ದೇಹದಲ್ಲಿನ ಹೆಚ್ಚಿನ ಆಮ್ಲ , ವಿಟಮೀನ್ ಸಿ , ರೋಗನಿರೋಧಕ ಶಕ್ತಿಯನ್ನ ಹಾಗು ಜೀರ್ಣಕ್ರಿಯೆಯನ್ನ ಹೆಚ್ಚಿಸಿಕೊಳ್ಳಲು ಈ ಬೀಜ ವನ್ನ ಕುಟ್ಟಿ ಪುಡಿ ಮಾಡಿ ತಿನ್ನಿ ..

211

ಈ ಹುಣಸೆ ಹಣ್ಣನ್ನು ನಾವು ಸಾಮಾನ್ಯವಾಗಿ ಅಡುಗೆಗೆ ಬಳಕೆ ಮಾಡ್ತೇವೆ ಈ ಹುಣಸೆಹಣ್ಣು ರುಚಿಗೆ ಆದರೆ ಇದರ ಬೀಜಗಳು ಆರೋಗ್ಯಕ್ಕೆ…ನಮಸ್ಕಾರಗಳು ಪ್ರಿಯ ಓದುಗರೆ ಈ ಹುಣಸೆ ಹಣ್ಣನ್ನು ನಮ್ಮ ಭಾರತೀಯ ಪದ್ಧತಿಯಲ್ಲಿ ಅಡುಗೆಯಲ್ಲಿ ಹೆಚ್ಚಾಗಿ ಬಳಕೆ ಮಾಡ್ತಾರೆ ಅಷ್ಟೆ ಅಲ್ಲ ಈ ಹುಣಸೆ ಹಣ್ಣನ್ನು ದೇವರ ಸಾಮಗ್ರಿಗಳನ್ನು ಮತ್ತು ತಾಮ್ರ ಮತ್ತು ಹಿತ್ತಾಳೆಯ ಪಾತ್ರೆಗಳನ್ನು ತೊಳೆಯುವುದಕ್ಕಾಗಿ ಸಹ ಬಳಕೆ ಮಾಡ್ತಾರೆ.

ಆದರೆ ನಿಮಗೆ ಗೊತ್ತಾ ಈ ಹುಣಸೆ ಹಣ್ಣಿನ ಬೀಜಗಳು ಎಂತಹ ಲಾಭಗಳನ್ನು ಪಡೆದುಕೊಂಡಿದೆ ಎಂದು, ಹೌದು ಈ ಹುಣಸೆ ಹಣ್ಣಿನ ಬೀಜಗಳು ನೀ1ಕೊಂಡ ಹಾಗೆ ವ್ಯರ್ಥ ಪದಾರ್ಥವಲ್ಲ ಇದರಿಂದ ಬಹಳಷ್ಟು ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳಬಹುದು ಈ ಪುಟವನ್ನು ಸಂಪೂರ್ಣವಾಗಿ ತಿಳಿದಾಗ ನಿಮಗೆ ಅಚ್ಚರಿಯಾಗುತ್ತೆ ಹುಣಸೆ ಬೀಜದ ಪ್ರಯೋಜನಗಳು ಇಷ್ಟೊಂದ ಎಂದು!

ಆದ್ದರಿಂದ ಹುಣಸೇ ಬೀಜದ ಪ್ರಯೋಜನಗಳ ಕುರಿತು ನೀವು ಕೂಡ ತಿಳಿಬೇಕ ಮತ್ತು ಇದರ ಆರೋಗ್ಯಕರ ಲಾಭಗಳನ್ನು ನೀವು ಕೂಡ ಪಡೆದುಕೊಳ್ಳಬೇಕೆಂದಲ್ಲಿ, ನಾವು ಹೇಳುವ ಹಾಗೆ ಇದರ ಬಳಕೆ ಮಾಡುತ್ತಾ ಬನ್ನಿ ಸಾಕು ಹಲವು ಅನಾರೋಗ್ಯ ಸಮಸ್ಯೆಗಳು ನಮ್ಮಿಂದ ದೂರವಾಗುತ್ತದೆ ತುಂಬ ಸುಲಭವಾಗಿ ಹಾಗೂ ನಿಮ್ಮ ಆರೋಗ್ಯವನ್ನು ಕಾಳಜಿ ಮಾಡಿ ಈ ರೀತಿಯಾಗಿ, ಹುಣಸೆ ಹಣ್ಣಿನ ಬೀಜಗಳನ್ನೂ ಬಳಕೆ ಮಾಡುತ್ತಾ.

ಈ ಭೀಜದ ಪ್ರಯೋಜನಗಳ ಕುರಿತು ಹೇಳುವುದಾದರೆ ಈ ಹುಣಸೆ ಹಣ್ಣಿನ ಬೀಜದ ಉಪಯೋಗವನ್ನು ಹೇಗೆ ಮಾಡಬೇಕೆಂದರೆ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಪುಡಿಮಾಡಿ ಶೇಖರಣೆ ಮಾಡಿ ಇಟ್ಟುಕೊಳ್ಳಿ ಬಳಿಕ ಟೀ ಅಥವಾ ಕಷಾಯದಲ್ಲಿ ಇದರ ಪುಡಿಯನ್ನು ಬಳಸುತ್ತ ಬನ್ನಿ.

*ಈ ಹುಣಸೆ ಬೀಜಗಳನ್ನು ಕಷಾಯದ ರೂಪದಲ್ಲಿ ಸೇವಿಸಿದರೆ ಅತಿಸಾರ ಭೇದಿ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಬಹುದು.*ಇದರ ಪ್ರಯೋಜನ ರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.*ಈ ಹುಣಸೆ ಹಣ್ಣಿನ ಬೀಜಗಳು ವಿಟಮಿನ್ ಸಿ ಮೆಗ್ನೀಷಿಯಂ ಪೊಟಾಷಿಯಂ ಫಾಸ್ಫರಸ್ ಅಂತಹ ಉತ್ತಮ ಪೋಷಕಾಂಶಗಳನ್ನು ಹೊಂದಿದೆ.

*ಇತ್ತೀಚೆಗೆ ಹಲವರಿಗೆ ಕಾಡುವ ಪಿತ್ತ ಸಂಬಂಧಿ ಸಮಸ್ಯೆಗೂ ಈ ಬೀಜಗಳು ಪ್ರಯೋಜನಕಾರಿಯಾಗಿದೆ.*ಸಂಧಿವಾತದಂತಹ ಸಮಸ್ಯೆಯಿಂದ ಬಳಲುವವರು ಪ್ರತಿದಿನ 2 ಬಾರಿ ಈ ಬೀಜದ ಪುಡಿಯ ಪ್ರಯೋಜನವನ್ನು ಪಡೆದುಕೊಂಡು ಬನ್ನಿ ಇದರಿಂದ ಸಂಧಿವಾತ ಸಮಸ್ಯೆ ಉರಿಯೂತ ಸಮಸ್ಯೆ ನಿವಾರಣೆಯಾಗುತ್ತದೆ.*ಹಲ್ಲು ನೋವು ಸಮಸ್ಯೆ ಯಾರಿಗೆ ಕಾಡುತ್ತಾ ಇರುತ್ತದೆ ಅಂಥವರು ಪ್ರತಿದಿನ ಬ್ರಶ್ ಮಾಡಿದ ಬಳಿಕ ಹುಣಸೆ ಹಣ್ಣಿನ ಬೀಜದಿಂದ ಹಲ್ಲುಗಳನ್ನ ಮಸಾಜ್ ಮಾಡುತ್ತಾ ಬನ್ನಿ ಇದರಿಂದ ಹಲ್ಲು ನೋವು ಸಮಸ್ಯೆ ಕೂಡ ದೂರವಾಗುತ್ತೆ.

*ಅಜೀರ್ಣ ಸಮಸ್ಯೆ ಕಾಡುತ್ತಾ ಇರುವವರು ಬಿಸಿನೀರಿಗೆ ಈ ಹುಣಸೆ ಬೀಜದ ಪುಡಿಯನ್ನು ಮಿಶ್ರಮಾಡಿ ಕುಡಿಯುತ್ತ ಬನ್ನಿ ಇದರಿಂದ ಅಜೀರ್ಣತೆ ದೂರವಾಗುತ್ತೆ.*ಬಿಸಿನೀರಿಗೆ ಈ ಪುಡಿಯನ್ನು ಮಿಶ್ರಮಾಡಿ ಕುಡಿಯುತ್ತ ಬಂದರೆ ಸರಿಯಾದ ಸಮಯಕ್ಕೆ ಹಸಿವಾಗುವ ಲಾಭ ಕೂಡ ನಿಮಗೆ ದೊರೆಯುತ್ತದೆ.*ಮಲಬದ್ಧತೆ ಸಮಸ್ಯೆ ಇರುವವರು ಈ ಹುಣಸೆ ಬೀಜದ ಪ್ರಯೋಜನವನ್ನು ಪಡೆದುಕೊಳ್ಳಿ. ಯಾಕೆಂದರೆ ಇದರಲ್ಲಿ ಕೊಲೆಸ್ಟ್ರಾಲ್ ಅಂಶ ಕ್ಕಿಂತ ಹೆಚ್ಚಾಗಿ ನಾರಿನ ಅಂಶ ಇದೆ.

*ಹಾಗಾಗಿ ಇದು ಜೀರ್ಣಶಕ್ತಿಯನ್ನು ವೃದ್ಧಿಸುವುದಲ್ಲದೆ, ಮಲಬದ್ಧತೆಯನ್ನು ನಿವಾರಿಸುತ್ತದೆ ಜೊತೆಗೆ ತೂಕ ಇಳಿಕೆಗೂ ಕಾರಣವಾಗುತ್ತೆ.*ಪ್ರತಿರೋಧಕ ಶಕ್ತಿ ಹೆಚ್ಚಿಸುವ ಗುಣ ಈ ಹುಣಸೆ ಬೀಜಗಳಲ್ಲಿ ಇದೆ, ಹಾಗಾಗಿ ಪ್ರತಿದಿನ 5 ಹುಣಸೆ ಬೀಜಗಳನ್ನು ಹುರಿದು ಸೇವಿಸುವುದರಿಂದ ಇದರ ಸಂಪೂರ್ಣ ಲಾಭ ಪಡೆಯಬಹುದು.*ಹಲವಾರು ಸಮಸ್ಯೆಗಳನ್ನು ದೂರ ಮಾಡಬಹುದಾದ ಈ ಹುಣಸೆ ಬೀಜ ಗಳ ಪ್ರಯೋಜನವನ್ನು ಪಡೆದುಕೊಂಡು, ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಆದರೆ ನಿಯಮಿತವಾಗಿ ಇದರ ಪ್ರಯೋಜನ ಪಡೆದುಕೊಂಡು ಬನ್ನಿ.