ನಿಮ್ಮ ತಲೆಯಲ್ಲಿ ಹೊಟ್ಟು ನಿವಾರಿಸಲು , ಜೀರ್ಣ ಕ್ರಿಯೆ ಸುಧಾರಿಸಲು , ಈ ಮೂರು ಕಾಯಿ ಪುಡಿಯನ್ನ ಬಳಸಿ ನೋಡಿ ಸಂಜೀವಿನಿ ಹಾಗೆ ಕೆಲಸ ಮಾಡುತ್ತದೆ..

244

ತ್ರಿಫಲ ಚೂರ್ಣ ಇದು ಔಷಧಿಯಲ್ಲಾ, ಇದೊಂದು ಆಹಾರ ಪದಾರ್ಥ ಆದರೆ ಇದರ ಪ್ರಯೋಜನಗಳೇನು, ಇದನ್ನು ಯಾವಾಗ ತಿನ್ನಬೇಕು ಇದರ ಸೇವನೆಯಿಂದ ಆಗುವ ಲಾಭಗಳೇನು!ನಮಸ್ಕಾರಗಳು ಓದುಗರೆ, ನಾವು ಸಾಮಾನ್ಯವಾಗಿ ತಿಂದ ಆಹಾರ ಜೀರ್ಣ ಆಗಿಲ್ಲ ಅಂದಾಗ ಹೊಟ್ಟೆ ಉಬ್ಬರಿಸಿದೆ ಅಂತ ಹೇಳ್ತೇವೆ ಅಥವಾ ಅಜೀರ್ಣ ಆಗಿದೆ ಅಂತ ಹೇಳ್ತೇವೆ. ಅಂತಹ ಸಮಯದಲ್ಲಿ ಹೊಟ್ಟೆ ನೋವು ಬರುವುದು ಅಥವಾ ಡೀಸೆಂಟ್ರಿ ಸಮಸ್ಯೆ ಎದುರಾಗುವುದು ವಾಂತಿ ಆಗುವುದು ಹೀಗೆಲ್ಲ ಆಗುತ್ತೆ ಇನ್ನು ಕೆಲವರಿಗೆ ಅಜೀರ್ಣವಾದಾಗ ವಿಪರೀತ ಗ್ಯಾಸ್ಟ್ರಿಕ್ ಸಮಸ್ಯೆ ಕೂಡ ಎದುರಾಗುತ್ತೆ.

ಹೌದು ಅಜೀರ್ಣ ಯಾಕೆ ಆಗುತ್ತೆ ಅಂದರೆ ನಮ್ಮ ಜೀರ್ಣಕ್ರಿಯೆ ಸರಿಯಾಗಿ ಆಗದೆ ಹೋದಾಗ ಈ ನಮ್ಮ ಡೈಜೆಸ್ಟಿವ್ ಸಿಸ್ಟಮ್ ಅಂದರೆ ಜೀರ್ಣಾಂಗ ವ್ಯವಸ್ಥೆ ಏನಿದೆ ಅದು ಸರಿಯಾಗಿ ಕೆಲಸ ಮಾಡದೆ ಹೋದಾಗ ತಿಂದ ಆಹಾರ ಜೀರ್ಣವಾಗುವುದಿಲ್ಲ.ಯಾಕೆ ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬ ಪ್ರಶ್ನೆಗೂ ಕೂಡ ನಾವು ತೆಗೆದುಕೊಳ್ಳುವ ಆಹಾರ ಕಾರಣವಾಗಿರುತ್ತದೆ ಮತ್ತು ನಮ್ಮ ಜೀವನ ಶೈಲಿಯು ಕಾರಣವಾಗಿರುತ್ತದೆ.

ಹಾಗಾಗಿ ನಾವು ತಿನ್ನುವ ಆಹಾರ ಮೊದಲು ಸರಿಯಾಗಿರಬೇಕು ಜೊತೆಗೆ ನಮ್ಮ ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕೆಲಸ ಮಾಡಬೇಕೆಂದರೆ ಅದಕ್ಕೂ ಪರಿಹಾರವಿದೆ ಅದೇನೆಂದರೆ ಈ ತ್ರಿಫಲ ಚೂರ್ಣ.ಹೌದು ತ್ರಿಫಲಚೂರ್ಣ ಹೇಗೆ ತುಂಬ ಸುಲಭವಾಗಿ ಕರ್ತವ್ಯ ಹಾಗೆ ಈ ತ್ರಿಫಲ ಚೂರ್ಣವನ್ನು ನಾವು ಬಳಕೆ ಮಾಡುತ್ತಾ ಬಂದರೆ ತೆಗೆದುಕೊಳ್ಳುತ್ತಾ ಬಂದರೆ ನಮ್ಮ ಜೀರ್ಣಾಂಗ ಕ್ರಿಯೆ ಕೂಡ ಅಷ್ಟೇ ಸರಾಗವಾಗಿ ನಡೆಯುತ್ತದೆ ಮತ್ತು ಇದರಿಂದ ನಾವು ತೆಗೆದುಕೊಂಡ ಆಹಾರದ ಸಂಪೂರ್ಣ ಪ್ರಯೋಜನವನ್ನು ನಾವು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ತ್ರಿಫಲ ಚೂರ್ಣ ಅಂದರೆ ಇದು ಔಷಧಿಯಲ್ಲ ಆದರೆ ಇದೊಂದು ಆಹಾರ ಪದಾರ್ಥ ಪ್ರತಿ ಬಾರಿ ಊಟದ ಬಳಿಕ ಈ ತ್ರಿಫಲ ಚೂರ್ಣವನ್ನು ತಿನ್ನುತ್ತಾ ಬಂದರೆ ಜೀರ್ಣಾಂಗ ವ್ಯವಸ್ಥೆ ಸರಿಯಾಗಿರುತ್ತದೆ ಜೀರ್ಣಕ್ರಿಯೆ ಸರಿಯಾಗಿ ನಡೆದು ನಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ.ಹಾಗಾಗಿ ಸಹಜಗುಣದ ಪ್ರಯೋಜನಗಳ ಬಗ್ಗೆ ಇಂದಿನ ಈ ಮಾಹಿತಿಯನ್ನು ತಿಳಿಸಿಕೊಡಲಿದ್ದೇವೆ, ಈ ತ್ರಿಫಲ ಚೂರ್ಣ ಅಂದರೆ 3 ಹಣ್ಣುಗಳಿಂದ ಮಾಡಲ್ಪಟ್ಟ ಚೂರ್ಣ ಅಂದರೆ ನೆಲ್ಲಿಕಾಯಿ ತಾರೆಕಾಯಿ ಮತ್ತು ಅಳಲೆಕಾಯಿ.

ಸಾಮಾನ್ಯವಾಗಿ ಈ ನೆಲ್ಲಿಕಾಯಿಯಲ್ಲಿ ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದಕ್ಕೆ ಅಗತ್ಯವಾಗಿರುವಂತಹ ವಿಟಮಿನ್ ಸಿ ಜೀವಸತ್ವ ಇದೆ, ಇದು ರೋಗನಿರೋಧಕ ಶಕ್ತಿ ಹೆಚ್ಚಿಸುವುದಲ್ಲದೇ ಶರೀರದ ಸಂಪೂರ್ಣ ಆರೋಗ್ಯ ವ್ಯವಸ್ಥೆಯನ್ನು ಉತ್ತಮವಾಗಿರಿಸಿಕೊಳ್ಳಲು ಸಹಕಾರಿಯಾಗಿರುತ್ತೆ.ಎರಡನೆಯದಾಗಿ ತಾರೆಕಾಯಿ ಇದು ಜೀರ್ಣಾಂಗ ವ್ಯವಸ್ಥೆಯನ್ನು ಸರಿಯಾಗಿಟ್ಟುಕೊಳ್ಳಲು ಸಹಾಯ ಮಾಡುತ್ತ ಹೌದು ತಿಂದ ಆಹಾರ ಸರಿಯಾಗಿ ಜೀರ್ಣವಾಗಬೇಕೆಂದರೆ ಅದಕ್ಕೆ ಈ ತಾರೆಕಾಯಿ ಸಹಾಯ ಮಾಡುತ್ತೆ.

ಹೌದು ತಿಂದ ಆಹಾರ ಜೀರ್ಣವಾಗುವುದಿಲ್ಲ ಅಂದರೆ ಅರ್ಧ ಚಮಚದಷ್ಟು ತ್ರಿಫಲ ಚೂರ್ಣವನ್ನು ತಿನ್ನಬೇಕು ಇದರಿಂದ ಅಜೀರ್ಣ ಆದ ಬಳಿಕ ಉಂಟಾಗುವ ಹೊಟ್ಟೆ ಉರಿ ಎದೆ ಉರಿ ಇದೆಲ್ಲ ಸಮಸ್ಯೆ ನಿವಾರಣೆ ಮಾಡುತ್ತದೆ. ಈ ಎದೆ ಉರಿ ಹೊಟ್ಟೆ ಉರಿ ಇದನೆಲ್ಲ ಪರಿಹಾರ ಮಾಡುವಲ್ಲಿ ಈ ತಾರೆಕಾಯಿ ಹೆಚ್ಚು ಸಹಕಾರಿಯಾಗಿದ್ದು ಇದು ಜೀರ್ಣ ಶಕ್ತಿಯನ್ನು ಹೆಚ್ಚಿಸಿ ತಿಂದ ಆಹಾರವನ್ನು ಸಂಪೂರ್ಣವಾಗಿ ಜೀರ್ಣವಾಗುವಂತೆ ಮಾಡಲು ಸಹಕಾರಿಯಾಗಿರುತ್ತೆ.

ಮೂರನೆಯದಾಗಿ ತ್ರಿಫಲಚೂರ್ಣ ದ ಮುಖ್ಯ ಫಲ ಇದು ಅಳಲೆಕಾಯಿ, ಇದನ್ನು ಹಿರಿಯರು ತಾಯಿ ಗೆ ಹೋಲಿಕೆ ಮಾಡುತ್ತಿದ್ದರು ಯಾಕೆಂದರೆ ಈ ಅಳಲೆಕಾಯಿಯನ್ನು ಅಂದಿನ ಕಾಲದಲ್ಲಿ ಹಿರಿಯರು ಯಾವುದೇ ಸಮಸ್ಯೆ ಬಂದರೂ ಇದರ ಪ್ರಯೋಜನ ಪಡೆದುಕೊಂಡು ಬಂದಿರುವ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳುತ್ತಿದ್ದರಂತೆ. ಹಾಗಾಗಿ ಹೇಗೆ ತಾಯಿ ಮಗುವನ್ನು ಕಳಚಿ ಮಾಡ್ತಾಳೆ, ಹಾಗೆ ಈ ಅಳಲೆಕಾಯಿ ನಮ್ಮ ಆರೋಗ್ಯವನ್ನು ನಮ್ಮ ಶರೀರವನ್ನು ಕಾಳಜಿ ಮಾಡುವ ಕಾರಣ ಇದನ್ನು ಆರೋಗ್ಯವೃದ್ಧಿಗೆ ಬಳಸಿಕೊಳ್ಳಲಾಗುತ್ತಿತ್ತು, ಇದೇ ತ್ರಿಫಲ ಚೂರ್ಣ ದ ಕುರಿತು ಚಿಕ್ಕ ಮಾಹಿತಿ.