Ad
Home ಅರೋಗ್ಯ ನಿಮ್ಮ ದಡೂತಿ ದೇಹದ ತೂಕವನ್ನ ಕೇವಲ ಹತ್ತೇ ದಿನದಲ್ಲಿ ಕಡಿಮೆ ಮಾಡಿಕೊಳ್ಳಲು ಸೇವಿಸಿ ನೋಡಿ ಸಾಕು,ಬದಲಾವಣೆ...

ನಿಮ್ಮ ದಡೂತಿ ದೇಹದ ತೂಕವನ್ನ ಕೇವಲ ಹತ್ತೇ ದಿನದಲ್ಲಿ ಕಡಿಮೆ ಮಾಡಿಕೊಳ್ಳಲು ಸೇವಿಸಿ ನೋಡಿ ಸಾಕು,ಬದಲಾವಣೆ ಖಚಿತವಾಗಿ ಆಗುತ್ತೆ….

ತೂಕ ಇಳಿಸಿಕೊಳ್ಳಬೇಕಾ? ಹಾಗಾದ್ರೆ ನೈಸರ್ಗಿಕವಾಗಿ ಮನೆಯಲ್ಲಿಯೇ ದೊರೆಯುವ ಪದಾರ್ಥಗಳಿಂದ ಹೊಸದಾದ ಮನೆಮದ್ದು ಮಾಡಿ ಸೇವಿಸುತ್ತಾ ಬನ್ನಿ ಇದರಿಂದ ನಿಮ್ಮ ತೂಕ ಮತ್ತು ದೇಹದಲ್ಲಿ ಶೇಖರಣೆಯಾಗಿರುವ ಕೊಬ್ಬು ಕರಗಿ ಸ್ಲಿಮ್ಮಾಗಿ ಕಾಣ್ತೀರಾ.ನಮಸ್ಕಾರ ದಪ್ಪಾ ಇದ್ದೋರಿಗೆ ಸಣ್ಣ ಆಗುವ ಆಸೆ ಸಣ್ಣ ಇದ್ದವರಿಗೆ ದಪ್ಪಾ ಆಗುವ ಆಸೆ, ಇದಕ್ಕಾಗಿ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಾ ಇರುತ್ತಾರೆ ಅಲ್ವಾ.

ನೀವೇನಾದರೂ ಸಣ್ಣ ಆಗಬೇಕು ಈ ಮಾಹಿತಿ ನಿಮಗಾಗಿ ಕಣ್ರಿ ಈ ಲೇಖನವನ್ನ ಸಂಪೂರ್ಣವಾಗಿ ತೊರೆದು ದೇಹದಲ್ಲಿ ಶೇಖರಣೆಯಾಗಿರುವ ಕೊಬ್ಬನ್ನು ಕರಗಿಸಿ, ಜೊತೆಗೆ ತೂಕವನ್ನ ಕಡಿಮೆ ಮಾಡಿಕೊಂಡು ಆರೋಗ್ಯಕರವಾಗಿರಿ ಮುಂದಿನ ದಿನಗಳಲ್ಲಿ.ಹೌದು ಏನಿದು ಆರೋಗ್ಯಕರವಾಗಿರಿ ಅಂತ ಇದ್ದಾರೆ ಅಂದುಕೊಳ್ಳಬೇಡಿ, ಇಂದು ಮಾರುಕಟ್ಟೆಯಲ್ಲಿ ಸಾಕಷ್ಟು ವಿಧದ ಡ್ರಿಂಕ್ ಗಳು ಮಾತ್ರೆಗಳು ಟ್ರೀಟ್ ಮೆಂಟ್ ಗಳು ದೊರೆಯುತ್ತಿದೆ ಇದೆಲ್ಲವೂ ಸಣ್ಣ ಆಗುವುದಕ್ಕಾಗಿ ಮತ್ತು ಸಣ್ಣ ಏನೋ ಆಗುತ್ತೀರಾ. ಆದರೆ ಸಣ್ಣ ಆದ ಮೇಲೆ ಏನೆಲ್ಲಾ ಸೈಡ್ ಎಫೆಕ್ಟ್ಗಳೂ ಸಿಗುತ್ತೆ ಗೊತ್ತಾ ಹೌದು ಸಣ್ಣ ಆಗುವುದರ ಜೊತೆಗೆ ಈ ಎಲ್ಲ ರೋಗಗಳು ಫ್ರೀ ನೋಡಿ ಇಂತಹ ದಾರಿ ನಿಮಗೆಲ್ಲಾ ಬೇಕಾ.

ಆದ್ದರಿಂದ ಆರೋಗ್ಯಕರವಾಗಿ ಸಣ್ಣ ಆಗಿ, ಸಣ್ಣ ಆದಮೇಲೂ ಸದಾ ಆರೋಗ್ಯಕರವಾಗಿ ಇರಿ ಇದಕ್ಕಾಗಿ ನಾವು ಹೇಳುವಂತಹ ಪರಿಹಾರವನ್ನು ಮಾಡಿ ಇದರಿಂದ ಖಂಡಿತವಾಗಿಯೂ ನಿಮ್ಮ ತೂಕ ಗಣನೀಯವಾಗಿ ಕಡಿಮೆ ಆಗುವುದರ ಜೊತೆಗೆ ನಿಮ್ಮ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಮತ್ತು ಮುಂದಿನ ದಿನಗಳಲ್ಲಿ ಫಿಟ್ ಮತ್ತು ಫೈನ್ ಆಗಿ ಇರುತ್ತೀರ.

ಸಣ್ಣ ಆಗುವುದಕ್ಕೆ ಮನೆ ಮದ್ದು ಇದೆ ಇದಕ್ಕಾಗಿ ಬೇಕಾಗಿರುವುದು ಬೆಳ್ಳುಳ್ಳಿ ಶುಂಠಿ ನಿಂಬೆ ಹಣ್ಣು ಜೀರಿಗೆ ಕಾಫಿಪುಡಿ…ಮೊದಲಿಗೆ ಕುಡಿವ ನೀರನ್ನು ತೆಗೆದುಕೊಂಡು ಅದನ್ನು ಬಿಸಿ ಮಾಡಲು ಇಡಿ, ನೀರು ಕುದಿಯಲು ಆರಂಭಿಸಿದಾಗ ಸಣ್ಣಗೆ ಕತ್ತರಿಸಿದ ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಇದರೊಳಗೆ ಹಾಕಿ ನೀರನ್ನು ಕುದಿಸಬೇಕು ಎಷ್ಟು ಅಂದರೆ ಅರ್ಧ ಚಮಚ ಬೆಳ್ಳುಳ್ಳಿಯ ತುಂಡುಗಳು ಮತ್ತು ಅರ್ಧ ಚಮಚದಷ್ಟು ಸಣ್ಣದಾಗಿ ಕತ್ತರಿಸಿದ ಶುಂಠಿಯನ್ನು ನೀರಿಗೆ ಹಾಕಿ ಕುದಿಸಬೇಕು.

ಈ ನೀರು ಕುದಿಯುವಾಗ ಇದಕ್ಕೆ ಕಾಲು ಚಮಚದಷ್ಟು ಜೀರಿಗೆಯನ್ನು ಹಾಕಿ ಮತ್ತೊಮ್ಮೆ ನೀರು ಕುದಿಯುವಾಗ ಇದಕ್ಕೇನೆ ನೀವು ಮನೆಯಲ್ಲಿ ಬಳಕೆ ಮಾಡುವಂತಹ ಕಾಫಿ ಪೌಡರ್ ಹಾಕಿ ಸ್ವಲ್ಪ ಸಮಯ ನೀರನ್ನು ಕುದಿಸಿದ ನಂತರ ಸ್ಟವ್ ಆಫ್ ಮಾಡಿ ಕೊಳ್ಳಿ.ಈಗ ಈ ನೀರನ್ನು ಶೋಧಿಸಿ ಇದಕ್ಕೆ ಅರ್ಧ ಚಮಚದಷ್ಟು ನಿಂಬೆಹಣ್ಣಿನ ರಸವನ್ನು ಹಾಕಿ, ಇದನ್ನು ಪ್ರತಿ ದಿನ ಕುಡಿಯುತ್ತಾ ಬನ್ನಿ.

ಇದನ್ನು ಯಾವ ಸಮಯದಲ್ಲಿ ಕುಡಿಬೇಕು ಅಂದ್ರೆ, ಬೆಳಿಗ್ಗೆ ಖಾಲಿಹೊಟ್ಟೆಗೆ ಕುಡಿಯಬೇಕು ಇದರಿಂದ ದೇಹದಲ್ಲಿ ಶೇಖರಣೆಯಾಗಿರುವ ಕೊಬ್ಬು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಾ ಬರುತ್ತದೆ, ಹೇಗೆ ಅಂತೀರಾ ಹೌದು ಈ ಡ್ರಿಂಕ್ ಕುಡಿದಾಗ ದೇಹದಲ್ಲಿ ಉಷ್ಣಾಂಶ ಹೆಚ್ಚುತ್ತದೆ ಆಗ ದೇಹದಲ್ಲಿ ಶೇಖರಣೆ ಆಗಿರುವ ಕೊಬ್ಬು ನಿಧಾನವಾಗಿ ಕರಗುತ್ತಾ ಬರುತ್ತದೆ.

ಈ ಡ್ರಿಂಕ್ ಅನ್ನು ಪ್ರತಿದಿನ ಕುಡಿಯಬಹುದು ದಿನಬಿಟ್ಟು ದಿನ ಕುಡಿಯಬಹುದು ಆದರೆ ನೀವು ಈ ಡ್ರಿಂಕ್ ಕುಡಿಯುವಾಗ ತಕ್ಷಣವೇ ಸಣ್ಣ ಆಗೋದಿಲ್ಲ, ಆದರೆ ಸ್ವಲ್ಪ ದಿನಗಳ ನಂತರ ನಿಮ್ಮ ತೂಕದಲ್ಲಿ ಹಾಗೂ ನಿಮ್ಮ ದೇಹದಲ್ಲಿ ಆಗುವ ಬದಲಾವಣೆ ಅನ್ನು ನೀವು ಗಮನಿಸಬಹುದು. ಆದರೆ ಯಾವುದೇ ತರಹದ ಅಡ್ಡಪರಿಣಾಮಗಳು ನಿಮ್ಮ ಆರೋಗ್ಯದ ಮೇಲೆ ಆಗುವುದಿಲ್ಲ.

Exit mobile version