ನೀವೇನಾದ್ರು ಬೆಳಿಗ್ಗೆ ತಿಂಡಿ ತಿನ್ನುವ ಸಂದರ್ಭದಲ್ಲಿ ಈ ಕೆಲ ವಸ್ತುಗಳನ್ನ ತಿನ್ನಲೇಬೇಡಿ , ಯಾಕಂದ್ರೆ ನಿಮ್ಮ ದೇಹಕ್ಕೆ ಬಾರಿ ಪರಿಣಾಮವನ್ನ ಬೀರುತ್ತವೆ..

169

ನಮಸ್ಕಾರ ಬೆಳಗಿನ ಆಹಾರ ಪದ್ಧತಿ ಹೇಗಿರಬೇಕು ಅಂದರೆ ದೇಹಕ್ಕೆ ದಿನವಿಡೀ ಕೆಲಸ ಮಾಡುವಂತಹ ಶಕ್ತಿ ನೀಡಬೇಕು ದೇಹಕ್ಕೆ ಪೋಷಕಾಂಶಗಳನ್ನು ನೀಡಬೇಕು ಅಂತಹ ಆಹಾರ ಪದಾರ್ಥಗಳನ್ನು ನಾವು ಬೆಳಗಿನ ಸಮಯದಲ್ಲಿ ಸೇವಿಸಬೇಕು ಆದರೆ ಎಷ್ಟು ಮಂದಿ ಬೆಳಗಿನ ಉಪಾಹಾರವನ್ನು ನಿರ್ಲಕ್ಷ್ಯ ಮಾಡುತ್ತಾರೆ ಇದರಿಂದ ತಲೆಸುತ್ತು ಕೂತು ಎದ್ದಾಗ ತಲೆಸುತ್ತು ಬರುವುದು. ಇಂತಹ ತೊಂದರೆಗಳು ಆಗುತ್ತಾ ಇರುತ್ತದೆ ಇದಕ್ಕೆಲ್ಲ ಕಾರಣ ಅಂದರೆ ಬೆಳಗ್ಗಿನ ಉಪಾಹಾರ ಸರಿಯಾಗಿ ಆಗದೆ ಇರುವುದು ಸಮಯವಾಯಿತು ಅಥವಾ ಮಾಡಿಕೊಳ್ಳುವುದಕ್ಕೆ ಸೋಂಭೇರಿತನವಾಗಿ ಬೆಳಗಿನ ಉಪಾಹಾರವನ್ನು ನಿರ್ಲಕ್ಷ್ಯದಿಂದ ಯಾವುದ್ಯಾವುದೋ ಆಹಾರ ಪದಾರ್ಥಗಳನ್ನು ಸೇವನೆ ಮಾಡಿದರೆ ಅನಾರೋಗ್ಯ ಸಮಸ್ಯೆ ಕಟ್ಟಿಟ್ಟ ಬುತ್ತಿ.

ಆದಕಾರಣವೇ ಬೆಳಗಿನ ಸಮಯದಲ್ಲಿ ಯಾವ ಕೆಲವೊಂದು ಆಹಾರ ಪದಾರ್ಥಗಳನ್ನು ಸೇವನೆ ಮಾಡಬಾರದು ಅದರಿಂದ ಆರೋಗ್ಯದ ಮೇಲೆ ಆಗಬಹುದಾದ ಅಡ್ಡ ಪರಿಣಾಮಗಳ ಬಗ್ಗೆ ಕೂಡ ತಿಳಿಯೋಣ ಮೊದಲನೆಯದಾಗಿ ಬ್ರಿಡ್ಜ್ ಇತ್ತೀಚಿನ ಮಂದಿ ಅಂತೂ ಪಾಶ್ಚಾತ್ಯರ ಮೊರೆ ಹೋಗಿ. ಅವರಂತೆ ಬೆಳಗಿನ ಸಮಯದಲ್ಲಿ ಬ್ರೇಕ್ ಜಾಮ್ ಬ್ರೆಡ್ ಆಮ್ಲೆಟ್ ಇಂತಹ ಬೆಳಗಿನ ಉಪಹಾರವನ್ನು ತಯಾರಿಸಿಕೊಂಡು ತಿಂತಾರೆ ಆದರೆ ಬ್ರೆಟನ್ ನು ಮೈದಾನದಿಂದ ಮಾಡಿರುತ್ತಾರೆ ಮತ್ತು ಜಾಮ್ ಅನ್ನು ಅನೇಕ ವಿಧದ ರಾಸಾಯನಿಕ ಪದಾರ್ಥಗಳನ್ನು ಬಳಸಿ ಮತ್ತು ಕಲರಿಂಗ್ ಅನ್ನೋ ಬಳಸಿ ತಯಾರಿಸಿರುತ್ತಾರೆ .

ಇದು ದೇಹವನ್ನು ಹಾಳು ಮಾಡಬಹುದು ಯಾಕೆಂದರೆ ರಾತ್ರಿ ಮಲಗಿದ ನಂತರ ನಮ್ಮ ದೇಹ ಸುಮಾರು 8ಗಂಟೆಗಳ ಕಾಲ ಉಪವಾಸ ಇರುತ್ತದೆ. ಆ ಅವಧಿಯಲ್ಲಿ ದೇಹಕ್ಕೆ ಪೋಷಕಾಂಶಗಳು ದೊರೆಯದೆ ದೇಹ ಬಳಲಿರುತ್ತದೆ ಅಂಥ ಸಮಯದಲ್ಲಿ ನಾವು ಪೌಷ್ಠಿಕಾಂಶವುಳ್ಳ ಆಹಾರವನ್ನು ನೀಡಬೇಕಾಗುತ್ತದೆ ಅದನ್ನು ಹೊರತುಪಡಿಸಿ ರಾಸಾಯನಿಕದಿಂದ ಕೂಡಿರುವ ಆಹಾರ ಪದಾರ್ಥಗಳನ್ನು ಸೇವನೆ ಮಾಡಿದರೆ ಮುಂದಿನ ದಿವಸಗಳಲ್ಲಿ ಅನಗತ್ಯ ಬೊಜ್ಜಿನ ಸಮಸ್ಯೆ ಇನ್ನೂ ಮುಂತಾದಂತಹ ಅನಾರೋಗ್ಯ ಸಮಸ್ಯೆಗಳು ಉಂಟಾಗಿ ಆರೋಗ್ಯ ಕೆಡುತ್ತದೆ.

ಬೆಳಗಿನ ಸಮಯದಲ್ಲಿ ಮಾಂಸಾಹಾರ ಪದಾರ್ಥಗಳನ್ನು ಸೇವನೆ ಮಾಡುವುದು ಕೂಡ ಉತ್ತಮವಲ್ಲಾ. ಹೌದು ಬೆಳಗಿನ ಸಮಯದಲ್ಲಿ ನಾವು ಪೌಷ್ಠಿಕಾಂಶವುಳ್ಳ ಆಹಾರವನ್ನು ಸೇವನೆ ಮಾಡಬೇಕೆಂದು ಹೆಚ್ಚಿನ ಪೌಷ್ಟಿಕಾಂಶವುಳ್ಳ ಆಹಾರವನ್ನು ಸೇವನೆ ಮಾಡಬಾರದು. ದೇಹಕ್ಕೆ ಬೇಕಾಗಿರುವಂತಹ ಉತ್ತಮವಾದ ಪೋಷಕಾಂಶಗಳನ್ನು ಹೊಂದಿರುವ ಮತ್ತು ಲಘು ಪೌಷ್ಠಿಕಾಂಶವನ್ನು ಹೊಂದಿರುವ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದು ಒಳ್ಳೆಯದು.

ಬೆಳಗಿನ ಸಮಯದಲ್ಲಿ ಕರಿದ ಪದಾರ್ಥಗಳು ಮತ್ತು ಮೈದಾ ಎಂದ ಮಾಡಿರುವಂತಹ ಆಹಾರ ಪದಾರ್ಥಗಳು ಅಂದರೆ ಚಪಾತಿ ಪೂರಿ ಇಂತಹ ಆಹಾರವನ್ನು ಕೂಡ ಸೇವನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇನ್ನೂ ಕೆಲವರು ಗೆ ಬೆಳಗಿನ ಸಮಯದಲ್ಲಿ ಜ್ಯೂಸ್ ಕುಡಿಯುವ ಅಭ್ಯಾಸ ಇರುತ್ತದೆ ಆದರೆ ಮನೆಯಲ್ಲಿಯೇ ತಯಾರಿಸಿದ ಫ್ರೆಶ್ ಹಣ್ಣಿನ ಜ್ಯೂಸ್ ಅನ್ನು ಬೆಳಗಿನ ಉಪಾಹಾರಕ್ಕೆ ಕುಡಿಯುವುದು ಒಳ್ಳೆಯದು ಆದರೆ ಸಂಸ್ಕರಿಸಿದ ಪ್ಯಾಕೆಟ್ ಜ್ಯೂಸ್ ಗಳನ್ನು ಕುಡಿಯುವುದು ಆರೋಗ್ಯಕ್ಕೆ ಸ್ವಲ್ಪವೂ ಒಳ್ಳೆಯದಲ್ಲ.

ಇಲ್ಲಿನ ಮಂದಿ ತಮಗೆ ಕೆಲಸ ಕಡಿಮೆಯಾಗಲೆಂದು ಮಕ್ಕಳಿಗೆ ಮಾರುಕಟ್ಟೆಯಲ್ಲಿ ದೊರೆಯುವ ಅನೇಕ ಪ್ರೋಟೀನ್ ಪುಡಿಯನ್ನು ಸೀರಿಯಲ್ ಗಳನ್ನು ಧಾನ್ಯ ಮಿಶ್ರಿತ ಪುಡಿಯನ್ನು ತಂದು ಮಕ್ಕಳಿಗೆ ನೀಡ್ತಾರೆ ಆದರೆ ಅದರಲ್ಲಿ ಹೆಚ್ಚಾಗಿ ರಾಸಾಯನಿಕ ಪದಾರ್ಥಗಳನ್ನು ಬಳಕೆ ಮಾಡಿರುತ್ತಾರೆ ಸ್ವಲ್ಪ ಪ್ರಮಾಣದಲ್ಲಿ ಅಷ್ಟೇ ತಾನೆ ಗಳನ್ನು ಬಳಸಿರುತ್ತಾರೆ ಇದರಿಂದ ದೇಹಕ್ಕೆ ಯಾವುದೇ ವಿಧದ ಪೋಷಕಾಂಶಗಳು ಜೀವಸತ್ವಗಳು ದೊರೆಯುವುದಿಲ್ಲ ಇದರಿಂದ ಆರೋಗ್ಯ ಕೆಡುತ್ತದೆ. ಈ ರೀತಿಯಾಗಿ ಈ ಮೇಲೆ ತಿಳಿಸಿದಂತಹ ಆಹಾರ ಪದಾರ್ಥಗಳನ್ನು ಬೆಳಗಿನ ಸಮಯದಲ್ಲಿ ಸೇವನೆ ಮಾಡುವುದನ್ನು ಆದಷ್ಟು ಕಡಿಮೆ ಮಾಡಿ ಧನ್ಯವಾದ.