ಪುನೀತ್ ರಾಜಕುಮಾರ್ ಮಗಳು ಅಷ್ಟಕ್ಕೂ ಓದುತ್ತ ಇರೋದು ಎಷ್ಟನೇ ತರಗತಿ .. ತುಂಬಾ ಜನರಿಗೆ ಇದು ಗೊತ್ತಿಲ್ಲ

151

ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನೆಲ್ಲ ಅಗಲಿ ಈಗಾಗಲೇ 11 ದಿನ ಕೂಡ ಕಳೆದಿಲ್ಲ ಹೌದು ಪುನೀತ್ ಅವರು ನಮ್ಮನ್ನೆಲ್ಲಾ ಅಗಲಿದ್ದಾರೆ ಅಂತಾನೆ ಅನಿಸುತ್ತಾ ಇದೆ ಇವತ್ತಿಗೂ ನಮ್ಮ ಮಧ್ಯೆ ಇದ್ದಾರೆ ನಮ್ಮ ಜತೆಯಲ್ಲೇ ಇದ್ದಾರೆ ಎಂಬ ಭಾವನೆ. ಪುನೀತ್ ಅವರ ಹನ್ನೊಂದನೇ ದಿನದ ಕಾರ್ಯವನ್ನು ಶಾಸ್ತ್ರೋಕ್ತವಾಗಿ ದೊಡ್ಮನೆಯವರು ಪುನೀತ್ ಅವರ ಮನೆಯಲ್ಲಿ ನೆರವೇರಿಸಿದ್ದಾರೆ ಆನಂತರ ಪುನೀತ್ ಅವರ ಹನ್ನೊಂದನೇ ದಿನದ ಕಾರ್ಯವನ್ನು ಕಂಠೀರವ ಸ್ಟೇಡಿಯಂನಲ್ಲಿ ಪುನೀತ್ ಅವರ ಸಮಾಧಿ ಬಳಿ ನೆರವೇರಿಸಲಾಗಿದೆ.

ಹೌದು ದೊಡ್ಮನೆಯವರು ಪುನೀತ್ ಅವರ ಪುಣ್ಯತಿಥಿ ಅನ್ನೋ ಕಂಠೀರವ ಸ್ಟೇಡಿಯಂನಲ್ಲಿ ನೆರವೇರಿಸಿದ್ದು, ಈ ದಿನ ಪುನೀತ್ ಅವರ ಅಣ್ಣಂದೀರುಶಿವಣ್ಣ ಹಾಗೂ ರಾಗಣ್ಣ ಕುಟುಂಬದವರು ಕಾರಿನಲ್ಲಿ ಆಗಮಿಸಿದರು ಹಾಗೂ ಪುನೀತ್ ಅವರ ಪತ್ನಿ ಅಶ್ವಿನಿ ಮತ್ತು ಅವರ ಮಗಳು ಸಹ ಕಾರಿನಲ್ಲಿ ಆಗಮಿಸಿದ್ದು ಈ ಪುಣ್ಯತಿಥಿ ಕಾರ್ಯಕ್ರಮವನ್ನು ವಿನಯ್ ಅವರು ನೆರವೇರಿಸಲಿದ್ದಾರೆ ಇನ್ನೂ ದೊಡ್ಮನೆ ಕುಟುಂಬಸ್ಥರು ಬಸ್ಸಿನಲ್ಲಿ ಬಂದು ಪುನೀತ್ ಅವರ ಪುಣ್ಯತಿಥಿಯಲ್ಲಿ ಪಾಲ್ಗೊಂಡಿದ್ದರು ಹಾಗೆ ರಾಜ್ಯದ ಹಲವು ಕಡೆಯಿಂದ ಅಭಿಮಾನಿಗಳು ಸಹ ಹನ್ನೊಂದನೇ ದಿನದ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಸಾಲು ಸಾಲಾಗಿ ಬಂದು ಪುನೀತ್ ಸಮಾಧಿ ದರ್ಶನ ಪಡೆದುಕೊಂಡು ಹೋಗಿದ್ದಾರೆ.

ಇತ್ತ ಪುನೀತ್ ಅವರ ಎರಡನೆಯ ಮಗಳಾಗಿರುವ ವಂದಿತಾ ಅವರು ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಾ ಇದ್ದು, ಅಪ್ಪು ಅವರ ಹನ್ನೊಂದನೇ ಪುಣ್ಯ ತಿಥಿಯ ದಿನ ದಂದೇ ವಂದಿತಾ ಗೆ ಪರೀಕ್ಷೆ ಇದ್ದ ಕಾರಣ ತಂದೆಯ ಕಾರ್ಯದ ದಿನವೂ ಸಹ ತಂದೆಗೆ ನಮಿಸಿ ಅಷ್ಟು ನೋವಿನಲ್ಲಿಯೂ ವಂದಿತಾ ಪರೀಕ್ಷೆ ಬರೆಯಲು ಹೋಗಿದ್ದರೂ ಹೌದು ತಂದೆ ಕಳೆದುಕೊಂಡ ನೋವಿನಲ್ಲಿಯೇ ಪರೀಕ್ಷೆ ಬರೆದು ಬಂದಿರುವ ವಂದಿತಳಿಗೆ ಈ ನೋವು ಸಹಿಸಿಕೊಳ್ಳುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸೋಣ.

ಪುನೀತ್ ರಾಜ್‌ಕುಮಾರ್ ಅವರ ಬಗ್ಗೆ ನಮಗೆ ತಿಳಿದೇ ಇದೆ ಅವರು ಎಂತಹ ಸರಳತೆಯ ವ್ಯಕ್ತಿಯಾಗಿದ್ದರು ಎಂದು ಇವರು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡುತ್ತಿದ್ದರು. ಈ ನಿಟ್ಟಿನಲ್ಲಿ ದುಃಖದಲ್ಲಿಯೂ ಮಗಳು ತಂದೆಯ ಪುಣ್ಯತಿಥಿಯ ದಿವಸದಂದು ಪೂಜೆ ಸಲ್ಲಿಸಿ ಪರೀಕ್ಷೆ ಅನ್ನೋ ತಪ್ಪಿಸಿಕೊಳ್ಳಬಾರದೆಂದು ಪರೀಕ್ಷೆಗೆ ಹಾಜರಾಗಿದ್ದಾರೆ.

ಪುನೀತ್‌ 11ನೇ ದಿನದ ಪುಣ್ಯತಿಥಿ ಕಾರ್ಯಕ್ರಮಕ್ಕೆ ಕುಟುಂಬಸ್ಥರು, ಕಲಾವಿದರು, ಗಣ್ಯರಿಗೆ ಮಾತ್ರ ಆಹ್ವಾನ ಇತ್ತು. ಹಲವರು ಸಮಾಧಿ ಸ್ಥಳಕ್ಕೆ ಆಗಮಿಸಿ ಗೌರವ ಸಲ್ಲಿಸಿದರು. ಬಹುತೇಕರು ಪುನೀತ್‌ ರಾಜ್‌ಕುಮಾರ್‌ ಅವರ ಮನೆಗೆ ಬಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದರಲ್ಲಿ ರವಿಚಂದ್ರನ್ ಉಪೇಂದ್ರ ಗಣೇಶ್ ವಿಜಯ್ ಶರಣ್ ರಕ್ಷಿತ್ ಶೆಟ್ಟಿ ಅನೂಪ್ ಭಂಡಾರಿ ನಿರೂಪ್ ಧನಂಜಯ್‌, ವಸಿಷ್ಠ ಸಿಂಹ ಸೇರಿದಂತ ಅನೇಕರು ಪುಣ್ಯತಿಥಿ ಕಾರ್ಯದಲ್ಲಿ ಹಾಜರಿದ್ದರು.

ಇನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ ಕುಟುಂಬದ ವತಿಯಿಂದ ಅಭಿಮಾನಿಗಳೇ ದೇವರು ಎಂದು ಹೇಳುತ್ತಿದ್ದ ಕುಟುಂಬಸ್ಥರು ಅಭಿಮಾನಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. 11ನೇ ದಿನದ ಪುಣ್ಯ ತಿಥಿ ಕಾರ್ಯಕ್ರಮಕ್ಕೆ ಗಣ್ಯರಿಗೆ ಮಾತ್ರ ಆಹ್ವಾನಿಸಲಾಗಿತ್ತು. ಆದ್ದರಿಂದ ನ.9ರಂದು ಅಭಿಮಾನಿಗಳಿಗೆ ಅನ್ನದಾನ ಏರ್ಪಡಿಸಲು ಕುಟುಂಬ ನಿರ್ಧರಿಸಿತ್ತು. ಆ ಪ್ರಕಾರವೇ ಇಂದು ಅನ್ನದಾನ ನಡೆಯಲಿದೆ. ರಾಜ್ಯದ ಮೂಲೆ ಮೂಲೆಗಳಿಂದಲೂ ಅಭಿಮಾನಿಗಳು ಪುನೀತ್ ಅವರ ಅನ್ನಸಂತರ್ಪಣೆಗೆ ಅಭಿಮಾನಿಗಳು ಆಗಮಿಸಿದ್ದರು.

ಇದೇ ಸಂದರ್ಭದಲ್ಲಿ ಅನೇಕ ಅಭಿಮಾನಿಗಳು ಪುನೀತ್‌ ಅವರಿಗೆ ವಿವಿಧ ಬಗೆಯ ತಿಂಡಿಗಳನ್ನು ಅರ್ಪಿಸಿದ್ದಾರೆ. ಜಮಖಂಡಿಯಿಂದ ಬಂದಿದ್ದ ಅಭಿಮಾನಿಯೊಬ್ಬರು ಜೋಳದ ರೊಟ್ಟಿ ಮಾಡಿಕೊಂಡು ಬಂದು ಪುನೀತ್‌ಗೆ ಎಡೆ ಇಟ್ಟರು. ಹೌದು ದೊಡ್ಮನೆ ಅವರು ಪುನೀತ್ ಸಮಾಧಿ ಬಳಿ ಪುನೀತ್ ಅವರಿಗೆ ಇಷ್ಟವಾದಂತಹ ಎಲ್ಲ ತಿಂಡಿ ತಿನಿಸುಗಳನ್ನು ಇಟ್ಟಿದ್ದರು ಅದೇ ರೀತಿ ರಾಜ್ಯದ ಮೂಲೆ ಮೂಲೆಗಳಿಂದ ಬಂದವರು ಸಹ ಪುನೀತ್ ಅವರ ಇಷ್ಟದ ತಿಂಡಿ ಯನ್ನು ಹಾಗೂ ತುಮಕೂರು ಜಿಲ್ಲೆಯ ವಿಶೇಷ ಊಟವನ್ನು ತಿಂಡಿಯನ್ನು ಅರ್ಪಿಸಿದ್ದರು.

ನಿರ್ಮಾಪಕ ಸುರೇಶ್‌ ಅವರು ಪುನೀತ್‌ ರಾಜ್‌ಕುಮಾರ್‌ ನೆನಪಲ್ಲಿ ಬೆಂಗಳೂರಿನ ನಾಗರಭಾವಿಯಲ್ಲಿರುವ ತಮ್ಮ ಕಚೇರಿ ಸಮೀಪದಲ್ಲಿ ಹಲವು ಮಂದಿಗೆ ಅನ್ನದಾನ ಮಾಡಿದ್ದಾರೆ. ವಿನಯ್‌ ರಾಜ್‌ಕುಮಾರ್‌ ನಟನೆಯ ‘ಅಂದೊಂದಿತ್ತು ಕಾಲ’ ಸಿನಿಮಾದ ನಿರ್ಮಾಪಕರಾಗಿರುವ ಅವರು ಪುನೀತ್‌ ಅವರ ಅಭಿಮಾನಿಯಾಗಿದ್ದರು.

ಪುನೀತ್‌ ತೀರಿಕೊಂಡು 11 ದಿನ ಕಳೆದರೂ ಅಭಿಮಾನಿಗಳು ಬರುವುದು ಇನ್ನೂ ನಿಂತಿಲ್ಲಾ. 11ನೇ ಪುಣ್ಯತಿಥಿ ದಿನದಂದು ಸಮಾಧಿ ದರ್ಶನಕ್ಕೆ ಬಂದ ಅಭಿಮಾನಿಗಳ ಸಂಖ್ಯೆಯೇ ಪುನೀತ್‌ ಮೇಲಿನ ಮುಗಿಯದ ಅಭಿಮಾನವನ್ನು ತೋರುತ್ತಿತ್ತೋ ಏನೋ ರಾಜ್ಯದ ಹಲವೆಡೆ ಪುನೀತ್ ಅವರ ಕಿರಿಯ ದಿವಸದಂದು ಅನ್ನಸಂತರ್ಪಣೆ ಸಹ ನಡೆದಿತ್ತು ನಿಜಕ್ಕೂ ಅಪ್ಪು ಎಂತಹ ವ್ಯಕ್ತಿ ಎಂದು ಇದರಿಂದ ನಮಗೆ ತಿಳಿಯುತ್ತದೆ. ಅಪ್ಪು ಸದಾ ಅಮರ.