ಪಾಪ ರಸ್ತೆಯಲ್ಲಿ ಏನೋ ಜೀವನ ನಡೆಸೋದಕ್ಕೆ ಕೂತಿದ್ರೆ ಈ ವ್ಯಕ್ತಿ ನೋಡಿ ಆ ಅಜ್ಜಿಗೆ ಕರಕೊಂಡು ಹೋಗಿ ಏನು ಮಾಡಿದ್ದಾನೆ…. ನಿಜಕ್ಕೂ ಕರುಣೆ ಇರಬೇಕ್ರಿ…

84

ಕಣ್ಣಿಗೆ ಕಾಣದೊಂದು ಚಿಕ್ಕ ವೈರಾಣು ಪ್ರಪಂಚದ ಹಲವು ದೇಶಗಳಿಗೆ ಮಾರಕವಾಗಿ ಭಾಸವಾಗಿತ್ತು ಹೌದು ಈ ವೈರಾಣುವಿನಿಂದ ಅದೆಷ್ಟೋ ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಕೆಲಸ ಕಳೆದುಕೊಂಡಿದ್ದಾರೆ ಕುಟುಂಬವನ್ನು ಕಳೆದುಕೊಂಡಿದ್ದಾರೆ ಇದೀಗ ನೆಮ್ಮದಿಯನ್ನು ಕೂಡ ಕಳೆದುಕೊಂಡು ಬಿಟ್ಟಿದ್ದಾರೆ. ಇದೆಲ್ಲದರ ನಡುವೆ ಇನ್ನೂ ಕೂಡ ಮನುಷ್ಯ ಜೀವನ ಮಾಡುತ್ತಾ ಇದ್ದಾನೆ ಎಂದರೆ ಯಾವುದೋ ನಂಬಿಕೆ ಅದೊಂದು ದಿವಸ ಎಲ್ಲಾ ಸರಿಹೋಗುತ್ತದೆ ಎಂದು ಇನ್ನೂ ಜನರ ರಕ್ಷಣೆಗಾಗಿ ದೇಶದ ಸರಕಾರವೂ ಕೂಡ ಬಹಳ ಪ್ರಯತ್ನಗಳನ್ನು ಮಾಡಿವೆ ಕಠಿಣ ನಿಯಮಗಳನ್ನು ಜಾರಿಗೊಳಿಸುವ ಮೂಲಕ ಜನರನ್ನು ಜನರ ಜೀವನವನ್ನ ರಕ್ಷಣೆ ಮಾಡುತ್ತದೆ. ಹೌದು ಕಳೆದ 2ವರುಷಗಳಿಂದ ಲಾಕ್ ಡೌನ್ ಅನ್ನೂ ಸರಕಾರ ವಿಧಿಸಿತ್ತು ಹಾಗೂ ಜನರು ಕೂಡ ಈ ವೇಳೆ ಸರ್ಕಾರದ ಮಾತಿಗೆ ಬೆಲೆ ನೀಡಿ ಮನೆಯಲ್ಲಿಯೇ ಇದ್ದರು.

ಇನ್ನೂ ಈ ಲಾಕ್ ಡೌನ್ ಮಾಡಿದ್ದು ಒಳ್ಳೆಯದೇ ಏಕೆಂದರೆ ಜನರು ಹೆಚ್ಚಾಗಿ ಓಡಾಡಿದರೆ ಕ’ರೋ’ನ ಸೋಂ’ಕಿತರ ಸಂಖ್ಯೆ ಹೆಚ್ಚಾಗಬಹುದು ಅಲ್ವಾ ಆದ್ದರಿಂದ ಸರ್ಕಾರ ಲುಫ್ತಾನ್ಸ್ ಮಾಡುವ ಅನಿವಾರ್ಯ ಇತ್ತು ಹಾಗೆ ಲಾಕ್ ಡೌನ್ ಮಾಡಿತ್ತು ಕೂಡ. ಈ ಲಾಕ್ ಡೌನ್ ನಲ್ಲಿ ದಿನ ಕೂಲಿ ಮಾಡುವವರು ತರಕಾರಿ ಮಾರುವವರು ರಸ್ತೆಗಳ ಬದಿಯಲ್ಲಿ ವ್ಯಾಪಾರ ಮಾಡುವವರು ಸಣ್ಣ ಪುಟ್ಟ ಅಂಗಡಿಗಳನ್ನು ಇಟ್ಟುಕೊಂಡು ಜೀವನ ನಡೆಸುವವರ ಪಚೀತಿ ಅವರ ಗತಿ ಈ ಸಮಯದಲ್ಲಿ ನೋಡುವುದಕ್ಕೂ ಕೂಡ ಆಗುತ್ತಿರಲಿಲ್ಲ ಹೌದು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ಬಂದುಬಿಟ್ಟಿತ್ತು. ಆ ದಿವಸ ದಂದು ದೂಡಿ ಇದ್ದು ಅಂದು ಬಂದ ಹಣದಲ್ಲಿ ಜೀವನ ನಡೆ ಸುತ್ತಿದ್ದ ಹಲವರು ಮನೆಯಲ್ಲಿಯೇ ಕೂತಾಗ ಕೈಯಲ್ಲಿ ಹಣವಿಲ್ಲದೆ ಊಟವಿಲ್ಲದೆ ಮನೆಯವರ ಪರಿಸ್ಥಿತಿ ನೋಡುವುದಕ್ಕು ಸಾಧ್ಯವಾಗದ ಅದೆಷ್ಟೋ ಕುಟುಂಬಗಳು ಸ..ಮತ್ತು ಬದುಕಿದೆ.

ಸರ್ಕಾರ ಇದನ್ನೆಲ್ಲ ಗಮನಿಸುತ್ತ ಇರಲಿಲ್ಲ ಮತ್ತೊಂದು ಕಡೆ ರೋಗಿಗಳಿಗೆ ಬೇಕಾದ ಸರಿಯಾದ ಸೌಲಭ್ಯಗಳನ್ನು ಕೂಡ ನೀಡುತ್ತಿರಲಿಲ್ಲ. ಇದರ ಮದ್ಯೆ ಡಾಕ್ಟರ್ ಗಳಿಗೆ ಮತ್ತು ಪೋಲಿಸರಿಗೆ ಒಂದು ಹ್ಯಾಟ್ಸ್ ಆಪ್ ಹೇಳಲೇ ಬೇಕು. ಇನ್ನೂ ಈ ದಿನ ಮುಂಬೈ ನಲ್ಲಿ ನಡೆದ ಈ ಒಂದು ಘ’ಟನೆ ನಿಜಕ್ಕೂ ಮನಸ್ಸಿಗೆ ಹತ್ತಿರವಾಗಿದೆ.. ಮುಂಬೈನ ಒಂದು ಪ್ರದೇಶದ ರಸ್ತೆಯ ಬದಿಯಲ್ಲಿ ಒಬ್ಬ ಅಜ್ಜಿ ದಿನನಿತ್ಯ ಹೂವುಗಳನ್ನು ಮಾರುತ್ತ ಇರುತ್ತಾಳೆ.. ಆ ಪ್ರದೇಶದಲ್ಲಿ ವಾರಕ್ಕೊಮ್ಮೆ ಲಾಕ್ ಡೌನ್ ಇದ್ದ ಕಾರಣ ಪೋಲಿಸರು ಸಿಟಿ ರೌಂಡ್ಸ್ ಹೋಗುತ್ತಿದ್ದರು. ಈ ಅಜ್ಜಿ ಲಾಕ್ ಡೌನ್ ದಿನವೂ ಕೂಡ ಹೂವನ್ನು ಮಾರುತ್ತ ಇರುತ್ತಾರೆ. ಆಗ ಅಜ್ಜಿಯ ಹತ್ತಿರ ಬಂದ ಪೋಲಿಸರು ಅಜ್ಜಿ ಈ ದಿನ ಲಾಕ್ ಡೌನ್ ಇದೆ ಆದ್ದರಿಂದ ಇಲ್ಲಿ ಯಾರೂ ವ್ಯಾಪಾರ ಮಾಡುವಂತಿಲ್ಲ ಮನೆಗೆ ಹೋಗಿ ಎಂದು ಹೇಳುತ್ತಾರೆ. ಆಗ ಈ ಅಜ್ಜಿ ಹೇಳಿದ ಮಾತಿಗೆ ಪೋಲಿಸರು ಒಂದು ಕ್ಷಣ ದುಃಖಿತರಾಗಿದ್ದಾರೆ.

ಹೌದು ನಾನು ಈ ಹೂವನ್ನು ಮಾರದಿದ್ದರೆ ನನ್ನ ಮನೆಯವರು ಊಟವಿಲ್ಲದೆ ಹಸಿವಿನಿಂದ ಸಾ’ಯ ಬೇಕಾಗುತ್ತದೆ ಎಂದು ಹೇಳುತ್ತಾರೆ. ಆಗ ಈ ಪೋಲಿಸರು ಆ ಅಜ್ಜಿಗೆ 500 ರೂಪಾಯಿಯನ್ನು ಕೊಟ್ಟು ಲಾಕ್ ಡೌನ್ ಮುಗಿಯುವ ವರೆಗೂ ನಾವು ನಿಮಗೆ 500 ರೂಪಾಯಿಗಳನ್ನು ಕೊಡುತ್ತೇವೆ ನೀವು ಮನೆಯಿಂದ ಹೊರಗಡೆ ಬರಬೇಡಿ ಎಂದು ಕೇಳಿಕೊಳ್ಳುತ್ತಾರೆ. ಆಗ ಆ ಅಜ್ಜಿ ಇವರಿಗೆ ಧನ್ಯವಾದಗಳನ್ನು ತಿಳಿಸಿ ಮನೆಗೆ ಹೋಗಿದ್ದಾರೆ. ಅಜ್ಜಿಯ ಪರಿಸ್ಥಿತಿ ಅನ್ನು ಅರ್ಥ ಮಾಡಿಕೊಂಡು ಈ ಪೋಲಿಸರು ಮಾಡಿದ ಕೆಲಸ ನಿಜಕ್ಕೂ ಶ್ಲಾಘನೀಯ ಹಾಗೆ ಅಜ್ಜಿಯಂತೆ ದಿನಗೂಲಿ ವ್ಯಾಪಾರ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವ ಅದೆಷ್ಟೋ ಜನರು ಅಜ್ಜಿಯಂತೆ ಯೋಚನೆ ಮಾಡಿ ಲಾಕ್ ಡೌನ್ ಅಲ್ಲಿಯೂ ಸಹ ವ್ಯಾಪಾರ ಮಾಡಿ ಜೀವನ ಸಾಗಿಸುವುದು ಕೂಡ ಉಂಟು. ಇನ್ನು ಈ ಮಾಹಿತಿ ತಿಳಿದ ನಂತರ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಹೌದು ಲಾಕ್ ಡೌನ್ ಸಮಯದಲ್ಲಿ ಹೆಚ್ಚಿನ ಜನರು ಕಷ್ಟಗಳನ್ನು ಎದುರಿಸಿದ್ದರೂ ಆ ಕಷ್ಟ ಮುಂದಿನ ದಿವಸಗಳಲ್ಲಿ ಬರುವುದು ಬೇಡ ಎಂದು ದೇವರಲ್ಲಿ ಪ್ರಾರ್ಥಿಸೋಣ.