ಚರ್ಮಕ್ಕೆ ಸಂಬಂಧಪಟ್ಟ ಗಜಕರ್ಣ , ಕಜ್ಜಿ , ತುರಿಕೆ , ಹಾಗು ಚರ್ಮಕ್ಕೆ ಸಂಬಂಧಪಟ್ಟ ಯಾವುದೇ ರೋಗಕ್ಕೂ ಈ ಒಂದು ಮನೆ ಮದ್ದು ಮಾಡಿ ಸಾಕು … 2 ರಿಂದ 3 ದಿನದಲ್ಲಿ ಎಲ್ಲ ಗುಣ ಆಗುತ್ತೆ…

308

ಗಜಕರ್ಣ ಕಜ್ಜಿ ತುರಿಕೆ ಅಥವಾ ಚರ್ಮಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿರಲಿ ಅದನ್ನು 3 ದಿನಗಳಲ್ಲಿ ಪರಿಹಾರ ಮಾಡಿಕೊಳ್ಳುವುದಕ್ಕೆ ಈ ವಿಧಾನ ಬಳಸಿ…ನಮಸ್ಕಾರಗಳು ಓದುಗರೆ, ಕೆಲವರಿಗಂತೂ ಈ ಚರ್ಮ ಸಂಬಂಧಿ ಸಮಸ್ಯೆಗಳು ಅದೆಷ್ಟು ಕಾಡುತ್ತಾ ಇರುತ್ತದೆ ಅಂದರೆ ಪದೇಪದೆ ಕಜ್ಜಿ ತುರಿಕೆ ಇಂತಹ ಸಮಸ್ಯೆಗಳು ಬರುತ್ತಲೇ ಇರುತ್ತದೆ ಅದರಲ್ಲಿಯೂ ಬೇಸಿಗೆಯಲ್ಲಿ ಮಾತ್ರ ಇಂತಹ ಸಮಸ್ಯೆ ಬಹಳ ಜೋರಾಗಿಯೇ ಇರುತ್ತದೆ.

ಹಾಗಾಗಿಯೇ ಈ ಚರ್ಮ ಸಂಬಂಧಿ ಸಮಸ್ಯೆಗಳನ್ನು ಬಹಳ ಬೇಗ ಪರಿಹಾರ ಮಾಡಿಕೊಳ್ಳಬೇಕು ಅಂದರೆ ಈ ವಿಧಾನವನ್ನು ಬಳಸಿ ಹೌದು ಚರ್ಮ ಸಂಬಂಧಿ ಸಮಸ್ಯೆಗಳು ಮುಖ್ಯವಾಗಿ ಗಜಕರ್ಣದಂಥ ಸಮಸ್ಯೆ ಮನೆಮಂದಿಗೆಲ್ಲ ಬಹಳ ಬೇಗ ಹರಡುವುದರಿಂದ, ಈ ಸಮಸ್ಯೆ ಬಂದರೆ ಮನೆಮಂದಿಯವರ ಕೂಡ ಹೆದರುತ್ತಾರೆ, ಏಲ್ಲಿ ನಮಗೂ ಕೂಡ ಈ ಸಮಸ್ಯೆ ಅಂಟಿಕೊಳ್ಳುತ್ತೊ ಅಂತ. ಹಾಗಾಗಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತ ಇದೆ ಅಂದಾಗಲೇ, ಈ ಪರಿಹಾರವನ್ನ ಮಾಡಿದರೆ ಖಂಡಿತವಾಗಿಯೂ ಈ ಚರ್ಮಕ್ಕೆ ಸಂಬಂಧಿಸಿದ ಕಜ್ಜಿ ಗಜಕರ್ಣ ದಂತಹ ಸಮಸ್ಯೆಗಳಿಗೆ ಬಹಳ ಬೇಗ ಪರಿಹಾರವನ್ನು ಕಂಡುಕೊಳ್ಳಬಹುದು.

ಈ ದಿನದ ಲೇಖನಿಯಲ್ಲಿ ಈ ಚರ್ಮ ಸಂಬಂಧಿ ಸಮಸ್ಯೆಗಳಿಗೆ 2 ವಿಧಾನದಲ್ಲಿ ಹೇಗೆ ಪರಿಹಾರ ಮಾಡಿಕೊಳ್ಳಬಹುದು ಅಂತ ತಿಳಿಸಿಕೊಡುತ್ತೇವೆ, ನಿಮಗೆ ಯಾವ ವಸ್ತು ಅಗತ್ಯವಿದೆ ಅದನ್ನು ಬಳಕೆ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.

ನಿಮಗೆ ಪದೇ ಪದೇ ಚರ್ಮ ಸಂಬಂಧಿ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಅಂದಾಗ ಮೊದಲು ನಿಮ್ಮ ಶರೀರದ ಬಗ್ಗೆಯೂ ಕೂಡ ಯೋಚಿಸಬೇಕಾಗುತ್ತದೆ ಮತ್ತು ಪ್ರತಿ ದಿನ ಅಂಥವರು ಸ್ನಾನ ಮಾಡಬೇಕು ಹಾಗೂ ಸ್ನಾನ ಮಾಡುವಾಗ ಸ್ನಾನದ ನೀರಿಗೆ ಕಲ್ಲುಪ್ಪು ಮಿಶ್ರಣ ಮಾಡಿ, ಜತೆಗೆ ಚಿಟಿಕೆ ಅರಿಶಿಣವನ್ನು ಮಿಶ್ರ ಮಾಡಿ ಅದರಿಂದ ಸ್ನಾನವನ್ನು ಮಾಡಬೇಕು. ಈ ರೀತಿ ಮಾಡುವುದರಿಂದ ಚರ್ಮ ಸದಾ ಶುದ್ಧವಾಗಿರುತ್ತದೆ ಸ್ವಚ್ಛವಾಗಿರುತ್ತದೆ ಹಾಗೆ ಚರ್ಮ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುವುದು ಕಡಿಮೆ ಆಗುತ್ತದೆ.

ಅಷ್ಟೇ ಅಲ್ಲ ನಿಮ್ಮ ಬಟ್ಟೆಗಳನ್ನು ಸದಾ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಮತ್ತು ನೀವು ಸೇವಿಸುವ ಆಹಾರ ಪದ್ಧತಿಯ ಬಗ್ಗೆಯೂ ಯೋಚಿಸಬೇಕು ಹೆಚ್ಚಾಗಿ ಹುಳಿ ಅಂಶವಿರುವ ಹಣ್ಣುಗಳನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ಚರ್ಮದ ಆರೋಗ್ಯ ಕೂಡ ಉತ್ತಮವಾಗಿರುತ್ತದೆ.

ಪರಿಹಾರಕ್ಕೆ ಬರುವುದಾದರೆ ಮೊದಲನೆಯ ವಿಧಾನದಲ್ಲಿ ನೀವು ಮಾಡಿಕೊಳ್ಳುವ ಈ ಪರಿಹಾರಕ್ಕೆ ಬೇಕಾಗಿರುವುದು ಗ್ರೀನ್ ಟೀ ಪುಡಿ. ಹೌದು ಸಾಚೆಟ್ ನಲ್ಲಿ ಸಾಮಾನ್ಯವಾಗಿ ಗ್ರೀನ್ ಟೀ ಬರುತ್ತದೆ ಜೊತೆಗೆ ನಿಮಗೆ ಅಂಗಡಿಗಳಲ್ಲಿ ಗ್ರೀನ್ ಟೀ ಪುಡಿ ಕೂಡ ದೊರೆಯುತ್ತದೆ. ಅದನ್ನು ತಂದು 2 ಲೋಟ ನೀರಿಗೆ ಒಂದು ಚಮಚ ಗ್ರೀನ್ ಟೀ ಪುಡಿಯನ್ನು ಹಾಕಿ ಇದನ್ನು ಅರ್ಧದಷ್ಟು ಕುದಿಸಬೇಕು. ಬಳಿಕ ಆ ನೀರನ್ನು ಶೋಧಿಸಿಕೊಂಡು, ಅದಕ್ಕೆ ಸ್ವಲ್ಪ ಅರಿಶಿಣವನ್ನು ಮಿಶ್ರಣ ಮಾಡಿ ಕಜ್ಜಿ ಅಥವ ತುರಿಕೆ ಅಥವಾ ಚರ್ಮ ಸಂಬಂಧಿ ಸಮಸ್ಯೆಗಳು ಇರುವ ಭಾಗಕ್ಕೆ ಲೇಪನ ಮಾಡಬೇಕು.

ಎರಡನೆಯ ವಿಧಾನ ಆಪಲ್ ಸೈಡರ್ ವಿನೆಗರ್ ಇದ್ದರೆ ಆಪಲ್ ಸೈಡರ್ ವಿನೆಗರ್ ಅನ್ನು ನೇರವಾಗಿ ಹತ್ತಿಯ ಸಹಾಯದಿಂದ ಹಚ್ಚಿ ಎಚ್ಚರಿಕೆ ಆಗಿರುವ ಪಾಕಕ್ಕೆ ಲೇಪ ಮಾಡಿ ತರಬೇಕು ದಿನದಲ್ಲಿ ಐದಾರು ಬಾರಿ ಈ ಆಪಲ್ ಸೈಡರ್ ವಿನೆಗರ್ ನಿಂದ ಚರ್ಮದ ಮೇಲೆ ಆಗಿರುವ ಕಜ್ಜಿ ಅಥವಾ ಗಾಯ ತುರಿಕೆ ಮೇಲೆ ಹಚ್ಚುವುದರಿಂದ ಬಹಳ ಬೇಗ ಈ ತುರಿಕೆಯಂತಹ ಸಮಸ್ಯೆ ನಿವಾರಣೆ ಆಗುತ್ತದೆ.ಕಜ್ಜಿ ತುರಿಕೆಯಂತಹ ಸಮಸ್ಯೆ ಕಾಣಿಸಿಕೊಂಡಾಗ ಅದಷ್ಟು ಬಿಸಿ ನೀರಿನಿಂದ ಅದನ್ನ ಸ್ವಚ್ಛ ಮಾಡಿ ಮತ್ತು ಬೇರೆ ಸೋಪುಗಳನ್ನು ಹಾಗೂ ಕಜ್ಜಿಯನ್ನು ಸ್ವಚ್ಛಮಾಡುವುದಕ್ಕೆ ಡೆಟಾಲ್ ಬಳಸಿ.