ನಿಮ್ಮ ಅಂದ ಚೆಂದವನ್ನ ಕುರೂಪಗೊಳಿಸುವ ಮುಖದ ಬೊಂಗಿನ ಕಲೆ ಹೋಗಲು ಈ ಒಂದು ನೈಸರ್ಗಿಕ ಮನೆ ಮದ್ದು ಮಾಡಿ ಸಾಕು…

382

ಬಂಗು ಸಮಸ್ಯೆ ನಿವಾರಣೆಗೆ ಮನೆಯಲ್ಲೇ ಮಾಡಬಹುದಾದ ಮನೆಯ ಮದ್ದು ಇದು ಈ ಪರಿಹಾರ ಬಹಳ ಎಫೆಕ್ಟಿವ್ ಆಗಿ ಕೆಲಸ ಮಾಡುತ್ತೆ! ಅದರ ರಿಸಲ್ಟ್ ಪಡೆಯುವುದಕ್ಕೆ ನೀವು ಕೂಡ ಇದನ್ನೊಮ್ಮೆ ಪಾಲಿಸಿ ನೋಡಿ.ನಮಸ್ಕಾರಗಳು ತ್ವಚೆಯ ಮೇಲೆ ಉಂಟಾಗುವ ಈ ಕಪ್ಪು ಕಲೆಗಳನ್ನು ಹರಿಹರ ಮಾಡುವುದಕ್ಕೆ ಮನೆಮದ್ದು ಬೇಕೆಂದಲ್ಲಿ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಹೌದು ಈ ಮನೆಮದ್ದನ್ನು ಪಾಲಿಸುವುದರಿಂದ ಮುಖದ ಮೇಲೆ ಉಂಟಾಗಿರುವ ಪಿಗ್ಮೆಂಟೇಶನ್ ಸಮಸ್ಯೆ ಪರಿಹಾರ ಮಾಡಬಹುದು ಈ ಮನೆಮದ್ದು ಪಾಲಿಸುವುದಕ್ಕೆ ಬೇಕಾದ ಪದಾರ್ಥಗಳು ಯಾವುವು ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ .

ಪಿಗ್ಮೆಂಟೇಶನ್ ಸಮಸ್ಯೆ ಎಂಬುದು ನಿಮಗೆ ತ್ವಚೆಯ ಕಾಳಜಿ ಮಾಡದೇ ಹೋದಾಗ ಉಂಟಾಗುತ್ತದೆ ಮತ್ತು ಈ ಪಿಗ್ಮೆಂಟೇಶನ್ ಸಮಸ್ಯೆ ಕೆಲವರಿಗೆ ಹೆರಿಡಿಟಿ ಆಗಿ ಸಹ ಬರಬಹುದು.ಈ ಸಮಸ್ಯೆ ಒಮ್ಮೆ ಬಂದರೆ ಇದನ್ನು ನಿರ್ಲಕ್ಷ್ಯ ಮಾಡಿದಷ್ಟು ಇನ್ನಷ್ಟು ಹೆಚ್ಚುತ್ತಾ ಹೋಗುತ್ತದೆ ಆದರೆ ಇದಕ್ಕೆ ಚಿಕ್ಕಂದಿನಿಂದಲೂ ಪರಿಹಾರ ಮಾಡಿಕೊಂಡು ಬಂದರೆ ತಕ್ಷಣಕ್ಕೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಹೆಚ್ಚು ಕಷ್ಟಪಡಬೇಕಾಗಿಲ್ಲ ಇದಕ್ಕೆ ಮಾಡಬೇಕಾದ ಸರಳ ವಿಧಾನ ಏನು ಅಂದರೆ ಅದು ತ್ವಚೆಯ ಕಾಳಜಿ ಮಾಡುತ್ತಾ ಬರುವುದು ಮತ್ತು ಕೆಲವೊಂದು ಆಹಾರ ಪದಾರ್ಥಗಳನ್ನು ತಪ್ಪದೆ ಸೇವಿಸುವುದು.

ಈ ಮನೆಮದ್ದನ ಮಾಡಲು ಬೇಕಾಗಿರುವಂತಹ ಪದಾರ್ಥಗಳು ಹೀಗಿದೆ ನೋಡಿ ಜೇನುತುಪ್ಪ ಜಾಯಿಕಾಯಿ ಹಾಲು ಅಥವಾ ಹಾಲಿನ ಪುಡಿ ವಿಟಮಿನ್ ಇ ಕ್ಯಾಪ್ಸೂಲ್ ಇದರಲ್ಲಿ ಬಳಸಿರುವ ಪದಾರ್ಥಗಳು ಎಲ್ಲವೂ ನೈಸರ್ಗಿಕವಾದದ್ದು ಮತ್ತು ಈ ಮನೆಮದ್ದು ಸಹ ಯಾವುದೇ ಅಡ್ಡಪರಿಣಾಮಗಳನ್ನು ಉಂಟು ಮಾಡದೆ ತ್ವಚೆಯ ಕಾಳಜಿ ಮಾಡುತ್ತದೆ. ಜಾಯಿಕಾಯಿ ಆರೋಗ್ಯಕ್ಕೂ ಒಳ್ಳೆಯದು ಚರ್ಮದ ಆರೋಗ್ಯಕ್ಕೂ ಒಳ್ಳೆಯದು ಹೇಗೆ ಅಂದರೆ ಜಾಯಿಕಾಯಿಯಲ್ಲಿ ರುವ ಅಂಶ ಕಪ್ಪುಕಲೆಗಳನ್ನು ತೆಗೆದುಹಾಕಲು ಪಿಗ್ಮೆಂಟೇಶನ್ ತೊಲಗಿಸಲು ಸಹಕಾರಿ ಆಗಿದೆ.

ಜಾಯಿಕಾಯಿಯನ್ನು ನೀರಿನೊಂದಿಗೆ ತೇಯಬೇಕು ಬಳಿಕ ಇದಕ್ಕೆ ಹಾಲಿನ ಪುಡಿ ಅಥವಾ ಹಾಲು ಮತ್ತು ಜೇನುತುಪ್ಪ ವಿಟಮಿನ್ ಇ ಕ್ಯಾಪ್ಸೂಲ್ ಮಿಶ್ರ ಮಾಡಿ, ಈ ಪೇಸ್ಟ್ ಅನ್ನು ಮುಖದ ಮೇಲೆ ಪ್ಯಾಕ್ ರೀತಿ ಹಾಕಿಕೊಳ್ಳಬೇಕು ಬಳಿಕ ಈ ಪ್ಯಾಕ್ ಒಣಗಿದ ಮೇಲೆ ಇದನ್ನು ಬೆಚ್ಚಗಿನ ನೀರಿನಿಂದ ಸ್ವಚ್ಚ ಮಾಡಬೇಕು ಅಥವಾ ತಣ್ಣೀರಿನಿಂದ ಮುಖವನ್ನು ಸ್ವಚ್ಛ ಮಾಡಬೇಕು.

ಈ ಪರಿಹಾರವನ್ನು ಹೇಗೆ ಮಾಡಬೇಕೆಂದರೆ ಸ್ನಾನಕ್ಕೂ ಮೊದಲು ಪಾಲಿಸಿ ಹಾಗೂ ಎ ಪರಿಹಾರ ಮಾಡಿದ ನಂತರ ಆ ದಿನ ತ್ವಚೆಗೆ ಸೋಪ್ ಹಚ್ಚಬೇಡಿ ಆದರೆ ಮುಖವನ್ನು ಮಾಯಿಶ್ಚರೈಸ್ ಮಾಡಿ ಪ್ರತೀ ಬಾರಿ ಮುಖ ತೊಳೆದ ಆಗಲೂ ಮುಖವನ್ನ ಒಳ್ಳೆಯ ಮೊಶ್ಚಿರೈಸರ್ ಕ್ರೀಮ್ ನಿಂದ ಮುಖವನ್ನ ಮಾಯಿಶ್ಚರೈಸ್ ಮಾಡಿ ಮತ್ತು ಆಚೆ ಹೋಗುವಾಗ ಅರ್ಧ ಗಂಟೆಯ ಮುನ್ನ ಮುಖಕ್ಕೆ ಸನ್ ಸ್ಕ್ರೀನ್ ಲೋಷನ್ ಹಚ್ಚುವುದನ್ನು ಮರೆಯಬೇಡಿ.

ಹೌದು ಸನ್ ಸ್ಕ್ರೀನ್ ಲೋಷನ್ ಮುಖಕ್ಕೆ ಹಚ್ಚುವುದರಿಂದ ಪಿಗ್ಮೆಂಟೇಶನ್ ಸಮಸ್ಯೆ ಇನ್ನಷ್ಟು ಹೆಚ್ಚುವುದಿಲ್ಲ ಹಾಗೆ ಪ್ರತಿದಿನ ವಿಟಮಿನ್ ಸಿ ಜೀವಸತ್ವ ಇರುವ ಹಣ್ಣುಗಳನ್ನು ಸೇವಿಸಿ ಹಾಗೂ ಇದರಲ್ಲಿ ಬಳಸಿರುವಂತಹ ವಿಟಮಿನ್ ಇ ಕ್ಯಾಪ್ಸೂಲ್ ತ್ವಚೆಯನ್ನು ಪೋಷಣೆ ಮಾಡುತ್ತದೆ ಮತ್ತು ತ್ವಚೆಯ ಕಾಳಜಿ ಮಾಡುತ್ತದೆ

ಜೇನುತುಪ್ಪವೂ ಸಹ ತ್ವಚೆಯ ಮೇಲಿರುವ ಕಲೆಗಳನ್ನು ನಿವಾರಣೆ ಮಾಡಲು ಸಹಕಾರಿಯಾಗಿದೆ ಹಾಗೂ ಹಾಲಿನ ಪುಡಿ ಅಥವಾ ಹಾಲು ತ್ವಚೆಯ ಡ್ರೈನೆಸ್ ಅನ್ನು ದೂರ ಮಾಡುತ್ತದೆ. ಈ ಸರಳ ಪರಿಹಾರ ಪಿಗ್ಮೆಂಟೇಶನ್ ಸಮಸ್ಯೆಗೆ ಎಫೆಕ್ಟಿವ್ ಆಗಿ ಕೆಲಸ ಮಾಡುತ್ತದೆ ಇದನ್ನ ಪಾಲಿಸುವುದರ ಜೊತೆಗೆ ಪ್ರತಿದಿನ ಹೆಚ್ಚು ನೀರು ಕುಡಿಯಿರಿ ತರಕಾರಿಗಳನ್ನು ಸೇವಿಸಿ ತುಂಬಾನೆ ಒಳ್ಳೆಯದು.