ಈಗಿನ ಪ್ರಪಂಚದಲ್ಲಿ ಯಾರನ್ನು ನಂಬಬೇಕು ಯಾರನ್ನು ನಂಬಬಾರದು ಅಂತ ಗೊತ್ತಾಗೋದೇ ಇಲ್ಲ ಹೌದು ಒಬ್ಬ ವ್ಯಕ್ತಿಯನ್ನು ನಂಬಿದರೆ ನಮಗೆ ತಿಳಿಯದ ಹಾಗೆ ನಾವು ಮೋಸ ಹೋಗಿ ಬಿಟ್ಟಿರುತ್ತೇವೆ. ಮುಜಾಪುರ್ ಎಂಬ ನಗರದ ಮುರ್ದಾಪುರ್ ಎಂಬ ಊರಿನಲ್ಲಿ ದೇವೆಂದ್ರ ಎಂಬ ವ್ಯಕ್ತಿ ವಾಸ ಮಾಡುತ್ತಾ ಇದ್ದಾನೆ ಈ ವ್ಯಕ್ತಿ ಮದುವೆ ವಯಸ್ಸಿಗೆ ಬಂದಿದ್ದ ರಿಂದ ಒಬ್ಬ ಒಳ್ಳೆ ಯ ಮನೆತನದ ಹುಡುಗಿಯನ್ನು ಹುಡುಕಾಟ ಮಾಡುತ್ತಾ ಇರುತ್ತಾರೆ. ದೇವೇಂದ್ರ ಒಬ್ಬ ಹಣಕಾಸು ಇರುವಂತಹ ವ್ಯಕ್ತಿ ಆಗಿದ್ದನು ಎ ಇಷ್ಟೆಲ್ಲಾ ಇದ್ದರೂ ಕೂಡ ದೇವೇಂದ್ರನಿಗೆ ಒಂದೊಳ್ಳೆ ಹುಡುಗಿ ಮಾತ್ರ ಸಿಗುತ್ತಾ ಇರಲಿಲ್ಲ ಮದುವೆ ವಯಸ್ಸು ಮೀರುತ್ತಾ ಇದೆ ಎಂಬ ಕಾರಣದಿಂದಾಗಿ ಹುಡುಗಿಗಾಗಿ ಬಹಳ ಹುಡುಕಾಟ ಮಾಡುತ್ತಾ ಇರುತ್ತಾರೆ. ಇದೇ ಸಮಯದಲ್ಲಿ ದೇವೇಂದ್ರ ನ ಸ್ನೇಹಿತನೊಬ್ಬ ಸುಮನ್ ಎಂಬಾತ ದೇವೇಂದ್ರನನ್ನು ಮೀಟ್ ಮಾಡಲೆಂದು ಹೊಂದಿರುತ್ತಾನೆ ಈ ವೇಳೆ ದೇವೇಂದ್ರ ಮಾತುಗಳನ್ನು ಕೇಳಿ ನನಗೆ ಪರಿಚಯವಿರುವ ಕುಟುಂಬದ ಹುಡುಗಿಯೊಬ್ಬಳಿದ್ದಾಳೆ ಮನೆ ಕಡೆ ಸ್ವಲ್ಪ ಬಡವರು ಆದರೆ ಒಳ್ಳೆಯ ಜನರು ಎಂದು ಸುಮನ್ ಹೇಳುತ್ತಾನೆ ಆಗ ದೇವೇಂದ್ರ ಆಯ್ತು ಆ ಹುಡುಗಿಯನ್ನ ತೋರಿಸುವುದಾಗಿ ಸುಮನ್ ಬಳಿ ಹೇಳುತ್ತಾನೆ.
ಆದರೆ ಸುಮನ್ ಹುಡುಗಿಯನ್ನ ಮದುವೆಯಾಗಬೇಕಾದರೆ ಒಂದು ಕಂಡೀಷನ್ ಇದೆ ಎಂದು ಹೇಳಿದ.. ಅದು ಏನೆಂದರೆ ಹುಡುಗಿ ಮನೆಯ ಕಡೆಯವರು ತುಂಬಾ ಬಡವರು ಹಣ ಖರ್ಚು ಮಾಡಿ ಮದುವೆ ಮಾಡುವಂತಹ ಶಕ್ತಿ ಅವರಿಗಿಲ್ಲ ಆದ್ದರಿಂದ ನೀನೆ ಅವರಿಗೆ ಎ ರ ಡೂ ಲಕ್ಷ ಹಣವನ್ನು ನೀಡಿ ಮುಂದೆ ನಿಂತು ಮದುವೆ ಮಾಡಿಕೊಳ್ಳಬೇಕು ಎಂದು ಹೇಳುತ್ತಾನೆ ಸುಮನ್ ಹೇಳಿದ ಈ ಮಾತಿಗೆ ದೇವೆಂದ್ರ ನನಗೆ ಹೊಡೆ ಒಳ್ಳೆಯ ಮನೆತನದ ಹುಡುಗಿ ಸಿಕ್ಕರೆ ಸಾಕು ಅವರು ಬಡವರಾಗಿದ್ದರೂ ನನಗೆ ಪರವಾಗಿಲ್ಲ ಎಂದು ಸುಮನ್ ಹೇಳಿದಂತಹ ಮಾತಿಗೆ ಒಪ್ಪಿ ಕೊಳ್ಳುತ್ತಾನೆ ಅದರಂತೆ ಮನೆಯಲ್ಲಿಯೂ ಕೂಡ ಒಪ್ಪಿಸಿ ಎಲ್ಲ ತಯಾರಿಯನ್ನು ದೇವೇಂದ್ರ ನ ಮನೆಯವರು ಮಾಡಿಕೊಳ್ಳುತ್ತಾರೆ. ನಂತರ ಮದುವೆಗೆ ಅದ್ದೂರಿಯಾಗಿ ತಯಾರಿಗಳು ನಡೆಯುತ್ತದೆ ಕೊನೆಗೆ ಮದುವೆಯ ದಿನ ಬಂದೇ ಬಿಡುತ್ತದೆ..
ಮದವೆಯ ಮಂಟಪಕ್ಕೆ ಬಂಧು ಬಳಗ ಸ್ನೇಹಿತರು ಎಲ್ಲರೂ ಬರುತ್ತಾರೆ ಎಲ್ಲ ಶಾಸ್ತ್ರಗಳು ಕೂಡ ಮುಗಿದು ಇನ್ನೇನು ತಾಳಿ ಕಟ್ಟಬೇಕು ಅನ್ನುವ ಸಮಯದಲ್ಲಿ ಹುಡುಗಿಯ ಕೈಯನ್ನು ಅಡ್ಡ ಇಡುತ್ತಾಳೆ ಹಾಗೂ ಈ ಹುಡುಗಿಯ ವರ್ತನೆಯನ್ನು ಕಂಡು ಅಲ್ಲಿರುವವರೆಲ್ಲರೂ ಶಾಕ್ ಆಗುತ್ತಾರೆ. ನಂತರ ಹುಡುಗಿ ನಾನು ಒಂದು ನಿಮಿಷ ಬಾ’ತ್ರೂಮ್ ಗೆ ಹೋಗಿ ಬರಬೇಕೆಂದು ಹೇಳುತ್ತಾಳೆ. ಇದೇನು ಈ ಸಮಯದಲ್ಲಿ ತಾಳಿ ಕಟ್ಟಿಸಿಕೊಂಡು ಹೋಗು ಎಂದು ಅಲೆ ಇರುವವರೆಲ್ಲರೂ ಹೇಳುತ್ತಾರೆ. ಆದರೆ ಹುಡುಗಿ ಇಲ್ಲಾ ನಾನು ಹೋಗಲೇ ಬೇಕು ಎಂದು ಹೇಳುತ್ತಾಳೆ. ನಂತರ ಕುಟುಂಬಸ್ಥರು ಸರಿ ಬೇಗ ಹೋಗಿ ಬಾ ಎಂದು ಹೇಳುತ್ತಾರೆ. ಹುಡುಗಿ ಬಾತ್ರೂಮ್ ಗೆ ಹೋಗುತ್ತಾಳೆ, ಆದರೆ ಎಷ್ಟು ಸಮಯ ಕಳೆದರು ಹೊರಗೆ ಬರಲೇ ಇಲ್ಲ..
ನಂತರ ಎಲ್ಲರಿಗೂ ಟೆನ್ಷನ್ ಶುರುವಾಗುತ್ತದೆ ಸ್ವಲ್ಪ ಸಮಯ ಕಳೆದ ನಂತರ ಮದುವೆ ಹೆಣ್ಣಿನ ಅತ್ತೆ ಹುಡುಗಿಯನ್ನ ಕರೆದುಕೊಂಡು ಬರುತ್ತೇನೆ ಎಂದು ಹೇಳಿ ಹೋದರು ಆದರೆ ಎಷ್ಟು ಸಮಯವಾದರೂ ಅವರು ಕೂಡ ಬರುವುದಿಲ್ಲ ಇನ್ನು ಹುಡುಗಿಯ ಕಡೆ ಸಂಬಂಧಿಗಳು ಎಂದು ಹೇಳಿಕೊಂಡು ಬಂದಿದ್ದ ಯ ಪ್ರತಿಯೊಬ್ಬರೂ ಸಹ ಹುಡುಗಿಯನ್ನು ಹುಡುಕಿ ಬರುತ್ತೇವೆ ಹುಡುಗಿಯನ್ನು ಹುಡುಕಿ ಬರುತ್ತವೆ ಎಂದು ಮಂಟಪದಿಂದ ಹೋಗುತ್ತಾರೆ. ಆದರೆ ಹುಡುಗಿಯನ್ನು ಹುಡುಕಲು ಹೋದವರು ಎಷ್ಟು ಸಮಯ ಕಳೆದರು ಬರಲಿಲ್ಲ. ಅಷ್ಟರಲ್ಲೇ ದೇವೆಂದ್ರ ಕೊಟ್ಟಿದ್ದ ಎರಡು ಲಕ್ಷ ಹಣ ಮತ್ತು ಮನೆಗೆ ಬರುವ ಸೊಸೆ ಎಂದು ಪ್ರೀತಿಯಿಂದ ದೇವೇಂದ್ರನ ಅಪ್ಪ ಅಮ್ಮ ಮಾಡಿಸಿಕೊಟ್ಟಿದ್ದ,
ಸುಮಾರು ಹತ್ತು ಲಕ್ಷ ಬೆಲೆ ಬಾಳುವ ಚಿನ್ನದ ಒಡವೆಗಳನ್ನು ಎತ್ತಿಕೊಂಡು ಎಲ್ಲರೂ ಓಡಿ ಹೋಗಿದ್ದರು..ಇದು ದೊಡ್ಡ ಮೋ’ಸದ ಜಾಲ ಎಂದು ದೇವೇಂದ್ರ ಅವರಿಗೆ ತಿಳಿಯುತ್ತದೆ. ಇದೇ ರೀತಿ ಮದುವೆ ಹೆಣ್ಣು ಕುಟುಂಬಸ್ಥರು ಸುಮಾರು ನೂರಕ್ಕು ಹೆಚ್ಚು ಹುಡುಗರಿಗೆ ಮದುವೆಯಾಗುವುದಾಗಿ ನಂಬಿಸಿ ಕೊನೆಗೆ ಅವರ ಬಳಿ ಇರುವ ಹಣ ಮತ್ತು ಒಡವೆಗಳನ್ನು ಎತ್ತಿಕೊಂಡು ಪರಾರಿಯಾಗುತ್ತಾರೆ. ನಂತರ ದೇವೇಂದ್ರ ಪೋಲಿಸ್ ಸ್ಟೇ’ಷನ್ ಗೆ ಹೋಗಿ ಹುಡುಗಿ ಮತ್ತು ಕುಟುಂದವರ ಪೊಟೊಗಳನ್ನ ಕೊಟ್ಟು ದೂರನ್ನು ನೀಡುತ್ತಾನೆ. ಆದರೆ ಇದುವರೆಗೂ ಅವರನ್ನು ಪೋಲಿಸರು ಹುಡುಕುತ್ತಲೇ ಇದ್ದಾರೆ.