ಕೆಂಪು ಅಕ್ಕಿ ಯಾವ ರೀತಿಯಲ್ಲಿ ಬಳಕೆ ಮಾಡಿದರೆ ಮಲಬದ್ದತೆ,ಪೋಷಕಾಂಶಗಳ ಕೊರತೆ,ಅನೇಕ ಸಮಸ್ಸೆಗಳಿಂದ ದೂರ ಆಗಬಹುದು ಗೊತ್ತ ..

181

ಕೆಂಪು ಅಕ್ಕಿ ಸೇವನೆಯಿಂದಾಗಿ ಏನೆಲ್ಲಾ ಆಗುತ್ತೆ ಗೊತ್ತಾ ಬಿಳಿ ಅಕ್ಕಿಗಿಂತ ಕೆಂಪು ಅಕ್ಕಿ ನಿಮ್ಮ ಆರೋಗ್ಯವನ್ನು ಅತಿಹೆಚ್ಚು ಮೇಲು ಮಾಡುತ್ತದೆ….ನಿಮಗೆ ಗೊತ್ತಿರಬಹುದು ಆಗಿನ ಕಾಲದಲ್ಲಿ ಈ ಅಕ್ಕಿಯನ್ನು ಪಾಲಿಶ್ ಮಾಡುವುದು ಅವೆಲ್ಲ ಇರುತ್ತಿರಲಿಲ್ಲಾ. ಈ ಮೆಷಿನರಿ ಕಾಲದಲ್ಲಿ ಅಕ್ಕಿಯನ್ನು ಪಾಲಿಶ್ ಮಾಡ್ತಾರೆ ಬಳಿಕ ಆ ಪಾಲಿಶ್ ಆದ ಅಕ್ಕಿಯನ್ನು ತಿಂತಾರೆ.

ಆದರೆ ಸತ್ವವೇ ಇಲ್ಲದ ಈ ಅಕ್ಕಿಯನ್ನು ತಿನ್ನುತ್ತಾ ತಿನ್ನುತ್ತಾ ಇಂದು ಮನುಷ್ಯ ಕೂಡ ಸತ್ವವಿಲ್ಲದ ಹಾಗೆ ಆಗಿ ಹೋಗಿದ್ದಾನೆ. ಹೌದು ಇಂದು ನೀವು ಗಮನಿಸಿರಬಹುದು ವಾತಾವರಣದಲ್ಲಿ ಸ್ವಲ್ಪ ಏರುಪೇರಾದರೂ ಅದು ಮನುಷ್ಯನ ಆರೋಗ್ಯದ ಮೇಲೆ ಬಹುಬೇಗ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ಆದುದ್ದರಿಂದ ಮನುಷ್ಯನ ಆರೋಗ್ಯ ಕೂಡ ಹದಗೆಡುತ್ತದೆ ಇದಕ್ಕೆಲ್ಲ ಕಾರಣ ಅಂದರೆ ಬದಲಾಗಿರುವ ಆಹಾರ ಪದ್ಧತಿಯು.

ಹೌದು ಸ್ನೇಹಿತರೆ ಆಹಾರ ಪದ್ಧತಿಯಲ್ಲಿ ಎಂದು ಎಷ್ಟೆಲ್ಲ ಬದಲಾವಣೆ ಆಗಿದೆ ಅಂದರೆ ಈ ಅಕ್ಕಿಯನ್ನು ಪಾಲಿಷ್ ಮಾಡಿ ತಿನ್ನುವ ಮಂದಿ, ದಿನದಿಂದ ದಿನಕ್ಕೆ ಅನಾರೋಗ್ಯ ಸಮಸ್ಯೆಗಳಿಗೆ ಒಳಪಡುತ್ತಿದ್ದಾರೆ ಹೌದು ಕೇವಲ ಅಕ್ಕಿ ಒಂದನ್ನು ಪಾಲಿಷ್ ಮಾಡಿ ತಿನ್ನುವುದರಿಂದ ಇಷ್ಟೆಲ್ಲಾ ಆರೋಗ್ಯದ ಮೇಲೆ ಕೆಟ್ಟ ಪ್ರಭಾವ ಬೀರುತ್ತಾ? ಅಂತಾ ನೀವು ಅಂದುಕೊಳ್ಳಬಹುದು. ಹೌದು ನಾವು ಇಂದಿನ ಮಾಹಿತಿಯಲ್ಲಿ ತಿಳಿಸಲು ಹೊರಟಿರುವುದು ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಅಕ್ಕಿ ಯಾವುದು ಎಂಬುದನ್ನು ತಿಳಿಸುವುದಕ್ಕಾಗಿ ಹಾಗಾಗಿ ಪಾಲಿಷ್ ಮಾಡಿರುವ ಅಕ್ಕಿ ತಿಂದಾಗ ಏನೆಲ್ಲಾ ಕೆಟ್ಟ ಪರಿಣಾಮ ಆರೋಗ್ಯದ ಮೇಲೆ ಉಂಟಾಗುತ್ತಿದೆ ಎಂಬುದನ್ನು ಇದೀಗ ನೀವೆ ನೋಡುತ್ತಿದ್ದೀರಾ. ಆದರೆ ಕೆಂಪು ಅಕ್ಕಿ ತಿಂದಾಗ ನಿಮ್ಮ ಆರೋಗ್ಯದ ಮೇಲೆ ಅದು ಎಷ್ಟು ಉತ್ತಮವಾಗಿ ಪ್ರಭಾವ ಬೀರುತ್ತದೆ ಅಂದರೆ ನಿಮ್ಮ ಆರೋಗ್ಯ ಬಹುಪಾಲು ವೃದ್ಧಿಸುತ್ತದೆ.

ಹೌದು ಕೆಂಪು ಅಕ್ಕಿ ಗು ಬಿಳಿ ಅಕ್ಕಿ ಗು ಬಹಳ ವ್ಯತ್ಯಾಸವೇನೂ ಇಲ್ಲಾ, ಈ ಪಾಲೀಶ್ ಮಾಡದಿರುವ ಅಕ್ಕಿಯೆ ಕೆಂಪು ಅಕ್ಕಿ ಪಾಲಿಷ್ ಮಾಡಿರುವ ಅಕ್ಕಿಯೆ ಬಿಳಿ ಅಕ್ಕಿ. ಹೌದು ಕೆಂಪು ಅಕ್ಕಿಯ ಬೆಲೆ ಬಹಳಷ್ಟು ವಿಟಮಿನ್ ಪ್ರೊಟೀನ್ ಹಾಗೂ ಆರೋಗ್ಯಕ್ಕೆ ಬೇಕಾಗಿರುವಂತಹ ಹೆಚ್ಚಿನ ಪೋಷಕಾಂಶಗಳಿರುವ ಅದರಲ್ಲಿಯೂ ಮುಖ್ಯವಾಗಿ ಹೆಚ್ಚಿನ ಫೈಬರ್ ಅಂಶ ವನ್ನು ಈ ಕೆಂಪು ಅಕ್ಕಿ ಹೊಂದಿರುವುದರಿಂದ ಮಲಬದ್ಧತೆ ಸಮಸ್ಯೆಯಿಂದ ಬಳಲುವವರಿಗಂತೂ ಇದು ಬಹಳ ಮುಖ್ಯವಾಗಿದೆ ಹಾಗೆ ಫೈಬರ್ ಅಂಶ ಹೆಚ್ಚಾದ ಆಹಾರ ಪದಾರ್ಥಗಳನ್ನು ತಿನ್ನುವುದರಿಂದ ತೂಕ ಕೂಡ ಹೆಚ್ಚಾಗುವುದಿಲ್ಲ ನಮ್ಮ ಜೀರ್ಣ ಶಕ್ತಿಯೂ ಕೂಡ ಬಹಳ ಉತ್ತಮವಾಗಿರುತ್ತದೆ.

ಹಾಗಾಗಿ ಸ್ನೇಹಿತರೇ ಈ ಕೆಂಪು ಅಕ್ಕಿಯ ಸೇವನೆ ಆರೋಗ್ಯಕ್ಕೆ ಬಹಳ ಉತ್ತಮವಾಗಿದ್ದು ಅಂದಿನ ಕಾಲದಲ್ಲಿ ಹಿರಿಯರು ಯಾಕಷ್ಟು ಆರೋಗ್ಯಕರವಾದ ಬರುತ್ತಿದ್ದರು ಅಂದರೆ ಇದಕ್ಕಾಗೇ ಪಾಲೀಶ್ ಮಾಡದಿರುವ ಈ ಕೆಂಪು ಅಕ್ಕಿ ಸೇವನೆ ಆರೋಗ್ಯಕ್ಕೆ ಬಹುಪಾಲು ಉತ್ತಮ ಪೋಷಕಾಂಶಗಳನ್ನು ನೀಡುತ್ತಿದ್ದ ಕಾರಣ ಕೆಂಪು ಅಕ್ಕಿಯ ಸೇವನೆ ಆರೋಗ್ಯ ವೃದ್ಧಿ ಮಾಡುತ್ತಿತ್ತು.

ಬರೀ ಅಷ್ಟೇ ಅಲ್ಲ ಇವತ್ತಿನ ದಿನಗಳಲ್ಲಿ ಪಾಲಿಷ್ ಮಾಡಿರುವ ಅಕ್ಕಿಯನ್ನ ಮಂದಿ ಹೆಚ್ಚಾಗಿ ಸೇವನೆ ಮಾಡುತ್ತಿರುವುದರಿಂದ, ಅದರಲ್ಲಿ ಯಾವುದೇ ತರಹದ ಪೋಷಕಾಂಶಗಳು ಇರದಿರುವ ಕಾರಣ, ಹಾಗಾಗಿ ದೇಹಕ್ಕೆ ಬೇಕಾಗಿರುವ ಆರೋಗ್ಯಕರ ಪೋಷಕಾಂಶಗಳು ದೊರೆಯದ ಕಾರಣ ಇಲ್ಲಸಲ್ಲದ ಅನಾರೋಗ್ಯ ಸಮಸ್ಯೆಗಳು ಬರುತ್ತವೆ ಆದರೆ ಅಧಿಕ ಫೈಬರ್ ಅಂಶ ಅಧಿಕ ಝಿಂಕ್ ಹಾಗೂ ಕಾರ್ಬೋಹೈಡ್ರೇಟ್ಸ್ ಕಾರ್ಬನ್ ಪೋಷಕಾಂಶಗಳನ್ನು ಹೊಂದಿರುವ ತಕ್ಕಂತಹ ಕೆಂಪು ಅಕ್ಕಿಯ ಸೇವನೆ ಆರೋಗ್ಯವನ್ನು ಕೂಡ ಉತ್ತಮವಾಗಿರಿಸುತ್ತದೆ ಬಹು ಅನಾರೋಗ್ಯ ಸಮಸ್ಯೆಗಳನ್ನು ದೂರ ಇಡುತ್ತದೆ.

ಈಗ ನೀವೇ ಹೇಳಿ ಪಾಲಿಷ್ ಮಾಡಿರುವ ಬಿಳಿ ಅಕ್ಕಿ ಆರೋಗ್ಯಕ್ಕೆ ಉತ್ತಮವೇ ಅಥವಾ ಪಾಲಿಶ್ ಮಾಡದ ಸ್ವಾದಿಷ್ಟವಾದ ರುಚಿ ನೀಡುವ ಕೆಂಪು ಆಕ್ಕಿಯು ಆರೋಗ್ಯಕ್ಕೆ ಉತ್ತಮವೊ ಎಂದು ನೀವೇ ನಿರ್ಧರಿಸಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಧನ್ಯವಾದ…