ಕಿಡ್ನಿಯಲ್ಲಿ ಕಲ್ಲು ಆಗಿದ್ದಲ್ಲಿ ಆ ಕಿಡ್ನಿಯಲ್ಲಿ ಆಗಿರುವ ಕಲ್ಲನ್ನ ಕರಗಿಸುವುದಕ್ಕೆ ರಾಮಬಾಣದಂತೆ ಕೆಲಸ ಮಾಡುವುದು ಈ ಬಾಳೆದಿಂಡು. ಹೌದು ಹಿರಿಯರು ಹೇಳುವುದು ಮತ್ತು ನಾಟಿ ವೈದ್ಯರು ಹೇಳುವುದು ಆಯುರ್ವೇದದಲ್ಲಿಯೂ ಕೂಡ ಹೇಳುವುದು ಏನು ಅಂದರೆ ಬಾಳೆದಿಂಡು ಹೆಚ್ಚಿನ ಫೈಬರ್ ಅಂಶ ಹೊಂದಿದೆ ಜೊತೆಗೆ ಹೆಚ್ಚಿನ ನೀರಿನಾಂಶ ಕೂಡ ಹೊಂದಿದೆ ಜೊತೆಗೆ ಇನ್ನಷ್ಟು ಉತ್ತಮ ಪೋಷಕಾಂಶಗಳನ್ನು ಹೊಂದಿರುವುದರಿಂದ ಇದು ಕಿಡ್ನಿಯಲ್ಲಿ ಉಂಟಾಗಿರುವಂತಹ ಕಲ್ಲನ್ನ ಕರಗಿಸುವುದಕ್ಕೆ ಬಹಳ ಉತ್ತಮವಾಗಿ ಕೆಲಸ ಮಾಡಿ ಕಲ್ಲು ಕರಗಿಸುವುದಕ್ಕೆ ಸಹಕಾರಿಯಾಗಿರುತ್ತೆ.
ಹಾಗಾದರೆ ಈ ಬಾಳೆದಿಂಡನ್ನ ಹೇಗೆ ಬಳಸುವುದು ಬಾಳೆದಿಂಡನ್ನು ಬಳಸಿ ಹೇಗೆ ಕಿಡ್ನಿಯಲ್ಲಿ ಉಂಟಾಗಿರುವ ಕಲ್ಲನ್ನೂ ಕರಗಿಸುವುದು ಜೊತೆಗೆ ಬಾಳೆದಿಂಡಿನಿಂದ ಹೇಗೆ ವಿಶೇಷವಾಗಿ ಪಲ್ಯ ತಯಾರಿಸುವುದು ಇದನ್ನೆಲ್ಲ ತಿಳಿಯೋಣ ಬನ್ನಿ ಇವತ್ತಿನ ಈ ಲೇಖನದಲ್ಲಿ.
ಹೌದು ಸ್ನೇಹಿತರೆ ಕಿಡ್ನಿ ಅಲ್ಲಿ ಸಾಮಾನ್ಯವಾಗಿ ಕಲ್ಲು ಆಗುವುದು ಯಾಕೆ ಅಂದರೆ ನಾವು ಹೆಚ್ಚು ನೀರು ಕುಡಿಯದೆ ಹೋದಾಗ ಮತ್ತು ಆಹಾರ ಪದ್ಧತಿಯಲ್ಲಿ ಉತ್ತಮ ಆಹಾರ ಪದಾರ್ಥಗಳನ್ನ ಸೇರಿಸಿಕೊಳ್ಳದೇ ಹೋದಾಗ ಈ ರೀತಿ ಕಿಡ್ನಿ ಸಂಬಂಧಿ ಸಮಸ್ಯೆಗಳು ಬರುತ್ತವೆ ಅಷ್ಟೆಲ್ಲ ಕಥೆ ನಾವು ಹೆಚ್ಚು ನೀರು ಕುಡಿಯದೆ ಹೋದಾಗ ನಮ್ಮ ಶರೀರಕ್ಕೆ ಬೇಕಾದ ಪ್ರಮಾಣದ ನೀರು ಕುಡಿಯದೆ ಹೋದಾಗಲೂ ಕೂಡ ನಮ್ಮ ದೇಹದಲ್ಲಿ ಆಕ್ಸಿಡೇಶನ್ ಆಗಿ ಕೆಲವೊಂದು ರಿಯಾಕ್ಷನ್ ಆಗಿ ಪ್ರೈಮರಿ ಮಾಲಿಕ್ಯೂಲ್ಸ್ ಯಿಂದಾಗಿ ಕಿಡ್ನಿಯಲ್ಲಿ ಕಲ್ಲು ಉಂಟಾಗುತ್ತದೆ.
ಹಾಗಾಗಿ ಈ ಕಾರಣದಿಂದ ಕಿಡ್ನಿಯಲ್ಲಿ ಕಲ್ಲು ಉಂಟಾದಾಗ ಅದನ್ನು ಸರ್ಜರಿ ಮಾಡಿ ಕೆಲವರು ತೆಗೆಸುತ್ತಾರೆ ಕೆಲವರು ಇಂಗ್ಲಿಷ್ ಮೆಡಿಸಿನ್ ಮೊರೆ ಹೋಗಿ ಅದನ್ನು ಕರಗಿಸುತ್ತಾರೆ ಆದರೆ ನಾವು ಈ ರೀತಿ ಕಿಡ್ನಿಯ ಮೇಲೆ ಒತ್ತಡ ಹೇರುವುದು ಒಳ್ಳೆಯದಲ್ಲ ಮೊದಲೇ ಕಿಡ್ನಿಯಲ್ಲಿ ಕಲ್ಲು ಆಗಿರುವುದರಿಂದ ಕಿಡ್ನಿ ಅಪಾಯದಲ್ಲಿ ಇರುತ್ತದೆ ಹಾಗಾಗಿ ನಾವು ಬಹಳ ಕಾಳಜಿಯಿಂದ ಕಿಡ್ನಿಯನ್ನು ಕಿಡ್ನಿಯ ಕಲ್ಲನ್ನು ಕರಗಿಸಬೇಕಾಗಿರುತ್ತದೆ.
ಈಗ ನಾವು ಕಿಡ್ನಿ ಕಲ್ಲನ್ನು ಕರಗಿಸುವ ಉತ್ತಮ ವಿಧಾನವನ್ನು ತಿಳಿಯೋಣ ಅದು ಬಾಳೆದಿಂಡಿನಿಂದ ಹೌದು ಬಾಳೆದಿಂಡನ್ನು ಜ್ಯೂಸ್ ಮಾಡಿ ಸೇವಿಸಬಹುದು ಆದರೆ ಇವತ್ತಿನ ಮಾಹಿತಿಯಲ್ಲಿ ಕಿಡ್ನಿಯಲ್ಲಿ ಉಂಟಾಗಿರುವ ಕಲ್ಲನ್ನು ಬಾಳೆದಿಂಡಿನ ಪಲ್ಯ ಮಾಡಿ ಅದನ್ನು ಸೇವಿಸುವ ಮೂಲಕ ಹೇಗೆ ನಿವಾರಣೆ ಮಾಡಿಕೊಳ್ಳುವುದು ಎಂಬುದನ್ನ ತಿಳಿಸುತ್ತಿದ್ದೇವೆ.
ಇದಕ್ಕೆ ಬೇಕಾಗಿರುವುದು ಮೊದಲಿಗೆ ಬಾಳೆದಿಂಡನ್ನು ಸಣ್ಣಗೆ ಕತ್ತರಿಸಿ ಅದನ್ನು ಮಜ್ಜಿಗೆಯಲ್ಲಿ ನೆನೆಸಿಡಿ ಇತ್ತ ಕುಕ್ಕರ್ ನಲ್ಲಿ ಹೆಸರುಕಾಳು ಮತ್ತು ನೆನೆಸಿಟ್ಟ ಬಾಳೆ ದಿಂಡನ್ನು ಹಾಕಿ ವಿಷಲ್ ಹಾಕಿಸಿ ಬೇಯಿಸಿಕೊಳ್ಳಿ. ನಂತರ ಒಗ್ಗರಣೆ ಮಾಡಬೇಕು ಬಾಣಲೆಗೆ ಕೊಬ್ಬರಿ ಎಣ್ಣೆ ಅಥವಾ ನೀವು ಸಾರಿಗೆ ಬಳಸುವ ಎಣ್ಣೆಯನ್ನು ಹಾಕಿ ಸಾಸಿವೆ ಜೀರಿಗೆ ಹಸಿ ಮೆಣಸಿನಕಾಯಿ ಕರಿಬೇವಿನ ಸೊಪ್ಪು ಮತ್ತು ಸಣ್ಣಗೆ ಕತ್ತರಿಸಿದ ಈರುಳ್ಳಿಯನ್ನು ಹಾಕಿ ಫ್ರೈ ಮಾಡಿಕೊಳ್ಳಿ.
ಈಗ ಇದಕ್ಕೆ ಜಜ್ಜಿದ ಬೆಳ್ಳುಳ್ಳಿಯನ್ನು ಸೇರಿಸಿ ಸ್ವಲ್ಪ ಅರಿಶಿನ ಹಾಕಿ ಫ್ರೈ ಮಾಡಿ ಕೊಂಡು ಬಳಿಕ ಬೇಯಿಸಿದ ಬಾಳೆ ದಿಂಡು ಮತ್ತು ಹೆಸರುಕಾಳನ್ನು ಇದಕ್ಕೆ ಸೇರಿಸಿ ಒಮ್ಮೆ ಮಿಶ್ರಮಾಡಿ ಬೇಯಿಸಿಕೊಂಡು ಸ್ಟವ್ ಆಫ್ ಮಾಡಿ ಇದೀಗ ಬಾಳೆದಿಂಡಿನ ಪಲ್ಯ ತಿನ್ನಲು ತಯಾರಾಗಿದೆ.
ಇದನ್ನ ನೀವು ನಿಯಮಿತವಾಗಿ ತಿನ್ನುತ್ತಾ ಬಂದರೆ ಹೌದು ಫ್ರಿಜ್ ನಲ್ಲಿಟ್ಟರೆ 3ದಿನಗಳ ಕಾಲ ಏನೂ ಆಗೋದಿಲ್ಲ ಈ ಪಲ್ಯವನ್ನು ತಿನ್ನುತ್ತಾ ಬಂದರೆ ಅಥವಾ ಆಗಾಗ ಫ್ರೆಶ್ ಆಗಿ ಸ್ವಲ್ಪ ಪ್ರಮಾಣದಲ್ಲಿ ಈ ಬಾಳೆದಿಂಡಿನ ಪಲ್ಯವನ್ನು ಮಾಡಿಕೊಂಡು ತಿನ್ನುತ್ತಾ ಬಂದರೆ ಆರೋಗ್ಯವು ಹೆಚ್ಚುತ್ತೆ ಜೊತೆಗೆ ಕಿಡ್ನಿಯಲ್ಲಿ ಉಂಟಾಗಿರುವ ಕಲ್ಲು ಕೂಡ ಕರಗುತ್ತೆ.