ನಮಸ್ಕಾರಗಳು ಓದುಗರೇ ಪೂಜೆ ಮಾಡುವಾಗ ಇಂತಹ ತಪ್ಪುಗಳನ್ನು ನೀವು ಮಾಡುತ್ತಿದ್ದೀರಾ? ಹೌದು ನೀವೇನಾದರೂ ಇಂತಹ ತಪ್ಪುಗಳನ್ನು ಮಾಡುತ್ತಿದ್ದಲ್ಲಿ ನಿಮಗೆ ತಿಳಿಯದ ಹಾಗೆ ನೀವು ನಿಮ್ಮ ಜೀವನದಲ್ಲಿ ಸಂಕಷ್ಟಗಳಿಗೆ ಸಮಸ್ಯೆಗಳಿಗೆ ಹತ್ತಿರವಾಗುತ್ತಾ ಇದ್ದೀರಿ ಎಂದರ್ಥ. ಹೌದು ಪೂಜೆ ಮಾಡುವಾಗ ಕೆಲವೊಂದು ತಪ್ಪುಗಳು ನಮಗೆ ತಿಳಿಯದೆ ಆಗುತ್ತಾ ಇರುತ್ತದೆ ಆದರೆ ಅಂತಹ ತಪ್ಪುಗಳನ್ನು ತಿದ್ದಿಕೊಂಡಾಗ ಖಂಡಿತ ಆ ದೇವರ ಕೃಪೆಯಿಂದ ಅನುಗ್ರಹವನ್ನು ಪಡೆಯಲು ಸಾಧ್ಯವಾಗುವುದು. ನಾವು ಪೂಜೆ ಮಾಡುವಾಗ ನಿಷ್ಠೆಯಿಂದ ಏಕಾಗ್ರತೆಯಿಂದ ಪೂಜೆ ಮಾಡುತ್ತಾರೆ ಇನ್ನೂ ಕೆಲವರು ಮಾಡಬೇಕು ಅನ್ನುವ ಕಾರಣದಿಂದ ಪೂಜೆ ಮಾಡುತ್ತಾರೆ ಆದರೆ ದೇವರ ಆರಾಧನೆಯಲ್ಲೇ ವೈಜ್ಞಾನಿಕವಾದ ಕಾರಣವೂ ಕೂಡ ಇದೆ.
ನಮ್ಮನ್ನು ನಾವು ಸಂಪೂರ್ಣವಾಗಿ ಪೂಜೆ ಮಾಡುವಲ್ಲಿ ತೊಡಗಿಸಿಕೊಂಡರೆ ಖಂಡಿತಾ ನಮಗೆ ಏಕಾಗ್ರತೆ ಹೆಚ್ಚುತ್ತದೆ ಇದರಿಂದ ಮಿದುಳಿನ ಆರೋಗ್ಯ ಹೆಚ್ಚಾಗುತ್ತದೆ ಹಾಗೆ ಮಿದುಳು ಕೂಡ ಆರೋಗ್ಯಕರವಾಗಿದ್ದರೆ ಆಗ ನಮ್ಮ ದೇಹವೂ ಕೂಡ ಆರೋಗ್ಯಕರವಾಗಿರುತ್ತದೆ ಚಿಂತನೆಗಳು ಉತ್ತಮವಾಗಿರುತ್ತದೆ ಈ ಚಿಂತನೆಗಳು ಉತ್ತಮವಾಗಿದ್ದರೆ ನಮ್ಮ ಜೀವನದಲ್ಲಿ ನಾವು ಒಳ್ಳೆಯ ದಾರಿಯಲ್ಲಿ ನಡೆಯುತ್ತವೆ ನೋಡಿ ಇಷ್ಟೆಲ್ಲಾ ಪ್ರಯೋಜನಗಳಿವೆ ಪೂಜೆ ಮಾಡುವುದರಿಂದ. ಹೀಗಿರುವಾಗ ನಮಗೆ ತಿಳಿಯದೇ ನಾವು ಪೂಜೆ ಮಾಡುವ ಸಮಯದಲ್ಲಿ ಮಾಡುತ್ತಿರುವ ತಪ್ಪುಗಳ ಬಗ್ಗೆ ನೀವು ಕೂಡ ಅರಿವು ಮೂಡಿಸಿಕೊಳ್ಳಿ ಅದರಲ್ಲಿ ಮೊದಲನೆಯದ್ದು, ಪೂಜೆ ಮಾಡುವ ಸಮಯದಲ್ಲಿ ದೇವರಿಗಾಗಿ ಬಳಸುವ ದೇವರ ಸಾಮಗ್ರಿಗಳನ್ನು ಎಂದಿಗೂ ನೆಲದ ಮೇಲೆ ನೇರವಾಗಿ ಇರಿಸಬೇಡಿ ಇದೆ ನಾವು ಮಾಡುವ ಮೊದಲ ತಪ್ಪು ಆ ದೇವರಿಗೆ ಹೇಗೆ ಏಕಾಗ್ರತೆಯಿಂದ ನಾವು ಆರಾಧನೆ ಮಾಡಬೇಕು ಹಾಗೆ ದೇವರಿಗಾಗಿ ಸಮರ್ಪಣೆ ಮಾಡುವ ಪ್ರತಿಯೊಂದು ವಸ್ತುಗಳೂ ಕೂಡ ಶುಭ್ರವಾಗಿರಬೇಕು.
ಶುಭ್ರತೆ ಇರುವೆಡೆ ದೇವರು ನೆಲೆಸಿರುತ್ತಾನೆ ದೇವರು ನೆಲೆಸಿರುವ ಸಕಾರಾತ್ಮಕ ಶಕ್ತಿ ನೆಲೆಸಿರುತ್ತದೆ. ಹಾಗಾಗಿ ಎಲ್ಲೆಂದರೆ ಅಲ್ಲಿ ದೇವರ ವಸ್ತುಗಳನ್ನು ಇಡುವುದು ಮಾಡಬೇಡಿ ನೇರವಾಗಿ ದೇವರ ಸಾಮಗ್ರಿಗಳನ್ನು ನೆಲದ ಮೇಲೆ ಇರಿಸಬೇಡಿ ಅದರಲ್ಲಿ ಮೊದಲನೆಯದು ದೇವರಿಗಾಗಿ ಬಳಸುವ ದೀಪಗಳಾಗಲಿ ಬೆಳಗುವ ಆರತಿ ತಟ್ಟೆ ಯಾಗಲಿ ಇವುಗಳನ್ನು ನೇರವಾಗಿ ನೆಲದ ಮೇಲೆ ಎನಿಸುವುದರ ಬದಲು ಮಣೆಯ ಮೇಲೆ ಅಥವಾ ಶುಭ್ರವಾದ ಬಟ್ಟೆಯ ಮೇಲೆ ಅಥವಾ ಬಿಳಿ ವಸ್ತ್ರದ ಮೇಲೆ ಇರಿಸಬೇಕು ಹಾಗೂ ದೇವರಿಗಾಗಿ ಅರ್ಪಿಸುವ ಬಂಗಾರವನ್ನು ನೇರವಾಗಿ ನೆಲದ ಮೇಲೆ ಇರಿಸಬಾರದು ಅದನ್ನು ಕೆಂಪು ವಸ್ತ್ರದಲ್ಲಿ ಇರಿಸಬೇಕು.
ದೀಪಗಳನ್ನು ಸಹ ನೇರವಾಗಿ ನೆಲದ ಮೇಲೆ ಇರಿಸಬಾರದು ಮರದ ಫಲಕಗಳ ಮೇಲೆ ಆಗಲಿ ಅಥವಾ ಶುಭ್ರವಾದ ತಟ್ಟೆಯ ಮೇಲೆ ಆಗಲೇ ದೀಪಾಲೆ ಕಂಬ ವನ್ನು ಇರಿಸಿ ದೀಪ್ ದೇವರಿಗೆ ಆರಾಧನೆ ಮಾಡಬೇಕು. ಮಂತ್ರವನ್ನು ಏನನ್ನು ಯೋಚಿಸುತ್ತಾ ಪಠಣೆ ಮಾಡಬೇಡಿ ದೇವರಲ್ಲಿ ಏಕಾಗ್ರತೆ ಮಾಡಿ ಮಂತ್ರವನ್ನು ಪಠಿಸಿ ಆಗ ಅದರ ಸಂಪೂರ್ಣ ಪ್ರಯೋಜನ ನಿಮಗೆ ಲಭಿಸುತ್ತದೆ. ಮತ್ತೊಂದು ಮುಖ್ಯ ವಿಚಾರ ಏನು ಅಂದ್ರೆ ದೇವರಿಗಾಗಿ ತಯಾರಿಸಿದ ಅಡುಗೆಯನ್ನು ಕೂಡ ಹೌದು ದೇವರಿಗೆ ಸಮರ್ಪಣೆ ಮಾಡುವ ನೈವೇದ್ಯ ಅನ್ನು ಸಹ ನೇರವಾಗಿ ನೆಲದ ಮೇಲೆ ಇರಿಸಬೇಡಿ ಅದನ್ನು ವಿಶೇಷವಾಗಿ ತಟ್ಟೆಯೊಂದರ ಮೇಲೆ ಅಥವಾ ಬಾಳೆ ಎಲೆ ಮೇಲೆ ಇರಿಸಬೇಕು.
ಅಡಿಕೆ ಲಕ್ಷ್ಮಿಯ ಸಮಾನ ಆಗಿರುತ್ತದೆ ಅಡಿಕೆಯನ್ನು ಎಲೆಯ ಮೇಲೆಯೇ ಇರಿಸಿ ದೇವರ ಮುಂದೆ ಇಡಬೇಕು. ದೇವರ ವಿಗ್ರಹವನ್ನು ಚಿನ್ನ ಬೆಳ್ಳಿ ಅಥವಾ ಮರದ ಫಲಕದ ಮೇಲೆ ಇರಿಸಬೇಕು ಚಿನ್ನ ಬೆಳ್ಳಿ ಅಥವಾ ಮರದ ಪೀಠ ಮಾಡಿಸಿ ಅದರೊಳಗೂ ಕೂಡ ವಿಗ್ರಹವನ್ನು ಇರಿಸುವುದು ಶ್ರೇಷ್ಠ ಎಂದು ಹೇಳಲಾಗಿದೆ. ಈ ರೀತಿಯಾಗಿ ದೇವರ ಪೂಜೆ ಮಾಡುವಾಗ ದೇವರ ಸಾಮಗ್ರಿಗಳನ್ನು ನೇರವಾಗಿ ನೆಲದ ಮೇಲೆ ಇರಿಸಬೇಡಿ ಮೇಲೆ ತಿಳಿಸಿದಂತಹ ಕೆಲವೊಂದು ಮಾಹಿತಿಯನ್ನು ತಪ್ಪದೇ ತಿಳಿದು ಅದರಂತೆ ಪೂಜಾ ವಿಧಾನವನ್ನು ಪಾಲಿಸಿ. ಹೇಗೆಂದರೆ ಹಾಗೆ ಪೂಜೆ ಮಾಡಬಾರದು ಅದರಿಂದ ನಮಗೆ ಯಾವ ವಿಶೇಷ ಪಲವು ಲಭಿಸುವುದಿಲ್ಲ ಮನಸ್ಸಿಗೆ ಶಾಂತಿ ನೆಮ್ಮದಿ ಏಕಾಗ್ರತೆ ಎಲ್ಲವೂ ಹೆಚ್ಚು ಬೇಕೆಂದಲ್ಲಿ ಪೂಜೆಯನ್ನು ಆ ಪೂಜಾವಿಧಾನದಲ್ಲಿಯೆ ಪಾಲಿಸಿ ಎಲ್ಲವು ಒಳ್ಳೆಯದಾಗುತ್ತದೆ.