Ad
Home ಅರೋಗ್ಯ ಬೀಪಿ ಯನ್ನ ಕಡಿಮೆ ಮಾಡುವ ಹಾಗು ಅಧಿಕ ರಕ್ತ ಒತ್ತಡ ಕಡಿಮೆ ಮಾಡುವ ಮನೆಮದ್ದು… ಈ...

ಬೀಪಿ ಯನ್ನ ಕಡಿಮೆ ಮಾಡುವ ಹಾಗು ಅಧಿಕ ರಕ್ತ ಒತ್ತಡ ಕಡಿಮೆ ಮಾಡುವ ಮನೆಮದ್ದು… ಈ ಪಾನೀಯ ಕುಡಿದರೆ ದೇಹದ ರಕ್ಷಣೆ ತುಂಬಾ ಚೆನ್ನಾಗಿ ಆಗುತ್ತೆ..

ಅಧಿಕ ರಕ್ತದ ಒತ್ತಡತೆ ನಿವಾರಣೆಗೆ ಮಾಡಬೇಕಿರುವುದು ಇಷ್ಟೆ! ಹೌದು ರಕ್ತದ ಒತ್ತಡತೆ ಅಂದರೆ ಎಲ್ಲರಿಗೂ ತಿಳಿಯುವಂತೆ ಹೇಳಬೇಕೆಂದರೆ ಬ್ಲಡ್ ಪ್ರೆಷರ್ ಇದನ್ನು ಲೋಕಲ್ ಭಾಷೆಯಲ್ಲಿ ಜನರು ಬಿ.ಪಿ ಅಂತ ಕರೆಯುತ್ತಾರೆ ನೋಡಿ..

ಹೌದು ಸಾಮಾನ್ಯವಾಗಿ ತಲೆಸುತ್ತು ಅಥವಾ ನಿಶಕ್ತಿಯಾಗಿದೆ ಸುಸ್ತಾಗುತ್ತ ಇದೆ ಅಂತ ವಯಸ್ಸಾದವರು ಆಸ್ಪತ್ರೆಗೆ ಹೋದರೆ ಅಥವಾ ಇಂದಿನ ದಿನಗಳಲ್ಲಿ ಯುವ ಜನತೆಯೂ ಕೂಡ ಆಸ್ಪತ್ರೆಗೆ ಹೋದರೆ, ಆಸ್ಪತ್ರೆಯಲ್ಲಿ ಮೊದಲು ನರ್ಸ್ಗಳು ಬಿಪಿ ಚೆಕ್ ಮಾಡ್ತಾರೆ, ಹೌದು ವೈದ್ಯರು ಸೂಚಿಸುವಂತೆ ಮೊದಲು ಬಿಪಿ ಚೆಕ್ ಮಾಡಿ ಬಿಪಿ ಎಷ್ಟಿದೆ ಎಂದು ತಿಳಿದು ನಂತರದ ಪರಿಹಾರವನ್ನು ವೈದ್ಯರು ಬಂದ ರೋಗಿಗೆ ಸೂಚಿಸುತ್ತಾರೆ.

ಹಾಗಾಗಿ ನಮ್ಮ ಶರೀರದಲ್ಲಿ ಕೆಲವೊಂದು ಬದಲಾವಣೆಗಳು ಆಗುತ್ತದೆ ನಮ್ಮ ಶರೀರ ಕೆಲವೊಂದು ಸೂಚನೆಯನ್ನು ನೀಡುತ್ತದೆ ಅದರ ಆಧಾರ ಮೇಲೆ ನಮಗೆ ಏನೆಲ್ಲ ಸಮಸ್ಯೆಗಳು ಉಂಟಾಗಿದೆ ಎಂದು ವೈದ್ಯರು ನಂತರ ಸೂಚಿಸುತ್ತಾರೆ. ಹೌದು ತಲೆಸುತ್ತು ಸುಸ್ತಾಗುವುದು ವಿಪರೀತ ಬೆವರುವುದು ಇವೆಲ್ಲ ಅಧಿಕ ರಕ್ತದ ಒತ್ತಡ ತೆಯ ಲಕ್ಷಣವಾಗಿದ್ದರೆ ತುಂಬಾ ಸುಸ್ತಾಗುವುದು ತಲೆಸುತ್ತುವುದು ದಿಡೀರನೆ ಮೂರ್ಛೆ ತಪ್ಪುವುದು ಇವೆಲ್ಲ ಲೋ ಬಿಪಿ ಲಕ್ಷಣ ಆಗಿರುತ್ತದೆ.

ಹಾಗಾಗಿ ನಮ್ಮ ದೇಶದಲ್ಲಿ ಈ ಬ್ಲಡ್ ಪ್ರೆಶರ್ ಸಮಸ್ಯೆ ಅಧಿಕವಾದರೂ ತೊಂದರೆ ಮತ್ತು ಲೋ ಆದರೂ ತೊಂದರೆ.ಇವತ್ತಿನ ಲೇಖನಿಯಲ್ಲಿ ಅಧಿಕ ರಕ್ತದ ಒತ್ತಡತೆ ಮನೆಯಲ್ಲಿ ಮಾಡಬಹುದಾದ ಪರಿಹಾರ ಒಂದರ ಬಗ್ಗೆ ತಿಳಿಸಿಕೊಡಲಿದ್ದೇವೆ. ಈ ಮನೆಮದ್ದನ್ನು ಪಾಲಿಸುವುದರಿಂದ ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿ ಇರುತ್ತದೆ ಅಂದರೆ ಸಮತೋಲನದಲ್ಲಿ ಇರುತ್ತದೆ ಈ ಬ್ಲಡ್ ಪ್ರೆಶರ್, ಹಾಗಾಗಿ ಈ ಮನೆಮದ್ದನ್ನು ಪಾಲಿಸಿ ನಿಮ್ಮ ಬಿಪಿ ಅನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಿ.

ಈ ಮನೆಮದ್ದು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಅಂಜೂರ ಕರಿಬೇವಿನ ಎಲೆಗಳು ಮತ್ತು ಬಿಸಿ ನೀರು.ರಾತ್ರಿ ಅಂಜೂರವನ್ನು ನೀರಿನಲ್ಲಿ ನೆನೆಸಿಡಿ, ಕೇವಲ 2 ಅಂಜೂರವನ್ನು ನೆನೆಸಿದರೆ ಸಾಕು ಬಳಿಕ ಕರಿಬೇವಿನ ಎಲೆಗಳನ್ನು ಕೂಡ ನೀರಿನಲ್ಲಿ ನೆನೆಸಿಡಿ, ಬೆಳಿಗ್ಗೆ ಮೊದಲು ಖಾಲಿ ಹೊಟ್ಟೆಗೆ ಅಂಜೂರವನ್ನು ತಿಂದು, ಅದರ ನೀರನ್ನು ಸೇವಿಸಬೇಕು ಜೊತೆಗೆ ಈ ಕರಿಬೇವಿನ ಎಲೆಗಳನ್ನು ನೆನೆಸಿಟ್ಟ ನೀರನ್ನು ಕುದಿಸಿ ಅದನ್ನು ಶೋಧಿಸಿ ಬೇಕಾದರೂ ಕುಡಿಯಬಹುದು ಅಥವಾ ಕರಿಬೇವಿನ ಎಲೆಗಳ ಸಹಿತ ನೀರನ್ನು ಕುಡಿದು ಕರಿಬೇವಿನ ಎಲೆಗಳನ್ನು ಜಗಿದು ತಿನ್ನಬಹುದು.

ಈ ಪರಿಹಾರ ನೀಡುವ ಪ್ರಯೋಜನಗಳೇನು ಅಂತೀರಾ, ಹೌದು ಅತ್ಯದ್ಭುತ ಪ್ರಯೋಜನಗಳು ಇವೆ ಮೊದಲಿಗೆ ರಕ್ತದಲ್ಲಿರುವ ಕೊಲೆಸ್ಟ್ರಾಲ್ ತಗ್ಗಿಸುತ್ತೆ, ಮುಖ್ಯವಾಗಿ ಬ್ಲಡ್ ಪ್ರೆಶರ್ ಅನ್ನು ಕಂಟ್ರೋಲ್ ನಲ್ಲಿ ಇಡುತ್ತೆ ಹಾಗೆ ಸಕ್ಕರೆ ಕಾಯಿಲೆ ಬಾರದಿರುವ ಹಾಗೆ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ. ಕೂದಲುದುರುವ ಸಮಸ್ಯೆ ನಿವಾರಣೆ ಆಗುವುದರ ಜೊತೆಗೆ ನಿಮ್ಮ ದೇಹಕ್ಕೆ ಹಲವು ವಿಧದ ಖನಿಜಾಂಶಗಳೂ ಕೂಡಾ ದೊರೆಯುತ್ತದೆ ಹೇಗೆ ಅಂತೀರಾ, ಹೌದು ಕರಿಬೇವಿನ ಎಲೆಗಳ ಮೇಲೆ ಸಾಕಷ್ಟು ಖನಿಜಾಂಶಗಳಿವೆ ಜೊತೆಗೆ ಕೆಲವೊಂದು ವಿಟಮಿನ್ಸ್ ಗಳಿವೆ ಮುಖ್ಯವಾಗಿ ವಿಟಮಿನ್ ಸಿ ಜೀವಸತ್ವವಿದೆ. ಹಾಗಾಗಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ದೇಹಕ್ಕೆ ಬೇಕಾಗಿರುವ ಕಬ್ಬಿಣದ ಅಂಶವನ್ನು ನೀಡಿ, ರಕ್ತದ ಕೊರತೆಯನ್ನು ದೂರ ಮಾಡುತ್ತೆ.

ಈ ರೀತಿಯಾಗಿ ಈ ಕೆಲವೊಂದು ಪರಿಹಾರಗಳು ರಕ್ತದ ಒತ್ತಡತೆಯನ್ನು ನಿಯಂತ್ರಣದಲ್ಲಿ ಇಡುವುದರ ಜೊತೆಗೆ ಕೆಲವೊಂದು ಆರೋಗ್ಯಕರ ಲಾಭಗಳನ್ನು ಕೂಡ ನಾವು ಪಡೆದುಕೊಳ್ಳಬಹುದು ಹಾಗೆ ಅಂಜೂರವನ್ನು ಹೆಚ್ಚು ದಿ ಸೇವಿಸುವಾಗ ಅಗತ್ಯವಿಲ್ಲ, ಇದನ್ನು ಕಡಿಮೆ ಪ್ರಮಾಣದಲ್ಲಿ ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಮತ್ತು ಅಂಜೂರದಲ್ಲಿರುವ ನಾರಿನಂಶವು ಜೀರ್ಣಕ್ರಿಯೆ ಉತ್ತಮವಾಗಿಸಿ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತೆ.

Exit mobile version