Ad
Home ಅರೋಗ್ಯ ನಿಮ್ಮ ಶ್ವಾಸಕೋಶದಲ್ಲಿ ಅದೆಂತ ಸಮಸ್ಸೆ ಇದ್ರೂ ಸಹ ಈ ಶಕ್ತಿಶಾಲಿ ಮನೆ ಔಷಧಿ ಬಳಸಿ ಸಾಕು...

ನಿಮ್ಮ ಶ್ವಾಸಕೋಶದಲ್ಲಿ ಅದೆಂತ ಸಮಸ್ಸೆ ಇದ್ರೂ ಸಹ ಈ ಶಕ್ತಿಶಾಲಿ ಮನೆ ಔಷಧಿ ಬಳಸಿ ಸಾಕು ಪ್ರಾಕೃತಿಕವಾಗಿ ಶುದ್ದಿ ಮಾಡುತ್ತದೆ..

ನಮಸ್ಕಾರಗಳು ಶ್ವಾಸಕೋಶ ಸಂಬಂಧಿ ಸಮಸ್ಯೆಗಳನ್ನು ನಿವಾರಿಸಲು ಮುಖ್ಯವಾಗಿ ಶ್ವಾಸಕೋಶವನ್ನು ಶುದ್ಧಿಮಾಡಲು ಈ ಪರಿಹಾರ ಮಾಡಿ ಇದನ್ನು ಯಾರು ಬೇಕಾದರೂ ಮಾಡಬಹುದು ಹದಿನೈದು ವರ್ಷ ಮೇಲ್ಪಟ್ಟವರು.ಶ್ವಾಸಕೋಶ ಎಂದರೆ ಸಾಮಾನ್ಯವಾಗಿ ಉಸಿರಾಟದ ಪ್ರಕ್ರಿಯೆಯಲ್ಲಿ ಸಹಕಾರಿಯಾಗುವಂತಹ ಅಂಗಾಂಗ ಇದು.ಶ್ವಾಸಕೋಶವು ಆರೋಗ್ಯಕರವಾಗಿದ್ದರೆ, ಶ್ವಾಸಕೋಶವು ಶುದ್ಧವಾಗಿದ್ದರೆ ಮಾತ್ರ ನಮ್ಮ ಉಸಿರಾಟದ ಪ್ರಕ್ರಿಯೆ ಕೂಡ ಉತ್ತಮವಾಗಿ ನಡೆಯುತ್ತದೆ ಮತ್ತು ಯಾವುದೇ ತರಹದ ಉಸಿರಾಟಕ್ಕೆ ಸಂಬಂಧಿ ಸಮಸ್ಯೆಗಳು ಎದುರಾಗುವುದಿಲ್ಲ.

ಈ ಪರಿಹಾರವನ್ನು ಪ್ರತಿಯೊಬ್ಬರು ಮಾಡಲೇಬೇಕು ಅಂತ ಈ ಮೊದಲೇ ಹೇಳಿದ್ದೇನೆ ಯಾಕೆ ಅಂದರೆ ಇಂದು ಎಲ್ಲಾ ಕಡೆ ಪಲ್ಯೂಷನ್ ಧೂಳು ಪ್ರದೂಷಣೆ ವಾತಾವರಣವು ಶುದ್ಧವಾಗಿಲ್ಲ. ಹಾಗಾಗಿ ನಾವು ಇಂತಹ ವಾತಾವರಣದಲ್ಲಿ ನಮ್ಮ ತ್ವಚೆಯ ಆರೋಗ್ಯ ನಮ್ಮ ಹೃದಯದ ಆರೋಗ್ಯ ಮೂತ್ರಪಿಂಡಗಳ ಆರೋಗ್ಯವನ್ನ ಹೇಗೆ ಆಹಾರದ ಮೂಲಕ ಕಾಳಜಿ ಮಾಡುತ್ತೇವೆ.

ಅದೇ ರೀತಿ ಶ್ವಾಸಕೋಶದ ಆರೋಗ್ಯವನ್ನು ಕೂಡ ಆಹಾರದ ಮೂಲಕವೇ ನಾವು ಕಾಳಜಿ ಮಾಡಬೇಕಿರುತ್ತದೆ ಆದ್ದರಿಂದ ಈ ಪರಿಹಾರವನ್ನು ತಿಳಿದು ನೀವು ಕೂಡ ನಿಮ್ಮ ಮನೆಯಲ್ಲಿ ಈ ಮನೆಮದ್ದನ್ನು ಪಾಲಿಸಿ ಇದಕ್ಕೆ ಬೇಕಾಗಿರುವಂತಹ ಪದಾರ್ಥ ಯಾವುದೇ ದುಬಾರಿ ಬೆಲೆಯ ಸಾಮಗ್ರಿಗಳು ಅಲ್ಲ, ತುಂಬಾ ಸುಲಭವಾಗಿ ಕೈಗೆಟುಕುವ ಬೆಲೆಯಲ್ಲಿ ದೊರೆಯುವ ಪದಾರ್ಥಗಳು, ಇದರಿಂದ ನಾವು ಶ್ವಾಸಕೋಶವನ್ನು ಶುದ್ದಿ ಮಾಡಿ ನಮ್ಮ ಆರೋಗ್ಯ ರಕ್ಷಣೆಯನ್ನು ಮಾಡಬಹುದು.

ಕೆಲವೊಂದು ಬಾರಿ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಿ ದೊಡ್ಡದೊಡ್ಡ ತೊಂದರೆಗಳುಂಟಾಗಿ ಅನಾರೋಗ್ಯಕ್ಕೆ ಒಳಗಾಗಿರುತ್ತೇವೆ.ಅಷ್ಟೇ ಅಲ್ಲ ಕೆಲವೊಂದು ಬಾರಿ ಲಂಗ್ ಕ್ಯಾನ್ಸರ್ ಕೂಡ ಉಂಟಾಗಬಹುದು ಶ್ವಾಸಕೋಶದ ಆರೋಗ್ಯ ಉತ್ತಮವಾಗಿ ಇಲ್ಲವಾದರೆ. ಹಾಗಾಗಿ ಚಾನ್ಸ್ ಯಾಕೆ ತೆಗೆದುಕೊಳ್ಳಬೇಕು ಮನೆಯಲ್ಲಿಯೇ ಸಿಗುವ ಪದಾರ್ಥಗಳಿಂದ ಶ್ವಾಸಕೋಶವನ್ನು ಶುದ್ದಿ ಮಾಡಬಹುದು ಅಂದರೆ ಯಾಕೆ ಮಾಡಬಾರದು ಅಲ್ವಾ.

ಈಗ ಈ ಮನೆಮದ್ದು ಮಾಡುವ ವಿಧಾನವನ್ನು ಮೊದಲು ತಿಳಿದು ಬಿಡೋಣ ಬನ್ನಿ ಇದಕ್ಕಾಗಿ ಬೇಕಾಗಿರುವುದು ಈರುಳ್ಳಿ ಶುಂಠಿ ಅರಿಶಿಣ ಮತ್ತು ಜೇನುತುಪ್ಪ ಇಷ್ಟೆ. ಮೊದಲಿಗೆ ನೀವು ಮಾಡಬೇಕಿರುವುದು ನೀರನ್ನು ಕಾಯಲು ಇಡಬೇಕು ಅದಕ್ಕೆ ಜಜ್ಜಿದ ಶುಂಠಿ ಮತ್ತು ಈರುಳ್ಳಿಯನ್ನು ಹಾಕಬೇಕು ಲೋಟದಷ್ಟು ನೀರಿಗೆ ಅರ್ಧ ಅರ್ಧ ಇಂಚಿನಷ್ಟು ಶುಂಠಿ ಮತ್ತು ಅರ್ಧ ಚಮಚದಷ್ಟು ಈರುಳ್ಳಿಯ ರಸ ಅಥವಾ ಈರುಳ್ಳಿಯನ್ನು ಹಾಕಿ ನೀರನ್ನು ಕುದಿಸಿ.

ಈ ನೀರು ಕುದ್ದ ಬಳಿಕ ಇದಕ್ಕೆ ಅರಿಶಿಣವನ್ನು ಮಿಶ್ರಣ ಮಾಡಿ ಸ್ಟವ್ ಆಫ್ ಮಾಡಿ ಸ್ವಲ್ಪ ನೀರೂ ತಣಿಯಲು ಬಿಡಿ. ನಂತರ ಈ ನೀರನ್ನು ಶೋಧಿಸಿಕೊಂಡು ಇದಕ್ಕೆ ಅರ್ಧ ಚಮಚದಷ್ಟು ಅಥವಾ ನಿಮಗೆ ರುಚಿ ಎಷ್ಟು ಬೇಕು ಅಷ್ಟು ಜೇನು ತುಪ್ಪವನ್ನು ಮಿಶ್ರಣ ಮಾಡಿಕೊಂಡು, ಇದನ್ನು ಬೆಳಿಗ್ಗೆ ಸಮಯದಲ್ಲಿ ಕುಡಿಯುತ್ತಾ ಬನ್ನಿ. ಈ ಡ್ರಿಂಕ್ ಅನ್ನು ನೀವು ಕುಡಿಯುವುದರಿಂದ ಅಡ್ಡ ಪರಿಣಾಮಗಳೇನೂ ಇಲ್ಲ, ಆದರೆ ಶ್ವಾಸಕೋಶ ಶುದ್ದಿ ಆಗುವುದರ ಜೊತೆಗೆ ನಿಮ್ಮ ಕರುಳು ಕೂಡ ಶುದ್ದಿಯಾಗುತ್ತೆ.

ಈ ವಿಧಾನದಲ್ಲಿ ನಿಮ್ಮ ಶ್ವಾಸಕೋಶವನ್ನು ಶುದ್ಧ ಮಾಡಿಕೊಳ್ಳಬಹುದು ಇದರಲ್ಲಿ ಬಳಸಿರುವ ಶುಂಠಿ ಶ್ವಾಸಕೋಶ ಶುದ್ಧಿಗೆ ಸಹಕಾರಿ ಜೊತೆಗೆ ಈರುಳ್ಳಿ ರಕ್ತಶುದ್ದಿಗೆ ಸಹಕಾರಿ ಮತ್ತು ಜೇನುತುಪ್ಪ ಆರೋಗ್ಯ ವೃದ್ಧಿಗೆ ಸಹಾಯ ಮಾಡುತ್ತದೆ.ಇನ್ನೂ ಅರಿಶಿಣದ ಬಗ್ಗೆ ಹೇಳೋದೇ ಬೇಡ ಇದರಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಆ್ಯಂಟಿ ಮೈಕ್ರೋಬಿಯಲ್ ಗುಣವಿದೆ. ಹಾಗಾಗಿ ನಮ್ಮ ಆಲ್ರೌಂಡ್ ಆರೋಗ್ಯವನ್ನು ನಾವು ಈ ಡ್ರಿಂಕ್ ಇಂದ ಕಾಪಾಡಿಕೊಳ್ಳಬಹುದು ನಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು.

Exit mobile version