ಜೀವನದಲ್ಲಿ ಸಮಸ್ಯೆಗಳು ವಿಪರೀತ ಕಾಡುತ್ತಾ ಇದೆ ಹಾಗೂ ಆರ್ಥಿಕ ಸಂಕಷ್ಟಗಳು ನಿಮ್ಮನ್ನು ಬೆಂಬಿಡದೆ ಕಾಯುತ್ತಾ ಇದೆಯಾ ಹಾಗಾದರೆ ನಾವು ತಿಳಿಸುವ ಈ ಪರಿಹಾರವನ್ನು ನಾವು ಹೇಳಿದ ದಿನದಂತೆ ಪಾಲಿಸಿ ಇದರಿಂದ ವಿಶೇಷ ವರವನ್ನು ನೀವು ಲಕ್ಷ್ಮೀದೇವಿ ಇಂದ ಪಡೆದುಕೊಂಡು, ಜೀವನದಲ್ಲಿ ಸದಾ ಸಂತಸದಿಂದ ಇರಿ ಹಾಗಾದರೆ ಬನ್ನಿ ತಿಳಿಯೋಣ ಆ ಪರಿಹಾರವೇನು ಹಾಗೂ ಆ ವಿಶೇಷ ದಿನ ಯಾವುದು ಎಂಬುದನ್ನು. ನಾವು ಜೀವನದಲ್ಲಿ ಮಾಡುವ ಪ್ರತಿಯೊಂದು ಕೆಲಸವನ್ನು ಸಂತಸದಿಂದ ಮಾಡಬೇಕು. ಯಾವ ಕೆಲಸ ನಮಗೆ ಮನಮೆಚ್ಚುತ್ತವೆ ಆ ಕೆಲಸವನ್ನು ಮಾಡಬೇಕು ಹಾಗೆ ನಾವು ಮಾಡುವ ಕೆಲಸವನ್ನು ಸಮಾಜದವರು ಕೂಡಾ ಮೆಚ್ಚಬೇಕು ಯಾಕೆ ಅಂದರೆ ಯಾರು ಬೇಕಾದರೂ ಹಣ ಸಂಪಾದಿಸಬಹುದು ಆದರೆ ಶ್ರಮವಹಿಸಿ ಸಂಪಾದನೆ ಮಾಡಿದ ಹಣದಿಂದ ಮಾತ್ರ ಜೀವನಪರ್ಯಂತ ಸುಖ ಶಾಂತಿ ನೆಮ್ಮದಿ ನಮ್ಮ ಜೊತೆ ಇರುವುದು.
ಹಾಗಾದರೆ ಇವತ್ತಿನ ಮಾಹಿತಿಯಲ್ಲಿ ನಾವು ಏನನ್ನು ಹೇಳಲು ಹೊರಟಿದ್ದೇವೆ ಹಾಗೂ ಯಾವೆಲ್ಲ ಸಮಸ್ಯೆಗಳಿಗೆ ನೀವು ಈ ಪರಿಹಾರವನ್ನು ಸಂಪಾದಿಸಬಹುದು ಎಂಬುದು ಗೊತ್ತಾಗಿದೆ ಪರಿಹಾರ ಕುರಿತು ಈಗ ತಿಳಿಯೋಣ. ಜೀವನದಲ್ಲಿ ಕಷ್ಟಗಳು ಸಾಮಾನ್ಯ ಕೆಲವೊಮ್ಮೆ ಕೆಲವು ಕಷ್ಟಗಳು ಬಂದಾಗ ಅದು ಒಂದೆರಡು ದಿನದಲ್ಲಿಯೇ ಪರಿಹಾರವಾಗಿಬಿಡುತ್ತದೆ ಇನ್ನೂ ಕೆಲವೊಂದು ಬಾರಿ ಬಂದ ಕಷ್ಟಗಳು ತಿಂಗಳಾದರೂ ಪರಿಹಾರವಾಗಿರುವುದಿಲ್ಲ ಕೆಲವರಿಗಂತೂ ನಾವು ಹುಟ್ಟಿರುವುದೇ ಕಷ್ಟದಲ್ಲಿ ಏನಪ್ಪಾ ಅನಿಸಿ ಬಿಡುತ್ತದೆ ಅಷ್ಟು ಕಷ್ಟಗಳು ನಮ್ಮನ್ನು ಭಾದಿಸುತ್ತಾ ಇರುತ್ತದೆ.
ಇಲ್ಲಿದೆ ನೋಡಿ ನಿಮಗಾಗಿ ನೀವು ಜೀವನದಲ್ಲಿ ಅನುಭವಿಸುತ್ತಿರುವ ಕಷ್ಟ ದಿಂದ ಪರಿಹಾರ ಪಡುವುದಕ್ಕೆ ಅತ್ಯುತ್ತಮ ಪರಿಹಾರ. ಹೌದು ಲಕ್ಷ್ಮೀ ದೇವಿಯ ಕೃಪೆ ಯಾರ ಮೇಲೆ ಇರುವುದಿಲ್ಲ ಯಾರ ಮನೆಯಲ್ಲಿ ದಾರಿದ್ರ್ಯ ಲಕ್ಷ್ಮಿಯ ನೆಲೆ ಇರುತ್ತದೆ ಅಂಥವರ ಮನೆಯಲ್ಲಿ ಕಷ್ಟಗಳು ಕಣ್ಣಿರು ಕಟ್ಟಿಟ್ಟ ಬುತ್ತಿಯಾಗಿರುತ್ತೆ. ಇಂತಹ ವೇಳೆ ನೀವು ಖಂಡಿತಾ ಕೆಲವೊಂದು ಪರಿಹಾರವನ್ನ ಮಾಡಿಕೊಳ್ಳಲೇ ಬೇಕಿರುತ್ತದೆ ನೋಡಿ, ಲಕ್ಷ್ಮೀದೇವಿಯ ಕೃಪೆಯನ್ನು ಪಡೆಯಲು ಲಕ್ಷ್ಮೀದೇವಿಯ ಅನುಗ್ರಹವನ್ನು ಪಡೆಯಲು ನಾವು ಏನೆಲ್ಲ ಪರಿಹಾರವನ್ನ ಮಾಡಬೇಕಿರುತ್ತದೆ ಎಂಬುದನ್ನ ಈಗಾಗಲೇ ಮಾಹಿತಿ ಮೂಲಕ ತಿಳಿಸಿಕೊಟ್ಟಿದ್ದೇವೆ ಅದನ್ನು ಒಂದೆರಡು ದಿವಸ ಗಳನ್ನು ಮಾಡಿ ಸುಮ್ಮನಾಗುವುದಲ್ಲ. ನಾವು ಸದಾ ಲಕ್ಷ್ಮೀ ದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕು ಆದ್ದರಿಂದ ಪರಿಹಾರಗಳನ್ನು ಮಾಡಿಕೊಂಡು ಕೂಡಲೇ ನಮಗೆ ಸಮಸ್ಯೆಗಳು ದೂರಾಗಬೇಕು ಅಂತ ಅಲ್ಲ ನಾವು ದೇವರ ಆರಾಧನೆಯನ್ನ ಸದ ಮಾಡುತ್ತಲೇ ಇರಬೇಕು ಆಗಲೆ ಸದಾ ದೇವರ ಅನುಗ್ರಹ ನಮ್ಮ ಮೇಲಿರುತ್ತದೆ.
ಶುಕ್ರವಾರ ಮತ್ತು ಸಪ್ತಮಿ ಎರಡು ಸಮಯವು ವಿಶೇಷವಾಗಿ ಬಂದ ದಿನದಂದು ಈ ಪರಿಹಾರವನ್ನು ನೀವು ಮಾಡಿಕೊಳ್ಳಬೇಕಿರುತ್ತದೆ, ಅಂದು ಬೆಳಗ್ಗೆ ಸೂರ್ಯೋದಯಕ್ಕೂ ಮುಂಚೆಯೇ ಎದ್ದು ಮನೆಯನ್ನು ಶುಚಿಗೊಳಿಸಿ ಸೂರ್ಯೋದಯಕ್ಕೂ ಮುನ್ನವೇ ಮನೆಯಲ್ಲಿ ಪೂಜೆ ಆಗಿರಬೇಕು. ಬಳಿಕ ಪೂಜೆಯ ನಂತರ ಮಾಡಿಕೊಳ್ಳಬೇಕಾದ ಪರಿಹರ ಇದಾಗಿರುತ್ತದೆ ಅದೇನೆಂದರೆ 3 ಅರಿಶಿಣದ ಕೊಂಬನ್ನು ತೆಗೆದುಕೊಳ್ಳಿ ಈ ಅರಿಶಿಣ ಕೊಂಬು ಕೈಗೆ ಸ್ವಲ್ಪ ನೀರನ್ನು ಸಿಂಪಡಿಸಿ ಬಳಿಕ ಇದಕ್ಕೆ ಅರಿಶಿಣ ಕುಂಕುಮ ಗಂಧದಿಂದ ಅಲಂಕಾರ ಮಾಡಬೇಕು ಕೊನೆಗೆ ಪುಷ್ಪಗಳನ್ನ ಇತ್ತು ಇದನ್ನು ಪೂಜಿಸಬೇಕು.
ಅರಿಶಿನದ ಕೊಂಬಿನ ಪೂಜೆಯ ಬಳಿಕ ಇದನ್ನು ಅರಿಶಿಣದ ದಾರದಿಂದ ಕಟ್ಟಿ ಆ ದಿನ ದೇವರ ಪೀಠದ ಬಳಿಯೇ ಈ ಅರಿಶಿಣದ ಕೊಂಬನ್ನು ಇರಿಸಬೇಕು, ನಂತರ ಸಂಜೆಯ ಗೋಧೂಳಿ ಲಗ್ನದಲ್ಲಿ ಮನೆಯ ಮುಖ್ಯ ದ್ವಾರಕ್ಕೆ ಈ ಅರಿಶಿಣದ ಕೊಂಬನ್ನು ಕಟ್ಟಬೇಕು ಇದರಿಂದ ಮನೆಗೆ ಕಳೆ ಬರುತ್ತದೆ ಹಾಗೂ ಮನೆಗೆ ಯಾವ ದುಷ್ಟ ಶಕ್ತಿಯ ಪ್ರಭಾವ ವಾಗುವುದಿಲ್ಲ ಮನೆಯಲ್ಲಿರುವ ದುಷ್ಟ ಶಕ್ತಿಯ ಪ್ರಭಾವವು ಕಡಿಮೆಯಾಗುತ್ತಾ ಬರುತ್ತದೆ ಹೀಗೆ ಮಾಡಿ ಪರಿಹಾರ ದಿಂದ ಹಲವು ಸಮಸ್ಯೆಗಳು ಎದುರಾಗುತ್ತವೆ ಈ ಉತ್ತಮ ಪರಿಹಾರವನ್ನು ಯಾವ ದಿನದಂದು ಮಾಡಬೇಕು ಅಂತ ಕೂಡ ತಿಳಿಸಿದ್ದೇವೆ ಆ ದಿನದಂದೇ ಮಾಡಿ ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗಿ ಒಳ್ಳೆಯದಾಗಲಿ ಶುಭದಿನ ಧನ್ಯವಾದ.