ಗರುಡ ಪುರಾಣದ ಪ್ರಕಾರ ಯಾವುದೇ ಮನುಷ್ಯ ತಪ್ಪು ಮಾಡಿದರೆ , ತಪ್ಪದೆ ಈ ಶಿಕ್ಷೆಗೆ ಒಳಗಾಗುತ್ತಾನಂತೆ .. ಯಾವ ಯಾವ ತಪ್ಪಿಗೆ ಏನೆಲ್ಲಾ ಶಿಕ್ಷೆ ಇದೆ ಗೊತ್ತ ..

118

ಗರುಡ ಪುರಾಣದ ಪ್ರಕಾರ ಯಾವ ತಪ್ಪಿಗೆ ಯಾವ ಶಿಕ್ಷೆ ಎಂದು ಶ್ರೀಕೃಷ್ಣ ತಿಳಿಸಿದ್ದಾರೆ. ಹಾಗಾದರೆ ಬನ್ನಿ ಮನುಷ್ಯ ತನ್ನ ಜೀವನದಲ್ಲಿ ಮಾಡಿದ ಯಾವ ತಪ್ಪಿಗೆ ಯಾವ ಶಿಕ್ಷೆ ಎದುರಿಸಬೇಕಾಗುತ್ತದೆ ಎಂಬುದನ್ನು ತಿಳಿಯೋಣ ಇಂದಿನ ಲೇಖನದಲ್ಲಿ ಹೌದು ತಪ್ಪು ಮನುಷ್ಯ ಮಾಡುವುದು ಸಹಜ ಹಾಗಂತ,

ತಪ್ಪುಗಳನ್ನು ಮಾಡುತ್ತಲೇ ಇದ್ದರೆ ಆ ತಪ್ಪುಗಳು ತಪ್ಪು ಎಂದು ತಿಳಿದ ನಂತರವೂ ಕೂಡ ಅದನ್ನು ಮಾಡುತ್ತಲೇ ಇದ್ದು ಯಾರು ಜೀವನದಲ್ಲಿ ದೈವಾರಾಧನೆಯನ್ನು ಮಾಡುವುದಿಲ್ಲ ಅಂಥವರು ಜೀವನದಲ್ಲಿ ಬಹಳ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಇನ್ನು ಕೊನೆಯ ಸಮಯದಲ್ಲಿಯೇ ಅವರ ಕಾಲ ಹೇಗಿರುತ್ತದೆ ಅಂತ ಕೂಡ ಶ್ರೀಕೃಷ್ಣರು ಗರುಡಪುರಾಣದಲ್ಲಿ ತಿಳಿಸಿದ್ದಾರೆ.

ಹೌದು ಶ್ರೀ ಕೃಷ್ಣದೇವ ಗರುಡನಿಗೆ ಹೇ ಗರುಡ ಮನುಷ್ಯ ತನ್ನ ಜೀವನದಲ್ಲಿ ಮಾಡಿದ ಹಲವು ತಪ್ಪುಗಳಿಗೆ ತನ್ನ ಕೊನೆಗಾಲದಲ್ಲಿ ಶಿಕ್ಷೆಯನ್ನು ಅನುಭವಿಸುತ್ತಾರೆ. ಇನ್ನು ಮನುಷ್ಯ ಭೂಮಿ ಮೇಲೆ ಮಾಡಿದ ತಪ್ಪಿಗೆ ಭೂಮಿ ಮೇಲೆಯೇ ಶಿಕ್ಷೆ ಅನುಭವಿಸುತ್ತಾನೆ ಏನೋ ಯಾರೋ ನಿರ್ಗತಿಕರಿಗೆ ಬಡವರಿಗೆ ಸಹಾಯ ಹಸ್ತವನ್ನು ನೀಡುವುದಿಲ್ಲ ಮತ್ತು ಅವರಿಗೆ ಕಿರುಕುಳವನ್ನು ನೀಡುತ್ತಾನೆ.

ಹಿರಿಯರಿಗೆ ನಿಂದಿಸುತ್ತಾನೆ ಗುರುಗಳನ್ನು ಗೌರವಿಸುವುದಿಲ್ಲ ಅಂಥವರು ಜೀವನದಲ್ಲಿ ತಮ್ಮ ಕೊನೆಯ ಕಾಲದಲ್ಲಿ ಹೇಗಿರುತ್ತಾರೆ ಅಂದರೆ ಅನಾರೋಗ್ಯದಿಂದ ಬಳಲುತ್ತಾರೆ ಮತ್ತು ಕೆಟ್ಟ ವಾಸನೆ ಬರುವ ಯಮ ಕಿಂಕರರು ಆ ವ್ಯಕ್ತಿಯ ಬಳಿ ಬಂದು ಆತನ ಆತ್ಮವನ್ನು ಎಳೆದು ತೆಗೆದುಕೊಂಡು ಹೋಗುತ್ತಾರೆ. ಇನ್ನು ಸಾ…ವಿನ ನಂತರವೂ ಕೂಡ ಮನುಷ್ಯನ ಆತ್ಮ ಹಲವು ಕೆಟ್ಟ ಶಿಕ್ಷೆಗಳನ್ನು ಎದುರಿಸಬೇಕಾಗುತ್ತದೆ.

ಯಾವ ವ್ಯಕ್ತಿ ತನ್ನ ಜೀವನದಲ್ಲಿ ಗುರುಗಳಿಗೆ ಗೌರವ ನೀಡುತ್ತಾ ಹಿರಿಯರಿಗೆ ಗೌರವ ನೀಡುತ್ತಾ ವೃದ್ಧರಿಗೆ ಸಹಾಯ ಮಾಡುತ್ತಾ ಬಡವರಿಗೂ ಸಹಾಯ ಮಾಡುತ್ತಾ ತಮ್ಮ ಕೈಲಾದ ಸಹಾಯವನ್ನು ಸಮಾಜಕ್ಕೆ ಸೇವೆ ಮಾಡುತ್ತಾ ಜೀವನ ಸಾಗಿಸುತ್ತಾ ಇರುತ್ತಾನೆ, ಅಂಥವನು ಭಗವಂತನ ಕೃಪಾಕಟಾಕ್ಷ ವನ ಹೊಂದಿರುತ್ತಾನೆ ಹಾಗೂ ಭೂಮಿ ಮೇಲೆ ಬೇರೆಯವರಿಗೆ ಸಹಾಯ ಮಾಡಿದವನಿಗೆ ಭಗವಂತ ಎಂದಿಗೂ ಕೈಬಿಡುವುದಿಲ್ಲ ಹಸ್ತದ ಕೊನೆಗಾಲವು ಕೂಡ ಉತ್ತಮವಾಗಿರುತ್ತದೆ ತುಲಾ ಬಂಧು ಮಿತ್ರರೊಡನೆ ಸಮಯ ಕಳೆಯುತ್ತಾ ಇಂತಹ ವ್ಯಕ್ತಿಗಳು ಇಹಲೋಕ ತ್ಯಜಿಸುತ್ತಾರೆ.

ಆದರೆ ಯಾವ ವ್ಯಕ್ತಿಗಳು ಹಿರಿಯರನ್ನು ಬೇರೆಯವರನ್ನು ಅವಹೇಳನ ಮಾಡುತ್ತಾ ಜೀವನ ಸಾಗಿಸುತ್ತಾ ಇರುತ್ತಾರೆ ಬೇರೆ ಅವರ ಅನ್ನ ಕಿತ್ತು ತಿನ್ನುತ್ತಾ ಇರುತ್ತಾರೆ ಅಂಥವರು ಅವರ ಕೊನೆಯ ಸಮಯದಲ್ಲಿ ಭಗವಂತನ ಆಶೀರ್ವಾದವನ್ನು ಪಡೆದು ಕೊಳ್ಳುವುದಿಲ್ಲ ಏನೋ ಆತನ ಬಂಧು ಮಿತ್ರರು ಕೂಡ ಆತನಿಂದ ದೂರ ಉಳಿಯುತ್ತಾರೆ .

ತನಗೆ ಮುಕ್ತಿ ಕೊಡು ಎಂದು ಆತ ಭಗವಂತನ ಬಳಿ ಬೇಡಿಕೊಳ್ಳಬೇಕು ಅಂತಹ ಪರಿಸ್ಥಿತಿ ಬರುತ್ತದೆ. ಆದ್ದರಿಂದ ಶ್ರೀಕೃಷ್ಣರು ಹೇಳಿರುವುದೇನೆಂದರೆ ಇರುವಾಗಲೇ ಬೇರೆ ಅವರಿಗೆ ಕೈಲಾದ ಸಹಾಯವನ್ನು ಮಾಡಬೇಕು, ಗುರು ಹಿರಿಯರಿಗೆ ಗೌರವ ನೀಡಬೇಕು ಆಗ ಭಗವಂತನ ಕೃಪೆಯಿಂದ ಆತನ ಕೊನೆಯ ಸಮಯವೂ ಕೂಡ ಉತ್ತಮವಾಗಿಯೇ ಇರುತ್ತದೆ.