ಕಿಡ್ನಿಯಲ್ಲಿ ಕಲ್ಲು ಆಗುವ ಸಮಸ್ಯೆ ಅಥವಾ ಕಿಡ್ನಿಯಲ್ಲಿ ಈಗಾಗಲೇ ಕಲ್ಲು ಆಗಿದೆ ಅದನ್ನು ಪರಿಹಾರ ಮಾಡಿಕೊಳ್ಳಬೇಕು ಅದಕ್ಕಾಗಿ ನಾವು ಇಂಗ್ಲಿಷ್ ಮೆಡಿಸಿನ್ ಮೊರೆ ಹೋಗದೆ ಆಯುರ್ವೇದಿಕ್ ಮೆಡಿಸಿನ್ ತೆಗೆದುಕೊಳ್ಳುತ್ತಿದ್ದೇವೆ ಹಾಗೂ ಕೆಲವೊಂದು ಮನೆಮದ್ದುಗಳನ್ನು ಪಾಲಿಸುತ್ತಿದ್ದೇವೆ ಅನ್ನುವುದಾದರೆ ನಿಮಗಾಗಿ ಇವತ್ತಿನ ಮಾಹಿತಿಯಲ್ಲಿ ಉಪಯುಕ್ತವಾಗುವಂತಹ ಮಾಹಿತಿಯೊಂದನ್ನ ತಿಳಿಸಿಕೊಡುತ್ತಿದ್ದೇವೆ.
ಈ ಪುಟವನ್ನು ಸಂಪೂರ್ಣವಾಗಿ ತಿಳಿದು ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳಲು ಹಾಗೂ ಮೂತ್ರಪಿಂಡಗಳಲ್ಲಿ ಕಲ್ಲು ಹಾಕಿದ ಅದನ್ನು ಕರಗಿಸುವ ಪ್ರಯತ್ನ ಮಾಡುತ್ತಿದ್ದೇವೆ ಎನ್ನುವುದಾದರೆ ಸುಲಭವಾಗಿ ನಿಮ್ಮ ಆಹಾರ ಪದ್ಧತಿಯಲ್ಲಿ ಇದೊಂದು ಪದಾರ್ಥವನ್ನು ಅಳವಡಿಸಿಕೊಳ್ಳುವ ಮೂಲಕ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಹಾಗೂ ಹೆಚ್ಚು ಕಷ್ಟಪಡದೆ ಮೂತ್ರಪಿಂಡಗಳಲ್ಲಿ ಆಗಿರುವ ಕಲ್ಲನ್ನು ಕರಗಿಸುವ ಪ್ರಯತ್ನವನ್ನು ಮಾಡಿ.
ಹೌದು ನಾವು ಸೇವಿಸುವ ಆಹಾರದಿಂದ ಹಾಗೂ ಹೆಚ್ಚು ನೀರು ಕುಡಿಯದೆ ಇರುವುದರಿಂದ ನಮಗೆ ಕೆಲವೊಂದು ಸಮಸ್ಯೆಗಳು ಉಂಟಾಗುತ್ತದೆ ಹಾಗೆ ನಮ್ಮ ದೇಹದಲ್ಲಿ ಸದಾ ಕೆಲಸ ಮಾಡುತ್ತಿರುವಂತಹ ನಮ್ಮ ರಕ್ತವನ್ನು ನಮ್ಮ ದೇಹದಲ್ಲಿರುವ ಕಲುಷಿತಗಳ ಹೊರಹಾಕುವಲ್ಲಿ ಸಹಕಾರಿ ಆಗಿರುವಂತಹ ಮೂತ್ರಪಿಂಡಗಳ ಆರೋಗ್ಯದ ಮೇಲೆಯೂ ಸಹ ಪ್ರಭಾವ ಬೀರುವ ಸಾಧ್ಯತೆಗಳೂ ಇರುತ್ತದೆ. ಆದ ಕಾರಣವೇ ನಾವು ಪಾಲಿಸುವ ಆಹಾರ ಪದ್ದತಿ ಸರಿಯಾಗಿರಬೇಕು ಅಂತ ಹೇಳುವುದು ಮತ್ತು ಆಹಾರ ಪದ್ಧತಿಯ ಕುರಿತು ಕೂಡ ನಾವು ಕಾಳಜಿ ವಹಿಸಿ ಅಂತಹ ಆಹಾರ ಪದ್ಧತಿಯನ್ನು ಪಾಲಿಸಬೇಕಿರುತ್ತದೆ.
ಇವತ್ತಿನ ಲೇಖನದಲ್ಲಿ ಮೂತ್ರಪಿಂಡಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ಯಾವ ಆಹಾರ ಪದಾರ್ಥವನ್ನು ಸೇವಿಸಬೇಕು ಎಂಬುದನ್ನು ತಿಳಿಸುತ್ತಿದ್ದೇವೆ ಹೌದು ಮೂತ್ರಪಿಂಡಗಳಲ್ಲಿ ಕಲ್ಲು ವಾಗಿದೆ ಅಂದರೆ ಕಾಡು ಬಸಳೆ ಸೊಪ್ಪಿನಿಂದ ಇದೊಂದು ಪದಾರ್ಥವನ್ನು ತಯಾರಿಸಿ. ತುಂಬ ಸುಲಭ ಹಾಗೂ ಹೆಚ್ಚು ಸಮಯ ಬೇಕಿಲ್ಲ ಸರಳವಾಗಿದೆ ಮಾಡುವ ವಿಧಾನ. ಈ ತಂಬುಳಿ ಅನ್ನು ಮಾಡುವುದು ಹೇಗೆ ಅಂದರೆ ಕಾಡು ಬಸಳೆ ಸೊಪ್ಪು ತಂದು ಇದನ್ನು ಚೆನ್ನಾಗಿ ನೀರಿನಲ್ಲಿ ಸ್ವಚ್ಚ ಮಾಡಬೇಕು ಬಳಿಕ ಬಾಣಲೆಗೆ ಸ್ವಲ್ಪ ಎಣ್ಣೆ ಸೇರಿಸಿ ಜೀರಿಗೆ ಹಾಕಿ ಸೊಪ್ಪನ್ನು ಇದರೊಟ್ಟಿಗೆ ಬೆರೆಸಿ ಸ್ವಲ್ಪ ಸಮಯ ಮಾಡಿಸಿಕೊಳ್ಳಬೇಕು.
ಬಾಡಿಸಿ ಕೊಂಡಂತಹ ಸೊಪ್ಪನ್ನು ಸ್ವಲ್ಪ ಕಾಯಿತುರಿಯೊಂದಿಗೆ ಸೇರಿಸಿ ಜೊತೆಗೆ ನೀರು ಹಾಕಿ ರುಬ್ಬಿಕೊಳ್ಳಬೇಕು. ಈ ರುಬ್ಬಿಕೊಂಡ ಮಿಶ್ರಣ ದಿಂದ ನೀರನ್ನ ಶೋಧಿಸಿಕೊಂಡು ಅದಕ್ಕೆ ಜೀರಿಗೆ ಸಾಸಿವೆ ಕರಿಬೇವಿನ ಎಲೆಗಳು ಮತ್ತು ಒಣಮೆಣಸಿನ ಒಗ್ಗರಣೆ ಕೊಡಬೇಕು.
ಅಥವಾ ಸ್ವಲ್ಪ ರುಚಿ ಚೆನ್ನಾಗಿರಬೇಕು ಅಂದರೆ ರುಬ್ಬಿಕೊಂಡ ಮಿಶ್ರಣಕ್ಕೆ ತುಪ್ಪ ಮಾಡಿದ ಈ ಒಗ್ಗರಣೆಯನ್ನು ಮಿಶ್ರಮಾಡಿ ಹೇಗೆ ಅಂದರೆ ತುಪ್ಪಕ್ಕೆ ಸ್ವಲ್ಪ ಸಾಸಿವೆ ಜೊತೆಗೆ ಮೆಣಸಿನಪುಡಿ ಮಿಶ್ರ ಮಾಡಿ ಸ್ವಲ್ಪ ಸಮಯ ಬಾಡಿಸಿ ಬಳಿಕ ಅದನ್ನು ರುಬ್ಬಿಕೊಂಡ ಮೇಲೆ ಆ ಮಿಶ್ರಣಕ್ಕೆ ಒಗ್ಗರಣೆ ಕೊಡಿ, ಇದೀಗ ತಯಾರಾಗಿದೆ ಬಿಸಿಬಿಸಿಯಾದ ರುಚಿಕರವಾದ ತಂಬುಳಿ.
ಈ ತಂಬುಳಿ ಅನ್ನದೊಂದಿಗೆ ಸೇವಿಸುವುದರಿಂದ ಬಹಳ ಉಪಯುಕ್ತವಾದ ಆರೋಗ್ಯಕರ ಲಾಭಗಳು ನಮಗೆ ದೊರೆಯುತ್ತದೆ ಅವುಗಳೆಂದರೆ ಕಿಡ್ನಿಯಲ್ಲಿ ಉಂಟಾಗಿರುವ ಕಲ್ಲನ ಕರಗಿಸುವಲ್ಲಿ ಸಹಕಾರಿಯಾಗುವುದಲ್ಲದೆ ಮೂತ್ರಪಿಂಡಗಳ ಆರೋಗ್ಯವನ್ನು ಕಾಪಾಡುತ್ತದೆ ಹಾಗೆ ಈ ಕಾಡು ಬಸಳೆ ಸೊಪ್ಪನ್ನೂ ಏರ್ ಪ್ಲಾಂಟ್ ಅಥವಾ ರಣ ಫಲ ಅಂತ ಕೂಡ ಕರಿತಾರೆ.
ಹಾಗಾಗಿ ಈ ಕಾಡು ಬಸಳೆ ಸೊಪ್ಪಿನ ಪ್ರಯೋಜನವನ್ನು ಪಡೆದುಕೊಳ್ಳಿ ಮೂತ್ರಪಿಂಡಗಳಲ್ಲಿ ಆಗಿರುವ ಕಲ್ಲನ ಸುಲಭವಾಗಿ ಕರಗಿಸಿಕೊಳ್ಳಿ ಹಾಗೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ವಿಧಾನಗಳಿವೆ ಮೂತ್ರಪಿಂಡಗಳಲ್ಲಿ ಇರುವ ಕಲ್ಲು ಕರಗಿಸಲು ಆದರೆ ಅದೆಲ್ಲವೂ ಆರೋಗ್ಯದ ಮೇಲೆ ಮೂತ್ರಪಿಂಡಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಕಾಳಜಿ ಎಂದ ಆರೋಗ್ಯಕ್ಕೆ ಉತ್ತಮವಾಗಿರುವ ಪದ್ಧತಿಯನ್ನೆ ಪಾಲಿಸುವ ಮೂಲಕ ಮೂತ್ರಪಿಂಡಗಳ ಆರೋಗ್ಯವನ್ನು ಕಾಪಾಡಿಕೊಳ್ಳಿ ಧನ್ಯವಾದ…