ಕಿಡ್ನಿ ಸ್ಟೋನ್ ಗೆ ಎಲ್ಲೆಲ್ಲಿಯೊ ಔಷಧಿ ಹುಡುಕುತ್ತಿದ್ದೀರಾ ಚಿಂತೆ ಬೇಡ ಹೀಗೆ ಮಾಡಿ ಸಾಕು…ನಮ್ಮ ದೇಹದೊಳಗೆ ನಡೆಯುವ ಕ್ರಿಯೆಗಳ ಬಗ್ಗೆ ನಮಗೆ ಅಷ್ಟಾಗಿ ವಿಚಾರ ಗೊತ್ತಿರುವುದಿಲ್ಲ ಹಾಗೆ ನಮ್ಮ ಶರೀರದೊಳಗೆ ಯಾವಾಗ ಏನೇನು ನಡೆಯುತ್ತದೆ ಅನ್ನುವುದು ಯಾರಿಗೂ ತಿಳಿಯದ ವಿಚಾರ. ಅಷ್ಟೇ ಅಲ್ಲ ನಮ್ಮ ಶರೀರ ನಮ್ಮ ದೊಡ್ಡ ಸಂಪತ್ತು ನಮ್ಮ ಶರೀರದ ಆರೋಗ್ಯ ನಮ್ಮ ದೊಡ್ಡ ಭಾಗ್ಯವಾಗಿದೆ.
ಈ ನಮ್ಮ ಶರೀರದ ಆರೋಗ್ಯ ಎಷ್ಟು ಮುಖ್ಯ ಅಂದರೆ, ಎಷ್ಟೇ ಆಸ್ತಿ ಅಂತಸ್ತು ಹಣ ಮಾಡಿದರೂ ನಮ್ಮ ಆರೋಗ್ಯ ಸರಿಯಾಗಿಲ್ಲ ಅಂದರೆ ಆ ಹಣ ಸಂಪತ್ತು ಐಶ್ವರ್ಯ ಎಲ್ಲ ಯಾವುದಕ್ಕೆ ಲೆಕ್ಕ ಹೇಳಿ. ಹಾಗಾಗಿಯೆ ನಮ್ಮ ಆರೋಗ್ಯ ನಮ್ಮ ಸಂಪತ್ತು ನಮ್ಮ ಆರೋಗ್ಯ ನಮ್ಮ ಭಾಗ್ಯ ಅಂತ ಹಿರಿಯರು ಹೇಳುವುದು ಆದ್ದರಿಂದ ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬೇಕು ಅದು ಹೇಗೆ ಅಂದರೆ ಉತ್ತಮ ಜೀವನಶೈಲಿ ರೂಢಿಸಿಕೊಳ್ಳುವ ಮೂಲಕ ಉತ್ತಮ ಆಹಾರ ಪದ್ದತಿಯನ್ನು ಪಾಲಿಸುವ ಮೂಲಕ.
ಈ ಶರೀರದ ವಿಚಾರಕ್ಕೆ ಬಂದರೆ ಹೇಗೆ ನಾವು ನಮ್ಮದೇ ಶುದ್ದಿಯನ್ನು ಸ್ನಾನ ಮಾಡುವ ಮೂಲಕ ಮಾಡ್ತೇವೆ ಹಾಗೆ ನಮ್ಮ ದೇಹದಲ್ಲಿ ಇರುವ ರಕ್ತ ಶುದ್ಧಿ ಮಾಡುವುದು ನಮ್ಮ ಮೂತ್ರಪಿಂಡಗಳು. ಹೌದು ನಮ್ಮ ದೇಹದಲ್ಲಿರುವ ರಕ್ತವನ್ನು ಶುದ್ಧಿ ಮಾಡುವುದು ಹಾಗೂ ಬೇಡದಿರುವ ಅಂಶವನ್ನು ಹೊರಹಾಕಲು ಸಹಕಾರಿ ಆಗಿರುವುದು ಈ ಮೂತ್ರಪಿಂಡಗಳು.
ನಮ್ಮ ದೇಹದಲ್ಲಿ ಯಾವುದು ಕೂಡ ಹೆಚ್ಚಾಗಬಾರದು ಹಾಗೆ ಈ ಸೋಡಿಯಂ ಅಂಶ ಕೂಡ ಹಾಗಾಗಿ ನಾವು ನಿಯಮಿತವಾಗಿ ಉಪ್ಪನ್ನು ಸೇವಿಸಬೇಕು ನಮ್ಮ ಆಹಾರದಲ್ಲಿ ಅಧಿಕವಾದ ಉಪ್ಪು ಇರಬಾರದು ಹಾಗೆ ಕೆಲವೊಂದು ಖನಿಜಾಂಶಗಳು ಕೂಡ ನಮ್ಮ ದೇಹದಲ್ಲಿ ಅತಿ ಯಾಗಬರದು ಆಗ ಆ ಸಮಯದಲ್ಲಿ ನಮ್ಮ ಶರೀರದ ಸ್ವಚ್ಛತೆ ಮಾಡುವುದು ನಮ್ಮ ಶರೀರದ ಆರೋಗ್ಯವನ್ನು ಕಾಪಾಡುವುದು ಮೂತ್ರಪಿಂಡಗಳು ಅಧಿಕವಾದ ಖನಿಜಾಂಶಗಳನ್ನು ಹೊರಹಾಕಲು ಸಹಕಾರಿ ಆಗುವುದು.
ನಮ್ಮ ಈ ಶರೀರದಲ್ಲಿ ಯಾವಾಗ ಖನಿಜಾಂಶ ಹೆಚ್ಚುತ್ತದೆ ಮತ್ತು ನೀರಿನಂಶ ಕಡಿಮೆಯಾಗುತ್ತದೆ ಆಗ ನಮ್ಮ ಶರೀರದಲ್ಲಿರುವಂತಹ ಖನಿಜಾಂಶಗಳು ಮೂತ್ರಪಿಂಡದಲ್ಲಿ ಸೇರಿಕೊಳ್ಳುತ್ತದೆ, ಆಗ ಅದು ಕಲ್ಲು ಆಗಿ ಬದಲಾಗುತ್ತದೆ. ಮೂತ್ರಪಿಂಡದಲ್ಲಿ ಇರುವಂತಹ ಕಲ್ಲು ನಮ್ಮ ದೇಹಕ್ಕೆ ಎಷ್ಟು ನೋವು ನೀಡುತ್ತದೆ ಅಂದರೆ ಹೊಟ್ಟೆ ನೋವು ಮತ್ತು ಹೊಟ್ಟೆಯ ಕೆಳಭಾಗದಲ್ಲಿ ಚುಚ್ಚುವುದು ಹೀಗೆ ಮಾಡುತ್ತದೆ.
ಆದ್ದರಿಂದ ಕಿಡ್ನಿಯಲ್ಲಿ ಕಲ್ಲು ಆದರೆ ಅದನ್ನು ನಿರ್ಲಕ್ಷಿಸಬೇಡಿ ಆ ನೋವು ಹೇಳತೀರದು ಮತ್ತು ಅದನ್ನು ನಿರ್ಲಕ್ಷ್ಯ ಮಾಡಿದಷ್ಟು ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆಯೇ ಹೆಚ್ಚು.ಅಕಸ್ಮಾತ್ ಕಿಡ್ನಿಯಲ್ಲಿ ಕಲ್ಲು ಆಗಿದ್ದಲ್ಲಿ ಅದನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ಮನೆಯಲ್ಲಿಯೇ ಮಾಡಬಹುದು ಸರಳ ಪರಿಹಾರ ಅದು ಯಾವುದರಿಂದ ಅಂದರೆ ಬಾಳೆದಿಂಡಿನಿಂದ.
ಬಾಳೆದಿಂಡಿನ ಜ್ಯೂಸ್ ಮಾಡುವುದು ತುಂಬಾ ಸುಲಭ ಹಾಗೆ ಈ ಬಾಳೆದಿಂಡನ್ನು ತುರಿದು ಇದರಿಂದ ರಸವನ್ನು ಬೇರ್ಪಡಿಸಿ ಅದನ್ನು ಖಾಲಿ ಹೊಟ್ಟೆಗೆ ಕುಡಿಯುತ್ತ ಬನ್ನಿ. ಇದಕ್ಕೆ ಯಾವುದೇ ತರದ ಉಪ್ಪು ಆಗಲಿ ಅಥವಾ ನಿಂಬೆ ಹಣ್ಣಿನ ರಸ ಏನನ್ನು ಮಿಶ್ರ ಮಾಡಬೇಡಿ ಅದನ್ನು ಹಾಗೆ ಖಾಲಿಹೊಟ್ಟೆಗೆ ಕುಡಿಯಬೇಕು ಆದರೆ ಬಾಳೆ ದಿಂಡಿನ ರಸದಲ್ಲಿ ಹೆಚ್ಚು ಪ್ರಮಾಣದ ನೀರು ಸಹ ಇರಲಿ.
ಒಮ್ಮೆ ಮೂತ್ರಪಿಂಡದ ಕಲ್ಲು ಕರಗಿದಮೇಲೆ ಆ ವ್ಯಕ್ತಿ ಏನು ಮಾಡಬೇಕೆಂದರೆ ಊಟದಲ್ಲಿ ಅದಷ್ಟು ಕಡಿಮೆ ಉಪ್ಪನ್ನು ಬಳಸಬೇಕು ಹಾಗೂ ಹೆಚ್ಚು ಹೆಚ್ಚು ನೀರು ಕುಡಿಯಬೇಕು ಜೊತೆಗೆ ಹೆಚ್ಚು ನೀರಿನಂಶ ಇರುವ ಹಣ್ಣುಗಳನ್ನು ತಿನ್ನಬೇಕು ಉದಾಹರಣೆಗೆ ಕಲ್ಲಂಗಡಿ ಕರ್ಬೂಜ ಹಣ್ಣುಗಳನ್ನು ಹೆಚ್ಚಾಗಿ ತಿನ್ನುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ ಮತ್ತು ಮತ್ತೆ ಮೂತ್ರಪಿಂಡಗಳಲ್ಲಿ ಕಲ್ಲು ವಾಗುವಂತಹ ಸಮಸ್ಯೆ ಉಂಟಾಗುವುದಿಲ್ಲಾ.