ಬನ್ನಿ ಸ್ನೇಹಿತರೆ ಈ ದಿನದ ಲೇಖನದಲ್ಲಿ ಲಿಪೊಮಾ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳೋಣ, ನೈಸರ್ಗಿಕವಾದ ಮನೆಮದ್ದು ಇದನ್ನ ಪಾಲಿಸಿ ಲಿಪೋಮಾ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಿನಮಸ್ಕಾರಗಳು ದೇಹದ ಕೆಲವೊಂದು ಭಾಗದಲ್ಲಿ ಊದಿಕೊಂಡಿದ್ದರೆ ಅದನ್ನ ಲಿಪೋಮ ಅಂತ ವಿಜ್ಞಾನದಲ್ಲಿ ಹೇಳುತ್ತಾರೆ ಹಾಗೂ ಈ ತೊಂದರೆ ಯಾರಲ್ಲಿಯೇ ಬಾಧಿಸುತ್ತಿದ್ದರೂ ಆ ಸಮಸ್ಯೆ ನಮ್ಮ ಆರೋಗ್ಯದ ಮೇಲೆ ಯಾವುದೇ ತರಹದ ಅಡ್ಡ ಪರಿಣಾಮಗಳನ್ನು ಉಂಟುಮಾಡುವುದಿಲ್ಲ ಆದರೆ ಕೆಲವರಿಗೆ ಈ ರೀತಿ ದೇಹದ ಕೆಲವೊಂದು ಭಾಗದಲ್ಲಿ ಊದಿಕೊಂಡಿದ್ದರೆ ಅದು ಮುಜುಗರ ಉಂಟಾಗಿ ಅದನ್ನು ತೆಗೆಸಲು ಮುಂದಾಗುತ್ತಾರೆ.
ಹೌದು ದೇಹದ ಕೆಲವೊಂದು ಭಾಗದಲ್ಲಿ ಗಂಟು ಗಂಟು ಆಗಿದ್ದಲ್ಲಿ ಅದನ್ನು ನೀವು ಯಾವ್ದೋ ಗೆಡ್ಡೆ ಎಂದು ಪರಿಗಣಿಸಿ ಅದಕ್ಕೆ ಆಪರೇಷನ್ ಮಾಡಿಸಿಕೊಳ್ಳುವ ಅಗತ್ಯ ಇರುವುದಿಲ್ಲ.ಹೌದು ಈ ರೀತಿ ನಿಮ್ಮ ದೇಹದ ಮೇಲೆ ಕೆಲವೊಂದು ಗೆಡ್ಡೆ ಅಥವಾ ಈ ರೀತಿ ಗಂಟು ಗಂಟು ಇದ್ದಲ್ಲಿ ಅದು ಯಾವುದೇ ನೋವು ನೀಡುತ್ತಿಲ್ಲವಾದರೆ, ಅದು ಲಿಪೋಮ ತೊಂದರೆ ಆಗಿರುತ್ತದೆ ಇದು ಯಾವುದೇ ಅನಾರೋಗ್ಯ ಸಮಸ್ಯೆಯ ಸೂಚನೆಯಾಗಿರುವುದಿಲ್ಲ, ಅದರ ಬದಲಾಗಿ ದೇಹದ ಕೆಲವೊಂದು ಭಾಗದಲ್ಲಿ ಕೊಲೆಸ್ಟೆರಾಲ್ ಶೇಖರಣೆ ಆಗಿ
ಅದು ಈ ರೀತಿ ಗಂಟುಗಂಟಾಗಿರುತ್ತವೆ ಇದನ್ನ ನೀವು ಮನೆಯಲ್ಲೇ ಪರಿಹಾರ ಮಾಡಿಕೊಳ್ಳಬಹುದು ಕೆಲವೊಂದು ಪದಾರ್ಥಗಳನ್ನು ಬಳಸಿ ಪ್ರಭಾವವಾದ ಮನೆ ಮದ್ದನ್ನು ಮಾಡಿ ಬಳಸಿದಾಗ ಈಗ ತಿಳಿಯೋಣ ಬನ್ನಿ ಈ ಸಮಸ್ಯೆಗೆ ಪರಿಹಾರವೇನು ಎಂಬುದನ್ನು.ಮೊದಲಿಗೆ ಈ ಪರಿಹಾರಕ್ಕಾಗಿ ಬೇಕಾಗಿರುವ ಪದಾರ್ಥಗಳ ಕುರಿತು ಹೇಳುವುದಾದರೆ ಬೆಳ್ಳುಳ್ಳಿ ಅರಿಶಿಣ ಮತ್ತು ಅಲೋವೆರಾ ಜೆಲ್ ಇದಿಷ್ಟು ಪದಾರ್ಥಗಳು ಬೇಕಾಗಿರುತ್ತದೆ ಚರ್ಮ ಸಂಬಂಧಿ ತೊಂದರೆ ಆಗಿರುವುದರಿಂದ
ಇಲಿ ಬೆಳ್ಳುಳ್ಳಿ ಕುರಿತು ಹೇಳುವುದಾದರೆ ಬೆಳ್ಳುಳ್ಳಿ ಸಾಮಾನ್ಯವಾಗಿ ಆ್ಯಂಟಿಆಕ್ಸಿಡೆಂಟ್ ಅಂಶ ಹೊಂದಿರುತ್ತದೆ ಜೊತೆಗೆ ಅರಿಶಿನ ಕೂಡ ಕಲೆ ನಿವಾರಣೆ ಮಾಡಲು ಮತ್ತು ಊತ ಹಾಗೂ ನೋವು ನಿವಾರಣೆ ಮಾಡಲು ಬ್ಲಡ್ ಬ್ಲೀಡ್ ಆಗುವುದನ್ನು ನಿಲ್ಲಿಸಲು ಅರಿಶಿಣ ಉತ್ತಮವಾಗಿದೆ, ಜೊತೆಗೆ ತ್ವಚೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ನಿವಾರಣೆ ಮಾಡಲು ಅರಿಶಿಣ ಉತ್ತಮವಾಗಿದೆ.
ನಂತರ ಅಲೋವೆರಾ ಜೆಲ್ ಬಗ್ಗೆ ಹೇಳೋದೇ ಬೇಡ ಬಿಡಿ ಅತ್ಯಂತ ಉತ್ತಮವಾದ ಹಾಗೂ ನೈಸರ್ಗಿಕವಾದ ಔಷಧೀಯ ಗುಣವನ್ನು ಹೊಂದಿರುವ ಈ ಅಲೋವೆರಾ ಜೆಲ್ ಇದನ್ನ ನಾವು ಬಹಳಷ್ಟು ಅನಾರೋಗ್ಯ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳೋದಕ್ಕೆ ಬಳಸಬಹುದು, ಜೊತೆಗೆ ಚರ್ಮ ಸಂಬಂಧಿ ತೊಂದರೆಗಳನ್ನು ನಿವಾರಣೆ ಮಾಡಲು ಸಹಕಾರಿ ಈ ಅಲೋವೆರಾ ಜೆಲ್.
ಈಗ ಅವರ ಚಲನ ತಂದು ಅದರಿಂದ ವಿಷ ತೆಗೆದು ಅಂದರೆ ಆ ಲೋಳೆರಸ ದಲ್ಲಿರುವ ಹಳದಿ ಅಂಶವನ್ನು ತೆಗೆದು ಬಟ್ಟಲಿಗೆ ಈ ಜೆಲ್ ಅನ್ನು ತೆಗೆದುಕೊಳ್ಳಬೇಕು, ಬಳಿಕ ಬೆಳ್ಳುಳ್ಳಿಯನ್ನು ಜಜ್ಜಿ ಪೇಸ್ಟ್ ತೆಗೆದುಕೊಂಡು, ಅಡುಗೆಗೆ ಬಳಸುವ ಅರಿಶಿನವನ್ನು ಇಲ್ಲಿ ಬಳಸಬೇಡಿ ಕಸ್ತೂರಿ ಅರಿಶಿನ ಅಥವಾ ಕಾಡು ಅರಿಷಿಣ ನಿಮಗೆ ಅಂಗಡಿಗಳಲ್ಲಿ ದೊರೆಯುತ್ತದೆ
ಅದನ್ನು ತಂದು ಈ ಪರಿಹಾರಕ್ಕೆ ಬಳಸಿ ಮತ್ತು ಈಗ ಈ ಎಲ್ಲಾ ಪದಾರ್ಥಗಳನ್ನು ಮಿಶ್ರಮಾಡಿ ಪೇಸ್ಟ್ ಮಾಡಿಕೊಂಡು, ಯಾವ ಭಾಗದಲ್ಲಿ ಈ ರೀತಿ ಗಂಟುಗಳು ಆಗಿರುತ್ತದೆ, ಅದರ ಮೇಲೆ ಲೇಪ ಮಾಡಿ ಸುಮಾರು ಅರ್ಧ ಗಂಟೆಯ ಬಳಿಕ ಈ ಭಾಗವನ್ನ ಬಿಸಿ ನೀರಿನಿಂದ ಸ್ವಚ್ಛ ಮಾಡುತ್ತ ಬನ್ನಿ. ಇದೇ ರೀತಿ ಪ್ರತಿದಿನ ಮಾಡುತ್ತ ಬಂದಲ್ಲಿ ಕೆಲವಷ್ಟು ದಿನಗಳಲ್ಲಿ ಈ ಗಂಟು ನಿವಾರಣೆಯಾಗುವುದನ್ನೂ ನೀವೇ ಕಾಣಬಹುದು.