ಕೇವಲ ಇದನ್ನ ಮೂರು ಅಥವಾ ನಾಲ್ಕು ದಿನ ಸೇವನೆ ಮಾಡಿ ಸಾಕು ಸೊಂಟ , ಮಂಡಿ ನೋವು ಹಾಗು ರಕ್ತ ಸಂಚಾರ ಕೂಡ ಚೆನ್ನಾಗಿ ಆಗುತ್ತೆ..

408

ನರಗಳ ದೌರ್ಬಲ್ಯತೆ ನರ ಹಿಡಿತ ಅಥವಾ ನರಮಂಡಲದಲ್ಲಿ ಯಾವುದೇ ಸಮಸ್ಯೆಗಳಿರಲಿ ಅಥವಾ ಮೂಳೆ ಸೆಳೆತ ಮೂಳೆ ನೋವು ಮಂಡಿನೋವು ಕೀಲುನೋವು ಇಂತಹ ಯಾವುದೇ ತರಹದ ಸಮಸ್ಯೆಗಳಿರಲಿ ಅದನ್ನ ಪರಿಹರ ಮಾಡಿಕೊಳ್ಳುವುದಕ್ಕೆ ಈ ಮನೆ ಮದ್ದು ಮಾಡಿ, ನಿಮ್ಮ ಸಮಸ್ಯೆಗಳಿಂದ ಪರಿಹಾರ ಪಡೆದುಕೊಳ್ಳಿ ಯಾವುದೇ ಚಿಕಿತ್ಸೆಯಿಲ್ಲದೆ ಕೇವಲ ಮೂರೇ ತಿಂಗಳಿನಲ್ಲಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತೀರ.

ಹೌದು ನಿಮ್ಮ ಈ ಶರೀರದಲ್ಲಿ ಯಾವುದೇ ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುವುದು ಅಥವಾ ಮೂಳೆಗಳ ಜಾಯಿಂಟ್ ನಲ್ಲಿ ಸೆಳೆತ ಆಗಲಿ ಕಟಕಟ ಎಂದು ಸದ್ದು ಬರುವುದಾಗಲಿ ಮೂಳೆಗಳು ಹಿಡಿಯುವುದು ಮಂಡಿ ಹಿಡಿತ ಮಂಡಿ ನೋವು ಅಥವಾ ಮೀನು ಖಂಡದಲ್ಲಿ ನೋವು ಈ ರೀತಿ ಯಾವುದೇ ತರಹದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದಲ್ಲಿ, ಅದಕ್ಕಾಗಿ ಹಲವು ಮನೆಮದ್ದುಗಳಿವೆ ಅದರಲ್ಲಿ ಇವತ್ತಿನ ಈ ಲೇಖನಿಯಲ್ಲಿ ಒಂದರ ವಿಧಾನವನ್ನು ತಿಳಿಸಿ ಕೊಡುತ್ತೇವೆ. ನೀವು ಕೂಡ ಈ ಪರಿಹಾರವನ್ನು ಮಾಡಿಕೊಂಡಿದ್ದಲ್ಲಿ ವಾಯು ಸಮಸ್ಯೆಯಿಂದ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದರು ಸಹ ನಿಮಗೆ ಪರಿಹಾರ ಸಿಗುತ್ತದೆ.

ಹೌದು ವಾಯು ಸಮಸ್ಯೆ ಕಾಣಿಸಿಕೊಂಡಾಗ ಮೂಳೆಗಳಲ್ಲಿ ಕಟಕಟ ಶಬ್ದ ಬರುವುದು ಮೂಳೆ ಹಿಡಿಯುವುದು ಮಂಡಿ ಭಾಗದಲ್ಲಿ ನೋವು ಕಾಣಿಸಿಕೊಳ್ಳುವುದು ಅಥವಾ ಮೂಳೆ ಹಿಡಿದಂತಾಗುವುದು ಕೀಲು ಗಳಲ್ಲಿ ನೋವು ಕಾಣಿಸಿಕೊಳ್ಳುವುದು ಅಥವಾ ಜೋಮು ಹಿಡಿಯುವುದು ಇಂತಹ ಯಾವುದೇ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದರು, ಅದಕ್ಕೆ ವಾಯು ಒಂಥರಾ ಕಾರಣವಾದರೆ. ಇನ್ನು ನಾವು ಪಾಲಿಸುವ ಆಹಾರ ಪದ್ಧತಿ ಮತ್ತು ದೇಹಕ್ಕೆ ವಿಶ್ರಾಂತಿ ಸಿಗದೆ ಹೋದಾಗಲೂ ಇಂಥ ಸಮಸ್ಯೆ ಉಂಟಾಗುತ್ತದೆ ಅಥವಾ ದೇಹಕ್ಕೆ ಶ್ರಮ ಹಾಕದೆ ಇದ್ದಾಗಲೂ ಇಂತಹ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಹಾಗಾಗಿ ಯಾವುದೇ ಕಾರಣಕ್ಕೂ ಮೂಳೆಗಳಲ್ಲಿ ಕಟಕಟ ಶಬ್ದ ಬರುವುದು ನರ ಹಿಡಿಯುವುದು ಮೀನು ಕಂಠದಲ್ಲಿ ನೋವು ಕೀಲುಗಳ ನೋವು ಬರುವುದು ಆಗುತ್ತಿದ್ದರೆ, ಅದಕ್ಕೆ ಸರಳ ಪರಿಹಾರ ಇದಾಗಿರುತ್ತದೆ. ಇದನ್ನು 3 ತಿಂಗಳುಗಳ ಕಾಲ ಸತತವಾಗಿ ಪಾಲಿಸಬೇಕಿರುತ್ತದೆ, ಇದೇ ಸಮಯದಲ್ಲಿ ನೀವು ದೇಹಕ್ಕೆ ಶ್ರಮ ಹಾಕುವುದಕ್ಕಾಗಿ ಸ್ವಲ್ಪ ಸಮಯ ವಾಕ್ ಮಾಡುವುದು ಅಥವಾ ಎಕ್ ಸೈಸ್ ಮಾಡೋದು ವ್ಯಾಯಾಮ ಮಾಡುವುದು ಮಾಡಲೇ ಬೇಕಿರುತ್ತದೆ.

ಈ ಪರಿಹಾರ ಮಾಡುವುದಕ್ಕೆ ಬೇಕಾಗಿರುವುದು ಚಕ್ಕೆ ಮೆಣಸು ಅಗಸೆಬೀಜ ಕುಂಬಳಕಾಯಿ ಬೀಜ ಕಲ್ಲುಸಕ್ಕರೆ ಮತ್ತು ಪಲಾವ್ ಎಲೆ.ಮೊದಲಿಗೆ ಅಗಸೆ ಬೀಜ ಮತ್ತು ಅದರ ಅರ್ಧದಷ್ಟು ಕುಂಬಳಕಾಯಿ ಬೀಜವನ್ನು ತೆಗೆದುಕೊಂಡು ಹುರಿದುಕೊಳ್ಳಬೇಕು ಬಳಿಕ ಪಲಾವ್ ಎಲೆ ಯನ್ನು ಒಂದರಿಂದ ಎರಡು ಎಲೆ ತೆಗೆದುಕೊಳ್ಳಿ. ಅದನ್ನು ಕೂಡ ಹುರಿದುಕೊಂಡು ಈ ಮಿಶ್ರಣವನ್ನು ಪುಡಿ ಮಾಡಿಕೊಳ್ಳುವಾಗ ಇದಕ್ಕೆ ಸ್ವಲ್ಪ ಚಕ್ಕೆ ಅಂದರೆ 1 ಇಂಚಿನಷ್ಟು ದಾಲ್ಚಿನ್ನಿ ಚಕ್ಕೆ ಮತ್ತು ಐದರಿಂದ ಆರು ಕಾಳುಮೆಣಸನ್ನು ಹಾಕಿ ಪುಡಿ ಮಾಡಿಕೊಳ್ಳಬೇಕು ಇದನ್ನು ಏರ್ ಟೈಟ್ ಕಂಟೈನರ್ ನ ಶೇಖರಣೆ ಮಾಡಿ ಇಟ್ಟುಕೊಳ್ಳಿ.

ಪ್ರತಿದಿನ ಬೆಳಗ್ಗೆ ಅಥವಾ ರಾತ್ರಿ ಊಟದ ನಂತರ ಒಂದು ಲೋಟ ಬೆಚ್ಚಗಿನ ನೀರಿಗೆ ಈ ಪುಡಿಯನ್ನು ಮಿಶ್ರ ಮಾಡಿ ಇದಕ್ಕೆ ಜೇನುತುಪ್ಪ ಅಥವಾ ಬೆಲ್ಲದ ಪುಡಿಯನ್ನು ಮಿಶ್ರ ಮಾಡಿ ಕುಡಿಯಬೇಕು.ಈ ಪರಿಹಾರವನ್ನು ಮಾಡಿಕೊಳ್ಳುವುದರಿಂದ ವಾಯು ಸಮಸ್ಯೆ ನಿವಾರಣೆಯಾಗುತ್ತದೆ ಹೌದು ಇದರಲ್ಲಿ ಚಕ್ಕೆ ಮತ್ತು ಮೆಣಸು ಹಾಕಿ ಅಗಸೆ ಬೀಜ ಮತ್ತು ಕುಂಬಳಕಾಯಿ ಬೀಜವನ್ನು ಬಳಸಿರುವುದರಿಂದ ಇದು ದೇಹಕ್ಕೆ ಪುಷ್ಟಿ ನೀಡುವುದಷ್ಟೇ ಅಲ್ಲ ವಾಯು ಸಮಸ್ಯೆಯನ್ನು ಕೂಡ ತೆಗೆದು ಹಾಕುತ್ತದೆ, ಹಾಗೆ ಪಲಾವ್ ಎಲೆ ಕೂಡ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವುದಲ್ಲದೆ ದೇಶದಲ್ಲಿ ಉಂಟಾಗಿರುವ ಅಧಿಕ ವಾಯುವನ್ನು ಹೊರಹಾಕುವಲ್ಲಿ ಸಹಕಾರಿ. ಈ ಪರಿಹಾರದಿಂದ ಖಂಡಿತವಾಗಿಯೂ ಈ ಮೇಲೆ ತಿಳಿಸಿದಂತಹ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.