ಪ್ರತಿಯೊಬ್ಬರ ಮನೆಯ ಮುಂದೆಯೋ ತುಳಸಿ ಗಿಡವನ್ನು ನೆಟ್ಟಿರುತ್ತಾರೆ ಹೌದು ತುಳಸಿ ಗಿಡವನ್ನು ಆರೋಗ್ಯದ ವಿಚಾರವಾಗಿ ಮತ್ತು ಧಾರ್ಮಿಕ ವಿಚಾರವಾಗಿಯೂ ಕೂಡ ನಾವು ಮನೆಯ ಅಂಗಳದಲ್ಲಿ ಬೆಳೆಸಿಕೊಳ್ಳುತ್ತವೆ ಆದರೆ ಹಲವರಿಗೆ ಗೊತ್ತಿರದ ವಿಚಾರವೇನೆಂದರೆ ಈ ತುಳಸಿ ಗಿಡ ಧಾರ್ಮಿಕವಾಗಿ ಎಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ ಹಾಗೆ ವೈಜ್ಞಾನದಲ್ಲಿಯೂ ಕೂಡ ಅಷ್ಟೇ ಪ್ರಾಮುಖ್ಯತೆ ಪಡೆದುಕೊಂಡಿದೆ.
ಅಷ್ಟೇ ಅಲ್ಲ ಹಲವಾರು ಔಷಧಿಗಳಲ್ಲಿ ಹಾಗೂ ಇಂಗ್ಲಿಷ್ ಮೆಡಿಸಿನ್ ಗಳಲ್ಲಿಯೂ ಕೂಡ ಕಾಸ್ಮೆಟಿಕ್ಸ್ ತಯಾರಿಕೆ ಯಲ್ಲಿಯೂ ಕೂಡ ತುಳಸಿ ಬಳಕೆಯಾಗುತ್ತಿರುವುದು ನೋಡಬಹುದಾಗಿದ್ದು ಈ ತುಳಸಿ ಗಿಡವನ್ನು ಬೆಳೆದು ಹಲವರು ತಮ್ಮ ಆರ್ಥಿಕತೆಯನ್ನು ಕೂಡ ಅಭಿವೃದ್ಧಿ ಮಾಡಿಕೊಳ್ಳುತ್ತಿದ್ದಾರೆ ಈ ರೀತಿ ಹಲವು ಲಾಭಗಳನ್ನು ನೀಡುವ ತುಳಸಿ ಗಿಡ ಮನೆಯಲ್ಲಿ ಆಗಾಗ ಒಣಕಿ ಹೋಗುತ್ತಿದ್ದರೆ ಅದಕ್ಕೆ ಕಾರಣವೇನಿರಬಹುದು?
ಹೌದು ಇಂತಹದೊಂದು ಪ್ರಶ್ನೆ ನಿಮ್ಮಲ್ಲಿಯೂ ಕೂಡ ಕಾಡಿರುತ್ತದೆ ಅಲ್ವಾ ಹೌದು ಹಾಗಾದರೆ ಬನ್ನಿ ಇವತ್ತಿನ ಯಾಕೆ ತುಳಸಿಗಿಡ ಆಗಾಗ ಮನೆಯ ಅಂಗಳದಲ್ಲಿ ಒಣಗಿ ಹೋಗುತ್ತಿರುತ್ತದೆ ಎಂಬುದರ ಚಿಕ್ಕ ವಿಚಾರಗಳನ್ನು ತಿಳಿದುಕೊಳ್ಳೋಣ.
ಹೌದು ಧಾರ್ಮಿಕವಾಗಿ ಹೇಳುವುದಾದರೆ ಹಿರಿಯರು ಕೂಡ ಹೇಳ್ತಾರೆ ಮನೆಯ ಮುಂದೆ ತುಳಸಿ ಗಿಡ ಒಣಗಬಾರದು ಅಂತ ಆದರೆ ವೈಜ್ಞಾನಿಕವಾದ ಕಾರಣವನ್ನು ನಾವು ಹಿಡಿದು ಹೋಗುವುದಾದರೆ ತುಳಸಿ ಗಿಡ ಒಣಗಿದರೆ ಅದರಿಂದ ದೊರೆಯುವ ಪ್ರಯೋಜನಗಳು ಮನೆಗೆ ಯಾವುದೇ ತರಹದಲ್ಲಿ ದೊರೆಯುವುದಿಲ್ಲ ಹಾಗಾಗಿಯೇ ಅಂದಿನ ಕಾಲದಲ್ಲಿ ಹಿರಿಯರು ಮನೆಯ ಮುಂದೆ ತುಳಸಿ ಗಿಡ ಒಣಗುತ್ತಿದ್ದ ಹಾಗೆ ಹೊಸದೊಂದು ಗಿಡವನ್ನು ಬೆಳೆಸುತ್ತಿದ್ದರು.
ಇನ್ನೂ ಇನ್ನೂ ಧಾರ್ಮಿಕವಾಗಿ ಹೇಳುವುದಾದರೆ ಈ ತುಳಸಿ ಗಿಡವು ಒಣಗುತ್ತಿದೆ ಆಂದರೆ ಅದು ಮನೆಯಲ್ಲಿ ಮಾಟಮಂತ್ರ ಪ್ರಯೋಗ ಕೆಟ್ಟ ಶಕ್ತಿಯ ಪ್ರಭಾವ ಆಗಿದೆ ಅದನ್ನು ಸೂಚನೆಯಾಗಿ ನೀಡುವುದಕ್ಕೆ ತುಳಸಿ ಗಿಡ ಒಣಗುತ್ತದೆ ಅಂತ ಹಲವರು ಅಂತಾರೆ ಆದರೆ ಇದೆಲ್ಲವೂ ಅಂದಿನ ಕಾಲದಿಂದ ನಡೆದುಕೊಂಡು ಬಂದ ಕೆಲವೊಂದು ನಂಬಿಕೆಗಳು ಆಗಿರುತ್ತದೆ ಅಷ್ಟೆ ಕಿರಿಯರು ಹಿರಿಯರ ಮಾತುಗಳ ಕೇಳದೇ ಹೋದಾಗ ಹಿರಿಯರು ಈ ರೀತಿ ಕೆಲವೊಂದು ಮಾತುಗಳನ್ನು ಹೇಳುವ ಮೂಲಕ ಅದನ್ನು ಪಾಲಿಸುತ್ತಾ ಇದ್ದರು.
ಈ ರೀತಿ ಕಾರಣಗಳನ್ನು ನೀಡುವ ಮೂಲಕ ಹಿರಿಯರು ಕಿರಿಯರಿಗೆ ಪದ್ಧತಿಗಳನ್ನು ಪಾಲಿಸಿಕೊಂಡು ಬರಲಿ ಎಂಬ ಕಾರಣಕ್ಕಾಗಿ ಇಂತಹ ಅರ್ಥಗಳನ್ನು ಕೆಲವೊಂದು ಪದ್ಧತಿಗಳು ಕೆಲವೊಂದು ವೈಜ್ಞಾನಿಕ ಕಾರಣಕ್ಕೆ ಬಣ್ಣ ಹೊರೆತು ಯಾವುದೇ ನಿರ್ದಿಷ್ಟ ಕಾರಣಗಳಾಗಲಿ ಅರ್ಥ ಗಳಾಗಲಿ ಅಂತಹ ನಂಬಿಕೆಗಳಿಗೆ ಇರುತ್ತಿರಲಿಲ್ಲ.
ಈ ವಾತಾವರಣದಲ್ಲಿ ನಮ್ಮ ಪ್ರಕೃತಿಯಲ್ಲಿ ತುಳಸಿ ಗಿಡ ಬಹಳ ಸೂಕ್ಷ್ಮವಾದ ಗಿಡವಾಗಿರುತ್ತದೆ ಹೆಚ್ಚು ಮಳೆ ಬಂದರೂ ತುಳಸಿ ಗಿಡ ಬೆಳೆಯುವುದಿಲ್ಲ ಹಾಗೂ ಹೆಚ್ಚು ಬಿಸಿಲು ಇದ್ದರೂ ಕೂಡ ತುಳಸಿ ಗಿಡ ಒಣಗಿ ಬಿಡುತ್ತದೆ ಆದ್ದರಿಂದ ತುಳಸಿ ಗಿಡ ಒಣಗಿದಾಗ ಅದನ್ನು ನಿರ್ಲಕ್ಷ್ಯ ಮಾಡದೆ, ಅದರ ಉತ್ತಮ ಪ್ರಯೋಜನಗಳನ್ನು ಪಡೆದುಕೊಳ್ಳುವ ಕಾರಣಕ್ಕಾಗಿ ಹಿರಿಯರು ಒಣಗಿರುವ ತುಳಸಿ ಗಿಡವನ್ನು ತೆಗೆದುಹಾಕಿ ಹೊಸ ಚಿಗುರಿನ ಗಿಡವನ್ನ ಮನೆಯ ಅಂಗಳದಲ್ಲಿ ಬೆಳೆಸಲಿ ಎಂಬ ಕಾರಣಕ್ಕಾಗಿ ಇಂತಹ ಕಾರಣಗಳನ್ನು ಕೊಡುತ್ತಿದ್ದರು ಅಷ್ಟೆ.
ಮತ್ತು ತುಳಸಿ ಗಿಡ ಒಣಗುತ್ತಿದೆ ಅಂದರೆ ಅದಕ್ಕೆ ವಾತಾವರಣದ ಉಷ್ಣಾಂಶವು ಕಾರಣವಾಗಬಹುದು ಹಾಗಾಗಿ ಮಳೆ ಹೆಚ್ಚಾಗಿದ್ದಾಗ ತುಳಸಿ ಗಿಡಕ್ಕೆ ನೀರನ್ನು ಹಾಕುವುದನ್ನು ಕಡಿಮೆ ಮಾಡಬೇಕು ಮತ್ತು ಇರುವ ಜಾಗದಲ್ಲಿ ತುಳಸಿ ಗಿಡವನ್ನು ಇಡಬಾರದು ಹಾಗೆ ಬೇಸಿಗೆಯಲ್ಲಿ ತುಳಸಿ ಗಿಡ ಒಣಗುವ ಸಾಧ್ಯತೆ ಇರುತ್ತದೆ.ಹಾಗಾಗಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಸ್ವಲ್ಪ ಸ್ವಲ್ಪ ನೀರನ್ನು ಹಾಕುವ ರೂಢಿಯನ್ನ ಮಾಡಬೇಕು ಅಷ್ಟೆ ಮತ್ತು ತುಳಸಿ ಗಿಡಕ್ಕೆ ಯಾವುದೇ ಕಾರಣಕ್ಕೂ ಕೆಮಿಕಲ್ ಗಳನ್ನು ಸೋಕಿಸಬಾರದು.