ನಮಸ್ಕಾರಗಳು ಪ್ರಿಯ ಸ್ನೇಹಿತರೆ ಇಲ್ಲೊಂದು ದೇವಾಲಯವಿದೆ ಇದು ಅದೆಷ್ಟು ವಿಶೇಷತೆಗಳನ್ನ ಹೊಂದಿದೆ ಅಂದರೆ ನಿಜಕ್ಕೂ ನೀವು ಅಂದುಕೊಂಡೆ ಇರುವುದಿಲ್ಲ ಇಂತಹದ್ದೊಂದು ದೇವಾಲಯ ನಮ್ಮ ದೇಶದಲ್ಲಿಯೇ ಇದೆ ಅಂತ ಹೌದು ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಸುಜಿದ್ರ ಎಂಬ ಪ್ರದೇಶದಲ್ಲಿ ಈ ಅದ್ಭುತವಾದ ದೇವಾಲಯವಿದೆ ಹಾಗೆ ಕೆಲವರಿಗೆ ಇದೇ ವಲಯದ ಪರಿಚಯ ಇದ್ದರೂ ಇರಬಹುದು. ಹಾಗೆ ಕೆಲವರಿಗೆ ಇದರ ಬಗ್ಗೆ ಪರಿಚಯ ಇಲ್ಲದೇ ಇರಬಹುದು ಆದರೆ ಇಬ್ಬರಿಗೂ ಉಪಯುಕ್ತವಾಗುವಂತಹ ಮಾಹಿತಿಯನ್ನು ನಿಮಗೆ ತಿಳಿಸಿಕೊಡುತ್ತೇವೆ ಇಂದಿನ ಲೇಖನ ಸಂಪೂರ್ಣವಾಗಿ ತಿಳಿಯಿರಿ.
ಹೌದು ಸ್ನೇಹಿತರೆ ಇಂದಿನ ಯುಗದಲ್ಲಿಯೂ ನಮ್ಮನೆಲ್ಲ ಕಾಯುತ್ತಿರುವ ಏಕೈಕ ದೈವ ಅಂದರೆ ಅದು ಆಂಜನೇಯ ಹೌದು ಇವತ್ತಿಗೂ ಭೂಮಿ ಮೇಲೆ ಆಂಜನೇಯರು ಇದ್ದಾರೆ ಎಂಬುದಕ್ಕೆ ಈಗಾಗಲೇ ಸಾಕಷ್ಟು ನಿದರ್ಶನಗಳಿವೆ ಹಗೆತನ ಭಕ್ತಾದಿಗಳನ್ನು ಕಾಪಾಡುವಲ್ಲಿ ನಿರತರಾಗಿರುವ ಆಂಜನೇಯಸ್ವಾಮಿಯು ಸುಮಾರು ಹದಿನೆಂಟು ಅಡಿಯಲ್ಲಿ ಈ ದೇವಾಲಯದಲ್ಲಿ ನೆಲೆಸಿದ್ದಾರೆ ಈ ದೇವಾಲಯದ ಕುರಿತು ನಿಮಗೆ ಹೇಳುವುದಾದರೆ ಇಲ್ಲಿ ಮತ್ತೊಂದು ವಿಶೇಷತೆ ಇದೆ ಅದೇನಪ್ಪಾ ಅಂದರೆ ತ್ರಿಮೂರ್ತಿಗಳಾದ ಬ್ರಹ್ಮ ವಿಷ್ಣು ಮಹೇಶ್ವರರು ಸೇರಿ ಒಂದೇ ಲಿಂಗದಲ್ಲಿ ಉದ್ಭವಿಸಿರುವ ಈ ಲಿಂಗವು ನಿಜವಾಗಿಯೂ ಕಣ್ಣಿಗೆ ಅದ್ಭುತವನ್ನು ನೀಡುತ್ತದೆ ಹಾಗಾದರೆ ಈ ಇದೇ ದೇವಾಲಯದಲ್ಲಿ ಮತ್ತೊಂದು ವಿಶೇಷತೆಯಿದೆ ಅದೇನೆಂದರೆ ಹದಿನೆಂಟು ಅಡಿಯ ಹನುಮಂತನ ವಿಗ್ರಹವೂ ಇಲ್ಲಿಯೇ ನೆಲೆಸಿದ್ದು ಈ ಹನುಮಂತನ ವಿಗ್ರಹದ ಬಾಲಕ್ಕೆ ದೇವಾಲಯಕ್ಕೆ ಬಂದ ಭಕ್ತಾದಿಗಳು ಬೆಣ್ಣೆಯನ್ನು ಹಚ್ಚುತ್ತಾರಂತೆ ಇದು ಯಾವ ಕಾರಣಕ್ಕೆ ಎಂಬ ಮಾಹಿತಿ ಕೂಡ ಹೇಳ್ತದೆ ಕೆಳಗಿನ ಲೇಖನವನ್ನು ತಿಳಿಯಿರಿ.
ಹೌದು ಭಾರತ ದೇಶ ದೇವಾಲಯಗಳ ಆಗರ, ತಮಿಳುನಾಡಿನಲ್ಲಿರುವ ಈ ವಿಶೇಷ ದೇವಾಲಯವು ಪುರಾತನ ಕಥೆಯೊಂದನ್ನು ಬಿಂಬಿಸುತ್ತದೆ ಅದೇನೆಂದರೆ ಮಹಾಕಾವ್ಯ ವಾಗಿರುವ ರಾಮಾಯಣದ ಬಗ್ಗೆ ನೀವು ಕೇಳಿದ್ದೀರಾ ರಾಮಾಯಣದಲ್ಲಿ ಸೀತೆಯ ಅಪಹರಣವಾದಾಗ ರಾಮನಿಗೆ ಸೀತೆಯನ್ನು ಹುಡುಕಲು ಸಹಕಾರಿಯಾದದ್ದು ಆಂಜನೇಯನ ಹಾಗೆ ರಾಮಭಕ್ತ ರಾಮ ಬಂಟ ಹನುಮಂತನು ಸೀತಾಮಾತೆಯನ್ನು ಹುಡುಕಲು ಲಂಕೆಗೆ ಹೋದಾಗ ಅಲ್ಲಿ ಅಲ್ಲಿ ಸೀತಾಮಾತೆಯನ್ನು ಕಂಡು ಆಂಜನೇಯ ಸ್ವಾಮಿಯು ಸಂತಸಪಟ್ಟಿದ್ದರು ಆದರೆ ಇದೇ ವೇಳೆ ಲಂಕೆಯಲ್ಲಿ ಲಂಕೆಯನಾ ಕಾಯುತ್ತಿದ್ದ ಸೈನಿಕರು ವಾನರನ ಬಾಲಕ್ಕೆ ಬೆಂಕಿಯನ್ನು ಹಚ್ಚಿದ್ದರು.
ಹೌದು ಕೋಪಗೊಂಡ ಹನುಮಂತ ತನ್ನ ಬಾಲ್ಯದಿಂದಲೇ ಅರ್ಧ ಲಂಕೆಯನ್ನು ದಾನ ಮಾಡಿದ್ದರು ಈ ವೇಳೆ ಹನುಮಂತನ ಬಾಲ ಅರ್ಧದಷ್ಟು ಸುಟ್ಟು ಹೋಗಿತ್ತು ಇದೇ ವೇಳೆ ಅದನ್ನ ಪರಿಹಾರ ಮಾಡುವುದಕ್ಕೆ ಏನಾದರೂ ಪರಿಹಾರ ಮಾಡಲೇಬೇಕಲ್ವಾ ಈ ನೋವಿನ ಶಮನಕ್ಕಾಗಿ ಆಂಜನೇಯನ ಬಾಲಕ್ಕೆ ಬೆಣ್ಣೆಯನ್ನು ಹಚ್ಚಲಾಗಿತ್ತು ಇದೇ ಕಾರಣಕ್ಕೆ ತಮಿಳು ನಾಡಿನ ಕನ್ಯಾಕುಮಾರಿಯಲ್ಲಿರುವ ಈ ವಿಶೇಷ ದೇವಾಲಯದಲ್ಲಿಯೂ ಕೂಡ ಬಂದ ಭಕ್ತಾದಿಗಳು ಆಂಜನೇಯನ ಬಾಲಕ್ಕೆ ಬೆಣ್ಣೆಯನ್ನು ಸವರುತ್ತಾರೆ. ಈ ರೀತಿ ಮಾಡುವುದರಿಂದ ಆ ನಮ್ಮಪ್ಪ ಉತ್ತಮ ಆರೋಗ್ಯವನ್ನು ನೀಡುತ್ತಾನೆ ಎಂಬ ಕಾರಣಕ್ಕೆ ಈ ರೀತಿ ಪದ್ದತಿಯನ್ನ ದೇವಾಲಯದಲ್ಲಿ ರೂಢಿಸಿಕೊಂಡು ಬರಲಾಗಿದೆ. ಹೀಗೆ ಆಂಜನೇಯ ಸ್ವಾಮಿಯು ಬಂದ ಭಕ್ತಾದಿಗಳಿಗೆ ಒಳ್ಳೆಯ ಆರೋಗ್ಯ ಹಾಗೂ ಹಲವು ಸಮಸ್ಯೆಗಳಿಂದ ಮುಕ್ತಿ ನೀಡುವುದು ಇಂತಹ ಕರುಣೆಯೆನ್ನ ತೋರುತ್ತಿದ್ದಾರೆ ತನ್ನ ಭಕ್ತಾದಿಗಳ ಮೇಲೆ.
ಇಂಥದ್ದೊಂದು ಪವಾಡ ನಡೆಯುತ್ತಿದ್ದು ನೀವು ಸಹ ತಮಿಳುನಾಡಿಗೆ ಭೇಟಿ ನೀಡಿದಾಗ ಈ ದೇವಾಲಯಕ್ಕೆ ಹೋಗಿ ಆಂಜನೇಯನ ದರ್ಶನವನ್ನು ಪಡೆದು ಬನ್ನಿ ಹಾಗೂ ಹಲವು ಅನಾರೋಗ್ಯ ಸಮಸ್ಯೆಗಳಿಂದ ನೀವು ಕೂಡ ಬಳಲುತ್ತಾ ಇದ್ದಲ್ಲಿ ಈ ದೇವಾಲಯಕ್ಕೆ ಹೋಗಿ ಆಂಜನೇಯ ಸ್ವಾಮಿಯ ಬಾಲಕ್ಕೆ ಬೆಣ್ಣೆಯನ್ನು ಸವರಿ ಬನ್ನಿ ಇಂಥದೊಂದು ವಿಭಿನ್ನ ದೇವಾಲಯ ವಿಭಿನ್ನ ಪದ್ದತಿಯನ್ನು ರೂಢಿಸಿಕೊಂಡು ಬಂದಿರತಕ್ಕಂತಹ ದೇವಾಲಯ ನಿಜಕ್ಕೂ ಅದ್ಭುತ ಇಂತಹದ್ದೇ ಹಲವು ವಿಶೇಷವಾದ ದೇವಾಲಯಗಳನ್ನು ನಾವು ಭಾರತ ದೇಶದಲ್ಲಿ ಕಾಣಬಹುದು ಅಂತಹ ದೇವಾಲಯಗಳ ಬಗ್ಗೆ ಮುಂದಿನ ಮಾಹಿತಿಯಲ್ಲಿ ನಿಮಗೆ ಒಳ್ಳೆಯ ವಿಚಾರಗಳನ್ನು ತಿಳಿಸಿಕೊಡುತ್ತದೆ ಎಲ್ಲರಿಗೂ ಶುಭವಾಗಲಿ ಶುಭದಿನ ಧನ್ಯವಾದಗಳು…