ನಮಸ್ತೆ ಪ್ರಿಯ ಸ್ನೇಹಿತರೇ ಮುತ್ತುಗದ ಎಲೆ, ಈ ಹೆಸರನ್ನು ನೀವು ಕೇಳಿರಬಹುದು ಅಂದಿನ ಕಾಲದಲ್ಲಿಯೇ ಮನೆಯಲ್ಲಿ ವಿಶೇಷ ಪೂಜೆ ನಡೆದಾಗ ಅಥವಾ ಕೆಲವೊಂದು ಕಾರ್ಯಕ್ರಮಗಳು ನಡೆದಾಗ ಈ ಮುತ್ತುಗದ ಎಲೆಯ ಮೇಲೆಯೇ ಊಟ ಬಡಿಸುತ್ತಿದ್ದರು.ನಿಮಗೆ ಮುತ್ತುಗದ ಎಲೆಯ ಬಗ್ಗೆ ಗೊತ್ತಿಲ್ಲವಾದರೆ ಇಂದಿನ ಈ ಪುಟವನ್ನು ಸಂಪೂರ್ಣವಾಗಿ ಓದಿ ತಿಳಿಯಿರಿ, ಹೌದು ಇದೊಂದು ಬಗೆಯ ಎಲೆ ಇದರ ಮೇಲೆ ಊಟ ಮಾಡುವುದರಿಂದ ಬಹಳಷ್ಟು ಅನಾರೋಗ್ಯ ಸಮಸ್ಯೆಗಳು ದೂರ ಆಗುತ್ತದೆ. ಹೌದು ಸ್ನೇಹಿತರೆ ಬಾಳೆ ಎಲೆಯ ಮೇಲೆ ಊಟ ಮಾಡುವುದು ಹೇಗೆ ವಿಶೇಷವೋ ಹಾಗೆ ಮುತ್ತುಗದ ಎಲೆಯ ಮೇಲೆ ಊಟ ಮಾಡುವುದು ಕೂಡ ವಿಶೇಷವಾಗಿರುತ್ತದೆ ಹಾಗೆ ಆರೋಗ್ಯಕ್ಕೆ ಉತ್ತಮವೂ ಕೂಡ ಆಗಿರುತ್ತದೆ.
ಮುತ್ತುಗದ ಎಲೆಯ ಹಳ್ಳಿಕಡೆ ದೊರೆಯುತ್ತದೆ ಇದರ ಪ್ರಯೋಜನ ಬಹಳಷ್ಟು ಅನಾರೋಗ್ಯ ಸಮಸ್ಯೆಗಳಿಗೆ ಪರಿಹಾರ ತಂದುಕೊಟ್ಟು ಆರೋಗ್ಯವನ್ನು ವೃದ್ಧಿಸುತ್ತದೆ. ಹಾಗಾಗಿ ಈ ಮಾಹಿತಿ ಮೂಲಕ ಮುತ್ತುಗದ ಎಲೆಯ ಹಲವು ಪ್ರಯೋಜನಗಳ ಬಗ್ಗೆ ನಿಮಗೆ ತಿಳಿಸಿಕೊಡುವ ಪ್ರಯತ್ನವನ್ನೂ ಮಾಡುತ್ತಿದ್ದರು ಅದರಲ್ಲಿ ಮೊದಲನೆಯದು ನಿಮಗೇನಾದರೂ ಸಕ್ಕರೆ ಕಾಯಿಲೆ ಇದೆಯಾ ಈ ಮುತ್ತುಗದ ಎಲೆಯ ಮರದಲ್ಲಿ ಹೂವುಗಳು ಬಿಡುತ್ತವೆ, ಆ ಹೂವುಗಳನ್ನ ಸಂಗ್ರಹ ಮಾಡಿ ಅದನ್ನು ನೀರಿನಲ್ಲಿ ಕುದಿಸಿ ಬಳಿಕ ಶೋಧಿಸಿಕೊಂಡು ಆ ನೀರನ್ನು ಕುಡಿಯುತ್ತಾ ಬಂದರೆ ಸಕ್ಕರೆ ಕಾಯಿಲೆ ಸ್ಫೂರ್ತಿಯಾಗಿ ಕಡಿಮೆಯಾಗುತ್ತದೆ ಅಂತಲ್ಲ ಆದರೆ ನಿಯಂತ್ರಣದಲ್ಲಿ ಇರುತ್ತದೆ.
ಈ ಮುತ್ತುಗದ ಎಲೆಯ ಮರದ ಬೇರನ್ನು ಸಂಗ್ರಹ ಮಾಡಿಟ್ಟುಕೊಂಡು ಸ್ವಚ್ಚ ಮಾಡಿ ಬಳಿಕ ಅದನ್ನು ತೇಯಬೇಕು ಬಳಿಕ ಅಲ್ಲಿ ದೊರೆತ ಗಂಧವನ್ನು ತೆಗೆದುಕೊಂಡು ಕಣ್ಣಿನ ಸಮಸ್ಯೆ ಇದ್ದರೆ ಉರಿ ಇದ್ದರೆ ಅಥವಾ ಕಣ್ಣು ಊದಿಕೊಂಡಿದ್ದರೆ ಇದನ್ನ ಸ್ವಲ್ಪ ನೀರಿಗೆ ಮಿಶ್ರಣ ಮಾಡಿ ಅದನ್ನು ಸ್ವಲ್ಪ ಸ್ವಲ್ಪವೆ ಕಣ್ಣಿಗೆ ಬಿಡುತ್ತಾ ಬರಬೇಕು ಇದರಿಂದ ದೃಷ್ಟಿ ದೋಷ ಇದ್ದರೂ ನಿವಾರಣೆಯಾಗುತ್ತದೆ. ಕೆಲವರಿಗೆ ದೇಹದ ಉಷ್ಣಾಂಶದಿಂದ ಕಣ್ಣುಗಳು ಉರಿಯುತ್ತಾ ಇರುತ್ತದೆ ಈ ಪರಿಹಾರದಿಂದ ಸಮಸ್ಯೆ ಕೂಡ ನಿವಾರಣೆ ಆಗುತ್ತದೆ.
ಮುತ್ತುಗದ ಎಲೆಗಳನ್ನು ನೀರಿನಲ್ಲಿ ಕುದಿಸಿ ಆ ನೀರನ್ನು ಸ್ವಲ್ಪವೇ ಸ್ವಲ್ಪವೇ ಕುಡಿಯುತ್ತ ಬರುವುದರಿಂದ ಜಂತು ಹುಳಿವಿನ ಸಮಸ್ಯೆಯಿಂದ ಶಮನ ಪಡೆದುಕೊಳ್ಳಬಹುದು. ಹೌದು ಜಂತು ಹುಳು ಸಮಸ್ಯೆ ಕರುಳಿನ ಬಾಧೆಯನ್ನು ತರಬಹುದು ಅಥವಾ ಹಸಿವಾಗದೆ ಇರುವ ಹಾಗೆ ಮಾಡಬಹುದು, ಇಂತಹ ಸಮಯದಲ್ಲಿ ಈ ಮುತ್ತುಗದ ಎಲೆಯ ಪ್ರಯೋಜನವನ್ನು ಪಡೆದುಕೊಳ್ಳುವುದರಿಂದ ಬಹಳ ಬೇಗ ಜಂತು ಹುಳುವಿನ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಬಹುದು.
ಸಾಧ್ಯವಾದರೆ ಮುತ್ತುಗದ ಎಲೆಯ ಮೇಲೆ ಊಟವನ್ನು ಮಾಡಿ ಇದರಿಂದ ಅಜೀರ್ಣ ಇರಬಹುದು ಅಥವಾ ಜೀರ್ಣಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿರಲಿ ಅದು ಪರಿಹರವಾಗುತ್ತದೆ ಸ್ನೇಹಿತರೆ. ಪ್ರಕೃತಿಯಲ್ಲಿ ದೊರೆಯುವ ಇಂತಹ ಒಳ್ಳೆಯ ಅದ್ಭುತ ಶಕ್ತಿಯನ್ನು ಹೊಂದಿರುವ ಈ ಮುತ್ತುಗದ ಎಲೆಯ ಪ್ರಯೋಜನವನ್ನು ಪಡೆದುಕೊಳ್ಳಿ ನಿಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಿ.
ಹಳ್ಳಿಯ ಮಂದಿಯನ್ನ ನೀವು ನೋಡಿರಬಹುದು ಅವರು ಇಷ್ಟು ಆರೋಗ್ಯಕರವಾಗಿರುತ್ತಾರೆ, ಎಷ್ಟು ಕಟ್ಟುಮಸ್ತಾಗಿ ಇರ್ತಾರೆ ಅವರ ಆರೋಗ್ಯ ನೋಡಿದರೆ ಅವರ ಶರೀರ ನೋಡಿದರೆ ಬಹಳ ಖುಷಿಯಾಗುತ್ತದೆ. ಯಾಕೆ ಅಂದರೆ ಅವರು ತಯಾರಿಸುವ ಆಹಾರ ಪದ್ಧತಿ ಆಗಿರುತ್ತದೆ ಅವರು ಜೀವಿಸುವ ಜೀವನಶೈಲಿ ಆಗಿರುತ್ತದೆ ಹಾಗೆ ಯಾವುದೇ ಸಮಸ್ಯೆಗಳು ಬಂದರೂ ಅವರು ಆಸ್ಪತ್ರೆಯ ಮೊರೆಹೋಗದೆ ಪ್ರಕೃತಿದತ್ತವಾಗಿ ದೊರೆಯುವ ಈ ಔಷಧೀಯ ಗುಣ ಇರುವ ಗಿಡ ಮರಗಳ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ತಾರೆ ಹಾಗೆ ಪ್ರಕೃತಿಯಲ್ಲಿ ಬೆಳೆಯುವ ಕೆಲವು ಮರ ಗಿಡಗಳ ಔಷಧೀಯ ಗುಣವನ್ನು ಅರಿತು ಅದರ ಚೂರ್ಣವನ್ನು ಮಾಡಿಟ್ಟುಕೊಂಡು ಅದನ್ನು ಹುಷಾರಿಲ್ಲದ ಸಮಯದಲ್ಲಿ ಬಳಸುತ್ತಾರೆ. ಹಾಗಾಗಿ ಅಂತಹ ಅದ್ಭುತ ಶಕ್ತಿ ಹೊಂದಿರುವ ಈ ಗಿಡ ಮರಗಳಲ್ಲಿ ಮುತ್ತುಗದ ಎಲೆಯು ಕೂಡ ಒಂದಾಗಿದೆ.