ನಮಸ್ಕಾರ ಸ್ನೇಹಿತರೆ ಇವತ್ತಿನ ಮಾಹಿತಿಯಲ್ಲಿ ನಿಮಗೆಲ್ಲರಿಗೂ ಉಪಯೋಗವಾಗುವಂತಹ ವಿಚಾರವೊಂದರ ಬಗ್ಗೆ ಈ ದಿನದ ಲೇಖನದಲ್ಲಿ ತಿಳಿಸಲಿದ್ದೇವೆ ಹೌದು ಸಾಮಾನ್ಯವಾಗಿ ಮನೆ ಕಟ್ಟಬೇಕು ಎಂಬ ಕನಸು ಪ್ರತಿಯೊಬ್ಬರದ್ದೂ ಆಗಿರುತ್ತದೆ ಆದರೆ ನಾವು ಚಿಕ್ಕ ವಯಸ್ಸಿನಲ್ಲಿ ಅಂದುಕೊಳ್ಳುವ ತಾ ಇರುತ್ತೇವೆ ಈ ಬಾಡಿಗೆ ಮನೆ ಸ್ವಂತ ಮನೆ ಇವೆಲ್ಲವೂ ಚಿಕ್ಕ ವಯಸ್ಸಿನವರಿಗೆ ತಿಳಿದಿರುವುದಿಲ್ಲ ಹಾಗೆ ಬಾಡಿಗೆ ಮನೆಯಲ್ಲಿ ಇದ್ದರೆ ಮನೆ ಬದಲಾಯಿಸುತ್ತಾ ಬದಲಾಯಿಸುತ್ತಾ ಹೊಸ ಹೊಸ ಮನೆಗೆ ಹೋಗಬಹುದು ಅಂತ ಆದರೆ ಸ್ವಂತ ಮನೆ ಅಲ್ಲಿ ಇರುವ ನೆಮ್ಮದಿಯೇ ಬೇರೆ. ಆಗ ಸ್ನೇಹಿತರೆ ಈ ಸ್ವಂತ ಮನೆಯಲ್ಲಿ ನಮ್ಮದೇ ಆದಂತಹ ಆ ಗೂಡಿನಲ್ಲಿ ನಮ್ಮವರೊಂದಿಗೆ ಇರುವ ಆ ಸಂತೋಷದ ದಿನಗಳು ಬಹಳ ನೆಮ್ಮದಿ ಸಂತಸ ನೀಡುತ್ತದೆ.
ಆದರೆ ಸ್ವಂತ ಮನೆ ಹೊಂದುವುದು ಅಷ್ಟೊಂದು ಸುಲಭವೇನೂ ಅಲ್ಲ ಹೌದು ಹಿಂದಿನ ಕಾಲದಲ್ಲಿ ತಮ್ಮದೇ ಆದ ಮನೆಗಳಲ್ಲಿ ಪೂರ್ವಜರು ಇರುತ್ತ ಇದ್ದರು ತಮ್ಮದೆಯಾದ ಸೂರನ್ನ ಹೊಂದಿ ಆ ಮನೆಯಲ್ಲಿ ಕಷ್ಟವೋ ಸುಖವೋ ಇರುವುದರಲ್ಲಿ ಜೀವನ ಸಾಗಿಸುತ್ತಾ ಬರುತ್ತಿದ್ದಾರೆ ಆದರೆ ಇವತ್ತಿನ ದಿವಸ ಆ ಹಳ್ಳಿ ಬಿಟ್ಟು ಪಟ್ಟಣಕ್ಕೆ ಸೇರಿರುವ ಮಂದಿ ಪಟ್ಟಣದಲ್ಲಿಯೇ ತಮ್ಮದೇ ಆದ ನಿವೇಶನದಲ್ಲಿ ತಮ್ಮ ಕನಸಿನ ಮನೆ ಹೊಂದಬೇಕೋ ಅಥವಾ ತಾವು ಕೆಲಸ ಮಾಡುತ್ತಾ ಇರುವ ಜಾಗದಲ್ಲಿ ತಮ್ಮ ಸ್ವಂತ ಮನೆ ಹೊಂದಬೇಕು ಅನ್ನುವ ಕನಸುಗಳನ್ನ ಕಟ್ಟಿಕೊಂಡಿರುತ್ತಾರೆ ಹಾಗಾಗಿ ಈ ಮನೆ ಕಟ್ಟಿಸುವಾಗ ಪಾಲಿಸಬೇಕಾಗಿರುವ ಕೆಲವೊಂದು ನಿಯಮಗಳ ಬಗ್ಗೆ ನಾವು ತಿಳಿಸಲಿದ್ದೇವೆ. ಇನ್ನು ನೀವೇನಾದರೂ ಗ್ರಾಮ ಪಂಚಾಯಿತಿ ಅಡಿಯಲ್ಲಿರುವ ನಿವೇಶನದಲ್ಲಿ ಮನೆ ಕಟ್ಟಿಸಬೇಕು ಅಂತಿದ್ದರೆ ನೀವು ಪಾಲಿಸಲೇಬೇಕಾಗಿ ಬರುವ ಮತ್ತು ತಿಳಿದುಕೊಂಡಿರ ಬೇಕಾಗಿರುವ ಕೆಲವೊಂದು ವಿಚಾರಗಳ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ ಇದು ಪ್ರತಿಯೊಬ್ಬರಿಗೂ ಉಪಯೋಗವಾಗುವಂತಹ ಮಾಹಿತಿ ಆಗಿರುತ್ತದೆ ಯಾಕೆ ಅಂದರೆ ಸ್ವಂತ ಮನೆ ಖರೀದಿಸುವಾಗ ಅಥವಾ ನಿವೇಶನ ಖರೀದಿಸುವಾಗ ಮೋಸಹೋಗುವ ಸಾಧ್ಯತೆ ಬಹಳಷ್ಟು ಇರುತ್ತದೆ ಹೌದು ಇಂದಿನ ಸಮಾಜದಲ್ಲಿ ನಾವು ನಂಬಿಕೆ ಯಾರ ಮೇಲೆ ಬಿಡಬೇಕು ಯಾರನ್ನು ನಂಬಬಾರದು ಇವೆಲ್ಲವೂ ಬಹಳ ಕಷ್ಟದ ಮಾತಾಗಿದೆ.
ಆದ್ದರಿಂದ ಸ್ವಂತ ನಿವೇಶನ ಅಥವಾ ಸ್ವಂತ ಮನೆ ಹೊಂದುವ ಮುನ್ನ ಈ ಮಾಹಿತಿ ತಿಳಿಯಿರಿ ಅದೇ ಈ ಮೊದಲೇ ಹೇಳಿದಂತೆ ನಿಮ್ಮ ಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇದ್ದರೆ ನೀವು ಮನೆ ಖರೀದಿಸುವಾಗ ಈ ಕೆಲವೊಂದು ನಿಯಮಗಳನ್ನು ತಿಳಿದಿರಿ ಮನೆ ಖರೀದಿಸುವ ಮುನ್ನ ಅಥವಾ ನಿಮ್ಮ ಸ್ವಂತ ನಿವೇಶನದಲ್ಲಿ ಮನೆಯನ್ನು ಕಟ್ಟಿಸುವ ಮುನ್ನ ನಿಮ್ಮ ಬಳಿ ಇರಬೇಕಾಗಿರುವ ಕೆಲವೊಂದು ದಾಖಲಾತಿಗಳು ಯಾವುವು ಅಂತ ತಿಳಿಯೋಣ ಬನ್ನಿ.*ಮನೆಯ ಹಕ್ಕುಪತ್ರ :ಹೌದು ಸ್ನೇಹಿತರೇ ಈ ಮನೆಯ ಹಕ್ಕು ಪತ್ರವನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ ಇದನ್ನು ನೀವು ಗ್ರಾಮ ಪಂಚಾಯಿತಿಯಿಂದ ಪಡೆದುಕೊಳ್ಳಬೇಕಾಗುತ್ತದೆ.*ಆಧಾರ ಕಾರ್ಡ್ ಇನ್ನೂ ಸ್ಥಳೀಯ ಸಿವಿಲ್ ಇಂಜಿನಿಯರ್ ಅವರಿಂದ ಬ್ಲೂಪ್ರಿಂಟ್ ಪಡೆದುಕೊಳ್ಳುವುದು ಸಹ ಅಥವಾ ಮಾಡಿಸಿಕೊಳ್ಳುವುದು ಸಹ ಉತ್ತಮ ಯಾಕೆಂದರೆ ಈ ರೀತಿ ಬ್ಲೂಪ್ರಿಂಟ್ ಪಡೆದು ಮನೆ ಕಟ್ಟಿಸಿದರೆ ಬಹಳಷ್ಟು ಜಾಗ ನಿಮಗೆ ಉಳಿಯುತ್ತದೆ ಮತ್ತು ಮನೆ ಅಚ್ಚುಕಟ್ಟಾಗಿ ನಿರ್ಮಾಣವಾಗುತ್ತದೆ.*ಮುಖ್ಯವಾಗಿ ಮನೆಯ ಕಂದಾಯ ರಶೀದಿ ಹೌದು ಈ ಮನೆಯ ಕಂದಾಯ ರಶೀದಿ ಸಹ ಅವಶ್ಯಕವಾಗಿ ಇರಬೇಕಾಗಿರುವ ದಾಖಲಾತಿ.*ನಿಮ್ಮ ನಿವೇಶನದ ಫೋಟೋ ಅಥವಾ ಖಾಲಿ ಜಾಗದ ಫೋಟೋ.
*ಶೌಚಾಲಯ ಹೇಳಿಕೆ ಪತ್ರ ಅಂದರೆ ಈ ಶೌಚಾಲಯ ಹೇಳಿಕೆ ಪತ್ರವನ್ನ ನೀವು ಗ್ರಾಮ ಪಂಚಾಯಿತಿಯಿಂದ ಪಡೆದುಕೊಂಡರೆ ನಿಮಗೆ ಸರ್ಕಾರದ ಕಡೆಯಿಂದ ಹನ್ನೆರಡು ಸಾವಿರ₹ಸಹಾಯಧನ ನೀವು ಪಡೆದುಕೊಳ್ಳಬಹುದು.ಇನ್ನು ನೀವು ಮನೆ ಕಟ್ಟುವ ಮುನ್ನ ಈ ಮೇಲೆ ತಿಳಿಸಿದ ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ಗ್ರಾಮ ಪಂಚಾಯಿತಿಗೆ ಹೋಗಿ ಸಲ್ಲಿಸಿ ಬರಬೇಕು ನಂತರ ಪಿಡಿಒ ಅವರು ಇದನ್ನೆಲ್ಲ ಪರಿಶೀಲಿಸಿ ಆ ಗ್ರಾಮ ಪಂಚಾಯಿತಿಯ ಮೆಂಬರ್ ಗಳ ಜೊತೆ ಮೀಟಿಂಗ್ ಮಾಡಿ ನಂತರ 30ದಿವಸಗಳ ಕಾಲ ಸಮಯವಿರುತ್ತದೆ ಈ ವೇಳೆ ಯಾರಾದರೂ ನಿಮ್ಮ ನಿವೇಶನ ಕುರಿತು ಅಥವಾ ನೀವು ಮನೆ ಕಟ್ಟುವ ಕುರಿತು ಆಕ್ಷೇಪಣೆ ಮಾಡಿದರೆ ನಿಮಗೆ ಆ ಜಾಗದಲ್ಲಿ ಮನೆ ಕಟ್ಟುವ ಪರವಾಣಿಗೆ ದೊರೆಯುವುದಿಲ್ಲ ಇನ್ನು ಯಾವ ಆಕ್ಷೇಪಣೆಯೂ ಎದುರಾಗಿಲ್ಲ ಅಂದರೆ ನಿಮಗೆ ಮನೆ ಕಟ್ಟಲು ಗ್ರಾಮ ಪಂಚಾಯಿತಿಯಿಂದ ಪರವಾನಿಗೆ ಬರುತ್ತದೆ ಇನ್ನು ನೀವು ಮನೆ ಕಟ್ಟುವ ನಿವೇಶನಕ್ಕೆ ಗ್ರಾಮ ಪಂಚಾಯಿತಿಯ ಪಿಡಿಒ ಅವರು ಭೇಟಿ ನೀಡಿ ಕೆಲವೊಂದು ನಿರ್ಬಂಧಗಳನ್ನು ಸಹ ನಿಮಗೆ ಇರಬಹುದು ಅಥವಾ ಕೆಲವೊಂದು ಬದಲಾವಣೆಯನ್ನು ಮಾಡಿಸಬಹುದು ಹೀಗೆ ಈ ಎಲ್ಲ ಮಾಹಿತಿಯನ್ನು ನೀವು ಸ್ವಂತ ಮನೆಯನ್ನ ಹೊಂದಬೇಕೆಂದರೆ ತಿಳಿದಿರಬೇಕು ಮತ್ತು ಈ ಮೇಲೆ ತಿಳಿಸಿದ ದಾಖಲಾತಿ ನಿಮ್ಮ ಜೊತೆ ಇರಬೇಕಾಗುತ್ತದೆ.
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.