Ad
Home ಉಪಯುಕ್ತ ಮಾಹಿತಿ ಹೀಗೆ ಮನೆಯಲ್ಲಿರುವ ವಸ್ತುಗಳನ್ನ ಬಳಸಿ ಪಾನೀಯ ಮಾಡಿ , ಎಂತ ಬೊಜ್ಜು ಇದ್ದರು ಸಹ ಕರಗಿ...

ಹೀಗೆ ಮನೆಯಲ್ಲಿರುವ ವಸ್ತುಗಳನ್ನ ಬಳಸಿ ಪಾನೀಯ ಮಾಡಿ , ಎಂತ ಬೊಜ್ಜು ಇದ್ದರು ಸಹ ಕರಗಿ ನೀರಾಗುತ್ತದೆ..

ತೂಕ ಇಳಿಕೆಗೆ ಎಫೆಕ್ಟಿವ್ ಮನೆಮದ್ದು ಯಾವುದು ಗೊತ್ತಾ? ನೀವಂದುಂಕೊಂಡೆ ಇರುವುದಿಲ್ಲ ಈ ಪದಾರ್ಥಗಳು ಇಷ್ಟು ಪ್ರಭಾವಿತವಾಗಿ ತೂಕ ಕಡಿಮೆ ಮಾಡುತ್ತೆ ಅಂತ…ಹೌದು ಪ್ರಿಯ ಸ್ನೇಹಿತರೇ ಇತ್ತೀಚೀನ ದಿನಗಳಲ್ಲಿ ಆಹಾರ ಪದಾರ್ಥಗಳಲ್ಲಿ ಕಡಿಮೆ ಪೋಷಕಾಂಶಗಳಿರುವುದರಿಂದ ಮತ್ತು ಮನುಷ್ಯರು ಹೆಚ್ಚು ರುಚಿಕರವಾದ ಆಹಾರ ಪದಾರ್ಥಗಳನ್ನೆ ತಿನ್ನಬೇಕಂತ ತಮ್ಮ ಉತ್ತಮ ಆಹಾರ ಪದ್ದತಿಯನ್ನು ಉತ್ತಮ ಜೀವನಶೈಲಿಯನ್ನು ಮರೆಯುತ್ತಿದ್ದಾರೆ.

ಆದರೆ ಇದರ ಪರಿಣಾಮ ಏನಾಗುತ್ತಿದೆ ಎಂದು ನೀವೇ ನೋಡ್ತಾ ಇದ್ದೀರ ಅಲ್ವ ಹೌದು ಕೆಲವರು ಮಾಂಸಾಹಾರ ಪದಾರ್ಥಗಳನ್ನು ಇಷ್ಟಪಟ್ಟು ತಿಂದರೆ ಇನ್ನೂ ಕೆಲವರು ಸಸ್ಯಾಹಾರಿ ಗಳು ಆಗಿದ್ದರೂ ಸಹ ತಮ್ಮ ನಾಲಿಗೆಗೆ ರುಚಿಕರ ಆಹಾರ ಗಳೇ ಬೇಕು ಅಂತ ತಮಗಿಷ್ಟ ಬಂದ ಆಹಾರ ಪದಾರ್ಥಗಳನ್ನು ತಿನ್ನುತ್ತಿದ್ದಾರಾ ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ದೈಹಿಕ ಶ್ರಮ ಹೆಚ್ಚು ಹಾಕದೆ ಕೂತಲ್ಲಿಯೇ ಕೆಲಸ ಮಾಡುವುದರಿಂದ ತೂಕ ಹೆಚ್ಚುತ್ತಿದೆ ಜೊತೆಗೆ ಇದರಿಂದ ಇಲ್ಲಸಲ್ಲದ ಸಮಸ್ಯೆಗಳು ಕೂಡ ಹೆಚ್ಚುತ್ತಲೇ ಇದೆ ಜೊತೆಗೆ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ.

ಹಾಗಾಗಿ ನಾವು ತಿನ್ನುವುದಕ್ಕಾಗಿ ಬದುಕಬಾರದು ಬದುಕುವುದಕ್ಕಾಗಿ ತಿನ್ನಬೇಕು ಹೆಚ್ಚುಕಾಲ ಆರೋಗ್ಯಕರವಾಗಿ ಬದುಕಲು ಆರೋಗ್ಯಕರವಾದ ಆಹಾರ ಪದಾರ್ಥಗಳನ್ನು ತಿನ್ನಬೇಕು.ಹೌದು ನೀವು ನೋಡಿರಬಹುದು ಕೆಲವರಂತೂ ನಾವು ಹುಟ್ಟಿರುವುದೇ ತಿನ್ನುವುದಕ್ಕಾಗಿ ಅನ್ನೋ ಹಾಗೆ ಆಡುತ್ತಿರುತ್ತಾರೆ ಸದಾ ರುಚಿಕರವಾದ ಆಹಾರ ಪದಾರ್ಥಗಳನ್ನು ತಿನ್ನುತ್ತಾ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಂಡಿರುತ್ತಾರೆ ಚಿಕ್ಕವಯಸ್ಸಿಗೆ ಬ್ಲಡ್ ಪ್ರೆಶರ್ ಸಕ್ಕರೆ ಕಾಯಿಲೆ ಹೃದಯ ಸಂಬಂಧಿ ಸಮಸ್ಯೆಗಳು ಎಂಬ ತೊಂದರೆಗಳಿಗೆ ಒಳಗಾಗಿರುತ್ತಾರೆ.

ಇವತ್ತಿನ ಈ ಪುಟದಲ್ಲಿ ನಿಮ್ಮ ತೂಕ ಇಳಿಕೆಗೆ ಮತ್ತು ನಿಮ್ಮ ಜೀರ್ಣಶಕ್ತಿ ವೃದ್ಧಿ ಆಗುವುದಕ್ಕೆ ಸರಳ ಮನೆಮದ್ದನ್ನು ಹೇಳಿಕೊಡ್ತೇನೆ ಇದನ್ನು ಪಾಲಿಸಿದರೆ ಸಾಕು ನೀವು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಹಾಗೆ ನೀವು ತಿನ್ನುವ ಆಹಾರ ಪದಾರ್ಥಗಳಲ್ಲಿ ಸ್ವಲ್ಪ ಮಿತಿ ಇರಲಿ ಮತ್ತು ನೀವು ತಿಂದಷ್ಟು ನೀವು ದೈಹಿಕ ಶ್ರಮವನ್ನು ಹಾಕುವುದರಿಂದ ತಿಂದ ಆಹಾರ ಪೂರ್ಣವಾಗಿ ಜೀರ್ಣಗೊಂಡು ಮುಂದೆ ಬರಬಹುದಾದ ಅನಾರೋಗ್ಯ ಸಮಸ್ಯೆಗಳನ್ನು ತಡೆಗಟ್ಟಬಹುದು.

ಈ ಮನೆ ಮದ್ದಿಗಾಗಿ ನಿಮಗೆ ಬೇಕಿರುವುದು ಏನಪ್ಪಾ ಅಂದರೆ ಜೀರಿಗೆ ಸೋಂಪಿನ ಕಾಳು ಮೆಂತ್ಯ ಮತ್ತು ಅಜ್ವಾನ.ಹೌದು ಈ ಪದಾರ್ಥಗಳು ಶಮನವಾಗಿ ನೀವು ಅಡುಗೆಯಲ್ಲಿ ಬಳಕೆ ಮಾಡುವಂತಹ ಪದಾರ್ಥಗಳೇ ಆಗಿರುತ್ತೆ ನೀವು ಅಡುಗೆ ಮಾಡುವಾಗ ಈ ಯಾವುದೇ ಪದಾರ್ಥಗಳನ್ನು ಅಡುಗೆಯಲ್ಲಿ ಮಿಶ್ರಮಾಡಿ ಅಡುಗೆಯಲ್ಲಿ ಬಳಕೆ ಮಾಡಿ ತಯಾರಿ ಮಾಡಿದರೆ ನಿಮ್ಮ ಅಡುಗೆ ಕೂಡ ರುಚಿಕರವಾಗಿರುತ್ತದೆ ಮತ್ತು ನೀವು ತಿಂದ ಆಹಾರ ಬಹಳ ಬೇಗ ಜೀರ್ಣವಾಗಿ ದೇಹದಲ್ಲಿ ಕೊಬ್ಬು ಶೇಖರಣೆ ಆಗದೇ ಇರುವ ಹಾಗೆ ನೋಡಿಕೊಳ್ಳುತ್ತದೆ.

ಈ ಪದಾರ್ಥಗಳನ್ನು ಸಮಪ್ರಮಾಣದಲ್ಲಿ ತೆಗೆದುಕೊಳ್ಳಿ ಬದಲಿಗೆ ಕೇವಲ ಎರೆಡೆರೆಡು ಚಮಚಗಳನ್ನು ಈ ಮೇಲಿನ ಪದಾರ್ಥಗಳನ್ನು ತೆಗೆದುಕೊಂಡು ಇವುಗಳನ್ನು ಬೇರೆ ಬೇರೆಯಾಗಿ ಹುರಿದು ಕೊನೆಗೆ ಎಲ್ಲವನ್ನು ಮಿಶ್ರಣ ಮಾಡಿ ಪುಡಿ ಮಾಡಿ ಇಟ್ಟುಕೊಳ್ಳಿ ನಂತರ ಪ್ರತಿದಿನ ಬೆಳಿಗ್ಗೆ ಬಿಸಿ ನೀರನ್ನು ಕುಡಿಯುವಾಗ ಸ್ವಲ್ಪ ತಯಾರಿ ಮಾಡಿಕೊಂಡಂತಹ ಪುಡಿಯನ್ನು ಮಿಶ್ರಮಾಡಿ ಖಾಲಿ ಹೊಟ್ಟೆಗೆ ಕುಡಿಯುತ್ತ ಬನ್ನಿ.

ಇದರಿಂದ ದೇಹದಲ್ಲಿ ಶೇಖರವಾಗಿರುವ ಕೊಬ್ಬು ಕಡಿಮೆ ಆಗುತ್ತದೆ ಹೇಗೆ ಅಂದರೆ ಇದು ದೇಹದ ಉಷ್ಣಾಂಶ ವನ್ನೂ ಸ್ವಲ್ಪ ಹೆಚ್ಚು ಮಾಡಿ ದೇಹದಲ್ಲಿ ಶೇಖರಣೆಯಾಗಿರುವ ಕೊಬ್ಬನ್ನು ಕರಗುವಂತೆ ಮಾಡುತ್ತದೆ ಹಾಗೂ ಇದರಿಂದ ಆರೋಗ್ಯ ಕೂಡ ವೃದ್ಧಿಯಾಗುತ್ತದೆ ಜೊತೆಗೆ ಹಾರ್ಮೋನ್ ಇಂಬ್ಯಾಲೆನ್ಸ್ ಸಮಸ್ಯೆ ಅಥವಾ ಹೆಣ್ಣುಮಕ್ಕಳಿಗೆ ತಡವಾಗಿ ಪಿರಿಯಡ್ಸ್ ಆಗುವುದು ಗಂಡಸರಿಗೆ ಹೃದಯಸಂಬಂಧಿ ಸಮಸ್ಯೆಗಳು ಬರುವುದು, ಇಂತಹ ಎಲ್ಲ ಸಮಸ್ಯೆಗಳು ಬಹಳ ಬೇಗ ಪರಿಹಾರವಾಗುತ್ತೆ. ಈ ಅದ್ಭುತ ಪ್ರಯೋಜನಗಳಿರುವ ಪದಾರ್ಥಗಳನ್ನು ಬಳಸಿ ಈ ಸರಳ ಮನೆಮದ್ದು ಮಾಡಿ ಕೊಲೆಸ್ಟ್ರಾಲ್ ತಗ್ಗುತ್ತದೆ ಗ್ಯಾಸ್ಟ್ರಿಕ್ ಸಮಸ್ಯೆ ದೂರವಾಗುತ್ತೆ ಜೊತೆಗೆ ಆರೋಗ್ಯ ಕೂಡ ಹೆಚ್ಚುತ್ತದೆ.

Exit mobile version