ಚಿಕ್ಕ ಮಕ್ಕಳ ಆರೋಗ್ಯದಲ್ಲಿ ಏನಾದರು ಏರು ಪೆರು ಆದರೆ ಈ ಒಂದು ಎಲೆಯಿಂದ ಹೀಗೆ ಮಾಡಿ ಸಾಕು ಅರೋಗ್ಯ ತಕ್ಷಣಕ್ಕೆ ವೃದ್ಧಿಗೊಳ್ಳುತ್ತದೆ…

181

ಮಕ್ಕಳ ಆರೋಗ್ಯ ವೃದ್ಧಿಗಾಗಿ ಹೀಗೆ ಮಾಡಿ ಈ ಪರಿಹಾರವನ್ನು ಆಗ ಮಾಡಬೇಕು ಈಗ ಮಾಡಬೇಕು ಅಂತ ಏನೂ ಇಲ್ಲ ಮಕ್ಕಳಿಗೆ 6ತಿಂಗಳು ಮುಗಿಯುತ್ತಿದ್ದ ಹಾಗೆ ಈ ಪರಿಹಾರವನ್ನು ಮಾಡಬಹುದು ತಿಂಗಳಿಗೊಮ್ಮೆ ಈ ಪರಿಹಾರವನ್ನು ಮಾಡಿದರೆ ಸಾಕು ಮಕ್ಕಳ ಆರೋಗ್ಯ ತುಂಬಾ ಉತ್ತಮವಾಗಿ ಇರುತ್ತದೆಹಳ್ಳಿ ಕಡೆ ಹಿರಿಯರು ಹಿಂದೆ ಈ ಪರಿಹಾರಗಳನ್ನು ಮಾಡುತ್ತಿದ್ದರು ಹಾಗಾಗಿಯೇ ಅಂದಿನ ಕಾಲದ ಮಕ್ಕಳ ಆರೋಗ್ಯ ಅಷ್ಟು ಚೆನ್ನಾಗಿರುತ್ತಿತ್ತು ಪದೇ ಪದೇ ಆಸ್ಪತ್ರೆಗೆ ಹೋಗುವ ಪ್ರಮೇಯ ಬರುತ್ತಿರಲಿಲ್ಲ ಯಾಕೆಂದರೆ ಮನೆಯಲ್ಲಿ ಹಿರಿಯರು ಆ ರೀತಿಯಾಗಿ ಮಕ್ಕಳಿಗೆ ಮತ್ತು ಬಾಣಂತಿಯರಿಗೆ ಪೋಷಣೆ ಮಾಡುತ್ತಿದ್ದರು.

ಹೌದು ಅಂದಿನ ಕಾಲದಲ್ಲಿ ಆಸ್ಪತ್ರೆಗಳು ಇರುತ್ತಿರಲಿಲ್ಲ ಮತ್ತು ಬಾಣಂತಿಯರಿಗೆ ಅಂದು ಬಹಳಷ್ಟು ತೊಂದರೆಗಳು ಎದುರಾಗುತ್ತಿದ್ದಂತೆ ಸರಿಯಾದ ಚಿಕಿತ್ಸೆ ದೊರೆಯದೆ ಕೆಲವೊಂದು ಅನಾರೋಗ್ಯ ಸಮಸ್ಯೆಗಳು ಬರುತ್ತಿತ್ತು ಆದರೆ ಇವತ್ತಿನ ದಿನಗಳಲ್ಲಿ ಆಗಿಲ್ಲ ಆದರೂ ಕೂಡ ಮಕ್ಕಳಾದ ಮೇಲೆ ಪೋಷಕರು ಜೊತೆಗೆ ಮಕ್ಕಳು ಇಬ್ಬರೂ ಸಹ ಆಗಾಗ ಆಸ್ಪತ್ರೆಗೆ ಓಡುಕ್ತಾ ಇರ್ತಾರೆ.

ಇಲ್ಲಿ ನಾವು ಮಕ್ಕಳ ಆರೋಗ್ಯವನ್ನು ಕಾಪಾಡಿಕೊಳ್ಳುವ ತಹ ಉತ್ತಮ ಮನೆಮದ್ದಿನ ಬಗ್ಗೆ ತಿಳಿಸಿಕೊಡಲಿದ್ದೇವೆ ಇದನ್ನು 3ವರುಷ ಮಕ್ಕಳವರೆಗೂ ಮಾಡಬಹುದು. ಇದರಿಂದ ಮಕ್ಕಳ ಆರೋಗ್ಯ ಉತ್ತಮವಾಗಿರುತ್ತದೆ ಆಗಾಗ ಕಾಡುವ ಕೆಲವೊಂದು ಆರೋಗ್ಯ ಸಮಸ್ಯೆಗಳು ಅಂದರೆ ಮಕ್ಕಳಿಗೆ ಹೊಟ್ಟೆ ಉಬ್ಬರಿಸಿದಂತಾಗುವುದು ಹೊಟ್ಟೆ ನೋವು ಬರುವುದು ಅಥವಾ ಕಾಲುಧೂಳು ಆಗುವುದು ದೃಷ್ಟಿ ತಗುಲಿ ಮಕ್ಕಳಿಗೆ ಹೊಟ್ಟೆ ನೋವು ಬರುವುದು ಹೀಗೆಲ್ಲ ಸಮಸ್ಯೆಗಳು ಹಾಗೂ ತರುತ್ತದೆ ಇನ್ನು ಮಕ್ಕಳ ದೇಹದ ಉಷ್ಣಾಂಶ ವಿಪರೀತವಾಗಿ ಆಗ ಕೂಡ ಮಕ್ಕಳಿಗೆ ಹೊಟ್ಟೆ ನೋವು ಬರುವುದು ಇನ್ನೂ ಕೆಲವೊಂದು ಸಮಸ್ಯೆಗಳು ಆಗುತ್ತಾ ಇರುತ್ತದೆ.

ಆದರೆ ಈ ಪರಿಹಾರವನ್ನು ಮಾಡುವುದರಿಂದ ಮಕ್ಕಳಿಗೆ ಈ ರೀತಿ ಆಗುವ ತೊಂದರೆಗಳು ಆಗುವುದಿಲ್ಲ ಜೊತೆಗೆ ಆರೋಗ್ಯ ಕೂಡ ತುಂಬಾ ಚೆನ್ನಾಗಿರುತ್ತದೆ ಆ ಮಾಡುವ ವಿಧಾನ ಹೇಗೆಂದರೆ ಇದಕ್ಕಾಗಿ ಬೇಕಾಗಿರುವುದು ವಿಳ್ಳೇದೆಲೆ ಮತ್ತು ಹರಳೆಣ್ಣೆ.ಮಕ್ಕಳಿಗೆ ಹರಳೆಣ್ಣೆ ಆಗಿ ಬರುವುದಿಲ್ಲ ಆದರೆ ಈ ಹರಳೆಣ್ಣೆ ಬದಲು ಕೊಬ್ಬರಿ ಎಣ್ಣೆ ಅಲ್ಲಿಯೇ ಪರಿಹಾರ ಮಾಡಿ ಹೌದು ಕೆಲ ಮಕ್ಕಳ ಶರೀರ ತುಂಬ ತಂಪಾಗಿರುತ್ತದೆ ಅವರಿಗೆ ಹರಳೆಣ್ಣೆ ಆಗಿಬರುವುದಿಲ್ಲ.

ಸ್ನಾನಕ್ಕೂ ಮೊದಲು ಈ ಪರಿಹಾರವನ್ನು ಮಾಡಿ ವೀಳ್ಯದೆಲೆಗೆ ಸ್ವಲ್ಪ ಹರಳೆಣ್ಣೆಯನ್ನು ಲೇಪ ಮಾಡಿ ಅದನ್ನು ದೀಪದ ಬಿಸಿಯಲ್ಲಿ ವೀಳ್ಯದೆಲೆಯನ್ನು ಬಿಸಿ ಮಾಡಿಕೊಳ್ಳಬೇಕು, ಸ್ವಲ್ಪವೇ ಸ್ವಲ್ಪ ಬಿಸಿ ಮಾಡಿಕೊಂಡು ಅಂದರೆ ಉಗುರು ಬೆಚ್ಚಗೆ ಬಿಸಿ ಮಾಡಿಕೊಂಡು ಆ ಎಣ್ಣೆಯನ್ನು ಮಕ್ಕಳ ತಲೆಗೆ ಅಂದರೆ ಈ ನೆತ್ತಿ ಭಾಗಕ್ಕೆ ನಿದಾನವಾಗಿ ಹಚ್ಚಬೇಕು.ಈ ವಿಧಾನದಿಂದ ಮಕ್ಕಳಿಗೆ ತಲೆಭಾರ ಆಗುವುದು ಹೊಟ್ಟೆಭಾರ ಆಗುವುದು ಹೊಟ್ಟೆ ನೋವು ಬರುವುದು ಇಂತಹ ತೊಂದರೆಗಳು ಬರುವುದಿಲ್ಲ ಮತ್ತು ಆಗಾಗ ಕಾಡುವ ಕೆಲವೊಂದು ಕಾರಣಕ್ಕೆ ಬರುವ ಶೀತ ಕೆಮ್ಮು ಜ್ವರ ಈ ಸಮಸ್ಯೆಗಳು ಕೂಡ ಬರುವುದಿಲ್ಲ.

ಈ ದಿನ ನಾವು ತಿಳಿಸಿದಂತಹ ಈ ಸರಳ ಪರಿಹಾರವನ್ನು 6ತಿಂಗಳುಗಳು ಮೇಲ್ಪಟ್ಟಂತಹ ಮಕ್ಕಳಿಗೆ ಪರಿಹಾರವನ್ನ ಮಾಡಿ ಜೊತೆಗೆ ಯಾವುದಾದರೂ ಸೈಡ್ ಎಫೆಕ್ಟ್ ಕಂಡು ಬಂದರೆ ಅದನ್ನು ಅಂದೇ ಬಿಟ್ಟು ವೈದ್ಯರ ಬಳಿ ಒಮ್ಮೆ ಕೇಳಿ ಬಳಿಕ ಇಂತಹ ಮನೆಮದ್ದನ್ನು ಪಾಲಿಸಿಕೊಂಡು ಬನ್ನಿ.

ಮಕ್ಕಳ ವಿಚಾರದಲ್ಲಿ ಎಂದಿಗೂ ನಿರ್ಲಕ್ಷ್ಯ ಮಾಡುವುದು ಸರಿ ಆಗುವುದಿಲ್ಲ ಹಾಗಾಗಿ ಒಮ್ಮೆ ಈ ಮನೆಮದ್ದನ್ನು ಮಾಡುವ ಮುನ್ನ ವೈದ್ಯರ ಬಳಿ ಕೇಳಿ ಮಗುವಿನ ಶರೀರಕ್ಕೆ ಹರಳೆಣ್ಣೆ ಆಗಿ ಬರುತ್ತದೆಯೋ ಇಲ್ಲವೋ ಎಂದು ತಿಳಿದು, ಬಳಿಕ ಈ ಮನೆಮದ್ದು ಮಾಡಿ ಇದರಿಂದ ಈ ಮೊದಲೇ ತಿಳಿಸಿದಂತೆ ಬಹಳಷ್ಟು ಅನಾರೋಗ್ಯ ಸಮಸ್ಯೆಗಳು ಹತ್ತಿರ ಸುಳಿಯುವುದಿಲ್ಲಾ.