ನಮಸ್ಕಾರ ಸ್ನೇಹಿತರೆ ಈ ದಿನದ ಲೇಖನದಲ್ಲಿ ಕೆಲಸವೇ ಸಿಗುತ್ತಾ ಇಲ್ಲ ನಮಗೆ ಯಾವ ಬಿಸಿನೆಸ್ ಮಾಡಲು ಸಾಧ್ಯವಾಗುತ್ತಿಲ್ಲ ಹಾಗೂ ಹಳ್ಳಿಯಲ್ಲಿ ಇದ್ದೂ ಏನನ್ನೂ ಸಂಪಾದಿಸಲು ಸಾಧ್ಯವಿಲ್ಲ ಅಂತೆಲ್ಲ ಅಂದುಕೊಳ್ಳುವವರಿಗೆ ಒಂದೊಳ್ಳೆ ಮಾಹಿತಿ ಹೇಳಲಿದ್ದೇವೆ ಈ ಲೇಖನವನ್ನ ಸಂಪೂರ್ಣವಾಗಿ ಹೌದು ಮಾಹಿತಿ ತಿಳಿಯುವವರು ಖಂಡಿತವಾಗಿಯೂ ಇವರಂತೆ ಮುಂದಿನ ದಿನಗಳಲ್ಲಿ ನೀವು ಸಹ ಏನಾದರೂ ಸಾಧನೆ ಮಾಡಲು ಪ್ರೇರೇಪಿತರಾದ ಆಗ್ತೀರಾ ಆದ್ದರಿಂದ ಸಂಪೂರ್ಣ ಲೇಖನವನ್ನ ತಿಳಿಯಿರಿ ಹಾಗೂ ಮಾಹಿತಿ ತಿಳಿದ ನಂತರ ಈ ಮಾಹಿತಿ ಕುರಿತು ನಿಮ್ಮ ಕುಟುಂಬದವರ ಬಳಿ ಅಥವಾ ಏನಾದರೂ ಬಿಸಿನೆಸ್ ಮಾಡಬೇಕು ಅಂತ ಇರುವವರ ಬಳಿ ಈ ವಿಚಾರದ ಬಗ್ಗೆ ಹಂಚಿಕೊಳ್ಳಿ ಅವರಿಗೂ ಸಹ ಈ ಮಾಹಿತಿ ಉಪಯುಕ್ತವಾಗಬಹುದು.
ಹೌದು ಸ್ನೇಹಿತರೆ ಈ ದಿನದ ಲೇಖನದಲ್ಲಿ ಬೆಂಗಳೂರಿನಲ್ಲಿ ಬ್ಯಾಂಕ್ ಕೆಲಸ ಮಾಡುತ್ತಾ ಇದ್ದ ಒಬ್ಬ ವ್ಯಕ್ತಿ ತಮ್ಮ ಕೆಲಸ ಬಿಟ್ಟು ಪದವೀಧರರಾಗಿದ್ದರೂ ಮತ್ತೆ ಹಳ್ಳಿಗೆ ಬಂದು ತಮಗೆ ಇರುವ ಜಮೀನಿನಲ್ಲಿ ಹಂದಿ ಫಾರಂ ಮಾಡುವ ಮೂಲಕ ಹೆಚ್ಚು ಆದಾಯ ಗಳಿಸುತ್ತಾ ಇದ್ದಾರೆ. ಮೊದಲು ಈ ವ್ಯಕ್ತಿ ತಾವು ಮಾಡುತ್ತಿರುವ ಕೆಲಸ ಕುರಿತು ಏನು ಹೇಳುತ್ತಾರೆ ಎಂಬುದನ್ನು ತಿಳಿಯೋಣ ಆನಂತರ ಇವರು ತಾವು ಮಾಡುತ್ತಾ ಇರುವ ಹಂದಿ ಫಾರ್ಮ್ ಅಲ್ಲಿ ಹೇಗೆಲ್ಲ ವ್ಯವಸ್ಥೆ ಮಾಡಿಕೊಂಡಿದ್ದಾರೆ ಮತ್ತು ಫಾರ್ಮ್ ಅಲ್ಲಿ ಇರುವ ಹಂದಿಗಳಿಗೆ ಎಷ್ಟು ಬಾರಿ ಊಟ ಕೊಡ್ತಾರ ಇದನ್ನೆಲ್ಲಾ ತಿಳಿಯೋಣ ಇಂದಿನ ಮಾಹಿತಿಯಲ್ಲಿ.
ಹೌದು ಮದ್ದೂರಿಗೆ ಸೇರಿರುವ ಇವರು ಪದವೀಧರರಾಗಿ ಬೆಂಗಳೂರಿನಲ್ಲಿ ಅಕೌಂಟೆಂಟ್ ಕೆಲಸ ಮಾಡುತ್ತಿದ್ದರೋ ತಿಂಗಳಿಗೆ 30ಸಾವಿರ₹ ಸಂಬಳ ಕೂಡ ಸಿಗುತ್ತಿತ್ತು ಆದರೆ ಈ ಸಂಬಳ ತಮಗೆ ಯಾವುದಕ್ಕೂ ಸಾಲುತ್ತಿಲ್ಲ ಎಂದು ಮತ್ತೆ ತಮ್ಮ ಹಳ್ಳಿಗೆ ಬಂದು ತಮ್ಮ ಕುಟುಂಬದವರ ಜೊತೆ ಕುಳಿತು ಯಾವ ಕೆಲಸ ಮಾಡಿದರೆ ಲಾಭ ಆಗುತ್ತದೆ ಎಂದು ಕುಳಿತೋ ಚರ್ಚಿಸಿದಾಗ ಅವರು ಈ ರೀತಿ ಹಂದಿ ಫಾರ್ಮ್ ಮಾಡಿದರೆ ಹೆಚ್ಚು ಆದಾಯ ಗಳಿಸಬಹುದು ಎಂದು ಯೋಚಿಸಿ ನಂತರ ಈ ವ್ಯಕ್ತಿ ಮತ್ತು ಇವರ ತಮ್ಮ ಅಂದರೆ ಅಣ್ಣ ತಮ್ಮ ಇಬ್ಬರೂ ಸೇರಿ ಈ ಕೆಲಸ ಮಾಡುತ್ತಾ ಇದ್ದಾರೆ ಇದೀಗ ತಿಂಗಳಿಗೆ ಎರಡೂವರೆ ಲಕ್ಷ ಹಣವನ್ನು ಉಳಿಸುತ್ತಾ ಇರುವ ಇವರು ಹಂದಿ ಫಾರ್ಮ್ ಮಾಡುವುದರಲ್ಲಿ ನಮಗೆ ಯಾವುದೇ ತರದ ಮುಜುಗರವಿಲ್ಲ ಎಂದು ಹೇಳಿಕೊಂಡಿದ್ದಾರೆ.
ಮುಖ್ಯವಾಗಿ ಈ ಹಂದಿ ಫಾರಂ ಬಿಸಿನೆಸ್ ಮಾಡುವಾಗ ಅವರು ಹೀಗೆ ಅಂತಾರೆ ಇವರು ಹೀಗೆ ಅಂತಾರೆ ಎಂದು ಮನಸ್ಸಿಗೆ ಹಾಕಿಕೊಳ್ಳಬಾರದು ನಿಮ್ಮ ಗಮನ ಆದಾಯದ ಕಡೆ ಮತ್ತು ನೀವು ಮಾಡುತ್ತಾ ಇರುವ ಕೆಲಸದ ಕಡೆ ಇರಬೇಕು ಎಂದು ಹೇಳಿರುವ ಇವರು, ಇವರು ಪ್ರತಿದಿನ ರಾತ್ರಿ ಸಮಯದಲ್ಲಿ ಕೋಳಿ ಅಂಗಡಿ ಮುಚ್ಚುವ ಸಮಯಕ್ಕೆ ಹೋಗಿ ಅಲ್ಲಿರುವ ವೇಸ್ಟ್ ಮತ್ತು ಹೋಟೆಲ್ ಗಳಲ್ಲಿ ಇರುವ ವೇಸ್ಟ್ ಅನ್ನು ತೆಗೆದುಕೊಂಡು ಬರಲು ಹೋಗುತ್ತಾರೆ ಆದರೆ ಈ ಸಮಯದಲ್ಲಿ ಅವರು ಹೀಗೆ ಅಂದುಕೊಳ್ತಾರೆ ಅನ್ನುವುದನ್ನೆಲ್ಲ ಮನಸ್ಸಿಗೆ ಹಾಕಿಕೊಳ್ಳಬಾರದು ನೀವು ಮಾಡುತ್ತಾ ಇರುವ ವ್ಯವಹಾರದ ಕುರಿತು ನಿಮಗೆ ಗೌರವ ಇರಬೇಕು ಎಂದು ಹೇಳಿರುವ ಈ ಅಣ್ಣ ತಮ್ಮ.
ಇವರು ಮೊದ ಮೊದಲು ಸುಮಾರು 30ಹಂದಿಗಳಿಂದ ಬಿಸಿನೆಸ್ ಶುರು ಮಾಡಿದರು ಇದೀಗ ಈ ಅಣ್ಣತಮ್ಮ ಸೇರಿ ಸುಮಾರು 400ಹಂದಿಗಳನ್ನು ತಮ್ಮ ಫಾರ್ಮ್ ನಲ್ಲಿ ಸಾಕುತ್ತಾ ಇದ್ದಾರೆ ಪ್ರತಿದಿನ 2ಬಾರಿ ಫುಡ್ ನೀಡುತ್ತಾರೆ ಹಾಗೆ ಪ್ರತಿದಿನ 2ಬಾರಿ ಹಂದಿ ಇರುವ ಜಾಗವನ್ನು ಅಂದರೆ ಗೂಡುಗಳನ್ನು ಸ್ವಚ್ಛ ಮಾಡಿದರೆ 1ಬಾರಿ ಹಂದಿಗಳನ್ನು ಸ್ವಚ್ಛ ಹೀಗೆ ಮಾಡುವುದರಿಂದ ನೊಣ ಸೊಳ್ಳೆಗಳ ಕಾಟ ಇರುವುದಿಲ್ಲ ಹಂದಿಗಳಿಗೆ ರೋಗ ರುಜಿನಗಳು ಉಂಟಾಗುವುದಿಲ್ಲ ಎಂದು ಹೇಳುವ ಇವರು ಮರಿಹಾಕುವ ಹಂದಿಗಳನ್ನು ಹಿಂದಿನ ದಿನವೇ ಬೇರೆ ಜಾಗಕ್ಕೆ ಬಿಡುತ್ತೇವೆ ಎಂದು ಹೇಳಿಕೊಂಡಿದ್ದಾರೆ ಹಾಗೆ ಈ ಬಿಸಿನೆಸ್ ಮಾಡುವುದು ಮೊದಮೊದಲು ಸ್ವಲ್ಪ ಕಷ್ಟ ಅನಿಸಬಹುದು ಆದರೆ ನಂತರದ ದಿನಗಳಲ್ಲಿ ಈ ಕೆಲಸ ನಮಗೆ ಕಷ್ಟ ಅನಿಸುವುದಿಲ್ಲ ಒಟ್ಟಾರೆಯಾಗಿ ಮನಸ್ಸು ಮಾಡಿದರೆ ತಿಂಗಳಿಗೆ ಲಕ್ಷ ಲಕ್ಷ ಹಣ ಆದಾಯ ಪಡೆದುಕೊಳ್ಳಬಹುದು ಈ ಬಿಸಿನೆಸ್ ನಿಂದ ಎಂದು ಹೇಳಿಕೊಂಡಿದ್ದಾರೆ ಇವರು…