ನಿಮ್ಮನ್ನ ನೂರಾರು ಕಾಲ ಬದುಕುವಂತೆ ಮಾಡುವ ಸಸ್ಯದ ಬಗ್ಗೆ ನಿಮಗೆ ಗೊತ್ತ .. ಇದರ ಕಷಾಯ ಕುಡಿದರೆ ನಿಮ್ಮ ಆಯುಷ್ಯ ಹೆಚ್ಚುತ್ತದೆ..

133

ಈ ಶಂಕಪುಷ್ಪ ಗಿಡ ಕೇವಲ ಗಿಡ ಮಾತ್ರವಲ್ಲ ಇದರಲ್ಲಿ ಅಗಾಧವಾದ ಔಷಧೀಯ ಗುಣ ಅಡಗಿದೆ ನೀವು ನಂಬಲು ಅಸಾಧ್ಯ ಅಂಥದೊಂದು ವಿಶೇಷ ಈ ಗಿಡದಲ್ಲಿ ಇದೆ ಇದರ ಎಲೆ ಮತ್ತು ಹೂಗಳ ಆರೋಗ್ಯಕ್ಕೆ ಬಹಳ ಉತ್ತಮ ಪ್ರಯೋಜನಗಳನ್ನು ಕೊಡುತ್ತದೆ ಆದ್ದರಿಂದ ಇವತ್ತಿನ ವಿಶೇಷ ಮಾಹಿತಿಯಲ್ಲಿ ಈ ಶಂಕಪುಷ್ಪ ಗಿಡದ ಕುರಿತು ಮಾತನಾಡುತ್ತಿದ್ದೇವೆ ಹಾಗೆ ಹಿಂದು ಸಂಪ್ರದಾಯದಲ್ಲಿ ಶಂಕಪುಷ್ಪ ಗಿಡವನ್ನು ವಿಶೇಷವಾಗಿ ಪರಿಗಣಿಸುತ್ತೇವೆ.

ಹೌದು ಶಂಕಪುಷ್ಪ ಗಿಡವನ್ನ ಯಾಕೆ ವಿಶೇಷವಾಗಿ ನಾವು ಪರಿಗಣಿಸುತ್ತೇವೆ ಆಂದರೆ ಈ ಶಂಕಪುಷ್ಪ ಗಿಡ ದಲ್ಲಿ ಬಿಡುವ ಹೂವು ಲಕ್ಷ್ಮೀ ದೇವಿಗೆ ಪ್ರಿಯವಾದ ಕಾರಣ ಈ ಹೂಗಳು ಲಕ್ಷ್ಮೀ ದೇವಿ ಆರಾಧನೆಯಲ್ಲಿ ಬಹಳ ವಿಶೇಷವಾಗಿರುತ್ತದೆ. ಹಾಗಾಗಿ ಈ ಗಿಡದ ಹೂವು ಈ ಗಿಡ ವಿಶೇಷ ಆಗಿರುತ್ತದೆ.

ಈ ದಿನದ ಲೇಖನಿಯಲ್ಲಿ ನಾವು ಈ ಗಿಡದ ಬಗ್ಗೆ ಮಾತನಾಡುತ್ತಿರುವ ಕಾರಣ ಈ ಎಲೆ ಮತ್ತು ಹೂಗಳ ಕುರಿತು ಕೂಡ ತಿಳಿಯೋಣ ಬನ್ನಿ. ಈ ಮೊದಲೇ ಹೇಳಿದಂತೆ ಆಧ್ಯಾತ್ಮಿಕವಾಗಿ ಧಾರ್ಮಿಕವಾಗಿ ಲಕ್ಷ್ಮೀದೇವಿಗೆ ಪ್ರಿಯವಾದದ್ದು ಶಂಖಪುಷ್ಪದ ಹೂ ಹಾಗೆ ಆರೋಗ್ಯ ದ ಸಲುವಾಗಿಯೂ ಕೂಡ ಈ ಶಂಖಪುಷ್ಪದ ಹೂಗಳು ಮತ್ತು ಎಲೆಗಳು ಪ್ರಯೋಜನಕಾರಿಯಾಗಿದ್ದು, ಮಕ್ಕಳಿಗೆ ಜ್ಞಾಪಕ ಶಕ್ತಿ ಹೆಚ್ಚಿಸಲು ಉಪಯುಕ್ತಕಾರಿ ಶಂಖಪುಷ್ಪದ ಹೂಗಳು ಮತ್ತು ಎಲೆಗಳು.

ಇದರ ಎಲೆಗಳ ಸಹಾಯದಿಂದ ಕಷಾಯ ಮಾಡಿ ಕುಡಿಯಬಹುದು ಹಾಗೂ ಹೂಗಳ ಸಹಾಯದಿಂದ ಕೂಡ ಜ್ಯೂಸ್ ತಯಾರಿಸಿ ಕೊಂಡು ಹುರಿಯಬಹುದು ಜ್ಞಾಪಕ ಶಕ್ತಿ ಮಾತ್ರವಲ್ಲ ಹೆಣ್ಣು ಮಕ್ಕಳಿಗೆ ಕಾಡುವ ಹೊಟ್ಟೆ ನೋವಿಗೂ ಕೂಡ ಎಲೆಗಳ ಕಷಾಯ ಪ್ರಯೋಜನಕಾರಿಯಾಗಿ ಇದೆ. ಆದ್ದರಿಂದ ಈ ಎಲೆಗಳ ಕಷಾಯ ಹೂವುಗಳ ಜ್ಯೂಸ್ ನಿಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ.

ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಬಹಳಷ್ಟು ಅನಾರೋಗ್ಯ ಸಮಸ್ಯೆಗಳು ಕಾಡುತ್ತದೆ ಮತ್ತು ಗಾಯವಾಗುವುದು ಆಗಾಗ ಅನಾರೋಗ್ಯ ಸಮಸ್ಯೆಗಳು ಕಾಡುವುದು ಇದೆಲ್ಲವೂ ಮಕ್ಕಳಿಗೆ ಸಹಜ. ಯಾಕೆಂದರೆ ಮಕ್ಕಳು ಇನ್ನೂ ಕೂಡ ಸೂಕ್ಷ್ಮವಾಗಿ ಇರುತ್ತಾರೆ ಹಾಗೂ ಈ ದಿನಗಳಲ್ಲಿ ಅಂತೂ ಹವಾಮಾನ ಯಾವಾಗ ಯಾವ ಸ್ಥಿತಿಯಲ್ಲಿರುತ್ತದೆ ಎಂಬುದು ನಮಗೂ ಕೂಡ ತಿಳಿದಿರುವುದಿಲ್ಲಾ, ದೊಡ್ಡವರಿಗೆ ಆರೋಗ್ಯ ಕೆಡುತ್ತಾ ಇರುತ್ತದೆ ಆದ್ದರಿಂದ ಈ ಹೂಗಳಿಂದ ಮಾಡಿದ ಟೀ ಅಥವಾ ಕಷಾಯವನ್ನು ಮಕ್ಕಳಿಗೆ ಕುಡಿಸುವುದರಿಂದ ಚಿಕ್ಕಪುಟ್ಟ ಸಮಸ್ಯೆಗಳಿಂದ ಬಹಳ ಬೇಗ ಶಮನ ಪಡೆದುಕೊಳ್ಳಬಹುದು.

ದೊಡ್ಡವರು ಈ ಹೂಗಳ ಪ್ರಯೋಜನವನ್ನು ತೆಗೆದುಕೊಳ್ಳುವುದರಿಂದ ಡಿಪ್ರೆಶನ್ ಅಂತಹ ಸಮಸ್ಯೆಯಿಂದ ದೂರ ಉಳಿಯಬಹುದು ಜೊತೆಗೆ ಬ್ಲಡ್ ಪ್ರೆಶರ್ ಅಂತಹ ಸಮಸ್ಯೆ ಬರುವುದಿಲ್ಲ ಜತೆಗೆ ಸಕ್ಕರೆ ಕಾಯಿಲೆ ಕೂಡ ಬರುವುದಿಲ್ಲ.

ನಮ್ಮ ಪ್ರಕೃತಿ ನಮಗೆ ಎಂತಹ ವರವನ್ನು ನೀಡಿದ ನೋಡಿ ಒಂದೊಂದು ಗಿಡದಲ್ಲಿ ಒಂದೂ ಅನಾರೋಗ್ಯ ಸಮಸ್ಯೆಗಳಿಂದ ಪರಿಹಾರ ಮಾಡುವಂತಹ ಶಕ್ತಿಯನ್ನ ಅಡಗಿಸಿರುವ ಪ್ರಕೃತಿ ಮಾತೆಗೆ ನಾವು ನಿಜಕ್ಕೂ ಸದಾ ಆಕೆಯನ್ನು ನಾವು ಆರಾಧಿಸಬೇಕು.

ಈ ಶಂಖಪುಷ್ಪದ ಹೂಗಳನ್ನು ಇದು ಮಾರುಕಟ್ಟೆಯಲ್ಲಿ ಕೂಡ ಮಾರಾಟ ಮಾಡಲಾಗುತ್ತೆ ಹಾಗೆ ಈ ಗಿಡದ ಹೂವಿನ ಪುಡಿಯನ್ನು ನಾವು ಮಾರುಕಟ್ಟೆಯಲ್ಲಿ ಅಥವಾ ಮೆಡಿಕಲ್ ಶಾಪ್ ಗಳಲ್ಲಿ ಮಾರಾಟ ಮಾಡುವುದನ್ನು ನೋಡಬಹುದಾಗಿದೆ ಅಂತಹಾ ಅದ್ಭುತ ಪ್ರಯೋಜನವನ್ನು ಹೊಂದಿರುವ ಈ ಗಿಡದ ಎಲೆ ಮತ್ತು ಹೂಗಳಲ್ಲಿ ಅಧಿಕವಾದ ಔಷಧೀಯ ಗುಣ ಇರುವುದರಿಂದ ಇದರ ಬಳಕೆ ಹೆಚ್ಚುತ್ತಾ ಇದೆ.

ನೀವು ಮನೆಯಲ್ಲಿಯೂ ಕೂಡ ಈ ಗಿಡವನ್ನು ಬೆಳೆಸಬಹುದು ಹಾಗೆ ಇದಕ್ಕೆ ಶಂಖದ ಹೆಸರು ಬರುವುದಕ್ಕೆ ಕಾರಣ ಈ ಹೂಗಳು ಶಂಖದ ಆಕಾರವನ್ನು ಹೋಲುವುದರಿಂದ, ಇದಕ್ಕೆ ಶಂಕಪುಷ್ಪ ಅಂತ ಕರೆಯಲಾಗುತ್ತದೆ. ಈ ಗಿಡಗಳನ್ನು ಎಲ್ಲಿಯೇ ಸಿಕ್ಕರೂ ತಂದು ನಿಮ್ಮ ಮನೆಯ ಅಂಗಳದಲ್ಲಿಯೂ ಕೂಡಾ ಬೆಳೆಸಿಕೊಳ್ಳಿ ಹಾಗೂ ಇದು ಪ್ರಕೃತಿಯನ್ನು ಸ್ವಚ್ಛ ಮಾಡಲು ಕೂಡ ಕಾರಣವಾಗುತ್ತೆ ಅಂತಹ ಉತ್ತಮ ಗಿಡ ಇದಾಗಿದೆ.