ಬಾಳೆ ಎಲೆಯಿಂದ ದಿನ ನಿತ್ಯ ಊಟ ಮಾಡೋದ್ರಿಂದ ಆಗುವ ವೈಜ್ಞಾನಿಕ ಹಾಗು ಧಾರ್ಮಿಕ ಲಾಭಗಳು ಹೀಗಿವೆ ನೋಡಿ… ತಟ್ಟೆಯಿಂದ ಊಟ ಮಾಡೋರು ಖಂಡಿತ ಇದನ್ನ ತಿಳಿದುಕೊಳ್ಳಬೇಕು

ಆಧುನಿಕ ಪದ್ಧತಿಗೆ ಒಗ್ಗಿಕೊಂಡಿರುವ ನಾವು ಕೆಲವು ಅತ್ಯುತ್ತಮ ಹಳೆಯ ಆಚಾರ ವಿಚಾರಗಳನ್ನು ಮೂಲೆಗುಂಪಾಗಿಸಿದ್ದೇವೆ, ಅವುಗಳಲ್ಲಿ ಬಾಳೆಲೆಯಲ್ಲಿ ಊಟ ಮಾಡುವ ಪದ್ಧತಿಯೂ ಒಂದು, ಹಿಂದೂ ಧರ್ಮದ ಶಾಸ್ತ್ರಗಳಲ್ಲಿ ಮತ್ತು ಸಮಾರಂಭಗಳಲ್ಲಿ ಬಾಳೆಗೆ ಮತ್ತು ಬಾಳೆ ಎಲೆಗೆ ತನ್ನದೆ ಆದ ಮಹತ್ವ ಇದೆ.

ಬಾಳೆ ಎಲೆಯ ಮೇಲೆ ಮಾಡುವ ಊಟದ ರುಚಿಯೇ ಬೇರೆ, ಅದು ಸಂಪ್ರದಾಯ ಸಹ ಹೌದು, ಹಾಗಾಗಿಯೇ ಮದುವೆ, ದೇವಾಲಯಗಳ ಪ್ರಸಾದ ಭೋಜನ,ಅನ್ನಸಂತರ್ಪಣೆಗಳಲ್ಲಿ ಬಾಳೆ ಎಲೆಯ ಮೇಲೆ ಊಟವನ್ನು ಬಡಿಸಲಾಗುತ್ತದೆ, ಮನೆಯ ಮುಂದೆ ಮತ್ತು ಹಿತ್ತಲಿನ ತೋಟದಲ್ಲಿ ಬಾಳೆಗಿಡಗಳನ್ನು ಬೆಳೆಸುವುದು ಶುಭಕರವೆಂದು ಹೇಳಲಾಗುತ್ತದೆ.

ಬಾಳೆಎಲೆ ಊಟದಿಂದ ಕೇವಲ ಹೊಟ್ಟೆ ತುಂಬುವುದೊಂದೇ ಅಲ್ಲ, ಈ ಎಲೆಯಲ್ಲಿ ಅನೇಕ ಆರೋಗ್ಯದ ಗುಟ್ಟುಗಳಿವೆ ಮುಖ್ಯವಾದ ಲಾಭಗಳು ಇಲ್ಲಿವೆ.ಜೀರ್ಣ ಕ್ರಿಯೆ ಉತ್ತಮ : ಬಾಳೆಎಲೆಯ ಮೇಲ್ಪದರದ ರಚನೆಯಲ್ಲಿ ಎಪಿಗಾಲ್ಸೋಕ್ಯಾಟಿಚಿನ್ ಗ್ಯಾಲೆಟ್ ಎಂಬ ಪಾಲಿಫಿನಾಲ್ ಅಂಶವಿರುತ್ತದೆ, ಬಿಸಿ ಆಹಾರ ಎಲೆಗೆ ಬಿದ್ದಾಕ್ಷಣ ಇವು ಆಹಾರದೊಂದಿಗೆ ಬೆರೆತು ನಮ್ಮ ಹೊಟ್ಟೆ ಸೇರುತ್ತವೆ, ಇದರಿಂದ ಜೀರ್ಣ ಕ್ರಿಯೆ ಚೆನ್ನಾಗಾಗುತ್ತದೆ.

ಬ್ಯಾಕ್ಟಿರಿಯಾ ನಿವಾರಕ : ಬಾಳೆಎಲೆಯ ಮೇಲೆ ಬ್ಯಾಕ್ಟೀರಿಯಾಗಳು ಬಾಳುವುದಿಲ್ಲ, ಇದರಲ್ಲಿ ಏನೇ ಆಹಾರ ಬಡಿಸಿದರೂ ಹೊಟ್ಟೆಗೆ ಹೋಗುವ ಮುನ್ನವೇ ಕೊಲ್ಲಲ್ಪಡುತ್ತವೆ, ಅದರಲ್ಲೂ ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ಪ್ರೀ ರ್ಯಾಡಿಕಲ್ ಎಂಬ ಜೈವಿಕ ರಾಸಾಯನಿಕಗಳನ್ನು ಇದು ದೇಹ ಸೇರಲು ಬಿಡುವುದೇ ಇಲ್ಲ.

ಬಿಳಿ ಕೂದಲಿಗೆ : ಚೆನೈನ ಆಯುರ್ವೇದ ತಜ್ಞರ ಪ್ರಕಾರ, ಸಣ್ಣ ವಯಸ್ಸಿನಲ್ಲೇ ಬಿಳಿಕೂದಲಿನ ಸಮಸ್ಯೆಯಿದ್ದವರು ನಿತ್ಯ ಬಾಳೆಎಲೆಯಲ್ಲಿ ಊಟಮಾಡಿದರೆ ಒಳ್ಳೆಯ ಫಲಿತಾಂಶ ಸಿಗುತ್ತದಂತೆ.ಅರೋಗ್ಯ : ನೀವು ತಟ್ಟೆಗಳಲ್ಲಿ ಊಟ ಮಾಡಿದರೆ ಅವುಗಳಲ್ಲಿ ಮಾರ್ಜಕದ ಕಣಗಳು ನಿಮ್ಮ ಹೊಟ್ಟೆ ಸೇರಬಹುದು, ಆದರೆ ಬಾಳೆಎಲೆಯಲ್ಲಿ ಈ ಸಮಸ್ಯೆಯೇ ಇರುವುದಿಲ್ಲ.

ಆರೋಗ್ಯಕ್ಕೆ ತಂಪು : ಬಾಳೆಎಲೆ ಊಟ ಆರೋಗ್ಯಕ್ಕೆತಂಪು, ಗ್ಯಾಸ್ ಅಡುಗೆಯಿಂದ ಆಹಾರ ಸೇರಿಕೊಳ್ಳುವ ಕೃತಕ ಉಷ್ಣವೂ ಇಲ್ಲಿ ತಣ್ಣಗಾಗುತ್ತದೆ.ಚರ್ಮ ರೋಗ ನಿವಾರಕ : ಬಾಳೆಎಲೆಯಲ್ಲಿ ಅಧಿಕ ಪ್ರಮಾಣದ ವಿಟಮಿನ್ ಡಿ ಶೇಖರಣೆಗೊಂಡಿರುತ್ತದೆ, ಹೀಗಾಗಿ ಹಸುಗೂಸುಗಳನ್ನು ಶುಂಠಿ ಎಣ್ಣೆಲೇಪಿತ ಬಾಳೆಎಲೆಯಿಂದ ಸುತ್ತಿ ಸೂರ್ಯನ ಕಿರಣಗಳಿಗೆ ಹಿಡಿಯುತ್ತಾರೆ, ಭವಿಷ್ಯದಲ್ಲಿ ಚರ್ಮರೋಗಗಳು ಬಾರದಮತೆ ತಡೆಯುವ ವೈದ್ಯೋದ್ದೇಶ ಇದರದ್ದು, ತೆಂಗಿನೆಣ್ಣೆ ಲೇಪಿತ ಬಾಳೆಎಲೆಯನ್ನು ಸುಕ್ಕಾಗಿರುವ ಚರ್ಮದ ಸುತ್ತ ಸುತ್ತಿದರೆ ಕೆಲವೇ ದಿನಗಳಲ್ಲಿ ಒಳ್ಳೆಯ ರಿಸಲ್ಟ್ ಸಿಗುತ್ತದೆ.

ಮಕ್ಕಳ ತ್ವಚೆಗೆ ಪರಿಹಾರ : ಸೊಳ್ಳೆ ಕಚ್ಚಿ ಮಕ್ಕಳ ತ್ವಚೆಯಲ್ಲಿ ಗುಳ್ಳೆಗಳು ಉಂಟಾದರೆ ಕುಡಿ ಬಾಳೆ ಎಲೆ ರಸ, ಆಲೀವ್ ಎಣ್ಣೆ, ಸ್ವಲ್ಪ ಮೇಣ (beeswax) ಮಿಶ್ರ ಮಾಡಿ ಗುಳ್ಳೆಗಳ ಮೇಲೆ ಹಚ್ಚಿದರೆ ಆ ಗುಳ್ಳೆಗಳು ಮಾಯವಾಗುವುದು.ಸುಟ್ಟ ಗಾಯಗಳಿಗೆ : ದೇಹದ ಮೇಲೆ ಕಂಡು ಬರುವ ಯಾವುದಾದರು ಸುಟ್ಟ ಗಾಯಗಳಿಗೆ ಶುಂಠಿ ಎಣ್ಣೆಯಲ್ಲಿ ಅದ್ದಿದ ಬಾಳೆ ಎಲೆಯನ್ನು ಹಾಕಿ ಕಟ್ಟು ಕಟ್ಟಿದರೆ ಅಥವಾ ಮುಚ್ಚಿದರೆ ಸುಟ್ಟ ಗಾಯವನ್ನು ಸಹ ಶಮನಗೊಳಿಸುತ್ತದೆ.

ಭೋಜನ ಕಾಲದಲ್ಲಿ ಬಡಿಸಲಾಗುವ ಪದಾರ್ಥಗಳು ಮತ್ತು ಅವುಗಳ ಭಗವದ್ರೂಪಗಳ ಪರಿಚಯ, ಬಡಿಸುವ ಕ್ರಮಾನುಸಾರವಾಗಿ ಭಗವಂತನ ೨೪ ನಾಮಗಳನ್ನು ಅನುಕ್ರಮವಾಗಿ ನೀಡಲಾಗಿದ್ದು ಇದೇ ಕ್ರಮವನ್ನು ಸಾಮಾನ್ಯವಾಗಿ ಅನುಸರಿಸಲಾಗುತ್ತದೆ.

 

san00037

Share
Published by
san00037

Recent Posts

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

10 hours ago

Bigg Boss Kannada : ಬಿಗ್​ಬಾಸ್​ನಲ್ಲಿ ಐಶ್ವರ್ಯಾ ಎಂಜಲು ಕಾಫೀ ಚಪ್ಪರಿಸಿ ಕುಡಿದ ​ಶಿಶಿರ್…! ಬಿಗ್​ಬಾಸ್​ನಲ್ಲಿ ಅರಳಿ ಬಿಡ್ತಾ ಮತ್ತೊಂದು ಕ್ಯೂಟ್​ ಲವ್

Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…

10 hours ago

Bigg Boss Kannada 11: ತಾಳಿ ಮೇಲೆ ಆಣೆ ಮಾಡಿದ ತುಕಾಲಿ ಸಂತು ಪತ್ನಿ!ಚೈತ್ರಾ ಕುಂದಾಪುರ ಮೇಲೆ ಮುಗಿಬಿದ್ದ ಮಾನಸಾ

Bigg Boss Kannada 11 ಬಿಗ್ ಬಾಸ್ ಕನ್ನಡ 11 ರ ಮೂರನೇ ವಾರದಲ್ಲಿ, ಅತ್ಯಂತ ಅಪ್ರಾಮಾಣಿಕ ಮತ್ತು ಕುತಂತ್ರದ…

13 hours ago

Bigg Boss Kannada : ಕೇಕ್ ತಿನ್ನಿಸಿ ಸ್ಪರ್ಧಿಗಳಿಗೆ ಜಾಡಿಸಿದ ಸುದೀಪ್..! ಬಿಗ್ ಬಾಸ್ ಹಿಸ್ಟರಿಯಲ್ಲೇ ವರ್ಸ್ಟ್ ಬ್ಯಾಚ್

Bigg Boss Kannada ಈ ವಾರದ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ತಿರುವುಗಳನ್ನು ಕಂಡಿತು, ವಕೀಲ ಜಗದೀಶ್…

13 hours ago

Bigg Boss Kannada : ಬಿಗ್ ಬಾಸ್‌ ಶೋಗೆ ಶುರು ಆಯಿತು ಮತ್ತೊಂದು ಸಂಕಷ್ಟ

Bigg Boss Kannada ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11, ಶಿವಮೊಗ್ಗ ಜಿಲ್ಲೆಯ ಸಾಗರದ…

13 hours ago

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

This website uses cookies.