ಕೇವಲ ಇದನ್ನ ಒಂದು ವಾರ ತಿನ್ನಿ ಸಾಕು ನಿಮಗೆ ಯಾವುದೇ ವಾತ , ಪಿತ್ತ, ಗ್ಯಾಸು , ಮಂಡಿ ಸಮಸ್ಸೆ ಬರಲ್ಲ… ಹೊಟ್ಟೆಯನ್ನ ಫುಲ್ ಕ್ಲೀನ್ ಮಾಡುತ್ತೆ…

610

ದೇಹದಲ್ಲಿ ಉಂಟಾಗುವ ವೈಪರೀತ್ಯ ಯಾವುದರಿಂದ ಆಗುತ್ತದೆ ಅಂದರೆ ನಮ್ಮ ದೇಹದಲ್ಲಿ ವಾತ ಪಿತ್ತ ಮತ್ತು ಕಫ ಪ್ರಮಾಣ ಏರುಪೇರಾದಾಗ ಹೌದು ಈ ಅಂಶಗಳಿಂದಲೇ ನಮ್ಮ ದೇಹ ರಚನೆ ಆಗಿರುವುದರಿಂದ ಇದರಲ್ಲಿ ಏನೇ ಬದಲಾವಣೆ ಆದರೂ ನಿಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ ಹಾಗಾಗಿ ಇವತ್ತಿನ ಲೇಖನಿಯಲ್ಲಿ ನಾವು ಹೇಳಲು ಹೊರಟಿರುವ ಅಂತಹ ಮಾಹಿತಿ ಏನೆಂದರೆ ವಾತ ಪಿತ್ತ ಕಫ ಇವುಗಳಿಂದ ಏನೇ ಸಮಸ್ಯೆಗಳು ಉಂಟಾದರೂ ಅದರ ಪ್ರಭಾವ ಆರೋಗ್ಯದ ಮೇಲೆ ಉಂಟಾಗಬಾರದೆಂದೆರೆ ಮತ್ತು ವಾತ ಪಿತ್ತ ಕಫ ಪ್ರಮಾಣ ದೇಹದಲ್ಲಿ ಸರಿಯಾದ ಪ್ರಮಾಣದಲ್ಲಿ ಇರುವ ಹಾಗೆ ನೋಡಿಕೊಳ್ಳುವುದಕ್ಕೆ ಈ ಮನೆಮದ್ದನ್ನು ನೀವು ಪಾಲಿಸಿ ಖಂಡಿತ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.

ಈ ಪರಿಹಾರವನ್ನು 5ವರ್ಷ ಮೇಲ್ಪಟ್ಟ ಮಕ್ಕಳಿಂದ ಹಿಡಿದು ಹಿರಿಯರು ಕೂಡ ಪಾಲಿಸಬಹುದು ಇದರಿಂದ ಯಾವುದೇ ಅಡ್ಡ ಪರಿಣಾಮಗಳಾಗುವುದಿಲ್ಲ ಅದರ ಬದಲಾಗಿ ಈ ವಾತ ಪಿತ್ತ ಕಫ ವು ಉತ್ತಮ ಪ್ರಮಾಣದಲ್ಲಿ ಇರುವ ಮೂಲಕ ಆರೋಗ್ಯವನ್ನು ವೃದ್ಧಿಸುತ್ತದೆ.

ಹೌದು ವಾತಪ್ರಕೃತಿಯ ಇರುವವರಿಗೆ ಮೂಳೆ ನೋವು ಮಂಡಿ ನೋವು ಗ್ಯಾಸ್ಟ್ರಿಕ್ ಸಮಸ್ಯೆ ಇಂತಹ ತೊಂದರೆಗಳು ಎದುರಾಗುತ್ತವೆ ಇರುತ್ತದೆ ಹಾಗೆ ಈ ಕಫ ದ ಪ್ರಕೃತಿಯಲ್ಲಿ ವೈಪರೀತ್ಯವುಂಟಾದರೆ ಶೀತ ಕೆಮ್ಮು ಜ್ವರ ಇನ್ನೂ ಬೇರೆ ತರಹದ ದೊಡ್ಡ ದೊಡ್ಡ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುತ್ತದೆ ಉದಾಹರಣೆಗೆ ದಮ್ಮು ಕೂಡ ಇರಬಹುದು ಈ ರೀತಿ ಸಮಸ್ಯೆಗಳು ಎದುರಾಗುತ್ತದೆ.ಪಿತ್ತ ಪ್ರಕೃತಿಯಲ್ಲಿ ವೈಪರೀತ್ಯವುಂಟಾದರೆ ಆಗ ದೇಹದಲ್ಲಿ ಉಷ್ಣಾಂಶ ಹೆಚ್ಚಾಗುತ್ತದೆ ಇದರಿಂದ ಸಹ ಮಂಡಿ ಸೆಳೆತ ಮತ್ತು ದೇಹದಲ್ಲಿ ಹಾರ್ಮೋನ್ ಇಂಬ್ಯಾಲೆನ್ಸ್ ಆಗುವುದು ತೂಕ ಹೆಚ್ಚುವುದು ಹೀಗೆ ಇಂತಹ ಸಮಸ್ಯೆಗಳು ಉಂಟಾಗುತ್ತದೆ.

ಆದರೆ ಇದ್ಯಾವುದೂ ಸಮಸ್ಯೆಗಳು ನಮ್ಮ ಬಳಿ ಬರಬಾರದು ಆರೋಗ್ಯಕರವಾಗಿರಬೇಕು ಅಂದರೆ ಅದಕ್ಕಾಗಿ ಮಾಡಬೇಕಾದ ಮನೆಮದ್ದು ಈ ಆರೋಗ್ಯಕರವಾದ ಲಡ್ಡು ಇದನ್ನು ನೀವು ಪ್ರತಿದಿನ ತಿನ್ನುತ್ತಾ ಬಂದರೆ ಯಾವುದೇ ತರಹದ ಹಾರ್ಮೋನ್ ಇಂಬ್ಯಾಲೆನ್ಸ್ ಆಗುವುದಿಲ್ಲ ನಿಮ್ಮ ಆರೋಗ್ಯ ಬಹಳ ಉತ್ತಮವಾಗಿ ಇರುತ್ತದೆ.ಈ ಲಡ್ಡು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಅಂಟು ಗೋಡಂಬಿ ಬಾದಾಮಿ ಪಿಸ್ತಾ ಕೊಬ್ಬರಿ ಗೋಧಿಹಿಟ್ಟು ತುಪ್ಪ ಹಿಪ್ಪಲಿ ಏಲಕ್ಕಿ ಜಾಯಿಕಾಯಿ ಬೆಲ್ಲ.

ನಿಮ್ಮ ಮನೆಯವರು ರ ಸಂಖ್ಯೆಯ ಆಧಾರದ ಮೇಲೆ ಈ ಪದಾರ್ಥಗಳ ಪ್ರಮಾಣವನ್ನ ತೆಗೆದುಕೊಳ್ಳಬೇಕಿರುತ್ತದೆ ಮೊದಲಿಗೆ ತುಪ್ಪದಲ್ಲಿ ಅಂಟು ಗೋಡಂಬಿ ಬಾದಾಮಿ ಪಿಸ್ತಾ ಕೊಬ್ಬರಿ ಗೋಧಿಹಿಟ್ಟು ಇವುಗಳನ್ನು ಹುರಿದುಕೊಳ್ಳಬೇಕು ಬೇರೆಬೇರೆಯಾಗಿ ಹುರಿದುಕೊಂಡು ಅಥವಾ ಬೇರೆ ಬೇರೆಯಾಗಿ ಇಟ್ಟುಕೊಳ್ಳಿ.

ಹಿಪ್ಪಲಿ ಏಲಕ್ಕಿ ಜಾಯಿಕಾಯಿ ಅನ್ನು ಸ್ವಲ್ಪ ಪ್ರಮಾಣದಲ್ಲಿ ತೆಗೆದುಕೊಂಡು ಅದನ್ನು ಕುಟ್ಟಿ ಪುಡಿ ಮಾಡಿ ಇಟ್ಟುಕೊಳ್ಳಿ.ಈಗ ಬೆಲ್ಲವನ್ನು ನೀರು ಹಾಕದೆ ಹಾಗೇ ಕರಗಿಸಿಕೊಳ್ಳಬೇಕು ಈಗ ಕರಗಿಸಿಕೊಂಡ ಬೆಲ್ಲಕ್ಕೆ ಈ ಮೇಲೆ ಹುರಿದುಕೊಂಡಂತಹ ಮತ್ತು ಕುಟ್ಟಿಕೊಂಡು ಪದಾರ್ಥಗಳನ್ನು ಹಾಕಿ ಒಮ್ಮೆಲೆ ಕೈಯಲ್ಲಿಯೇ ಮಿಶ್ರ ಮಾಡಿಕೊಳ್ಳಿ ನಂತರ ಮಿಕ್ಸಿ ಜಾರ್ ನಲ್ಲಿ ಸ್ವಲ್ಪ ಸಮಯ ಗ್ರೈಂಡ್ ಮಾಡಿಕೊಳ್ಳಿ ನಂತರ ಇದಕ್ಕೆ ತುಪ್ಪ ಮಿಶ್ರ ಮಾಡಿಕೊಂಡು ಉಂಡೆ ಕಟ್ಟಿಕೊಳ್ಳಿ.

ಈ ಉಂಡೆ ಇದೀಗ ತಯಾರಾಗಿದೆ ಈ ಲಡ್ಡುವನ್ನು ಏರ್ ಟೈಟ್ ಕಂಟೈನರ್ ನಲ್ಲಿ ಶೇರ್ ಮಾಡಿ ಇಟ್ಟುಕೊಳ್ಳಿ ವಾರದವರೆಗೂ ಕೆಡುವುದಿಲ್ಲ ಪ್ರತಿದಿನ ಒಂದೊಂದು ಹುಂಡಿಯನ್ನು ತಿನ್ನುತ್ತಾ ಬನ್ನಿ ನಾಲಿಗೆಗೂ ರುಚಿ ಆರೋಗ್ಯಕ್ಕೂ ಉತ್ತಮ ಈ ಸರಳ ಪರಿಹಾರ ಪಾಲಿಸಿದರೆ ವಾತ ಪಿತ್ತ ಕಫ ಈ ಪ್ರಕೃತಿಯು ಸಮತೋಲನದಲ್ಲಿದ್ದು ನಿಮ್ಮ ಆರೋಗ್ಯವನ್ನು ಕಾಪಾಡುತ್ತದೆ.