Ad
Home ಅರೋಗ್ಯ ನೀವೇನಾದ್ರು ಈ ಪಾನೀಯವನ್ನ ಒಂದು ಗ್ಲಾಸ್ ಕುಡಿದರೆ ಸಾಕು ಎಷ್ಟು ಕೆಟ್ಟ ಕೊಳಕಾದ ಶ್ವಾಸ ಕೋಶ...

ನೀವೇನಾದ್ರು ಈ ಪಾನೀಯವನ್ನ ಒಂದು ಗ್ಲಾಸ್ ಕುಡಿದರೆ ಸಾಕು ಎಷ್ಟು ಕೆಟ್ಟ ಕೊಳಕಾದ ಶ್ವಾಸ ಕೋಶ ಇದ್ರೂ ಸಹ ಕ್ಲೀನ್ ಮಾಡಿ ಬಿಡುತ್ತದೆ..

ಇಂದಿನ ವಾತಾವರಣ ಅದೆಷ್ಟು ಕಲುಷಿತಗೊಂಡ ರುತ್ತದೆ ಅಂದರೆ ನಮ್ಮ ಉಸಿರಾಟದಿಂದ ನಾವು ತೆಗೆದುಕೊಂಡಿರುವ ಗಾಳಿ ಕೂಡ ನಮ್ಮ ಆರೋಗ್ಯವನ್ನು ಕ್ಷೀಣಿಸುತ್ತದೆ ಅಷ್ಟು ಕಲುಷಿತ ವಾತಾವರಣದಲ್ಲಿ ನಾವು ಇದೀಗ ಬದುಕುತ್ತಾ ಇದ್ದೇವೆ ಇನ್ನು ಕೆಲವರು ದುಶ್ಚಟಕ್ಕೆ ದಾಸರಾಗಿ ಧೂಮಪಾನಕ್ಕೆ ವ್ಯಸ್ತರಾಗಿರುತ್ತಾರೆ ಈ ಎಲ್ಲ ಚಟುವಟಿಕೆಗಳಿಂದ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬಿರುತ್ತದೆ .

ಅದರಲ್ಲಿಯೂ ನಮ್ಮ ಶ್ವಾಸಕೋಶ ಅಂದರೆ ಲಕ್ಸ್ ನ ಮೇಲೆ ಸಾಕಷ್ಟು ಕೆಟ್ಟ ಪರಿಣಾಮ ಬೀರುತ್ತದೆ ಅಂತಾನೇ ಹೇಳಬಹುದು ಆದ ಕಾರಣ ಇಂದಿನ ಮಾಹಿತಿಯಲ್ಲಿ ನಿಮಗೆ ಈ ಶ್ವಾಸಕೋಶದ ಆರೋಗ್ಯವನ್ನು ವೃದ್ಧಿಸಿಕೊಳ್ಳುವಂತೆ ಮತ್ತು ಶ್ವಾಸಕೋಶ ಸ್ವಚ್ಛ ವಾಗುವಂತಹ ಒಂದು ಉತ್ತಮವಾದ ಡ್ರಿಂಕ್ ಅನ್ನು ನಿಮಗೆ ತಿಳಿಸಿಕೊಡುತ್ತೇವೆ. ಇದು ಬಹಳ ಸುಲಭವಾದ ಡ್ರಿಂಕ್ ಆಗಿರುತ್ತದೆ ನೀವು ಇದನ್ನು ದಿನಬಿಟ್ಟು ದಿನ ಸೇವಿಸಬೇಕು ಇದರಿಂದ ಶ್ವಾಸಕೋಶಕ್ಕೆ ಸಂಬಂಧಪಟ್ಟ ಸಮಸ್ಯೆಗಳು ನಿವಾರಣೆಯಾಗುತ್ತವೆ ಮತ್ತು ಉತ್ತಮವಾಗಿ ಶ್ವಾಸಕೋಶದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಇದಕ್ಕಾಗಿ ನಿಮಗೆ ಬೇಕಾಗಿರುವಂತಹ ಪದಾರ್ಥಗಳು ಹೀಗಿರುತ್ತದೆ, ಅರಿಶಿಣ ಈರುಳ್ಳಿ ಒಣ ಶುಂಠಿಯ ಪುಡಿ ಮತ್ತು ನೀರು. ಮೊದಲಿಗೆ ಎರಡು ಲೋಟ ನೀರನ್ನು ತೆಗೆದುಕೊಳ್ಳಿ ಅದಕ್ಕೆ ಒಂದು ಚಮಚ ಒಣಶುಂಠಿ ಪುಡಿಯನ್ನು ಹಾಕಿ ಸ್ವಲ್ಪ ಬಿಸಿ ಮಾಡಿ. ನಂತರ ಇದಕ್ಕೆ ಅರ್ಧ ಚಮಚ ಅರಿಶಿಣದ ಪುಡಿಯನ್ನು ಹಾಕಿ, ಸಣ್ಣದಾಗಿ ಕತ್ತರಿಸಿದ ಈರುಳ್ಳಿ ಅನ್ನು ಈ ನೀರಿಗೆ ಹಾಕಿ. ನೀರು ಚೆನ್ನಾಗಿ ಕುದಿಯಬೇಕು ಎಷ್ಟು ಅಂದರೆ ಎರಡು ಲೋಟ ನೀರು ಒಂದು ಲೋಟ ವಾಗಬೇಕು ಅಷ್ಟು ಪ್ರಮಾಣದಲ್ಲಿ ನೀರನ್ನು ಕುದಿಸಬೇಕು.ಇದೀಗ ಈ ನೀರನ್ನು ನೀವು ಹೇಗೆ ಸೇವಿಸಬೇಕು ಅಂದರೆ ಒಂದು ಲೋಟಕ್ಕೆ ನೀರನ್ನು ಶೋಧಿಸಿ ಕೊಳ್ಳಿ ನಂತರ ಇದಕ್ಕೆ ನೀವು ಜೇನುತುಪ್ಪ ಬೇಕಾದರೆ ಬೆಳೆಸಿಕೊಳ್ಳಬಹುದು ಅಥವಾ ಕಪ್ಪು ಬೆಲ್ಲವನ್ನು ಪುಡಿ ಮಾಡಿ ಈ ನೀರಿಗೆ ಬೆರೆಸಿಕೊಂಡು ನೀರನ್ನು ಕುಡಿಯಿರಿ.

ಈ ಒಂದು ಡ್ರಿಂಕ್ ನಲ್ಲಿ ಬಳಸಿರುವ ಒಣಶುಂಠಿಯ ಪುಡಿ ಶ್ವಾಸಕೋಶಕ್ಕೆ ಸಂಬಂಧಪಟ ಸಮಸ್ಯೆಗಳನ್ನು ಕ್ರಮೇಣವಾಗಿ ಕಡಿಮೆ ಮಾಡುವುದಲ್ಲದೇ ಶ್ವಾಸಕೋಶವನ್ನು ಸ್ವಚ್ಛ ಪಡಿಸುತ್ತದೆ ಮತ್ತು ಶ್ವಾಸಕೋಶದಲ್ಲಿ ಅಡಗಿರುವ ಬೇಡದೆ ಇರುವ ಪದಾರ್ಥಗಳನ್ನು ಧೂಳಿನ ಅಂಶವನ್ನು ಹೊರಹಾಕಲು ಸಹಕರಿಸುತ್ತದೆ. ಈರುಳ್ಳಿ ಕೂಡ ರಕ್ತವನ್ನು ಶುದ್ಧೀಕರಣ ಮಾಡುತ್ತದೆ ಹಾಗೆ ಅರಿಶಿಣ ಉತ್ತಮವಾದ ಆ್ಯಂಟಿ ಆಕ್ಸಿಡೆಂಟ್ ಆ್ಯಂಟಿ ಬ್ಯಾಕ್ಟೀರಿಯ ಮತ್ತು ಆ್ಯಂಟಿ ಮೈಕ್ರೋಬಿಯಲ್ ಗುಣವನ್ನು ಹೊಂದಿದ್ದು, ಅರಿಶಿಣ ಶ್ವಾಸಕೋಶವನ್ನು ಸ್ವಚ್ಛ ಮಾಡಲು ಸಹಕರಿಸುತ್ತದೆ.

ಈ ಡ್ರಿಂಕ್ ಅನ್ನು ನೀವು ದಿನಬಿಟ್ಟು ದಿನ ಕುಡಿಯಿರಿ ಸಾಕು ಕೇವಲ ಒಂದು ವಾರದಲ್ಲಿಯೆ ನಿಮಗೆ ನಿಮ್ಮ ಆರೋಗ್ಯದಲ್ಲಿ ಆಗಿರುವ ಬದಲಾವಣೆಗಳನ್ನು ನೀವೆ ಕಾಣಬಹುದು. ಮನೆಯಲ್ಲಿ ಯಾರೆ ಇದ್ದರೂ ಅವರಿಗೆ ಇದನ್ನು ನಿಯಮಿತವಾಗಿ ನೀಡುತ್ತಾ ಬನ್ನಿ ಇಂದಿನ ಕಲುಷಿತ ವಾತಾವರಣದಲ್ಲಿ ಪ್ರತಿಯೊಬ್ಬರೂ ಕೂಡ ಶ್ವಾಸಕೋಶಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ, ಅದರಲ್ಲಿ ಅಸ್ತಮಾದಿಂದ ಬಳಲುತ್ತಿರುವವರು ಈ ಡ್ರಿಂಕ್ ಅನ್ನು ಕುಡಿಯಬಹುದು

ಇವತ್ತಿನ ಮಾಹಿತಿ ಇದೆಷ್ಟು ನಿಮಗೆ ಮಾಹಿತಿ ಉಪಯುಕ್ತವಾಗಿದ್ದಲ್ಲಿ ತಪ್ಪದೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಹಾಗೂ ಇನ್ನೂ ಅನೇಕ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ, ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೊ ಮಾಡಿ ಹಾಗೂ ಉತ್ತಮ ಆರೋಗ್ಯಕ್ಕಾಗಿ ಈ ಡ್ರಿಂಕ್ ಅನ್ನು ತಪ್ಪದೆ ಮಾಡಿಕೊಂಡು ಕುಡಿಯಿರಿ ಧನ್ಯವಾದ.

Exit mobile version