ದಿನ ನಿತ್ಯ ಇದನ್ನ ನೀರಿನಲ್ಲಿ ನೆನೆಸಿಟ್ಟು ನಂತರ ಕುಡಿದರೆ ಮೂಳೆಗೆ ಒಳ್ಳೆ ಶಕ್ತಿ , ನಿಶಕ್ತಿ , ಹಲ್ಲುಗಳಿಗೆ ಶಕ್ತಿ , ಮಲಬದ್ಧತೆ ನಿವಾರಣೆ ಆಗುತ್ತೆ…

183

ನೀವೇನಾದರೂ ಈ ಕಪ್ಪು ಒಣ ದ್ರಾಕ್ಷಿಯನ್ನು ಪ್ರತಿದಿನ ನೆನಸಿಟ್ಟು ತಿನ್ನೋದ್ರಿಂದ ಏನೆಲ್ಲ ಲಾಭವಾಗಬಹುದು ಗೊತ್ತಾ? ನೀವು ಊಹಿಸಲೂ ಸಾಧ್ಯವಿಲ್ಲ ಅಂತಹ ಬದಲಾವಣೆಯನ್ನು ನಿಮ್ಮ ಆರೋಗ್ಯದಲ್ಲಿ ಕಾಣಬಹುದು…ಹೌದು ಸ್ನೇಹಿತರ ಆರೋಗ್ಯವಾಗಿರಬೇಕೆಂದರೆ ಆರೋಗ್ಯಕರವಾದ ಆಹಾರವನ್ನು ಕೂಡ ತಿನ್ನಬೇಕಾಗುತ್ತದೆ ಆದರೆ ಆರೋಗ್ಯಕರವಾದ ಹಣ್ಣುಗಳು ಯಾವುದಿರಬಹುದು ಅನ್ನುವ ಮಾಹಿತಿಯನ್ನ ನಾವು ಈ ದಿನದ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ.

ಸಂಪೂರ್ಣವಾಗಿ ಓದಿ ತಿಳಿಯಿರಿ ಹಾಗೂ ಈ ಹಣ್ಣುಗಳನ್ನು ನೀವು ದಿನನಿತ್ಯ ಆಹಾರ ಪದ್ಧತಿಯಲ್ಲಿ ಹೆಚ್ಚಾಗಿ ಬಳಸುತ್ತ ಬಂದದ್ದೇ ಆದಲ್ಲಿ ನಿಮ್ಮ ಆರೋಗ್ಯದಲ್ಲಿ ಬದಲಾವಣೆ ಕಾಣಬಹುದು ಹಾಗೆ ಬರುವ ಹಲವು ರೋಗಗಳಿಂದ ಶಮನ ಪಡೆದುಕೊಳ್ಳಬಹುದು.ನಮ್ಮ ದೇಹ ಹೇಗೆ ಅಂದರೆ ಶುದ್ಧ ಭೂಮಿಯ ಹಾಗೆ ವೈರಿಗಳು ಬರುತ್ತಲೇ ಇರುತ್ತಾರೆ, ಆದರೆ ನಾವು ನಮ್ಮ ದೇಹದಲ್ಲಿ ಸೈನಿಕರನ್ನ ಹೊಂದಿರಬೇಕು ಆ ಸೈನಿಕರು ಯಾರು ಅಂದರೆ ರೋಗ ನಿರೋಧಕ ಶಕ್ತಿ ಅಂದರೆ ಬಿಳಿ ರಕ್ತಕಣಗಳು.

ಈ ಬಿಳಿ ರಕ್ತ ಕಣಗಳು ನಮ್ಮ ದೇಹದಲ್ಲಿ ಸೈನಿಕರಂತೆ ಕೆಲಸ ಮಾಡಿ ಬರುವ ವೈರಿಗಳ ನಶಿಸುತ್ತಾ ಹಾಗೆ ಆ ವೈರಿಗಳು ನಮ್ಮ ದೇಹದೊಳಗೆ ಬಂದರೂ ಅವುಗಳ ಆಟ ನಡೆಯದಿರುವ ಹಾಗೆ ನೋಡಿಕೊಂಡು ನಮ್ಮ ಆರೋಗ್ಯವನ್ನು ಕಾಪಾಡುತ್ತದೆ.ಹಾಗಾಗಿ ನೀವು ಏನು ಮಾಡಬೇಕೆಂದರೆ ನಮ್ಮ ದೇಹದಲ್ಲಿ ಬಿಳಿ ರಕ್ತ ಕಣಗಳು ಹೆಚ್ಚು ಮಾಡುವಂತಹ ಆಹಾರ ಪದಾರ್ಥಗಳನ್ನು ತಿನ್ನಬೇಕಾಗುತ್ತದೆ. ಅದಿರಲಿ ನಾವು ತಿಳಿಸುವಂತಹ ಈ ಲೇಖನವನ್ನು ನೀವು ತಿಳಿದ ಮೇಲೆ ನೀವು ಕೂಡ ಖಂಡಿತವಾಗಿಯು, ಖಡ್ಡಾಯವಾಗಿ ನಿಮ್ಮ ಆಹಾರ ಪದ್ಧತಿಯಲ್ಲಿ ನಾವು ಹೇಳುವಂತಹ ಈ ಸರಳ ಪರಿಹಾರವನ್ನು ಪಾಲಿಸಿ.

ಹೌದು ನಿಮ್ಮ ಆರೋಗ್ಯ ಕಾಳಜಿ ಅನ್ನು ನೀವೆ ಮಾಡಬೇಕಿರುತ್ತದೆ ಹಾಗೆ ನೀವು ಪಾಲಿಸುವ ಆಹಾರ ಪದ್ಧತಿಯಲ್ಲಿ ನೀವು ಅಳವಡಿಸಿಕೊಂಡಿರುವಂಥ ಆಹಾರಗಳ ಬಗ್ಗೆ ನಿಮಗೆ ಗಮನವಿರಲಿ ಯಾಕೆಂದರೆ ಕೆಲವರಿಗೆ ಹೆಚ್ಚು ಈರುಳ್ಳಿ ತಿಂದರೆ ಆಗುವುದಿಲ್ಲ ಕೆಲವರಿಗೆ ಹೆಚ್ಚು ಬೆಳ್ಳುಳ್ಳಿ ತಿಂದರೆ ಆಗುವುದಿಲ್ಲ ಹಾಗಾಗಿ ನಾವು ಪಾಲಿಸುವ ಆಹಾರಗಳ ಬಗ್ಗೆ ನಮಗೆ ಗಮನ ಇರಬೇಕು ಹೆಚ್ಚಿನ ಮಾಹಿತಿ ಇರಬೇಕು ಆಗಲೇ ನಾವು ನಮ್ಮ ಆರೋಗ್ಯವನ್ನು ಸುಧಾರಿಸಿ ಕೊಳ್ಳಲು ಸಾಧ್ಯವಾಗುತ್ತದೆ.

ಇಂದಿನ ಲೇಖನದಲ್ಲಿ ನಾವು ಹೇಳಲು ಹೊರಟಿರುವುದು ಕಪ್ಪುದ್ರಾಕ್ಷಿಯನ್ನು ನೆನೆಸಿಟ್ಟು ತಿನ್ನೋದ್ರಿಂದ ಆಗುವ ಲಾಭಗಳೇನು ಅಂತ ಹೌದು ಕೆಲವರಿಗೆ ಕೆಲವು ಆಹಾರ ಪದಾರ್ಥಗಳು ಅಲರ್ಜಿಯನ್ನು ಉಂಟುಮಾಡುತ್ತದೆ ಇದಕ್ಕೆ ಕಾರಣ ಏನು ಅಂದರೆ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯ ಕೊರತೆ.

ಹಾಗಾಗಿ ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡಿಕೊಳ್ಳಲು ಮತ್ತು ಆ ಜೀರ್ಣಶಕ್ತಿ ಉತ್ತಮವಾಗಿ ನಡೆಯಬೇಕೆಂದರೆ ಹಾಗೆಯೇ ನಿಮ್ಮ ದೇಹಕ್ಕೆ ಹೆಚ್ಚಿನ ನಾರಿನಂಶ ದೊರೆತು ಮಲಬದ್ಧತೆ ಮೂಲವ್ಯಾಧಿ ಸಮಸ್ಯೆಯಿಂದ ಪರಿಹಾರ ಮಾಡಿಕೊಳ್ಳುವುದಕ್ಕೆ, ನೆನೆಸಿಟ್ಟ ಕಪ್ಪು ಒಣ ದ್ರಾಕ್ಷಿಯ ನಾ ತಿನ್ನುತ್ತಾ ಬನ್ನಿ ಇದರಲ್ಲಿರುವ ಹೆಚ್ಚಿನ ಪೋಷಕಾಂಶಗಳು ನಿಮ್ಮ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ ಹಾಗೂ ಹಸಿವಾಗುವುದಿಲ್ಲ ಅನ್ನುವವರಿಗೆ ಬೇಗ ಹಸಿರಾಗಿಸಲು ಸಹಕಾರಿಯಾಗಿರುತ್ತದೆ ಈ ಕಪ್ಪು ಒಣ ದ್ರಾಕ್ಷಿ.

ಯಾವುದೇ ಒಣಹಣ್ಣುಗಳನ್ನು ಆಗಲಿ ಅದನ್ನು ಹಾಗೇ ಸೇರಿಸುವುದಕ್ಕಿಂತ ನೆನೆಸಿಟ್ಟು ಖಾಲಿ ಹೊಟ್ಟೆಗೆ ತಿನ್ನುವುದು ಬಹಳ ಒಳ್ಳೆಯದು ಅಷ್ಟೆ ಅಲ್ಲಾ ನೀವು ಕಪ್ಪು ಒಣದ್ರಾಕ್ಷಿಯನ್ನು ನೆನೆಸಿಟ್ಟು ತಿಂದದ್ದೇ ಆದಲ್ಲಿ ಆಗುವ ಲಾಭಗಳು ಅಪಾರ ಹಾಗೆ ಕಪ್ಪು ಒಣದ್ರಾಕ್ಷಿಯಲ್ಲಿ ಅಧಿಕವಾದ ಫೈಬರ್ ಇರುತ್ತದೆ. ಇದು ಜೀರ್ಣ ಶಕ್ತಿಯನ್ನು ವೃದ್ಧಿಸಿ ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ನಿಮ್ಮ ಚರ್ಮದ ಸೌಂದರ್ಯ ವೃದ್ಧಿ ಮಾಡಲು ಸಹಕಾರಿಯಾಗಿರುತ್ತದೆ.

ಯಾರಿಗೆ ಮಲಬದ್ಧತೆ ಸಮಸ್ಯೆ ಇರುತ್ತದೆ ಅಂಥವರು ನೆನೆಸಿತ್ತು ಕಪ್ಪುದ್ರಾಕ್ಷಿಯನ್ನು ತಿನ್ನಿ ಇದರಿಂದ ಯಾವುದೇ ಸೈಡ್ ಎಫೆಕ್ಟ್ ಗಳು ಆಗದೆ ನಿಮ್ಮ ಆರೋಗ್ಯ ವೃದ್ಧಿಸುತ್ತದೆ ಪ್ರತಿದಿನ ಕೇವಲ ಹತ್ತು ಕಾಳುಗಳಷ್ಟು ಒಣದ್ರಾಕ್ಷಿಯನ್ನು ನೆನೆಸಿಟ್ಟು ತಿನ್ನುತ್ತ ಬನ್ನಿ ಇದಕ್ಕೂ ಅಧಿಕವಾಗಿ ಯಾವುದೇ ಕಾರಣಕ್ಕೂ ಒಣ ದ್ರಾಕ್ಷಿಯನ್ನು ಸೇವಿಸುವುದು ಒಳ್ಳೆಯದಾಗಿರುವುದಿಲ್ಲ ಹಾಗೆ ಮತ್ತೊಂದು ವಿಚಾರವೇನೆಂದರೆ ಕೇವಲ 8 ಗಂಟೆಗಳ ಕಾಲ ನೆನೆಸಿದ ಹಣ್ಣುಗಳನ್ನು ಮಾತ್ರ ತಿನ್ನಿ, ಅದಕ್ಕು ಮೀರಿ ನೆನಸಿದ ಒಣ ಹಣ್ಣುಗಳನ್ನು ತಿಂದರೆ ಅದರಲ್ಲಿರುವ ಪೋಷಕಾಂಶಗಳು ಕಡಿಮೆಯಾಗಿರುವ ಸಾಧ್ಯತೆ ಇರುತ್ತದೆ.