್ಕೃತಿಕ ಪರವಾಗಿಯೇ ಅಭಿನಯ ಮಾಡುತ್ತಾ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಸುಮಾರು 25 ವರ್ಷಗಳ ಬಳಿಕ ಸುಧಾ ನರಸಿಂಹ ರಾಜು ಅವರು ಮತ್ತೆ ಬಣ್ಣ ಹಚ್ಚಿದ್ದು, ಇವರಿಗೆ ಪರಿಮಳ ಪಾತ್ರ ಬಹಳ ಇಷ್ಟ ಅಂತೆ ಹೌದು ಹೀಗೆಂದು ಸುಧಾ ನರಸಿಂಹರಾಜು ಅವರು ಹೇಳಿಕೊಂಡಿತ್ತು ಇವರ ಪಾತ್ರದ ಕುರಿತು ನಿಮ್ಮ ಅನಿಸಿಕೆ ಅನ್ನ ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದ.