ಕೇವಲ ಐದು ನಿಮಿಷಗಳಲ್ಲಿ ಶೀತ ನೆಗಡಿ ಕಡಿಮೆ ಮಾಡಿಕೊಳ್ಳಬೇಕಾದರೆ ನೈಸರ್ಗಿಕವಾಗಿ ಈ ಒಂದು ಮನೆಮದ್ದು ಮಾಡಿ ಸಾಕು …

150

ಶೀತ ಕೆಮ್ಮು ನಿವಾರಣೆಗೆ ಮಾಡಿ ಈ ಪರಿಹಾರ ಈ ಸರಳ ಮನೆ ಮದ್ದು, ಶೀತ ಕೆಮ್ಮಿನ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ ಹಾಗಾದರೆ ಬನ್ನಿ ಶೀತ ಕೆಮ್ಮು ನಿವಾರಣೆ ಮಾಡುವ ಸರಳ ಮನೆಮದ್ದಿನ ಕುರಿತು ತಿಳಿದುಕೊಳ್ಳೋಣ! ನಮಸ್ಕಾರಗಳು ಸಮಾನ್ಯವಾಗಿ ವಾತಾವರಣದಲ್ಲಿ ಬದಲಾವಣೆ ಉಂಟಾದಾಗ ಮೊದಲು ಕಾಡುವ ಸಮಸ್ಯೆ ಅದು ಶೀತ ಅಥವಾ ಈ ಶೀತ ಕೆಮ್ಮು ಸಹ ಬಂದು ಬಿಡುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ಬಹಳ ಸುಲಭವಾಗಿ ಸರಳ ವಿಧಾನದಲ್ಲಿ ಪರಿಹಾರ ಮಾಡಿಕೊಳ್ಳುವಂತಹ ಮನೆಮದ್ದಿನ ಕುರಿತು ನಾವು ಈ ದಿನದ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ.

ಹಾಗಾಗಿ ಇಂದಿನ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಹಾಗೂ ಹತ್ತು ವರ್ಷ ಮೇಲ್ಪಟ್ಟ ಯಾರಿಗೇ ಆಗಲಿ ಈ ಶೀತ ಕೆಮ್ಮು ಕಾಣಿಸಿಕೊಂಡಾಗ ಯಾವೆಲ್ಲ ಪರಿಹಾರಗಳ ಮೂಲಕ ಅದು ಮುಖ್ಯವಾಗಿ ಮನೆಯಲ್ಲೇ ದೊರೆಯುವ ಪದಾರ್ಥಗಳನ್ನು ಬಳಸಿ ತಕ್ಷಣಕ್ಕೆ ಈ ಶೀತ ಕೆಮ್ಮಿಗೆ ಪರಿಹಾರ ಕಂಡುಕೊಳ್ಳಬಹುದು ಎಂಬುದನ್ನು ತಿಳಿಯೋಣ. ಹೌದು ಈ ಶೀತ ಕೆಮ್ಮು ಬಂದಾಗ ಗಂಟಲಿನಲ್ಲಿ ಕಫ ಕಟ್ಟುವುದು ಅಥವಾ ತಲೆನೋವು ಬರುವುದು ಈ ಎಲ್ಲ ಸಮಸ್ಯೆಗಳು ಬಾಧಿಸುವುದು ಸಹಜವೇ ಆಗಿರುತ್ತದೆ. ಹಾಗಾಗಿ ತಕ್ಷಣಕ್ಕೆ ನಾವು ಪರಿಹಾರ ಮಾಡಿಕೊಳ್ಳದೆ ಹೋದರೆ ಶೀತ ಹೆಚ್ಚುತ್ತದೆ ಇದರೊಟ್ಟಿಗೆ ಕೆಮ್ಮು ಸಹ ಹೆಚ್ಚುತ್ತದೆ ಹಾಗಾಗಿ ಶೀತ ಕೆಮ್ಮು ಬಂದರೆ ತನ್ನಿಂತಾನೇ ಗಂಟಲುನೋವು ತಲೆನೋವು ಇದೆಲ್ಲಾ ಸಮಸ್ಯೆಗಳು ಬಂದುಬಿಡುತ್ತದೆ.

ಈ ಸಮಸ್ಯೆಗೆ ತಕ್ಷಣಕ್ಕೆ ಪರಿಹಾರ ಕಂಡುಕೊಳ್ಳದೆ ಇದ್ದರೆ ನಮ್ಮ ದಿನವೆಲ್ಲ ಹಾಳು ಕೆಲಸ ಮಾಡಲು ಆಸಕ್ತಿ ಸಹ ಇರುವುದಿಲ್ಲ ಸುಸ್ತು ಸಹಜತೆಗೆ ಇರುತ್ತದೆ ಹಾಗಾಗಿ ಈ ಸರಳ ಮನೆಮದ್ದು ಪಾಲಿಸಿ ಈ ಶೀತ ಕೆಮ್ಮು ನಿವಾರಣೆಗೆ ಜೊತೆಗೆ ಗಂಟಲಿನ ಕಟ್ಟಿರುವ ಕಸವನ್ನು ಕರಗಿಸಲು ಒಂದೊಳ್ಳೆ ಪರಿಹಾರ ಅಂದರೆ ಅದು ಶುಂಠಿರಸ.

ಹೌದು ಶುಂಠಿ ರಸವನ್ನು ತೆಗೆದುಕೊಂಡು ಇದನ್ನು ನೀವು ಬೆಚ್ಚಗಿನ ನೀರಿಗೆ ಮಿಶ್ರಣ ಮಾಡಿ ಕುಡಿಯಬೇಕು ಇದರಿಂದ ಗಂಟಲಿನಲ್ಲಿ ಕಫ ಕರಗುತ್ತದೆ ಮತ್ತು ಕಫ ಕರಗಿ ಕೆಮ್ಮು ಸಹ ತಾನಾಗಿಯೇ ನಿವಾರಣೆಯಾಗುತ್ತದೆ ಹಾಗೂ ಶೀತ ಕೂಡ ನಿಯಂತ್ರಣಕ್ಕೆ ಬರುತ್ತದೆ ದೇಹ ಬೆಚ್ಚಗೆ ಆದಾಗ ಶೀತ ಸಹ ಕಡಿಮೆಯಾಗುತ್ತದೆ. ಹಾಗಾಗಿ ಶುಂಠಿಯ ಪ್ರಯೋಜನ ಪಡೆದುಕೊಳ್ಳುವುದರಿಂದ ಬಹಳ ಬೇಗ ಈ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬಹುದು.

ಈಗ ಶೀತ ಕೆಮ್ಮು ಸಮಸ್ಯೆ ಉಂಟಾದಾಗ ತಾನಾಗಿಯೇ ಸುಸ್ತು ಸಹ ಉಂಟಾಗುತ್ತದೆ ಈ ಪರಿಸ್ಥಿತಿಯಲ್ಲಿ ನೀವು ಮಾಡಿಕೊಳ್ಳಬೇಕಾದ ಸರಳ ಮನೆಮದ್ದು ಅಂದರೆ ಬಾದಾಮಿ ಮತ್ತು ಖರ್ಜೂರದ ಮಿಶ್ರಣವನ್ನ ಪುಡಿ ಮಾಡಿ ಇಟ್ಟುಕೊಳ್ಳಿ ಇದರೊಟ್ಟಿಗೆ ಶುಂಠಿರಸವನ್ನು ಕೂಡಾ ತೆಗೆದುಕೊಂಡು ಈ ಮಿಶ್ರಣವನ್ನು ಅಂದರೆ ಬಾದಾಮಿ ಖರ್ಜೂರದ ಪುಡಿ ಜೊತೆಗೆ ಶುಂಠಿಯ ರಸ ಇದನ್ನು ಬೆಚ್ಚಗಿನ ನೀರಿಗೆ ಮಿಶ್ರಣ ಮಾಡಿ ಕುಡಿಯಬೇಕು.

ಈ ಪರಿಹಾರವನ್ನು ರಾತ್ರಿ ಮಲಗುವ ಮುನ್ನ ಮಾಡಬೇಕು ಈ ಪರಿಹಾರವನ್ನು ಮಾಡಿಕೊಳ್ಳುವುದರಿಂದ ಸುಸ್ತು ಸಹ ಬಹಳ ಬೇಗ ನಿವಾರಣೆಯಾಗುತ್ತದೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ತಲೆನೋವು ಸಮಸ್ಯೆ ಕಾಡುತ್ತಿದ್ದರೆ ಅದು ಸಹ ನಿವಾರಣೆಯಾಗುತ್ತದೆ ಹೌದು ತಲೆನೋವು ಬಹಳ ಬೇಗ ನಿವಾರಣೆಯಾಗಬೇಕೆಂದರೆ ಶುಂಠಿಯ ರಸವನ್ನು ಸ್ವಲ್ಪ ತೆಗೆದುಕೊಂಡು ಈ ನೋವು ಇರುವ ಭಾಗಕ್ಕೆ ಲೇಪ ಮಾಡಿಕೊಳ್ಳಿ. ಈ ಸರಳ ಮನೆ ಮದ್ದುಗಳನ್ನೂ ಪಾಲಿಸುವ ಮೂಲಕ ನಿಮ್ಮ ಈ ಶೀತ ಕೆಮ್ಮು ಸುಸ್ತು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.