ಸಾಮಾನ್ಯವಾಗಿ ಮನೆಯಲ್ಲಿ ಮಾಡಿದ ಆಹಾರ ಉಳಿಯುವುದು ಸಹಜ ಆದರೆ ಈ ಉಳಿದ ಆಹಾರವನ್ನು ಮಾರನೆ ದಿವಸ ಕೆಲವರು ತಿನ್ನೋದಿಲ್ಲ ಅದನ್ನು ಎಷ್ಟೋ ಮಂದಿ ಎಸೆಯದೆ ಒಂದು ರೂಢಿಯನ್ನು ಮಾಡಿಕೊಂಡಿರುತ್ತಾರೆ ಆದರೆ ರಾತ್ರಿ ಮಾಡಿದಂತಹ ಅನ್ನ ಉಳಿದರೆ ಆ ಅನ್ನವನ್ನು ತಿನ್ನುವುದರಿಂದ ಎಷ್ಟೆಲ್ಲಾ ಪ್ರಯೋಜನಕಾರಿ ಅಂಶ ಇದೆ ಎಷ್ಟೆಲ್ಲಾ ಆರೋಗ್ಯಕರ ಲಾಭಗಳಿವೆ ಅಂತ ತಿಳಿದರೆ ನೀವು ಕೂಡ ಇನ್ನು ಮುಂದಿನ ದಿನಗಳಲ್ಲಿ ಉಳಿದ ಅನ್ನವನ್ನು ವ್ಯರ್ಥ ಮಾಡುವುದಿಲ್ಲ.ಆರೋಗ್ಯಕ್ಕೆ ಉತ್ತಮವಾಗಿ ರುವಂತಹ ಅನೇಕ ಆಹಾರ ಪದಾರ್ಥಗಳು ನಮ್ಮ ಆರೋಗ್ಯಕ್ಕೆ ಯಾವಾಗಲೂ ಉತ್ತಮ ಅಂಶವನ್ನೇ ನೀಡುತ್ತದೆ.
ಆದರೆ ಇನ್ನೂ ಕೆಲವರು ಪಿಜಾ ಬರ್ಗರ್ ಪಾನಿಪುರಿ ಮಸಾಲಾಪುರಿ ಅಂತೆಲ್ಲಾ ಜೈನ್ ಫುಡ್ ಮೊರೆ ಹೋಗುತ್ತಾರೆ ಆದರೆ ಅಂತಹ ಆಹಾರ ಪದಾರ್ಥಗಳು ಉಳಿದರೆ ಅದನ್ನು ಇಟ್ಟು ಬೇಕಾದರೂ ಸೇವಿಸ್ತಾರೆ. ಆದರೆ ಮನೆಯಲ್ಲಿ ಮಾಡಿದಂತಹ ಆಹಾರ ಅನ್ನ ಅಥವಾ ಚಪಾತಿ ರೊಟ್ಟಿ ಇಂತಹ ಪದಾರ್ಥಗಳು ಉಳಿದರೆ ಅದನ್ನು ಸೇವಿಸುವುದಕ್ಕೆ ಜನ ಮೂಗು ಮುರಿಯುತ್ತಾರೆ. ಬರೀ ನಾಲಿಗೆಗೆ ರುಚಿ ನೀಡುತ್ತೆ ಅಂತ ಆಚೆ ಆಹಾರಕ್ಕೆ ಮೊರೆ ಹೋಗುವುದಕ್ಕಿಂತ ಉತ್ತಮ ಆರೋಗ್ಯವನ್ನು ಯಾವ ಪದಾರ್ಥಗಳು ನೀಡುತ್ತದೆ ಅಂತ ತಿಳಿದು ಅಂತಹ ಆಹಾರ ಪದಾರ್ಥಗಳನ್ನು ವ್ಯರ್ಥ ಮಾಡದೆ ಸೇವನೆ ಮಾಡುವುದು ತುಂಬಾನೇ ಒಳ್ಳೆಯದು ಮತ್ತು ತುಂಬಾನೇ ಆರೋಗ್ಯ ಕೂಡ ಲಭಿಸುತ್ತದೆ.
ರಾತ್ರಿ ಉಳಿದ ಅನ್ನವನ್ನು ನೀವೇನಾದರೂ ಬಿಡುತ್ತ ಇದ್ದೀರಾ ಈ ರೀತಿ ನೀವೇನಾದ್ರೂ ಮಾಡ್ತಾ ಇದ್ರೆ ಎಷ್ಟೊಂದು ಆರೋಗ್ಯಕರ ಲಾಭಗಳನ್ನು ದೂರ ಮಾಡಿಕೊಂಡಿದ್ದೀರಾ ವ್ಯರ್ಥ ಮಾಡಿಕೊಳ್ಳುತ್ತಿದ್ದೀರಾ ಅಂತ ನಿಮಗೆ ಗೊತ್ತಿಲ್ಲ. ಹೌದು ರಾತ್ರಿ ಉಳಿದ ಅನ್ನವನ್ನು ಮಾರನೆ ದಿವಸ ಅದನ್ನು ಗಂಜಿಯ ರೂಪದಲ್ಲಿ ಸೇವನೆ ಮಾಡುತ್ತಾ ಬಂದರೆ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಕಾರಿ ಲಾಭವಿದೆ.
ರಾತ್ರಿ ಉಳಿದಂತಹ ಅನ್ನದಿಂದ ಗಂಜಿ ಮಾಡಿ ನೀರಿನ ಸೇವನೆ ಮಾಡ್ತಾ ಬಂದ್ರೆ ರಕ್ತದಲ್ಲಿ ಇರುವ ವ್ಯರ್ಥ ಪದಾರ್ಥವೂ ಕಡಿಮೆಯಾಗುತ್ತದೆ ಮತ್ತು ಬೇಡದೆ ಇರುವ ಕೊಬ್ಬಿನ ಅಂಶ ಶೇಖರಣೆಯಾಗುವುದಿಲ್ಲ ಹೌದು ಗಂಜಿಯನ್ನು ನೀವು ಸೇವನೆ ಮಾಡ್ತಾ ಬಂದ್ರೆ ಬೇಡದೆ ಇರುವ ಕೊಬ್ಬು ಕರಗುತ್ತದೆ ಕೂಡ. ಇವತ್ತಿನ ದಿನಗಳಲ್ಲಿ ಹೆಚ್ಚಿನ ಜನರು ಈ ಬೇಡದೆ ಇರುವ ಕೊಬ್ಬಿನ ಸಮಸ್ಯೆಯಿಂದ ಬಳಲುತ್ತಾ ಇರ್ತಾರೆ ಅಂತಹವರು ಪ್ರತಿದಿನ ಬೆಳಗ್ಗೆ ಈ ಅನ್ನದಿಂದ ಮಾಡಿದ ಗಂಜಿಯನ್ನು ಸೇವಿಸಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದು.
ಇನ್ನು ಈ ಅನ್ನದ ಗಂಜಿ ಅನ್ನು ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಆಗುವ ಲಾಭ ಅಂದರೆ ಸುಸ್ತು ನಿಶ್ಯಕ್ತಿ ದೂರಾಗುತ್ತದೆ ಅಷ್ಟೇ ಅಲ್ಲದೆ ಅನೇಕ ಜನರು ಪ್ರತಿರೋಧಕ ಶಕ್ತಿಯಿಲ್ಲದೆ ಬಳಲುತ್ತಾ ಇರ್ತಾರೆ. ಅಂತಹವರು ಈ ಒಂದು ಅನ್ನದ ಗಂಜಿಯನ್ನು ಮಾಡಿ ಸೇವಿಸಬೇಕು ಈ ರೀತಿ ತಿನ್ನುತ್ತಾ ಬಂದರೆ ಪ್ರಚೋದಕ ಶಕ್ತಿ ಹೆಚ್ಚುತ್ತದೆ ಉತ್ತಮ ಆರೋಗ್ಯವೂ ನಮ್ಮದಾಗುತ್ತದೆ.
ಪಟ್ಟಣದ ಮಂದಿ ಇದನ್ನು ಅಷ್ಟಾಗಿ ನಂಬೊಲ್ಲ ಆದರೆ ನಮ್ಮ ರೈತರ ಆರೋಗ್ಯವನ್ನು ನೋಡಿದರೆ ನಾವು ತಿಳಿದುಕೊಳ್ಳಬಹುದು ಅವರು ಎಷ್ಟು ಗಟ್ಟಿ ಮುಟ್ಟಾಗಿರುತ್ತದೆ ಅವರು ಯಾವತ್ತಿಗೂ ಉಳಿದ ಅನ್ನವನ್ನು ಬಿಸಾಡುವುದು ಇಲ್ಲ. ಆ ಅನ್ನವನ್ನು ಯಾವುದಾದರೂ ಒಂದು ಖಾದ್ಯದ ರೂಪದಲ್ಲಿ ಸೇವಿಸ್ತಾರೆ ರೊಟ್ಟಿ ಅಥವಾ ಗಂಜಿ ಇಂತಹ ರೂಪದಲ್ಲಿ ಅವರು ಅನ್ನವನ್ನು ವ್ಯರ್ಥ ಮಾಡದೆ ಸೇವಿಸುವುದರಿಂದಲೆ ಅವರು ಆರೋಗ್ಯಕರವಾಗಿ ಇರುತ್ತಾರೆ.