ಪುನೀತ್ ಅವರ 2 ಕಣ್ಣನ್ನು 4 ಜನರಿಗೆ ಜೋಡಿಸಿದ್ದ ಕತೆ ರೋಚಕ .. ಅಷ್ಟಕ್ಕೂ ಆ ನಾಲ್ಕು ಜನ ಅದೃಷ್ಟವಂತರು ಯಾರು ಗೊತ್ತ ..

180

ತಮ್ಮ ತಂದೆಯಂತೆ ಬಾಳಿದ ಅಪ್ಪು ಅವರು ಇದೀಗ ನಮ್ಮ ಜೊತೆ ಇಲ್ಲ ಹೌದು ಬದುಕಿದ್ದಾಗ ಇವರು ಮಾಡಿದಂತಹ ಕೆಲಸ ಯಾರಿಗೂ ಕೂಡ ತಿಳಿದಿರಲಿಲ್ಲ ಹೌದು ಇವರು ಮಾಡಿದ ಕೆಲಸ ಬೆಳಕಿಗೆ ಬಂದಿರಲಿಲ್ಲ ಆದರೆ ಎಂದು ಅಪ್ಪು ಇನ್ನಿಲ್ಲ ಹೃದಯಾಘಾತದಿಂದ ನಮ್ಮನ್ನು ಅಗಲಿದರು ಎಂಬ ವಿಚಾರ ಕೇಳುತ್ತಿದ್ದ ಹಾಗೆ ಅಪ್ಪು ಅವರು ಮಾಡಿದ ಕೆಲಸ ಒಂದೊಂದೇ ಬೆಳಕಿಗೆ ಬಂದಿತ್ತು ಇನ್ನು ಅಪ್ಪು ಅವರು ಮಾಡಿದ ಕೆಲಸ ಹಾಗೂ ಸಹಾಯ ಒಂದಲ್ಲ ಎರಡಲ್ಲ ಒಬ್ಬರಿಗಲ್ಲ ಇಬ್ಬರಿಗೂ ಇಲ್ಲ ಇವರು ಮಾಡಿದ ಸಹಾಯ ಅಪಾರ ಬದುಕಿದ್ದಾಗ ಇವರಂತೆ ಬದುಕಬೇಕು ಅಂತ ಅನಿಸುವ ಆದರ್ಶ ವ್ಯಕ್ತಿ ಇವರು ಹಾಗೂ ಸಾವಿನ ಬಳಕವೂ ಸಾರ್ಥಕತೆಯನ್ನು ಮೆರೆದಿರುವ ಅಪ್ಪು ಅವರು ತಮ್ಮ ತಂದೆಯಂತೆ ಕಣ್ಣುಗಳನ್ನ ದಾನ,

ಮಾಡಿ ಸಾವಿನಲ್ಲಿಯೂ ಸಾರ್ಥಕತೆ ತೋರಿದ್ದಾರೆ ಹೌದೋ ಅಪ್ಪು ಅವರ ಕಣ್ಣುಗಳನ್ನ ಒಬ್ಬರಿಗೋ ಇಬ್ಬರಿಗಲ್ಲ ನಾಲ್ಕು ಜನರಿಗೆ ಅಳವಡಿಸಲಾಗಿದೆ. ಇನ್ನು ಅಪ್ಪು ಅವರ ಕಣ್ಣುಗಳನ್ನು ಆ 4ಬಡ ಮಕ್ಕಳಿಗೆ ಹೇಗೆ ಅಳವಡಿಸಲಾಯಿತು ಎಂದು ವೈದ್ಯರು ಸಹ ಇದೀಗ ತಿಳಿಸಿದ್ದು, ಅಪ್ಪು ಅವರು ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ವಿಚಾರ ಕೇಳ್ತಿದ್ದ ಹಾಗೆ ಆಸ್ಪತ್ರೆಯ ಮುಂದೆ ಅಭಿಮಾನಿಗಳು ನೆರೆದಿದ್ದರು. ಆದರೆ ಯಾವಾಗ ಕಣ್ಣಿನ ಡಾಕ್ಟರ್ ಆಸ್ಪತ್ರೆಯೊಳಗೆ ಹೋದರು ಅಂದು ಎಲ್ಲರಿಗೂ ತಿಳಿದಿತ್ತು ಅಪ್ಪು ಅವರು ಇನ್ನಿಲ್ಲ ಎಂಬ ವಿಚಾರ.

ನಾಲ್ಕು ಜನರ ಬಾಳಿಗೆ ಬೆಳಾಗಿದ್ದಾರೆ ಅಪ್ಪು, ಹೌದು ದಾನ ಮಾಡಲಾದ ಎರಡೂ ಕಣ್ಣುಗಳು ಎರಡು ಕಣ್ಣುಗಳು ತುಂಬಾ ಆರೋಗ್ಯವಾಗಿ ಇದ್ದರೆ, ಕಾರ್ನಿಯಾವನ್ನ ನಾವು ನಾಲ್ಕು ಭಾಗ ಮಾಡಬಹುದು, ಎಂದು ವೈದ್ಯರು ತಿಳಿಸಿದ್ದು ಕಾರ್ನಿಯಾವನ್ನ ನಾವು ಒಂದು ಗ್ಲಾಸ್ ಎಂದು ಊಹಿಸಿದರೆ ಅದರಲ್ಲಿ ಮುಂಬಾಗ ಮತ್ತು ಹಿಂಬಾಗ ಇರುತ್ತದೆ. ಮುಂಬಾಗ ಕಾರ್ನಿಯಾ ತೊಂ’ದ’ರೆ ಇರೋರಿಗೆ ದಾನ ಪಡೆದ ಕಣ್ಣಿನ ಮುಂಭಾಗವನ್ನ ಅಳವಡಿಸಲಾ ಗುತ್ತದೆ, ಹಿಂಭಾಗದ ಕಾರ್ನಿಯಾ ತೊಂ’ದ’ರೆ ಇರೋರಿಗೆ ಅಳವಡಿಸುತ್ತೇನೆ ಎಂದು ವೈದ್ಯರಾಗಿರುವ ಡಾ ಭುಜಂಗ ಶೆಟ್ಟಿ ಅವರು ಹೇಳಿದ್ದಾರೆ.

ಕಣ್ಣುಗಳನ್ನ ದಾನ ಪಡೆದವರು ಯಾರು ಎಂಬುದನ್ನ ಬಹಿರಂಗ ಪಡಿಸುವಂತಿಲ್ಲಾ ಇದು ಪಾಲಿಸಲೇಬೇಕಾಗಿರುವುದು ನಿಯಮ ಆಗಿದೆ ಆ ಕಾರಣಕ್ಕಾಗೇ ಅಪ್ಪು ಅವರ ಕಣ್ಣು ಪಡೆದವರು ಯಾರು ಎಂಬ ಮಾಹಿತಿ ಅನ್ನೋ ಸಹ ಗೌಪ್ಯವಾಗಿ ಇಡಲಾಗುತ್ತದೆ ಎಂದು ಹೇಳಿದ್ದಾರೆ ವೈದ್ಯರು. ಆ ಕಾರಣಕ್ಕಾಗಿಯೇ ಅಪ್ಪು ಕಣ್ಣು ಪಡೆದವರು ಯಾರು ಎಂಬುದನ್ನ ಗೌಪ್ಯವಾಗಿ ಇಡಲಾಗುತ್ತದೆ. ಅಷ್ಟೇ ಅಲ್ಲಾ ಕಣ್ಣು ಪಡೆದ ವ್ಯಕ್ತಿಗೂ ಕೂಡ ತಾವು ಪಡೆದಿರೋದು ಪುನೀತ್ ಅವರ ಕಣ್ಣು ಅನ್ನೋದು ಗೊತ್ತಾಗೋದಿಲ್ಲಾ. ಕಾನೂನಿನ ಅನ್ವಯ ಆ ಮಾಹಿತಿಯನ್ನ ಗೌಪ್ಯವಾಗಿ ಇಡಲಾಗುತ್ತದೆ. ಒಟ್ಟಿನಲ್ಲಿ ನಟ ಪುನೀತ್ ಅವರು ನಿ’ಧ’ನದ ನಂತರವೂ ಸಾರ್ಥಕತೆ ಮೆರೆದಿದ್ದಾರೆ ಎಂದು ಹೇಳಲಾಗಿದೆ. ನಾಲ್ಕು ಜನರ ಬಾಳಿನ ಬೆಳಕಾಗುವ ಮೂಲಕ ಇತರರಿಗೂ ಮಾದರಿಯಾಗಿ ಇದ್ದಾರೆ.

ನಟ ಪುನೀತ್ ಅವರು ಬದುಕಿದ್ದಾಗ ಅದೆಷ್ಟು ಜನರ ಜೀವನಕ್ಕೆ ಬಾಳಿಗೆ ಬೆಳಕಾಗಿದ್ದಾರೆ ಹಾಗೆ ಇವರು ಇನ್ನಿಲ್ಲ ಎಂಬ ವಿಚಾರ ಕೇಳುತ್ತಿದ್ದ ಹಾಗೆ ಇವರ ಕನಸಿನಂತೆ ನೇತ್ರ ದಾನ ಮಾಡಲು ಕುಟುಂಬದವರು ಅಲೋಚಿಸಿ ಪುನೀತ್ ಅವರ ಅಣ್ಣಂದಿರು ಆಗಿರುವ ಶಿವಣ್ಣ ಅವರು ತಮ್ಮನ ಆಸೆ ಅನ್ನೂ ಪೂರೈಸಿದ್ದಾರೆ. ಅಷ್ಟೇ ಅಲ್ಲ ಬದುಕಿದಾಗಲೇ ನೇತ್ರದಾನ ಮಾಡಲು ಪತ್ರಕ್ಕೆ ಸಹಿ ಹಾಕಿದ ಪುನೀತ್ ಅವರು ಹಲವು ಕಾರ್ಯಕ್ರಮಗಳಲ್ಲಿ ನೇತ್ರದಾನದ ಕುರಿತು ಮಾತನಾಡಿದರು ಪುನೀತ್.

ಅಷ್ಟೆಲ್ಲ ಮತ್ತೊಂದು ವಿಚಾರವೇನು ಅಂದರೆ ಪುನೀತ್ ಅವರು ನೇತ್ರದಾನ ಮಾಡಿದ್ದಾರೆ ಎಂಬ ವಿಚಾರ ತಿಳಿದು ಈಗಾಗಲೇ ಹಲವು ಮಂದಿ ಪುನೀತ್ ಅವರ ಅಪಾರ ಅಭಿಮಾನಿಗಳು ತಮ್ಮ ನೇತ್ರದಾನ ಮಾಡುವುದಕ್ಕೆ ಇದೀಗ ಸಹಿ ಮಾಡಿದ್ದು ಪುನೀತ್ ಅವರ ಹಾದಿಯನ್ನು ಹಿಡಿದಿರುವ ಎಷ್ಟೋ ಅಭಿಮಾನಿಗಳು ಪುನೀತ್ ಅವರಂತೆ ಆದರ್ಶವಾಗಿ ಬದುಕಿದ್ದೇವೆ ಎಂದು ಸಹ ಹೇಳಿಕೊಂಡಿದ್ದಾರೆ. ಪುನೀತ್ ಅವರು ದೈಹಿಕವಾಗಿ ನಮ್ಮ ಜೊತೆ ಇರದೆ ಇರಬಹುದು ಆದರೆ ಅವರ ವ್ಯಕ್ತಿತ್ವದಿಂದ ಅವರು ಸದಾ ನಮ್ಮ ಜತೆ ಇರುತ್ತಾರೆ ಅವರು ಸದಾ ಅಮರ.