ಪ್ರಿಯ ಸ್ನೇಹಿತರೆ ಇವತ್ತಿನ ದಿವಸಗಳಲ್ಲಿ ಸೆಲಬ್ರೆಟಿಗಳು ಹಲವು ಮಾರ್ಗಗಳಿಂದ ಹಣ ಸಂಪಾದನೆ ಮಾಡುತ್ತಾರೆ. ಹೌದು ಸೆಲೆಬ್ರಿಟಿಗಳು ಅಡ್ವಟೈಸಿಂಗ್ ಮೂಲಕ ಹಾಗೆ ಸಾಮಾಜಿಕ ಜಾಲತಾಣಗಳ ಮೂಲಕ ಇನ್ನೂ ಷೇರುಗಳ ಮೂಲಕ ಹಣ ಸಂಪಾದನೆ ಮಾಡುತ್ತಾ ಇರುತ್ತಾರೆ ಹೌದು ಈ ವಿಚಾರ ಹೆಚ್ಚಿನ ಜನರಿಗೆ ತಿಳಿದಿರುವುದಿಲ್ಲ. ಇನ್ನೂ ಇದೀಗ ಫೇಮಸ್ ಕ್ರಿಕೆಟಿಗರೊಬ್ಬರು ಪೌಲ್ಟ್ರಿ ಫಾರ್ಮ್ ಮಾಡುತ್ತಾ ಹಣ ಸಂಪಾದನೆ ಮಾಡುತ್ತಾ ಇದ್ದರಂತೆ ಹಾಗಾದರೆ ಆ ಕ್ರಿಕೆಟಿಗ ಯಾರು ಅನ್ನುವ ಕುತೂಹಲ ನಿಮಗೂ ಕೂಡ ಇದೆ ಅಲ್ವಾ ಈಗಾಗಲೇ ಎಷ್ಟು ಜನರಿಗೆ ತಿಳಿದಿರುತ್ತದೆ ಆ ಕ್ರಿಕೆಟಿಗ ಯಾರು ಎಂದು ಹೌದು ಅವರೇ ನಮ್ಮ ಭಾರತ ದೇಶದ ಹೆಮ್ಮೆಯ ಕ್ರಿಕೆಟಿಗ ಕೂಲ್ ಕ್ಯಾಪ್ಟನ್ ಎಂದೇ ಪ್ರಸಿದ್ಧಗೊಂಡಿರುವ ಮಹೇಂದ್ರ ಸಿಂಗ್ ಧೋನಿ ಅವರು.
ಹೌದು ಏನಪ್ಪಾ! ಇದು ಧೋನಿ ಅವರು ಫೌಲ್ಟ್ರಿ ಫಾರ್ಮ್ ಇದ್ದಾರ ಅಂತ ನೀವು ಯೋಚನೆ ಮಾಡ್ತಾ ಇರಬಹುದೋ ಇದಕ್ಕೂ ಸಹ ಈ ಕಾರಣ ಕೇಳಿದರೆ ನೀವು ಸಹ ಶಾಕ್ ಆಗುವುದು ಖಂಡಿತ. ಹೌದು ಸ್ನೇಹಿತರ ಪೌಲ್ಟ್ರಿ ಫಾರ್ಮ್ ಕೆಲಸ ಅಂದರೆ ಅದೇನು ಕಡಿಮೆ ದುಡಿಮೆಯ ಕೆಲಸ ಅಲ್ಲಾ, ಇದರಲ್ಲಿಯೂ ಸಹ ಬಹಳಷ್ಟು ಲಾಭ ಮಾಡುವ ಮಂದಿ ಇದ್ದಾರೆ ಆದರೆ ನಾವು ವ್ಯವಹಾರ ಮಾಡುವ ತರಹ ಮಾಡಬೇಕಾಗಿದೆ. ಆದರೆ ಈ ದಿನ ನಾವು ವಿಶೇಷ ಮಾಹಿತಿಯೊಂದರ ಬಗ್ಗೆ ನಿಮಗೆ ತಿಳಿಸಲು ಈ ಮಾಹಿತಿಯನ್ನು ಹೇಳ್ತಾ ಇದ್ದೆ. ಅಷ್ಟೆ ಅಲ್ಲ ಧೋನಿ ಅವರು ಸಹ ಇದೇ ವಿಶೇಷ ಕಾರಣದಿಂದಾಗಿ, ಪೌಲ್ಟ್ರಿ ಫಾರ್ಮ್ ಬಿಸಿನೆಸ್ ಮಾಡ್ತಾ ಇದ್ದಾರೆ. ಹಾಗಾದರೆ ಅದೇನು ಅಂತ ತಿಳಿಯುವ ಕುತೂಹಲ ನಿಮ್ಮಲ್ಲಿಯೂ ಸಹ ಇದೆ ಅಲ್ವಾ ಹೌದು ಸ್ನೇಹಿತರೆ ಧೋನಿ ಅವರು ಮನಸ್ಸು ಮಾಡಿದರೆ ಎಂತಹ ದೊಡ್ಡ ಬ್ಯುಸಿನೆಸ್ ಮಾಡಬಹುದು ಇನ್ನು ಹಳ್ಳಿಯೊಂದನ್ನು ತಾವೇ ಹಾಕಬಹುದು ಅಷ್ಟು ಹಣ ಇದೆ ನಮ್ಮ ಕೂಲ್ ಕ್ಯಾಪ್ಟನ್ ಧೋನಿ ಅವರ ಬಳಿ ಹಾಗೆ ಅವರು ಅಂತಹ ಅಹಂ ತೋರದೆ ಕೇವಲ ಈ ಪೌಲ್ಟ್ರಿ ಫಾರ್ಮ್ ಬಿಸಿನೆಸ್ ಮಾಡುವುದಕ್ಕೂ ಕಾರಣವಿದೆ ಇವರು ಈ ಕಪ್ಪು ಸುಂದರಿ ಕೋಳಿಗಳ ಸಾಕಾಣಿಕೆ ಮಾಡುತ್ತಿದ್ದು, ಈ ಕಪ್ಪು ಕೋಳಿಗಳ ವಿಶೇಷ ತಿಳಿದರೆ ನೀವು ಸಹ ಶಾಕ್ ಆಗ್ತೀರಾ.
ಹೌದು ಸ್ನೇಹಿತರೆ ಖಂಡಿತವಾಗಿಯೂ ಚಿಕನ್ ಅಂದರೆ ಬಹಳಷ್ಟು ಮಂದಿ ಇಷ್ಟಪಟ್ಟೇ ಪಡುತ್ತಾರೆ ಚಿಕನ್ ವಾಸನೆ ಕಂಡರೆ ಸಾಕು ಬಾಯಲ್ಲಿ ನೀರೂರಿಸುವ ಮಂದಿ ಬಹಳಷ್ಟು ಮಂದಿ ಇದ್ದಾರೋ ಏನೋ ನಮ್ಮ ಮನೆಯಲ್ಲಿ ಒಬ್ಬರಾದರೂ ಚಿಕನ್ ಇಷ್ಟಪಡುವ ಮಂದಿ ಇದ್ದೇ ಇರ್ತಾರೆ ಹಾಗೆ ಹೆಣ್ಣುಮಕ್ಕಳಿಗಂತೂ ಚಿಕ್ಕ ನಂದರ ಮಹಾಪ್ರಾಣ ಆದರೆ ಚಿಕನ್ ತಿನ್ನೋದ್ರಿಂದ ಆರೋಗ್ಯ ಕೆಡುತ್ತದೆ ಅದರಲ್ಲಿ ಕೊಲೆಸ್ಟ್ರಾಲ್ ಹೆಚ್ಚು ಫ್ಲ್ಯಾಟ್ ಹೆಚ್ಚು ಅಂತ ಚಿಕನ್ ನಿಂದ ದೂರ ಇರುವ ಮಂದಿಗೆ ಇಲ್ಲಿನ ವಿಶೇಷ ಸುದ್ದಿ ಅದೇನೆಂದರೆ ಈ ಕಪ್ಪು ಸುಂದರಿ ಕೋಳಿಗಳನ್ನು ಹೌದು ಈ ಕಪ್ಪು ಕೋಳಿಗಳಿಗೆ ವಿಶೇಷವಾದ ಹೆಸರೂ ಇದೆ ಅದೇನೆಂದರೆ ಕಡಕ್ನಾಥ್ ಕೋಳಿ ಗಳು ಎಂದು ಈ ಕೋಳಿಗಳನ್ನು ಧೋನಿ ಅವರು ಸಾಕಾಣಿಕೆ ಮಾಡುತ್ತಾ ಇದ್ದು ಇದನ್ನು ಮಧ್ಯಪ್ರದೇಶದಲ್ಲಿ ಹೆಚ್ಚಿನದಾಗಿ ಸಾಕಣೆಗೆ ಮಾಡಲಾಗುತ್ತದೆ.
ಇದೀಗ ಧೋನಿ ಅವರು ತಮ್ಮ ಪೌಲ್ಟ್ರಿ ಫಾರ್ಮ್ ಗೆ ಸುಮಾರು 2ಸಾವಿರ ಕೋಳಿಗಳನ್ನು ವಿಸ್ತರಿಸಿಕೊಂಡಿದ್ದು ಈ ಕೋಳಿಗಳ ವಿಶೇಷ ಏನೆಂದರೆ ಇದರಲ್ಲಿ ಬಹಳ ಕಡಿಮೆ ಫ್ಯಾಟ್ ಹೌದು ಸಾಮಾನ್ಯ ಕೋಳಿಗಳಲ್ಲಿ ಸುಮಾರು ಇಪ್ಪತ್ತರಿಂದ ಮೂವತ್ತು ಪ್ರತಿಶತ ಫ್ಯಾಟ್ ಇದ್ದರೆ ಈ ಕಡಕ್ನಾಥ್ ಕೋಳಿ ಗಳಲ್ಲಿ ಕೆವಲ ಒಂದೇ ಪ್ರತಿಶತದಷ್ಟು ಫ್ಯಾಟ್ ಇರುತ್ತದೆ ಹಾಗೂ ಸಾಮಾನ್ಯ ಕೋಳಿಗಳಿಗಿಂತ ಈ ಕಪ್ಪು ಕೋಳಿಗಳಲ್ಲಿ ಪ್ರೋಟಿನ್ ಅಂಶ ಮೂವತ್ತರಿಂದ ನಲ್ವತ್ತು ಪ್ರತಿಶತದಷ್ಟು ಹೆಚ್ಚಿನದಾಗಿ ಇರುವ ಕಾರಣ ಆರೋಗ್ಯಕ್ಕೆ ಬಹಳ ಉತ್ತಮವಾಗಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಮುಂದಿನ ದಿವಸಗಳಲ್ಲಿ ಈ ಕೋಳಿಗಳನ್ನು ನಮ್ಮ ಕರ್ನಾಟಕದಲ್ಲಿಯೂ ಸಾಕಾಣಿಕೆ ಮಾಡಬಹುದು. ಆದರೆ ಕಾದುನೋಡಬೇಕಾಗಿದೆ ಚಿಕನ್ ಪ್ರಿಯರೇ ನಿಮಗಾಗಿ ಇದು ಶುಭ ಸುದ್ದಿ ಅಂತಾನೇ ಹೇಳಬಹುದು.