ಮನೆಗಳಲ್ಲಿ ಇಲಿಗಳ ಕಾಟ ಜಾಸ್ತಿ ಇದ್ರೆ ಈ ಒಂದು ಮನೆಮದ್ದನ್ನ ಮಾಡಿ ಮನೆಯಲ್ಲಿ ಒಂದು ಮೂಲೆಯಲ್ಲಿ ಇಡಿ ಸಾಕು.. ಇಲಿಗಳಲು ನಿಮ್ಮ ಮನೆ ಮುಂದೆ ಕೂಡ ಸುಳಿಯೋದಿಲ್ಲ

216

ಈ ಪರಿಹರ ಮಾಡಿದ್ದೇ ಆದಲ್ಲಿ ಮನೆಯಲ್ಲಿ ಇಲಿಗಳು ಇದ್ದರೆ ಆ ಇಲಿಗಳ ಕಾಟದಿಂದ ಪರಿಹಾರ ಪಡೆದುಕೊಳ್ಳಬಹುದು ಹೌದು ಸಾಕಷ್ಟು ತೊಂದರೆ ನೀಡುತ್ತಿರುವ ಈ ಇಲಿಯ ಕಾಟಕ್ಕೆ ಸಾಕಾಗಿ ಹೋಗಿ ಮನೆಯಲ್ಲಿ ಕೆಲವರು ಬೆಕ್ಕು ಸಾಕಿರುತ್ತಾರೆ ಆದರೆ ಬೆಕ್ಕಿನ ಕಾಟ ಕೂಡ ತಡೆಯಲಾಗದೆ ಯಾವುದೂ ಬೇಡ ಅಂತ ಸುಮ್ಮನಾಗಿ ಹೋಗಿರುವವರಿಗೆ ಇವತ್ತಿನ ಲೇಖನಿಯಲ್ಲಿ ಇಲಿಗಳ ಕಾಟದಿಂದ ಪರಿಹಾರ ಪಡೆದುಕೊಳ್ಳೋದಕ್ಕೆ ಒಂದೊಳ್ಳೆ ಮನೆಮದ್ದನ್ನು ಈ ಮಾಹಿತಿ ಮೂಲಕ ತಿಳಿಸಿಕೊಡಲಿದ್ದೇವೆ.

ಹೌದು ಇಲಿಗಳನ್ನು ಹೊರಹೊಮ್ಮಿಸಲು ಕೂಡಾ ಮನೆ ಮತ್ತು ನೀವು ಅಂದುಕೊಳ್ಳಬಹುದು ಹೌದು ನೀವು ಸಾಕಷ್ಟು ಖರ್ಚು ಮಾಡಿ ಇಲಿಗಳ ಕಾಟದಿಂದ ಪರಿಹಾರ ಪಡೆದುಕೊಳ್ಳಲು ಮುಂದಾಗಿರುತ್ತಿರ ಆದರೆ ಅದ್ಯಾವುದೂ ಕೂಡ ಫಲಿತಾಂಶ ನೀಡಿರುವುದಿಲ್ಲಾ.

ಆದರೆ ಇಲಿಗಳ ಕಾಟಕ್ಕೆ ಈ ಮನೆಮದ್ದನ್ನು ಮಾಡಿದರೆ ಖಂಡಿತವಾಗಿಯೂ ನೂರು ಪ್ರತಿಶತದಷ್ಟು ನಿಮಗೆ ಫಲಿತಾಂಶ ದೊರೆಯುತ್ತೆ ಇಲಿಗಳ ಕಾಟದಿಂದ ಪರಿಹಾರ ಪಡೆದುಕೊಳ್ಳಬಹುದು ಈ ಮನೆ ಮದ್ದು ಯಾವುದು ಅಂದರೆ ಇಲ್ಲಿದೆ ನೋಡಿ ಹೌದು ಹೊಗೆಸೊಪ್ಪು ಇದ್ದರೆ ಸಾಕು ನಿಮ್ಮ ಬಳಿ ಈ ಪರಿಹಾರ ಆದಂತೆ.

ಹೌದು ಅಂಗಡಿಗಳಲ್ಲಿ ಈ ಹೊಗೆಸೊಪ್ಪು ನಿಮಗೆ ದೊರೆಯುತ್ತದೆ ಈ ಹೊಗೆ ಸೊಪ್ಪು ತಂದು ಇದನ್ನ ಕುಟ್ಟಿ ಪುಡಿ ಮಾಡಿಕೊಳ್ಳಬೇಕು ಬಳಿಕ ಇದಕ್ಕೆ ಕಡಲೆಹಿಟ್ಟು ಜೊತೆಗೆ ಹಸುವಿನ ಹಾಲು ಹಾಕಿ ಇದಕ್ಕೆ ಸ್ವಲ್ಪ ನೀರನ್ನು ಹಾಕಿ ಪೇಸ್ಟ್ ಮಾಡಿಕೊಂಡು ಉಂಡೆ ಕಟ್ಟಿ ಕೊಳ್ಳಬೇಕು ಈ ರೀತಿ ಮಾಡಿದ ಮೇಲೆ ಈ ಪರಿಹಾರವನ್ನು ನೀವು ಆದ ಸಮಯದಲ್ಲಿ ಮಾಡಿ ಇಲಿಗಳು ಓಡಾಡುವ ಜಾಗದಲ್ಲಿ ಇದನ್ನು ಇಟ್ಟು ಬನ್ನಿ ಸಾಕು.

ಈ ಪರಿಹಾರದಿಂದ ಮನೆಯಲ್ಲಿರುವ ಇಲಿಗಳು ಸತ್ತು ಹೋಗುತ್ತವೆ ಹಾಗೂ ಇಲಿಗಳ ಕಾಟದಿಂದ ನೀವು ಪರಿಹಾರ ಪಡೆದುಕೊಳ್ಳಬಹುದು ಸಾಕಷ್ಟು ಕೆಮಿಕಲ್ ಬಳಸಿ ಇಲಿಗಳ ಕಾಟದಿಂದ ಪರಿಹಾರ ಪಡೆದುಕೊಳ್ಳಲು ಮುಂದಾಗುತ್ತೀರಾ ಆದರೆ ಕೆಮಿಕಲ್ ಬಳಸುವುದರಿಂದ ಮನೆಯಲ್ಲಿ ಮಕ್ಕಳಿದ್ದರೆ ಅಥವಾ ಹಿರಿಯರುಗಳು ಇದ್ದರೆ ತುಂಬಾ ಭಯವಾಗುತ್ತೆ ಅವರ ಆರೋಗ್ಯದ ಮೇಲೆ ಕೆಟ್ಟ ಪ್ರಭಾವ ಬೀರಬಹುದು ಇಂತಹ ಕೆಮಿಕಲ್ಸ್ ಬಳಕೆ ಅಂತ.

ಆದರೆ ಕೆಮಿಕಲ್ಸ್ ಬಳಕೆ ಮಾಡದೆ ಇಲಿಗಳ ಕಾಟದಿಂದ ನೀವು ಪರಿಹಾರ ಪಡೆದುಕೊಳ್ಳಬೇಕು ಅಂದರೆ ಈ ಮೇಲೆ ತಿಳಿಸಿದ ವಿಧಾನ ದಿ ಬೆಸ್ಟ್ ಆಗಿದೆ. ಹೌದು ಹೊಗೆಸೊಪ್ಪಿನ ಗಾಟಕ್ಕೆ ಇಲಿಗಳು ಅದರ ಸುತ್ತಮುತ್ತಲಿನ ಪ್ರದೇಶಕ್ಕೆ ಬರುವುದಿಲ್ಲಾ. ಹಾಗಾಗಿ ನೀವು ಯೋಚಿಸದಿರಿ ಯಾವುದೇ ಅಡ್ಡಪರಿಣಾಮಗಳು ಸಹ ನಿಮ್ಮ ಆರೋಗ್ಯದ ಮೇಲೆ ಅಥವಾ ನಿಮ್ಮ ಮನೆಯವರ ಆರೋಗ್ಯದ ಮೇಲೆ ಉಂಟಾಗುವುದಿಲ್ಲ. ಆದರೆ ಈ ಪರಿಹಾರ ಪಾಲಿಸುವುದರಿಂದ ಇಲಿಗಳ ಕಾಟದಿಂದ ಮಾತ್ರ ನೀವು ಪರಿಹಾರ ಪಡೆದುಕೊಳ್ಳಬಹುದು ಅಷ್ಟೆ.

ಮನೆಯಲ್ಲಿ ಏನಾದರೂ ಇಲಿಗಳ ಕಾಟ ತುಂಬಾ ಹೆಚ್ಚಾಗಿದೆ ಅಂದರೆ ಮನೆಯನ್ನು ಆಗಾಗ ತಪ್ಪದೆ ಶುಚಿ ಮಾಡುತ್ತಾ ಇರಿ, ಇಲ್ಲವಾದರೆ ಇಲಿಗಳ ಸಂಖ್ಯೆ ಇನ್ನಷ್ಟು ಹೆಚ್ಚು ಆಗುತ್ತದೆ ಮತ್ತು ಇಲಿಗಳ ಕಾಟ ಕೂಡ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತದೆ.

ಕೇವಲ ಪರಿಹಾರ ಮಾಡಿಕೊಳ್ಳುವುದು ಅಷ್ಟೇ ಅಲ್ಲ ಮನೆಯಲ್ಲಿ ಇಲಿಗಳ ಕಾಟ ಆಗಲಿ ಅಥವಾ ಈ ಜಿರಲೆ ಕಾಟ ಆಗಲೇ ಹೆಚ್ಚಬಾರದು ಅಂದರೆ ಮತ್ತೆ ಇನ್ಯಾವುದೇ ಕೀಟಗಳ ಸಮಸ್ಯೆ ಉಂಟಾಗಬಾರದು ತೊಂದರೆಗಳು ಆಗಬಾರದು ಅಂದರೆ ಮೊದಲು ಮನೆಯನ್ನು ಶುಚಿಯಾಗಿಟ್ಟುಕೊಳ್ಳಬೇಕು ಆಗ ಇಲಿಗಳ ಕಾಟ ಇನ್ಯಾವುದೇ ಚಿಕ್ಕ ಪುಟ್ಟ ಕ್ರಿಮಿ ಕೀಟಗಳ ಕಾಟ ಬರುವುದಿಲ್ಲ.