ನಿಮ್ಮ ದೇಹ ಸಿಕ್ಕಾಪಟ್ಟೆ ಆಯಾಸ ಆಗುತ್ತಾ ಇದ್ರೆ ಈ ಒಂದು ಮನೆಮದ್ದು ಮಾಡಿ ಸೇವಿಸಿ ಸಾಕು , ಕೆಲವೇ ಕ್ಷಣದಲ್ಲಿ ಅಪಾರ ಶಕ್ತಿ ಬರುತ್ತದೆ..

219

ನಮಸ್ಕಾರಗಳು ಸುಸ್ತಾದಾಗ ಮನೆಯಲ್ಲೇ ಮಾಡಿಕೊಳ್ಳಬಹುದಾದ ಪರಿಹಾರದ ಕುರಿತು ಮಾತನಾಡುತ್ತಿದ್ದೇವೆ, ಮನುಷ್ಯನಿಗೆ ಕೆಲವೊಂದು ಬಾರಿ ಸ್ಟ್ರೆಸ್ ಹೆಚ್ಚಾದಾಗ ವಿಪರೀತ ಸುಸ್ತಾಗುತ್ತಾನೆ ಏಕೆಂದರೆ ಸ್ಟ್ರೆಸ್ ನಿಂದ ತಲೆಸುತ್ತು ಬರುವುದು ಸಹಜ. ಹಾಗಾಗಿ ಇಂತಹ ಸಮಯದಲ್ಲಿ ಮನೆಯಲ್ಲೇ ನಾವು ನಮ್ಮ ಆರೋಗ್ಯವನ್ನು ಕಾಳಜಿ ಮಾಡಬಹುದಾದಂತಹ ಸರಳ ಉಪಾಯದ ಬಗ್ಗೆ ಈ ದಿನ ನಾವು ಈ ಮಾಹಿತಿ ಮೂಲಕ ನಿಮಗೆ ತಿಳಿಸಿಕೊಡಲಿದ್ದೇವೆ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ.ಹೌದು ಇವತ್ತಿನ ದಿನಗಳಲ್ಲಿ ಮಂದಿ ಕೆಲಸದ ಬ್ಯುಸಿ ಅಲ್ಲಿ ಊಟ ತಿಂಡಿ ಮಾಡುವುದನ್ನು ಬಿಟ್ಟಿರುತ್ತಾರೆ ಬೆಳಿಗ್ಗೆ ತಿಂಡಿ ತಿನ್ನುವುದನ್ನು ಬಿಡುವುದರಿಂದ ನಮ್ಮ ಆರೋಗ್ಯದ ಮೇಲೆ ಅದೆಷ್ಟು ಕೆಟ್ಟ ಪ್ರಭಾವ ಬೀರುವುದು ಗೊತ್ತೆ.

ಹಾಗಾಗಿ ಇಂದಿನ ಲೇಖನದಲ್ಲಿ ನಾವು ತಿಳಿಸಲು ಹೊರಟಿರುವುದೇನು ಅಂದರೆ ಸುಸ್ತಾದಾಗ ಮನುಷ್ಯ ಪಾಲಿಸಬೇಕಾದ ಪರಿಹಾರಗಳು ಮತ್ತು ಸುಸ್ತು ಆಗದಿರುವುದಕ್ಕೆ ಹಾಗೂ ನಮ್ಮ ಆರೋಗ್ಯವನ್ನು ಕಾಳಜಿ ಮಾಡುವುದಕ್ಕೆ ಮಾಡಬಹುದಾದ ಸರಳ ಮನೆಮದ್ದಿನ ಕುರಿತು ಮಾತನಾಡುತ್ತಿದ್ದೇವೆ ಹಾಗಾಗಿ ನಿಮಗೂ ಕೂಡ ಆಗಾಗ ಸುಸ್ತಾಗುತ್ತ ಇದೆ ಮತ್ತು ಬಿಸಿಲಿಗೆ ಹೋದರೆ ತಲೆ ಸುತ್ತು ಬರುತ್ತದೆ ಇಂತಹ ಎಲ್ಲ ತೊಂದರೆಗಳು ಕಾಡುತ್ತಿದ್ದಲ್ಲಿ ಅದಕ್ಕೆ ಮಾಡಿ ಈ ಸರಳ ಸುಲಭ ಮನೆಮದ್ದುಗಳನ್ನು.

ಮೊದಲನೆಯದಾಗಿ ಯಾರಿಗೆ ಬಿಸಿಲಿಗೆ ಹೋದ ಕೂಡಲೇ ತಲೆ ಸುತ್ತು ಬರುತ್ತದೆ ಅಂಥವರು ಹೆಚ್ಚು ನೀರು ಕುಡಿಯಿರಿ, ಹೌದು ನಮ್ಮ ದೇಹದಲ್ಲಿ ನೀರಿನಾಂಶ ಕಡಿಮೆ ಅದಾಗಲೇ ಬಿಸಿಲಿಗೆ ಹೋದಾಗ ನಮಗೆ ತಲೆಸುತ್ತು ಬರುವುದು ಆಗ ಸುಸ್ತಾಗುವುದು.ಹಾಗಾಗಿ ಇಂದು ಈ ಮಾಹಿತಿಯಲ್ಲಿ ನಾವು ನಿಮಗೆ ಹೇಳಲು ಹೊರಟಿರುವುದೇನೆಂದರೆ ಮನುಷ್ಯನ ದೇಹ ಡಿಹೈಡ್ರೇಟ್ ಆದಾಗ ಈ ರೀತಿ ಸುಸ್ತಾಗೋದು ತಲೆಸುತ್ತು ಬರುವುದು ಸಹಜ ಹಾಗಾಗಿ ಆಚೆ ಹೋಗುವ ಮುನ್ನ ತಪ್ಪದೆ ಶರೀರಕ್ಕೆ ಬೇಕಾಗುವಷ್ಟು ಪ್ರಮಾಣದ ನೀರು ಕೊಡೋದು ಹೋಗೋದು ಒಳ್ಳೇದು ಮತ್ತು ಆಗಾಗ ತಲೆ ಸುತ್ತು ಬರುತ್ತದೆ ಅಂದರೆ ಪ್ರತಿದಿನ ಎಳನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ ಇದರಿಂದ ಸುಸ್ತು ಬೇಗ ನಿವಾರಣೆಯಾಗುತ್ತದೆ ಮತ್ತು ತಲೆಸುತ್ತು ಕೂಡ ಪರಿಹಾರವಾಗುತ್ತದೆ.

ವಿಪರೀತ ಸುಸ್ತು ವಾದಾಗ ಈ ಕಷಾಯ ಮಾಡಿ ಸೇವಿಸಿ ಇದಕ್ಕೆ ಬೇಕಾಗಿರುವುದು ಅಜವಾನ ಮೆಣಸು ಜೀರಿಗೆ ಇವುಗಳನ್ನು ಹುರಿದುಕೊಂಡು ಪುಡಿ ಮಾಡಿಕೊಳ್ಳಬೇಕು, ನಂತರ ನೀರನ್ನು ಕುದಿಯಲು ಇಟ್ಟು ಈ ನೀರಿಗೆ ತಯಾರಿಸಿಕೊಂಡ ಮಿಶ್ರಣವನ್ನು ಹಾಕಿ ಇದಕ್ಕೆ ಒಣಶುಂಠಿ ಪುಡಿಯನ್ನು ಹಾಕಿ ಕುದಿಸಿ ಶೋಧಿಸಿಕೊಂಡು ಇದಕ್ಕೆ ಬೇಕಾದರೆ ಬೆಲ್ಲವನ್ನು ಮಿಶ್ರಮಾಡಿ ಡ್ರಿಂಕ್ ಅನ್ನೋ ಕುಡಿಯಬಹುದು.

ಈ ಡ್ರಿಂಕ್ ಅಲ್ಲಿ ಬಳಸುವ ಬೆಲ್ಲವನ್ನು ಆದಷ್ಟು ಕಪ್ಪು ಬೆಲ್ಲ ಅಥವಾ ಆರ್ಗ್ಯಾನಿಕ್ ಬೆಲ್ಲ ಇಂತಹ ಬೆಲ್ಲವನ್ನೇ ಬಳಸಿ, ಬೆಲ್ಲ ಕೂಡ ಸುಸ್ತು ನಿವಾರಣೆಗೆ ಮತ್ತು ರಕ್ತ ಕೊರತೆ ಇದ್ದರೆ ಹಿಮೋಗ್ಲೋಬಿನ್ ಕೊರತೆ ನಿವಾರಣೆ ಮಾಡಲು ಸಹಕಾರಿಯಾಗಿರುತ್ತದೆ ಹಾಗಾಗಿ ಈ ಸುಲಭ ಪರಿಹಾರ ಸುಸ್ತು ನಿವಾರಣೆಗೆ ತುಮನೇ ಪ್ರಯೋಜನಕಾರಿಯಾಗಿರುತ್ತದೆ ಮತ್ತು ಬೇಗನೆ ಸುಸ್ತನ್ನು ನಿವಾರಿಸುತ್ತದೆ.

ಮತ್ತು ಸುಸ್ತಾದಾಗ ನೀರಿಗೆ ಸಕ್ಕರೆ ಮತ್ತು ಉಪ್ಪು ಮಿಶ್ರಮಾಡಿ ಅಂದರೆ ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಮಿಶ್ರ ಮಾಡಿ ಆ ನೀರನ್ನು ಸುಸ್ತಾದ ವ್ಯಕ್ತಿಗೆ ಕುಡಿಯಲು ನೀಡಬೇಕು ಈ ರೀತಿ ಮಾಡುವುದರಿಂದ ಕೂಡ ಸುಸ್ತಾದ ವ್ಯಕ್ತಿಗೆ ಬಹಳ ಬೇಗನೆ ಸುಸ್ತು ಪರಿಹಾರವಾಗುತ್ತದೆ. ಈ ಕೆಲವೊಂದು ಮನೆಮದ್ದುಗಳು ಸುಸ್ತು ನಿವಾರಣೆಗೆ ಸಹಕಾರಿಯಾಗಿದೆ ಹಾಗಾಗಿ ಈ ಮಾಹಿತಿ ತಿಳಿದು ಸುಸ್ತು ವಿವರಣೆಗೆ ಈ ಕೆಲವೊಂದು ಪರಿಹಾರವನ್ನು ಪಾಲಿಸಿ ಧನ್ಯವಾದ.