ಕಾಲುಗಳ ಸೆಳೆತ , ಕೀಲುಗಳ ಹಿಡಿಯುವಿಕೆ , ಮಂಡಿ ನೋವು ಎಲ್ಲ ಸರಿಮಾಡೋ ಈ ಒಂದು ವಿಧಾನ ಮನೆಯಲ್ಲೇ ಮಾಡಿ ಸಾಕು , ಎಲ್ಲ ನೋವುಗಳಿಂದ ಮುಕ್ತಾರಾಗುತ್ತೀರಾ…

228

ಕೀಲು ನೋವು ಸಮಸ್ಯೆಗೆ ಮಾತ್ರೆ ಇಲ್ಲದೆ ಮನೆಯಲ್ಲೆ ಮಾಡಿಕೊಳ್ಳಬಹುದಾದ ಪರಿಹಾರ ಇದೇ, ಇದನ್ನು ಮಾಡುವ ವಿಧಾನ ಅತಿ ಸರಳ ಹಾಗೂ ಸುಲಭ ಯಾವುದೇ ಅಡ್ಡಪರಿಣಾಮ ಇಲ್ಲದೆ ಕೀಲು ನೋವಿಗೆ ಪರಿಹಾರ ಕಂಡುಕೊಳ್ಳೋಣ ಬನ್ನಿ ಕೆಳಗಿನ ಲೇಖನಿಯಲ್ಲಿ.ನಮಸ್ಕಾರ ಕೀಲು ನೋವು ಸಾಮಾನ್ಯವಾಗಿ ವಯಸ್ಸಾದವರಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ, ಯಾಕೆಂದರೆ ವಯಸ್ಸಾದವರಲ್ಲಿ ಮೂಳೆ ಸವೆತ ಉಂಟಾಗಿರುವುದರಿಂದ ಈ ಮೂಳೆಗಳ ಸಂಬಂಧಿ ತೊಂದರೆಗಳು ಹೆಚ್ಚಾಗಿ ವಯಸ್ಸಾದವರಲ್ಲಿ ಕಾಣಸಿಗೋದು.

ಹಾಗಾಗಿ ಹೆಚ್ಚಾಗಿ ನಾವು ಕೀಲುನೋವು ಮಂಡಿನೋವು ಇಂತಹ ಸಮಸ್ಯೆಗಳನ್ನು ವಯಸ್ಸಾದವರಲ್ಲಿ ಕಾಣುತ್ತೇವೆ ವಯಸ್ಸಾದ ನಂತರ ಮಾತ್ರ ತೆಗೆದುಕೊಳ್ಳುವುದು ಚಿಕಿತ್ಸೆ ತೆಗೆದುಕೊಳ್ಳುವುದು ಸರ್ಜರಿ ಮಾಡಿಸಿಕೊಳ್ಳುವುದು ಇದೆಲ್ಲವೂ ಸಾಧ್ಯವಾಗುವುದಿಲ್ಲ ಯಾಕೆಂದರೆ ವಯಸ್ಸಾದವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ ಹಾಗೂ ನೋವನ್ನು ತಡೆದುಕೊಳ್ಳುವ ಶಕ್ತಿ ಕೂಡ ತುಂಬಾನೇ ಕಡಿಮೆ ಇರುತ್ತದೆ, ಹಾಗಾಗಿ ತುಂಬ ಕಾಳಜಿ ಮಾಡಿ ಇಂತಹ ಸಮಸ್ಯೆಗಳಿಗೆ ಪರಿಹಾರವನ್ನು ಮಾಡಬೇಕಾಗಿರುತ್ತದೆ.

ಬನ್ನಿ ಇವತ್ತಿನ ಲೇಖನದಲ್ಲಿ ಮುಖ್ಯವಾಗಿ ವಯಸ್ಸಾದವರು ಮಾಡಬಹುದಾದಂತಹ ಸರಣಿ ಪರಿಹಾರದ ಬಗ್ಗೆ ಮಾತನಾಡೋಣ, ಹೌದು ವಯಸ್ಸಾದ ಮೇಲೆ ಕೀಲುನೋವು ಮಂಡಿನೋವು ಇದೆಲ್ಲವೂ ಸಹಜ, ಆದರೆ ಚಿಂತಿಸಬೇಡಿ ಇದಕ್ಕೂ ಕೂಡ ಪರಿಹಾರಗಳಿವೆ.ವಯಸ್ಸಾದವರು ಸಾಮಾನ್ಯವಾಗಿ ಹೆಚ್ಚಾಗಿ ಊಟ ಮಾಡುವುದಿಲ್ಲ ಆದರೆ ಈ ಸಮಯದಲ್ಲಿ ಅಂದರೆ ವಯಸ್ಸಾದ ನಂತರ ಕಡಿಮೆ ಊಟ ಮಾಡಿದರು, ಸ್ವಲ್ಪ ಸಮಯ ವಾಕ್ ಮಾಡುವುದು ಮತ್ತು ಕೆಲವೊಂದು ಆಹಾರ ಪದಾರ್ಥಗಳನ್ನು ತಿನ್ನದೆ ಇರುವುದು ಕೆಲವು ಆಹಾರ ಪದಾರ್ಥಗಳನ್ನು ಸ್ವಲ್ಪ ಪ್ರಮಾಣದಲ್ಲಿ ತಿನ್ನುತ್ತ ಬರುವುದು, ಹೀಗೆ ಈ ರೀತಿ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಮಾಡುವುದರಿಂದ ಕೆಲವೊಂದು ಅನಾರೋಗ್ಯ ಸಮಸ್ಯೆಗಳನ್ನು ಬಾರದಿರುವ ಹಾಗೆ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು

ಅಂದರೆ ವಯಸ್ಸಾದವರಲ್ಲಿ ಹಲವು ಸಮಸ್ಯೆಗಳು ಕಾಡುವುದಿಲ್ಲ ಜೊತೆಗೆ ಕೆಲವೊಂದು ಸಮಸ್ಯೆಗಳಿಗೆ ಕೆಲವೊಂದು ಆಹಾರದ ಮೂಲಕವೇ ಪರಿಹಾರವನ್ನು ಕಂಡುಕೊಳ್ಳಬಹುದು.ಈಗ ಮೊದಲು ಮಾಹಿತಿ ಗೆ ಬಂದು, ಮಂಡಿನೋವು ಕೀಲುನೋವು ಇದ್ದ ಸಮಸ್ಯೆಗೆ ಮಾಡಿಕೊಳ್ಳಬಹುದಾದಂಥ ಪರಿಹಾರದ ಕುರಿತು ಮಾತನಾಡುವಾಗ, ಈ ಕೀಲು ನೋವು ಸಮಸ್ಯೆ ಬಂದಾಗ ಇದರ ನೋವು ನಿವಾರಣೆಗೆ ಪುದೀನ ಮತ್ತು ಕಲ್ಲುಪ್ಪಿನ ಸಹಾಯದಿಂದ ಸರಳ ವಿಧಾನವನ್ನು ಪಾಲಿಸಿ ಈ ಮನೆಮದ್ದು ಮಾಡುವ ವಿಧಾನ ಹೇಗೆಂದರೆ

ಮೊದಲಿಗೆ ಪುದಿನಾ ಎಲೆಗಳನ್ನು ಬಾಣಲೆಗೆ ಹಾಕಿ ಹುರಿದುಕೊಳ್ಳಬೇಕು ಬಳಿಕ ಇದೇ ಬಾಣಲೆಗೆ ಕಲ್ಲುಪ್ಪು ಹಾಕಿ ಹುರಿದುಕೊಂಡು ಕಾಟನ್ ಬಟ್ಟೆ ಯೊಂದಕ್ಕೆ ಈ 2 ಪದಾರ್ಥಗಳನ್ನು ಸೇರಿಸಿ, ನೋವಿರುವ ಭಾಗಕ್ಕೆ ಶಾಖ ನೀಡಬೇಕು. ಇದರಿಂದ ನೋವು ಬಹಳ ಬೇಗ ಕಡಿಮೆಯಾಗುತ್ತದೆ ಮತ್ತು ನೋವು ಕೂಡ ನಿಧಾನವಾಗಿ ಕಡಿಮೆಯಾಗುತ್ತಾ ಬರುತ್ತದೆ ಒಮ್ಮೆ ನೀವು ಕೂಡ ಟ್ರೈ ಮಾಡಿ ನೋಡಿ ಈ ಸರಳ ವಿಧಾನವನ್ನು.

ಸಾಮಾನ್ಯವಾಗಿ ನಾವು ಅಡುಗೆಯಲ್ಲಿ ಪುದಿನಾ ಎಲೆಗಳನ್ನು ಅಲ್ಪಪ್ರಮಾಣದಲ್ಲಿ ಬಳಸುತ್ತ ಬರುವುದರಿಂದ ಹಾಗೂ ಪುದಿನ ಎಲೆಗಳನ್ನು ಸೇವನೆ ಮಾಡುತ್ತ ಬರುವುದರಿಂದ ಕೆಲವೊಂದು ಸಮಸ್ಯೆಗಳನ್ನು ದೂರವಿಡಬಹುದು. ಅದರಲ್ಲಿ ಉದರ ಸಂಬಂಧಿ ಸಮಸ್ಯೆಗಳು ಕರಳು ಶುದ್ಧಿ ಇದರ ಸಂಬಂಧಿ ಕೆಲವೊಂದು ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದು.

ಕಲ್ಲುಪ್ಪು ನೋವು ನಿವಾರಣೆಗೆ ಸಹಕಾರಿ ಮತ್ತು ಕಲ್ಲುಪ್ಪು ಇದರಿಂದ ಶಾಖ ನೀಡಿದರೆ ಮಂಡಿನೋವು ಕೀಲುನೋವು ಇಂತಹ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬಹುದು. ಹಾಗಾಗಿ ಎಲ್ಲಾ ಪರಿಹಾರಗಳನ್ನ ಟ್ರೈ ಮಾಡಿ ಸಾಕಾಗಿದೆ ಕೊನೆಯದಾಗಿ ಯಾವುದಾದರೂ ಮನೆ ಮದ್ದು ಪಾಲಿಸಬೇಕಂದಲ್ಲಿ ಕೀಲುನೋವಿಗೆ ಈ ಸರಳ ವಿಧಾನ ಪಾಲಿಸಿ ನೋವಿನಿಂದ ಶಮನ ಪಡೆದುಕೊಳ್ಳಿ ಧನ್ಯವಾದ.