ನಿಮ್ಮ ಬಳಿ ಒಂದೇ ಎಕರೆ ಜಾಗ ಇದ್ದರೆ ಸಾಕು ಕೋಟಿ ಕೋಟಿ ಹಣ ಸಂಪಾದಿಸಬಹುದು ಹೌದು ನೀವು ಅಫಿಷಿಯಲ್ ಆಗಿರಲಿ ಅಥವಾ ರೈತಾಪಿ ಕುಟುಂಬದವರು ಆಗಿರಲಿ ನಿಮ್ಮ ಬಳಿ ಸ್ವಲ್ಪ ಭೂಮಿ ಇದ್ದರೂ ಲಕ್ಷದಿಂದ ಕೋಟಿ ಹಣ ಸಂಪಾದನೆ ಮಾಡಿಕೊಳ್ಳಬಹುದು ಅದು ಹೇಗೆ ಅಂತ ಹೇಳ್ತೇವೆ ಇವತ್ತಿನ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ಹೌದು ರೈತರಿಗೆ ಆದಾಯ ಕಡಿಮೆ ಆದಾಯ ಕಡಿಮೆ ಅಂತ ಅಂದು ಕೊಳ್ಳುತ್ತಾ ಇರುತ್ತೀರಾ. ಆದರೆ ನೀವು ಸರಿಯಾಗಿ ನಿಮ್ಮ ಬಳಿ ಇರುವ ಜಮೀನಿನಲ್ಲಿ ಏನು ಬೆಳೆದರೆ ಎಷ್ಟು ಲಾಭವಾಗುತ್ತದೆ ಎಷ್ಟು ಆದಾಯ ಪಡೆಯಬಹುದು ಎಂಬುದನ್ನೆಲ್ಲ ಆಲೋಚನೆ ಮಾಡಿ ಬೆಳೆ ಬೆಳೆಯಲು ಮುಂದಾದರೆ ಖಂಡಿತವಾಗಿಯೂ ಹೆಚ್ಚು ಆದಾಯ ಪಡೆಯಬಹುದು ಮತ್ತು ಬೆಲೆ ನಷ್ಟ ಕೂಡ ಆಗುವುದಿಲ್ಲ.
ಮೊದಲ ಬಾರಿ ಹೊಸ ಬೆಳೆಯನ್ನು ನಿಮ್ಮ ಜಮೀನಿನಲ್ಲಿ ಬೆಳೆಯಲು ಮುಂದಾಗುತ್ತಿದ್ದೀರಾ ಅಂದರೆ ನೀವು ಸಂಪೂರ್ಣವಾಗಿ ನಿಮ್ಮ ಭೂಮಿಯಲ್ಲಿ ಎಲ್ಲಾ ಬೆಳೆಯನ್ನು ಬೆಳೆಯಬಾರದು ಮೊದಲಿಗೆ ಕಾಲು ಎಕರೆ ಅಲ್ಲಿ ನೀವು ಅಂದುಕೊಂಡಂತಹ ಬೆಳೆಯನ್ನು ಬೆಳೆಯಬೇಕು. ಹೌದು ಈ ರೀತಿ ನೀವು ಬೆಳೆದ ಮೇಲೆ ಈ ಕಾಲು ಎಕರೆಗೆ ಎಷ್ಟು ಖರ್ಚು ಆಗುತ್ತದೆ ಆನಂತರ ಎಷ್ಟು ಲಾಭ ಆಗುತ್ತದೆ ಎಷ್ಟು ಆದಾಯ ಗಳಿಸಿದ್ದೇವೆ ಇಂತಹದ್ದನ್ನೆಲ್ಲ ಅಲೋಚನೆ ಮಾಡಿ ಮುಂದೆ ಆ ಬೆಳೆಯನ್ನು ಬೆಳೆದರೆ ನೋಡಿ ನಿಮಗೆ ಹೆಚ್ಚಿನ ಲಾಭ ದೊರೆಯುತ್ತದೆ ಆದರೆ ಈ ದಿನದ ಲೇಖನದಲ್ಲಿ ನಾವು ತಿಳಿಸಲು ಹೊರಟಿರುವ ಮಾಹಿತಿ ಬಹಳ ವಿಭಿನ್ನವಾಗಿದೆ ನೀವು ಈ ರೀತಿ ಎಲ್ಲಾ ಆಲೋಚನೆ ಮಾಡೋದೇ ಬೇಡ ನಿಮ್ಮ ಎಕರೆಯಲ್ಲಿ ಸಂಪೂರ್ಣ ಜಾಗದಲ್ಲಿ ಈ ಬೆಳೆಯನ್ನು ಬೆಳೆದರೆ ಕೋಟಿ ಹಣ ಕಣ್ಣುಮುಚ್ಚಿಕೊಂಡು ಸಂಪಾದಿಸಬಹುದು.
ಹೌದು ಅದೇ ಶ್ರೀಗಂಧ ಬೆಳೆಯುವುದು ಹೌದು ಈ ಶ್ರೀಗಂಧದ ಬೆಳೆಯನ್ನು ಹೇಗೆ ಬೆಳೆಯಬೇಕು ಎಂಬುದನ್ನು ಕೂಡ ಚಿಕ್ಕದಾಗಿ ತಿಳಿಸಿಕೊಡುತ್ತೇವೆ ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯ ಬೇಕು ಅನ್ನೋ ಹಾಗಿದ್ದರೆ ನಿಮ್ಮ ಹತ್ತಿರ ದಲ್ಲಿ ಇರುವ ಅರಣ್ಯ ಇಲಾಖೆಗೆ ಹೋಗಿ ಅಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಂಡು ಬರಬಹುದು ಹಾಗೆ ಈ ಶ್ರೀಗಂಧದ ಬೆಳೆಯನ್ನು ಬೆಳೆಯುವುದರಿಂದ ನಿಮಗೆ ಹೆಚ್ಚು ಲಾಭ ಇದೆ ಆದರೆ ವರ್ಷ ವರ್ಷ ಅಲ್ಲ 12 ರಿಂದ 15 ವರ್ಷದ ವರೆಗೆ ನೀವು ಕಾಯಬೇಕು ಆನಂತರ ಈ ಶ್ರೀಗಂಧದ ಮರ ಕಟಾವಿಗೆ ಬರುತ್ತದೆ ನೀವು ಇದನ್ನು ನೇರವಾಗಿ ಸರ್ಕಾರಕ್ಕೆ ಮಾಡಬೇಕಾಗಿರುತ್ತದೆ ಇದಕ್ಕೆ ಸರ್ಕಾರದವರು ಸರಿಯಾದ ಬೆಲೆ ನಿಗದಿಪಡಿಸಿ ನಿಮಗೆ ಹಣ ನೀಡ್ತಾರೆ.
ಮುಖ್ಯವಾದ ವಿಚಾರವನ್ನು ತಿಳಿಯಿರಿ ಈ ಶ್ರೀಗಂಧದ ಸಸಿ ಅನ್ನೋ ನೀವು ಬೆಳೆಸುವಾಗ ಇದು ಪರಾವಲಂಬಿಯಾಗಿರುವುದರಿಂದ ಪೂರ್ತಿಯಾಗಿ ಶ್ರೀಗಂಧವನ್ನು ಬೆಳೆಯುವಂತಿಲ್ಲ ಬೇರೆ ಸಸಿಗಳನ್ನು ಸಹ ಈ ಶ್ರೀಗಂಧದ ಸಸಿ ಗಳ ಜೊತೆ ಬೆಳೆಸಬೇಕಾಗುತ್ತದೆ ಹೇಗೆ ಅಂದರೆ ಶ್ರೀಗಂಧದ ಸಸಿ ಗಳ ಮಧ್ಯೆ ಹೆಬ್ಬೇವು ಸಿಲ್ವರ್ ಇಂತಹ ಗಿಡಗಳನ್ನು ಬೆಳೆಸುವುದು ಒಳ್ಳೆಯದು ಯಾಕೆಂದರೆ ಇದು ಭೂಮಿಯಿಂದ ಮಾತ್ರ ಉತ್ತಮ ಅಂಶಗಳನ್ನು ಪಡೆದುಕೊಳ್ಳುವುದಿಲ್ಲ ತನ್ನ ಅಕ್ಕಪಕ್ಕದಲ್ಲಿ ಇರುವ ಮರಗಳಿಂದ ಸಹ ಅಥವ ಗಿಡಗಳಿಂದ ಸಹ ಅಂಶಗಳನ್ನ ಪಡೆದುಕೊಳ್ಳುವುದರಿಂದ ಬರೀ ಶ್ರೀಗಂಧದ ಸಸಿಗಳನ್ನು ಮಾತ್ರ ನೆಡುವಂತಿಲ್ಲ.
ಇನ್ನು ಈ ಶ್ರೀಗಂಧದ ಮರಗಳನ್ನ ನೀವು ಬೆಳೆದ ನಂತರ ಇದು ಕಟಾವಿಗೆ ಬಂತು ಅಂದರೆ ಇದನ್ನು ನೀವು ಖಾಸಗಿ ವ್ಯಕ್ತಿಗಳ ಜೊತೆ ಅಥವಾ ಖಾಸಗಿ ಕಂಪನಿಗಳ ಜೊತೆ ಮಾರಾಟ ಮಾಡುವಂತಿಲ್ಲ ನೇರವಾಗಿ ಸರ್ಕಾರಕ್ಕೆ ಈ ಬೆಳೆಯನ್ನು ಮಾರಾಟ ಮಾಡುವುದು ಕಡ್ಡಾಯವಾಗಿದೆ ಇನ್ನೂ ಈ ಶ್ರೀಗಂಧದ ಮರಗಳು ಬೆಳೆದ ಮೇಲೆ ಇದರಿಂದ ಬೀಜ ಬರುತ್ತದೆ ಇದನ್ನು ಸಹ ಮಾರಾಟ ಮಾಡುವುದರಿಂದ ನೀವು ವರುಷಕ್ಕೆ 2ಲಕ್ಷ ರೂಪಾಯಿವರೆಗೂ ಆದಾಯ ಗಳಿಸಿಕೊಳ್ಳಬಹುದು. ಈ ರೀತಿಯಾಗಿದೆ ಶ್ರೀಗಂಧ ಬೆಳೆಯುವ ಬಗೆಗಿನ ಚಿಕ್ಕ ಮಾಹಿತಿ ಮಾಹಿತಿ ಉಪಯುಕ್ತವಾಗಿದೆ ಎಂದು ಭಾವಿಸುತ್ತೇನೆ ಶುಭದಿನ ಧನ್ಯವಾದ.