ನಮಸ್ಕಾರಗಳು ಪ್ರಿಯ ಓದುಗರೇ ಸಕ್ಕರೆ ಕಾಯಿಲೆ ನಿವಾರಣೆಗೆ ಏನೆಲ್ಲಾ ಮಾಡಿ ಸುಸ್ತಾಗಿದ್ದರೆ ನಿಮ್ಮ ಶರೀರಕ್ಕೆ ಯಾವುದೇ ಮನೆಮದ್ದುಗಳು ಸೂಕ್ತವಾಗಿ ಪರಿಹಾರ ಫಲಿತಾಂಶ ಕೊಟ್ಟಿಲ್ಲ ಅಂತ ಆದರೆ, ನೀವು ಮಾಡಿ ಇದೊಂದು ಸರಳ ಪರಿಹಾರ. ಹೌದು ಸರಳ ಪರಿಹಾರ ಅನ್ನೋದಷ್ಟೇ ಹೆಚ್ಚು ಪ್ರಭಾವವಾಗಿ ಪರಿಣಾಮಕಾರಿಯಾಗಿ ನಿಮಗೆ ಆರೋಗ್ಯ ಲಾಭಗಳನ್ನು ಕೊಡುತ್ತೆ ಹಾಗೂ ಡಯಾಬಿಟಿಸ್ ಸಮಸ್ಯೆಯಿಂದ ಉಂಟಾದ ಹಲವು ಬಗೆಯ ಅನಾರೋಗ್ಯ ಸಮಸ್ಯೆಗಳನ್ನು ಸಹ ಪರಿಹರ ಮಾಡುತ್ತೆ. ಇದನ್ನು ಮಾಡುವ ವಿಧಾನ ತಿಳಿದುಕೊಂಡು ನಿಮ್ಮ ಆರೋಗ್ಯ ವೃದ್ಧಿಗೆ ಮತ್ತು ತೂಕ ಇಳಿಕೆಗೆ ಜೊತೆಗೆ ಮಲಬದ್ಧತೆ ಸಮಸ್ಯೆಗು ಕೂಡ ಈ ಒಂದೇ ಮನೆ ಮದ್ದು ಇದನ್ನು ಬಳಸಿ ನಿಮ್ಮ ಈ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ.
ಸಕ್ಕರೆ ಕಾಯಿಲೆ ಎಂಬುದು ಸಾಮಾನ್ಯವಲ್ಲ ಈ ಸಕ್ಕರೆ ಕಾಯಿಲೆ ಬಂದ್ರೆ ಜೀವನಪರ್ಯಂತ ಮಾತ್ರೆಗಳನ್ನು ತೆಗೆದುಕೊಂಡು ಈ ತೊಂದರೆಯನ್ನ ನಿಯಂತ್ರಣದಲ್ಲಿ ಇಡಬೇಕಾಗುತ್ತದೆ. ಇದನ್ನು ವೈದ್ಯರು ಹೇಳ್ತಾರೆ ಆದರೆ ಮಾತ್ರ ತೆಗೆದುಕೊಳ್ಳುತ್ತಿದ್ದರೆ ಸಕ್ಕರೆ ಕಾಯಿಲೆ ನಿಯಂತ್ರಣ ದಲ್ಲಿ ಇರುತ್ತದೆ ಅನ್ನೋದೆಲ್ಲ ಸುಳ್ಳು. ಇದರ ಜೊತೆಗೆ ನಾವು ಆಹಾರ ಪದ್ಧತಿಯನ್ನು ಕೂಡ ಕಂಟ್ರೋಲ್ ನಲ್ಲಿ ಇಟ್ಟುಕೊಂಡು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗುತ್ತದೆ ಇಲ್ಲವಾದಲ್ಲಿ, ಕೇವಲ ಮಾತ್ರೆಗಳನ್ನು ತೆಗೆದುಕೊಂಡು ನಮ್ಮ ದೇಹದ ನೈಸರ್ಗಿಕ ರೋಗನಿರೋಧಕ ಶಕ್ತಿಯನ್ನು ಕಳೆದುಕೊಳ್ಳಬೇಕಾಗುತ್ತದೆ.
ಆದ್ದರಿಂದ ನಿಮ್ಮ ಈ ಡಯಾಬಿಟಿಸ್ ಸಮಸ್ಯೆಗೆ ಒಂದೊಳ್ಳೆ ಮನೆಮದ್ದನ್ನು ನಾವು ತಿಳಿಸಿಕೊಡುತ್ತೇವೆ ಇದನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಂಡು ವಾರಕ್ಕೆ 3ಬಾರಿ ಅಥವಾ ದಿನ ಬಿಟ್ಟು ದಿನ ಈ ಡ್ರಿಂಕನ್ನು ಖಾಲಿ ಹೊಟ್ಟೆಗೆ ಕುಡಿಯುತ್ತ ಬನ್ನಿ.
ಈ ಮಾಡಿಕೊಳ್ಳುವುದು ಮಹಾನ್ ಏನೂ ಅಲ್ಲ ಕೇವಲ ಇದಕ್ಕೆ ಬೇಕಾಗಿರುವುದು ಜೀರಿಗೆ ಮೆಂತೆ ಕೊತ್ತಂಬರಿ ಬೀಜ ಅಗಸೆ ಬೀಜ. ಇದೆಲ್ಲಾ ಪದಾರ್ಥಗಳನ್ನ ನೋಡಿ, ಇದೆಲ್ಲವೂ ಶುಗರ್ ಕಂಟ್ರೋಲ್ ಮಾಡುವಂತಹ ಪದಾರ್ಥಗಳೇ ಆಗಿವೆ ಹಾಗಾಗಿ ಈ ಪದಾರ್ಥಗಳ ಬಳಕೆಯನ್ನು ಮಾಡುವುದು ಹೇಗೆ ಮತ್ತು ಡ್ರಿಂಕ್ ತಯಾರಿಸಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಯೋಣ ಬನ್ನಿ ಈ ಪುಟದಲ್ಲಿ.
ಮೊದಲಿಗೆ ರಾತ್ರಿ ಮಲಗುವ ಮುನ್ನ ಲೋಟದಷ್ಟು ನೀರಿಗೆ ಕಾಲು ಚಮಚ ಮೆಂತೆ ಅರ್ಧ ಚಮಚ ಜೀರಿಗೆ ಅರ್ಧ ಚಮಚ ಕೊತ್ತಂಬರಿ ಬೀಜ ಮತ್ತು ಕಾಲು ಚಮಚ ಅಗಸೆ ಬೀಜ ಹಾಕಿ ನೆನೆಸಿಡಿ ಮಾರನೆಯ ದಿನ ಬೆಳಿಗ್ಗೆ ಈ ಪದಾರ್ಥಗಳ ಜೊತೆಗೆ ನೀರನ್ನು ಸ್ವಲ್ಪ ಬಿಸಿ ಮಾಡಿಕೊಂಡು ಬಳಿಕ ಶೋಧಿಸಿ, ಈ ಅದ್ಭುತ ಡ್ರಿಂಕ್ ಅನ್ನು ಖಾಲಿ ಹೊಟ್ಟೆಗೆ ಕುಡಿಯಿರಿ. ಈ ಡ್ರಿಂಕ್ ಅನ್ನೂ ಕುಡಿದ ಮೇಲೆ 2 ಗ್ಲಾಸ್ ಬಿಸಿ ನೀರನ್ನು ತಪ್ಪದೆ ಕುಡಿಯಿರಿ.
ಹಾಗೆ ಆ ಶೋಧಿಸಿ ಕೊಂಡಂತಹ ಪದಾರ್ಥಗಳನ್ನ ಬಿಸಾಡಬೇಡಿ ಅದನ್ನು ಜಜ್ಜಿ ಪೇಸ್ಟ್ ಮಾಡಿ ತಿನ್ನಬಹುದು ಅಥವಾ ಮನೆಯಲ್ಲಿ ಬೇರೆಯವರು ಇದ್ದರೆ ಅಂದರೆ ಬೇರೆ ಸದಸ್ಯರಿಗೆ ಇದನ್ನ ತಿನ್ನಲು ಕೊಡಿ, ಇದರಿಂದ ಆರೋಗ್ಯಕ್ಕೆ ಉಪಯೋಗವೇ ಆಗುತ್ತೆ ಮತ್ತು ಜನ್ಮದಲ್ಲಿ ಡಯಾಬಿಟಿಸ್ ಬಾರದಿರುವ ಹಾಗೆ ಆರೋಗ್ಯವನ್ನು ಕಾಪಾಡುತ್ತದೆ.
ಈಗ ಈ ಮೇಲೆ ತಿಳಿಸಿದಂತಹ ಡ್ರಿಂಕ್ ಅನ್ನ ಕುಡಿಯುವದರಿಂದ ಕೇವಲ ಡಯಾಬಿಟಿಸ್ ಮಾತ್ರ ನಿಯಂತ್ರಣದಲ್ಲಿ ಇರುವುದೆಲ್ಲ ಮಲಬದ್ಧತೆ ಸಮಸ್ಯೆಯನ್ನು ಕೂಡ ಪರಿಹರಿಸುತ್ತೆ ಹಾಗೂ ಜೀರ್ಣಶಕ್ತಿಯನ್ನು ಕೂಡ ಉತ್ತಮವಾಗಿ ಇರಿಸಿ ನಿಮ್ಮ ಜೀರ್ಣಾಂಗ ಕ್ರಿಯೆಯನ್ನು ಸರಿಯಾಗಿ ನಡೆಸಲು ಸಹಕಾರಿಯಾಗುತ್ತೆ ಇದೊಂದು ಡ್ರಿಂಕ್.
ಕರುಳನ್ನು ಶುದ್ಧ ಮಾಡಲು ಕೂಡ ಸಹಕಾರಿಯಾಗಿದೆ ಈ ಮೇಲೆ ತಿಳಿಸಿದ ಡ್ರಿಂಕ್ ಅದಕ್ಕಾಗಿ ನೀವು ಈ ಮೇಲೆ ತಿಳಿಸಿದ ಡ್ರಿಂಕ್ಸ್ಗೆ ಜೇನುತುಪ್ಪವನ್ನು ಮಿಶ್ರಮಾಡಿ ಕುಡಿಯಿರಿ, ಆದರೆ ಡಯಾಬಿಟಿಸ್ ಇರುವವರು ಜೇನುತುಪ್ಪವನ್ನು ಬಳಸಬೇಡಿ. ಈ ಸರಳ ಮನೆಮದ್ದು ಪಾಲಿಸಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ.