ನಟ ಪುನೀತ್ ರಾಜ್ಕುಮಾರ್ ಅವರ ಆರೋಗ್ಯದಲ್ಲಿ ಅ.೨೯ ರಂದು ಏರುಪೇರು ಉಂಟಾಗಿತ್ತೂ. ಕೂಡಲೇ ಅವರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು ಕೂಡ. ಬೆಳಗ್ಗೆ ಜಿಮ್ನಲ್ಲಿ ವರ್ಕೌಟ್ ಮಾಡುವಾಗ ಪುನೀತ್ ರಾಜ್ಕುಮಾರ್ ಅವರಿಗೆ ಆರೋಗ್ಯ ಸಮಸ್ಯೆ ಉಂಟಾಗಿತ್ತು ಎಂಬ ಕಾರಣದಿಂದಾಗಿ ಇದೇ ವೇಳೆ ಮನೆಯವರು ಕೂಡಲೇ ರಮಣ ರಾವ್ ಅವರ ಕ್ಲಿನಿಕಿಗೆ ದಾಖಲಿಸಿದ್ದರು. ಆದಾದ ಬಳಿಕ ನಟ ಪುನೀತ್ ರಾಜ್ಕುಮಾರ್ ಅವರಿಗೆ ಇಸಿಜಿ ಮಾಡಲಾಗಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿತ್ತು. ಆರೋಗ್ಯ ಸ್ಥಿತಿ ಗಂಭೀರ ವಾದ ಹಿನ್ನಲೆ ಅಲ್ಲಿ ಬೆಳಗ್ಗೆ 11-30 ಕ್ಕೆ ವಿಕ್ರಂ ಆಸ್ಪತ್ರೆಗೆ ಅಪ್ಪು ಅವರನ್ನು ದಾಖಲಿಸಲಾಗಿತ್ತು.
ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಕಾಣಿಸಿಕೊಂಡಿದ್ದ ಕಾರಣ ಚಿಕಿತ್ಸೆ ಪಡೆಯುತ್ತ ಇದ್ದ ಪುನೀತ್ ರಾಜ್ ಕುಮಾರ್ ಅವರ ಆರೋಗ್ಯ ಸ್ಥಿತಿಯೂ ಗಂಭೀರವಾಗಿದೆ. ಅದಲ್ಲದೇ ವಿಕ್ರಂ ಆಸ್ಪತ್ರೆಯ ವೈದ್ಯರು ಪುನೀತ್ ರಾಜ್ ಕುಮಾರ್ ಅವರ ಆರೋಗ್ಯ ಬಗ್ಗೆ ಔಟ್ ನೀಡಿದ್ದರು ಅವರು ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದು ಮಧ್ಯಾಹ್ನದ ಹೊತ್ತಿಗೆ ಅಪ್ಪು ಇನ್ನಿಲ್ಲ ಎಂಬ ಸುದ್ದಿ ಹೊರಬಂದಿತ್ತು ಹೌದು ಈ ವಿಚಾರ ಇಡೀ ಕರ್ನಾಟಕವನ್ನೇ ಕರ್ನಾಟಕ ಜನರನ್ನೇ ಸ್ಥಬ್ಧರನ್ನಾಗಿ ಮಾಡಿತ್ತು. ಇನ್ನು ಇತ್ತ ಕೊನೆ ಕ್ಷಣದಲ್ಲಿ ಅಪ್ಪುವಿನ ಕೊನೆ ಆಸೆಯನ್ನು ಅಣ್ಣ ಶಿವಣ್ಣ ನೆರವೇರಿಸಿದ್ದು ಅಪ್ಪು ಬಾರದ ಲೋಕಕ್ಕೆ ಪಯಣ ಮಾಡಿದರೂ ತಮ್ಮ ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದಾರೆ ಅಪ್ಪನ ಹಾದಿಯನ್ನೇ ಹಿಡಿದು ಅಪ್ಪು ಅವರು ತಮ್ಮ ಎರಡೂ ಕಣ್ಣುಗಳನ್ನು ದಾನ ಮಾಡಿದ್ದಾರೆ.
ಹೌದು ತಾವು ಬದಕುದ್ದಿಗಾಲೆ ತಾವು ಹೋದ ಬಳಿಕ ತಮ್ಮ ಕಣ್ಣುಗಳನ್ನು ದಾನ ಮಾಡಬೇಕೆಂದು ತಿಳಿಸಿದ್ದ ಅಪ್ಪು ಅವರು ಅದೇ ಅವರ ಕೊನೆಯ ಆಸೆ ಕೂಡ ಆಗಿತ್ತು ಸದ್ಯ ಈ ಆಸೆಯನ್ನು ಇದೀಗ ಅವರ ಅಣ್ಣ ಶಿವಣ್ಣ ಅವರ ನೆರವೇರಿಸಿದ್ದು ಪುನೀತ್ ಇಲ್ಲ ಎಂಬ ವಿಚಾರ ತಿಳಿದ ಕೆರೆ ಗಂಟೆಗಳಲ್ಲಿ ಆತನಿಂದ ಇನ್ನಿಬ್ಬರ ಬಾಳಿಗೆ ಬೆಳಕಾದರು ಅಪ್ಪು ಸರ್. ನೇತ್ರದಾನ ಮಾಡಲು ಸಹಿ ಹಾಕಿದ್ದ ಪುನೀತ್ ಸರ್ ಅವರು ಈಗಾಗಲೇ ಅಪ್ಪುವಿನಿಂದ ಕಣ್ಣುಗಳನ್ನು ದಾನ ಮಾಡಲಾಗಿದೆ ಇವರಿಂದ ಇಬ್ಬರು ಬೆಳಕು ಪಡೆದರು. ಇತ್ತ ಕಂಠೀರವ ಸ್ಟೇಡಿಯಂ ನಲ್ಲಿ ಅಂತಿಮ ನಮನ ಸಲ್ಲಿಸಲು ಅಂತಿಮ ದರ್ಶನ ಪಡೆಯಲು ಸ್ಯಾಂಡಲ್ ವುಡ್ ನ ಪ್ರತಿಯೊಬ್ಬ ಕಲಾವಿದರು ಬಂದಿದ್ದರು ಅಷ್ಟೇ ಅಲ್ಲ ಹೊರ ರಾಜ್ಯಗಳಿಂದಲೂ ಸಹ ಅಪ್ಪು ನೋಡಲು ಬಂದಿದ್ದ ಜನತೆ ಲಕ್ಷಕ್ಕೆ ಮುಟ್ಟಿತ್ತು ಇನ್ನೂ ಭಾನುವಾರದ ದಿವಸದಂದು ಅಪ್ಪು ಸರ್ ಅವರ ಅಂತ್ಯಕ್ರಿಯೆ ಜರುಗಿತು.
ಕಂಠೀರವ ಸ್ಟುಡಿಯೋದಲ್ಲಿ ರಾಜ್ ಕುಮಾರ್ ಅವರ ಪಕ್ಕದಲ್ಲಿಯೇ ಅಪ್ಪುವಿನ ಕೊನೆಯ ವಿಧಿ ನಡೆಸಲು ಸರ್ಕಾರ ಅವಕಾಶ ನೀಡಿದ್ದು, ಕುಟುಂಬಸ್ಥರು ನಿರ್ಧಾರ ಮಾಡಬೇಕಿದೆ. ಇನ್ನು ಪುನೀತ್ ರಾಜ್ ಕುಮಾರ್ ಅವರ ತಂದೆ ರಾಜ್ ಕುಮಾರ್ ಅವರ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡ ಪುನೀತ್ ರಾಜ್ ಕುಮಾರ್ ಬಾಲನಟನಾಗಿಯೇ ಹೆಚ್ಚು ಖ್ಯಾತಿ ಗಳಿಸಿದ್ದರು. ಸಿನಿಮಾರಂಗಕ್ಕೆ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಇವರು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಹೆಚ್ಚಿನ ಫ್ಯಾನ್ ಫಾಲೋವರ್ಸ್ ಹೊಂದಿದ್ದರು ಅಪ್ಪು ಯಾರಿಗೆ ತಾನೆ ಇಷ್ಟ ಆಗದೇ ಇರಲು ಸಾಧ್ಯ ಬಾಲ್ಯದಿಂದಲೇ ತಮ್ಮ ಮುಗ್ದ ನಟನೆಯ ಮೂಲಕ ಸಿನಿರಂಗದಲ್ಲಿ ತಮ್ಮದೆ ಛಾಪನ್ನು ಮೂಡಿಸಿದ್ದಾರೆ.
ಪುನೀತ್ ರಾಜ್ ಕುಮಾರ್ ಅವರು ನಾಯಕ ನಟನಾಗಿ ಕಾಣಿಸಿಕೊಂಡ ಮೊದಲ ಸಿನಿಮಾ ಅಪ್ಪು ಇನ್ನೂ ಇವರು ಪ್ರೇಮದ ಕಾಣಿಕೆ ಸನಾದಿ ಅಪ್ಪಣ್ಣ ತಾಯಿಗೆ ತಕ್ಕ ಮಗ ವಸಂತ ಗೀತೆ ಭೂಮಿಗೆ ಬಂದ ಭಗವಂತ ಭಾಗ್ಯವಂತರು ಎಂಬ ಸಿನಿಮಾಗಳಲ್ಲಿ ಅಭಿನಯ ಮಾಡಿದ್ದಾರೆ. ನಾಯಕನಟನಾಗಿ ಕಾಣಿಸಿಕೊಂಡರು. 2002ರಲ್ಲಿ ನಾಯಕನಟನಾಗಿ ಅಪ್ಪು ಅವರು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೆ ಇದಾದ ಬಳಿಕ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ಸ್ಯಾಂಡಲ್ ವುಡ್ ಗೆ ನೀಡಿದ್ದಾರೆ. ಅಂದಹಾಗೆ ಅಭಿ ವೀರ ಕನ್ನಡಿಗ ಮೌರ್ಯ ಆಕಾಶ್ ನಮ್ಮ ಬಸವ ಅಜಯ್ ಪರಮಾತ್ಮ ಜಾಕಿ ರಣವಿಕ್ರಮ ದೊಡ್ಮನೆ ಹುಡುಗ ರಾಜಕುಮಾರ ಸೇರಿದಂತೆ ಅನೇಕ ಸಿನಿಮಾಗಳನ್ನು ಮಾಡಿದ್ದಾರೆ. ಇನ್ನು ಗಾಯಕರಾಗಿ, ನಟನಾಗಿ, ನಿರ್ಮಾಪಕರಾಗಿ ಹಾಗೂ ನಿರೂಪಕರಾಗಿಯೂ ಗುರುತಿಸಿಕೊಂಡವರು ಅಪ್ಪು.