ತನ್ನ ಹೆಂಡತಿ ದಿನೇ ದಿನೇ ದಪ್ಪ ಆಗುತ್ತಿದ್ದಾಳೆ ಯಾಕೆ ಅಂತಾ ಬೆಡ್ ರೂಮ್ ನಲ್ಲಿ ಕ್ಯಾಮರಾ ಇಟ್ಟ … ನಂತರ ಆಗಿದ್ದು ಕೋಲಾಹಲ…

3231

ನಮಸ್ಕಾರಗಳು ಪ್ರಿಯ ಓದುಗರೆ ಇಲ್ಲೊಬ್ಬ ಪತಿರಾಯ ನೋಡಿ ತನ್ನ ಹೆಂಡತಿಯ ಮೇಲಿನ ಅನುಮಾನಕ್ಕಾಗಿ ಮಾಡಿರುವ ಕೆಲಸವೇನೂ ಅಂತ, ಹೌದು ತನ್ನ ಹೆಂಡತಿ ಕೇವಲ ದಿನದಿಂದ ದಿನಕ್ಕೆ ದಪ್ಪಗಾಗುತ್ತಿದ್ದಾಳೆ ಅನ್ನುವ ಕಾರಣಕ್ಕಾಗಿ ಹೆಂಡತಿ ಗೆ ಏನಾದರೂ ಮಾಡಬೇಕು ಅಥವಾ ಹೆಂಡತಿಯ ಚಲನವಲನಗಳನ್ನು ತಾನು ತಿಳಿದುಕೊಳ್ಳಬೇಕು ಅಂತ ಆತ ತೆಗೆದುಕೊಂಡ ನಿರ್ಧಾರ ನಿಮ್ಮನ್ನು ಸಹ ಬೆರಗಾಗಿಸುತ್ತದೆ. ಹೌದು ಸಾಮಾನ್ಯವಾಗಿ ಗಂಡ ಹೆಂಡತಿ ಅಂದರೆ ಅವರು ಹೇಗಿರಬೇಕು ಸ್ನೇಹಕ್ಕೂ ಮೀರಿದ ಪ್ರೀತಿ ಗೂ ಮೀರಿದ ಬಾಂಧವ್ಯ ಸಂಬಂಧ ಅವರ ನಡುವೆ ಇರಬೇಕು ಯಾವತ್ತಿಗೂ ಅವರ ನಡುವೆ ಪ್ರೀತಿ ಎಂಬ ಕೊಂಡಿ ಇರಬೇಕು ಹೊರತು ಯಾವತ್ತಿಗೂ ಅನುಮಾನ ಎಂಬ ಹುಳಿ ಇರಲೇಬಾರದು. ಹೌದು ಅನುಮಾನ ಎಂಬ ಹುಳಿ ಒಮ್ಮೆ ಆ ಸಂಸಾರದಲ್ಲಿ ಹಿಂಡಿದರೆ ಹಾಲು ಹೇಗೆ ಉರಿಯೂತದ ಹಾಗೆ ಸಂಬಂಧವು ಒಡೆದು ಹೋಗುತ್ತದೆ.

ತಂದೆ ತಾಯಿಯೇ ಎಷ್ಟೊಂದು ಕನಸುಗಳನ್ನು ಇಟ್ಟುಕೊಂಡು ತಮ್ಮ ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಕೊಡ್ತಾರೆ ಹಾಗೆ ಮದುವೆಯ ನಂತರ ಹೆಣ್ಣುಮಕ್ಕಳು ದಪ್ಪ ಆಗೋದು ಸಣ್ಣ ಆಗೋದು ಇವೆಲ್ಲಾ ಸಹಜವೇ ಆಗಿರುತ್ತದೆ. ಆದರೆ ಅದನ್ನೆಲ್ಲ ವಿಚಾರವನ್ನಾಗಿಸಿಕೊಂಡು ಅದನ್ನೇ ದೊಡ್ಡದಾಗಿ ಮಾಡಿಕೊಂಡರೆ ಸಂಸಾರ ಎಂಬ ಸುಖವನ್ನು ಅನುಭವಿಸಲು ಸಾಧ್ಯವಿಲ್ಲ. ಸಂಸಾರವೆಂಬ ಸಮುದ್ರದಲ್ಲಿ ನೀವು ಈಜುವುದರ ಬದಲು ಮುಳುಗುತ್ತಿರ ಹೊರತು ಎಂದಿಗೂ ಆ ಸಮುದ್ರ ದಲ್ಲಿ ಈಜಿ ಬಂದು ಎದ್ದು ತೋರಿಸಲು ಸಾಧ್ಯವಾಗುವುದಿಲ್ಲ ಹೌದು ಅನುಮಾನ ಎಂಬುದು ನಮ್ಮನ್ನು ಸಮುದ್ರದಲ್ಲಿ ಮುಳುಗಿ ಸುವಂತೆ ಮಾಡುತ್ತವೆ. ಆದರೆ ಪ್ರೀತಿ ಸಂಸಾರವೆಂಬ ಸಮುದ್ರದಲ್ಲಿ ನಮ್ಮನ್ನು ಸುಲಭವಾಗಿ ದಡ ತಲುಪುವ ಹಾಗೆ ಮಾಡುತ್ತದೆ.

ಸಂಸಾರವೆಂಬ ಸಾಗರದಲ್ಲಿ ನಾವು ತಿಳಿದುಕೊಳ್ಳಲು ಬಹಳಷ್ಟು ವಿಚಾರಗಳಿರುತ್ತವೆ, ಆದರೆ ಅದನ್ನು ಅರಿಯದ ನಾವು ಯೋಚಿಸಬೇಕಾದ ವಿಚಾರಗಳ ಬಗ್ಗೆ ತಿಳಿದುಕೊಳ್ಳದೆ ಯಾವಾಗ ಸಂಸಾರದಲ್ಲಿ ಗಂಡಾಗಲಿ ಹೆಣ್ಣಾಗಲಿ ಅನುಮಾನದ ಹಿಂದೆ ಹೋಗ್ತಾರ ಆಗ ಮನಸ್ಸಿಗೆ ಯಾವ ಒಳ್ಳೆಯ ಆಲೋಚನೆಗಳು ಬರುವುದಿಲ್ಲ ಅದರ ಬದಲಾಗಿ ಪ್ರತಿದಿನ ಗಂಡನ ಚಲನೆ ಇಂದ ಅಥವಾ ಹೆಂಡತಿಯ ಚಲನೆಯಿಂದ ಜಗಳ ದುಮ್ಮಾನ ಇವುಗಳೇ ನಡೆಯುತ್ತಿದೆ ಹೊರತು, ಯಾವತ್ತಿಗೂ ಸಂಸಾರದಲ್ಲಿ ನೆಮ್ಮದಿ ಅನ್ನೋದೇ ಇರುವುದಿಲ್ಲ ಸಂಸಾರದ ನಿಜವಾದ ಅರ್ಥ ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ.

ಹೌದು ಈ ಪತಿರಾಯ ಕೂಡ ಹೆಂಡತಿಯನ್ನು ಅರ್ಥಮಾಡಿಕೊಳ್ಳದ ಆಕೆಯ ದೈಹಿಕ ತೂಕ ಅಥವಾ ದೈಹಿಕವಾಗಿ ಯಾಕೆ ಬದಲಾಗುತ್ತಿದ್ದಾಳೆ ಅನ್ನುವ ಕಾರಣಕ್ಕೆ ಅವಳ ಮೇಲೆ ಅನುಮಾನ ಪಟ್ಟಿದ್ದಾನೆ, ಕೊನೆಗೆ ಹೆಂಡತಿಯೇ ಮತ್ಯಾರದ್ದೋ ಜೊತೆ ದೈಹಿಕ ಸಂಪರ್ಕ ಹೊಂದಿದ್ದಾಳೆ ಕೆಟ್ಟ ಸಂಬಂಧ ಹೊಂದಿದ್ದಾಳೆ ಅಂತಾ ಅನುಮಾನಪಟ್ಟು ಮನೆಯಲ್ಲಿ ಕ್ಯಾಮೆರಾ ಫಿಕ್ಸ್ ಮಾಡಿ ಅದಕ್ಕೆ ಸ್ಪೀಕರ್ ಅನ್ನು ಕೂಡ ಫಿಕ್ಸ್ ಮಾಡಿರುತ್ತಾನೆ. ಈ ಕಾರಣಕ್ಕಾಗಿ ಹೆಂಡತಿಯ ಪ್ರತಿಯೊಂದು ಚಲನವಲನ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ಪತಿರಾಯನ ಮನಸ್ಸು ಇನ್ನಷ್ಟು ಹದಗೆಟ್ಟು ಹೋಗಿತ್ತು ಯಾಕೆ ಅಂದರೆ ಆಕೆ ಮತ್ತೊಬ್ಬರ ಜೊತೆ ಸಂಬಂಧ ಹೊಂದಿಲ್ಲವಾದರೂ, ಗಂಡ ಮನೆಯಿಂದ ಆಚೆ ಹೋಗುತ್ತಿದ್ದ ಹಾಗೆ ಶಾರ್ಟ್ ಡ್ರೆಸ್ ಗಳನ್ನ ಧರಿಸುತ್ತಾ ತನ್ನ ಸ್ವತಂತ್ರತೆಯನ್ನು ಅನುಭವಿಸುತ್ತಿದ್ದಳು.

ಯಾವಾಗ ಗಂಡ ಹೆಂಡತಿಗೆ ನೀನು ಶಾರ್ಟ್ ಡ್ರೆಸ್ ಎಲ್ಲಾ ಹಾಕಬೇಡ ಇಂಥದ್ದೇ ಬಟ್ಟೆ ಧರಿಸಬೇಕು ನೀನಾ ಎಂದು ಹೆಂಡತಿಯ ಮೇಲೆ ಕೂಗಾಡಲು ಶುರು ಮಾಡುತ್ತಾನೆ ಅಂದಿನಿಂದ ಹೆಂಡತಿಗೆ ಅನುಮಾನ ಹುಟ್ಟುತ್ತದೆ ಕೊನೆಗೆ ತನ್ನ ಪತಿ ಮನೆಯೊಳಗೆ ಕ್ಯಾಮೆರಾ ಫಿಕ್ಸ್ ಮಾಡಿದ್ದಾನೆ ಎಂಬ ವಿಚಾರ ತಿಳಿದು, ಅದನ್ನು ತಡೆಯಲಾರದೆ ಹೆಂಡತಿ ಮನಸ್ಸಿಗೆ ಘಾಸಿಯಾಗಿದೆ ಆಕೆ ಕೊನೆಗೆ ಪೊಲೀಸರ ಮೊರೆ ಹೋಗಿದ್ದಾಳೆ ಪತ್ನಿ. ನೋಡಿದ್ರಲ್ಲಾ ಹೆಂಡತಿ ಮೇಲಿನ ಅನುಮಾನಕ್ಕಾಗಿ ಗಂಡ ಎಷ್ಟು ಕೀಳುಮಟ್ಟಕ್ಕೆ ಇಳಿದ ಎಂದು ಹಾಗೆ ತನ್ನ ತಪ್ಪಿಗೆ ಪ್ರಾಯಶ್ಚಿತವಾಗಿ ದಂಡ ಶಿಕ್ಷೆಯನ್ನು ಕೂಡ ಅನುಭವಿಸಿ ಬಂದಿದ್ದಾನೆ ಪತಿ. ಹಾಗಾಗಿ ಕಾರಣವಿಲ್ಲದೆ ಹೆಂಡತಿ ಅಥವಾ ಗಂಡನ ಮೇಲೆ ಅನುಮಾನ ಪಡುವುದರ ಬದಲು ಸಂಸಾರ ಸಾಗರದಲ್ಲಿ ಏನೇ ಸಮಸ್ಯೆಗಳು ಬಂದರೂ ಕುಳಿತು ಮಾತನಾಡಿ ಸರಿಪಡಿಸಿಕೊಳ್ಳಿ ಎಲ್ಲವೂ ಉತ್ತಮವಾಗಿರುತ್ತದೆ.