ನಿಮ್ಮ ಯಾವುದೇ ಬೆಳೆ ನಾಶ ಆದರೂ ಕೂಡ ಅದರ ಪರಿಹಾರವನ್ನ ಸರಕಾರದಿಂದ ಪಡಿಯೋದು ಹೇಗೆ ನೋಡಿ …

63

ಬೆಳೆ ಸಾಲ ಬೆಳೆ ವಿಮೆ ಮತ್ತು ಬೆಳೆ ಪರಿಹಾರ ಇವೆಲ್ಲವೂ ಸಹ ರೈತರಿಗೆ ಸಂಬಂಧಿಸಿದಂತಹ ವಿಚಾರವಾಗಿರುತ್ತದೆ ಇಂದಿನ ಮಾಹಿತಿಯಲ್ಲಿ ನಾವು ಈ ಬೆಳೆ ಪರಿಹಾರದ ಕುರಿತು ನಿಮಗೆ ಮಾಹಿತಿ ನೀಡಲಿದ್ದೇವೆ ಹೌದು ಈ ಬೆಳೆ ಪರಿಹಾರ ಪಡೆದುಕೊಳ್ಳಬೇಕೆಂದರೆ ಇದಕ್ಕಾಗಿ ರೈತರುಗಳು ಏನೆಲ್ಲ ವ್ಯವಸ್ಥೆ ಮಾಡಿಕೊಂಡಿರಬೇಕಾಗುತ್ತದೆ ಹಾಗೂ ಬೆಳೆ ಪರಿಹಾರ ಪಡೆದುಕೊಳ್ಳಲು ಯಾರು ಅರ್ಹರು ಯಾವ ಬೆಳೆಗಳ ಮೇಲೆ ವಿಮೆ ಪಡೆಯಬಹುದು ಯಾವ ಬೆಳೆಗಳ ಮೇಲೆ ಪರಿಹಾರ ಪಡೆದುಕೊಳ್ಳಬಹುದು ಇದನ್ನೆಲ್ಲ ತಿಳಿಯೋಣ ಇವತ್ತಿನ ಮಾಹಿತಿಯಲ್ಲಿ ಹೌದು ರೈತರುಗಳಿಗೆ ಉಪಯುಕ್ತವಾಗುವ ಈ ಮಾಹಿತಿ ನೀವು ತಿಳಿದು ನೀವು ರೈತಾಪಿ ಕುಟುಂಬದವರಾಗಿದ್ದರೆ ಅಥವಾ ನಿಮ್ಮ ಅಕ್ಕಪಕ್ಕದ ಮನೆಯವರು ನಿಮ್ಮ ನೆರೆಹೊರೆಯವರು ರೈತರು ಗಳಾಗಿದ್ದರೆ ಈ ಮಾಹಿತಿಯನ್ನು ಅವರಿಗೆ ತಿಳಿಸಿಕೊಡಿ.

ರೈತ ದೇಶದ ಬೆನ್ನಲುಬು ಅಂತ ಹೇಳ್ತಾರೆ ಹಾಗಾಗಿ ರೈತರ ಆರ್ಥಿಕ ಸಂಕಷ್ಟಗಳು ಪರಿಹಾರವಾಗಲಿ ಎಂದು ಕೇಂದ್ರ ಸರಕಾರ ರಾಜ್ಯ ಸರಕಾರ ಹಲವು ವಿಧದ ಯೋಜನೆಗಳನ್ನು ಹಮ್ಮಿಕೊಳ್ಳುತ್ತಾ ಇರುತ್ತದೆ ಅದೇ ರೀತಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರಕಾರ ಒಟ್ಟುಗೂಡಿ ರೈತರಿಗಾಗಿ ಜಾರಿಗೆ ತಂದಿರುವುದು ಈ ಬೆಳೆ ಪರಿಹಾರ ಎಂಬ ಯೋಜನೆಯನ್ನು ಈ ಬೆಳೆ ಪರಿಹಾರವನ್ನು ರೈತರುಗಳು ಬೆಳೆ ವಿಮೆ ಮಾಡಿಸಿದ್ದಲ್ಲಿ ತಮ್ಮ ಬೆಳೆಗೆ ಬೆಳೆ ಪರಿಹಾರವನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾದರೆ ನೀವು ಸಹ ರೈತಾಪಿ ಕುಟುಂಬದವರು ಹಾಗಿದ್ದರೆ ಇಲ್ಲಿದೆ ನೋಡಿ ನಿಮಗಾಗಿ ಉತ್ತಮ ಮಾಹಿತಿ ಅದೇನೆಂದರೆ ನಿಮ್ಮ ಮೊಬೈಲ್ ಮೂಲಕವೇ ಹೇಗೆ ಈ ಬೆಳೆ ವಿಮೆ ಬಗ್ಗೆ ಅಥವಾ ಬೆಳೆ ಪರಿಹಾರದ ಬಗ್ಗೆ ತಿಳಿದುಕೊಳ್ಳ ಬಹುದು, ಹಾಗೂ ಬೆಳೆ ಪರಿಹಾರ ನಿಮ್ಮ ಬೆಳಿಗ್ಗೆ ದೊರೆಯುತ್ತದೆಯೋ ಇದನೆಲ್ಲ ನೋಡುವುದು ಹೇಗೆ ಎಂಬ ಮಾಹಿತಿ ತಿಳಿಸಿಕೊಡುತ್ತೇವೆ ಕೆಳಗಿನ ಲೇಖನವನ್ನು ತಿಳಿಯಿರಿ.

ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿ ಬ್ರೌಸರ್ ಗೆ ಹೋಗಿ ಸಂರಕ್ಷಣಾ ಎಂದು ಟೈಪ್ ಮಾಡಬೇಕು, ನಂತರ ನಿಮಗೆ ಅಲ್ಲೇ ಸರ್ ಕಾರಿ ಲಿಂಕ್ 1ದೊರೆಯುತ್ತದೆ ಅಲೆ ಟ್ಯಾಪ್ ಮಾಡುವ ಮೂಲಕ ಅಲ್ಲಿ ನಿಮಗೆ ಹೊಸ ಪೇಜ್ ಓಪನ್ ಆಗುತ್ತದೆ, ಇಲ್ಲಿ ನಿಮ್ಮ ಬೆಳೆ ಕುರಿತು ಮಾಹಿತಿ ನೀಡಬೇಕು ಹೌದು ಮೊದಲಿಗೆ ಯಾವ ವರುಷ ಎಂದು ಆಯ್ಕೆ ಮಾಡಿ ಕೊಂಡ ಬಳಿಕ ಯಾವ ಬೆಳೆ ಅಂದರೆ ರಾಬಿ ಅಂದರೆ ಹಿಂಗಾರು ಮುಂಗಾರು ಅಥವಾ ಬೇಸಿಗೆ ಬೆಳೆಯ ಎಂದು ಆಯ್ಕೆ ಮಾಡಿಕೊಳ್ಳಬೇಕು, ನೀವು ಇದೀಗ ಹಿಂಗಾರು ಬೆಳೆಗೆ ಆಯ್ಕೆ ಮಾಡಿಕೊಳ್ಳಬೇಕು.

ಇನ್ನು ಅಲ್ಲಿ ನೀವು ಪ್ರೀಮಿಯಂ ಲೆಕ್ಕಾಚಾರವನ್ನ ಮಾಡಬೇಕಾಗುತ್ತದೆ ಇದಕ್ಕೆ ಪ್ರೀಮಿಯಂ ಎಂಬ ಆಪ್ಷನ್ ಕ್ಲಿಕ್ ಮಾಡಿ. ಪ್ರೀಮಿಯಂ ಚೆಕ್ ಮಾಡಲು ಬೆಳೆ ಯಾವುದು ಹಾಗೂ ನಿಮ್ಮ ಜಿಲ್ಲೆ ಮತ್ತು ಜಿಲ್ಲೆಯಲ್ಲಿ ನಿಮ್ಮ ಗ್ರಾಮ ಯಾವುದು ಮತ್ತು ನಿಮ್ಮ ಬೆಳೆ ಯಾವುದು ಎಂಬುದನ್ನೆಲ್ಲಾ ಆಯ್ಕೆ ಮಾಡಿಕೊಳ್ಳಬೇಕು ನಂತರ ಎಷ್ಟು ಎಕರೆ ಇದೆ ಎಂದು ಆಯ್ಕೆ ಮಾಡಿದ ಬಳಿಕ ಪ್ರಿಮಿಯಮ್ ಚೆಕ್ ಮಾಡಿಕೊಳ್ಳಬೇಕು ಹಾಗೆ ಎಷ್ಟು ಪ್ರೀಮಿಯಂ ಕಟ್ಟಬೇಕು ಎಂದು ಅಲ್ಲಿ ಬರುತ್ತದೆ ಅಷ್ಟು ಪ್ರೀಮಿಯಂ ಅನ್ನು ನೀವು ಕಟ್ಟಬೇಕಾಗುತ್ತದೆ.

ಹಾಗಾದರೆ ನೀವು ಈ ಬೆಳೆ ಪರಿಹಾರ ಪಡೆದುಕೊಳ್ಳಲು ಯಲ್ಲಿ ವಿಮೆ ಮಾಡಿಸಿಕೊಳ್ಳಬೇಕು ವಿಮೆ ಮಾಡಿಸಿಕೊಂಡ ಬಳಿಕ ಪ್ರೀಮಿಯಂ ಪಾವತಿಸಬೇಕು ಇದನೆಲ್ಲಾ ತಿಳಿಯಬೇಕೆಂದರೆ ನೀವು ಬೆಳೆ ಸಾಲ ಪಡೆದಿದ್ದರೆ, ಬೆಳೆ ವಿಮೆ ಮಾಡಿಸುವುದು ಕಡ್ಡಾಯವಾಗಿರುತ್ತದೆ ಹಾಗೂ ವರುಷಕೊಮ್ಮೆ ಪ್ರೀಮಿಯಂ ಕಟ್ಟುತ್ತಾ ಬಂದರೆ ನೀವು ಬೆಳೆ ಪರಿಹಾರ ಪಡೆದುಕೊಳ್ಳಬಹುದು. ಇನ್ನೂ ಬೆಳೆಸಾಲ ಪಡೆದಿಲ್ಲವಾದರೂ ಸಹ ನೀವು ಬೆಳೆ ವಿಮೆ ಮಾಡಿಸಬಹುದು, ಹೌದು ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಅಥವಾ ಬೆಳೆ ಸಂರಕ್ಷಣಾ ಇಲಾಖೆ ಅಲ್ಲಿ ಬೆಳೆ ವಿಮೆ ಮಾಡಿಸಿ ಅಲ್ಲಿ ಪ್ರೀಮಿಯಂ ಪಾವತಿಸ ಬಹುದು ಈ ಮೂಲಕ ಕೂಡ ನಿಮ್ಮ ಬೆಳೆಗಳಿಗೆ ನೀವು ಬೆಳೆ ಪರಿಹಾರ ಪಡೆದುಕೊಳ್ಳ ಬಹುದಾಗಿದೆ ಶುಭದಿನ ಧನ್ಯವಾದ.