ಮುಖದ ಮೇಲೆ ಆಗುವ ಎಲ್ಲ ಕಲೆಗಳನ್ನ ನಿವಾರಣೆ ಮಾಡಿ ನಿಮ್ಮ ಮುಖವನ್ನ ತೊಂಡೆ ಹಣ್ಣಿನ ತರ ಮಾಡುವ ಏಕೈಕ ಮನೆಮದ್ದು ಇದು … ಇದನ್ನ ಹಚ್ಚಿ ಸಾಕು …

235

ಮುಖವನ್ನು ಹೊಳಪಾಗಿಸಲು ಈ ಮನೆ ಮದ್ದು ಪ್ರಭಾವವಾಗಿ ಕೆಲಸ ಮಾಡಿ ಪಿಗ್ಮೆಂಟೇಶನ್ ತೊಂದರೆಯಿಂದ ಹಿಡಿದು ಪಿಂಪಲ್ ಸಮಸ್ಯೆ ನಿವಾರಣೆಗೂ ಈ ಒಂದೇ ಪರಿಹಾರ ಸಾಕುಸಾಮಾನ್ಯವಾಗಿ ಎಲ್ಲರಿಗೂ ಆಸೆ ನಮ್ಮ ಮುಖ ಅಂದವಾಗಿರಬೇಕು ಹೊಳಪಾಗಿ ರಬೇಕು ಕಾಂತಿಯುತವಾಗಿರಬೇಕು ಕಲೆ ಗಳಿರಬಾರದು ಅಂತ ಅಲ್ವ ಹೌದು ಯಾರಿಗೆ ತಾನೇ ಇರುವುದಿಲ್ಲ ಹೇಳಿ ಈ ಆಸೆ ಆಕಾಂಕ್ಷೆಗಳ ಮಕ್ಕಳ ಹಾಗೆ ತ್ವಚೆ ಬೇಕು ಅನ್ನುವ ಆಸೆ ಎಲ್ಲರಿಗೂ ಆದರೆ ಏನು ಮಾಡೋದು ಮಕ್ಕಳಾಗಿದ್ದಾಗ ನಮ್ಮ ಮುಖವನ್ನು ಪೋಷಕರು ಕಾಳಜಿ ಮಾಡುತ್ತಿದ್ದರು

ಅಷ್ಟೆ ಅಲ್ಲ ಹುಟ್ಟಿದಾಗ ನಾವು ಸೇವಿಸುವ ಆಹಾರದ ಆಧಾರದ ಮೇಲೆ ಜೊತೆಗೆ ನೈಸರ್ಗಿಕವಾಗಿ ನಮ್ಮ ಮುಖ ಕಾಂತಿಯುತವಾಗಿ ರುತ್ತಿತ್ತು ತ್ವಚೆಯು ತುಂಬಾ ಸಾಫ್ಟ್ ಸಾಫ್ಟ್ ಹಾಗೆ ಇರುತ್ತಿತ್ತು.ಆದರೆ ಬೆಳೆಯುತ್ತ ಬೆಳೆಯುತ್ತ ಧೂಳು ಪ್ರದೂಷಣೆ ಮುಖ ಒಡ್ಡುವುದರಿಂದ ಸೂರ್ಯನ ಕಿರಣಗಳಿಂದ ತ್ವಚೆ ಡ್ರೈ ಆಗುತ್ತದೆ ಮತ್ತು ನಾವು ಬಳಸುವ ಸೋಪು ಹಾಗೆ ನೀರು ನಾವು ಬಳಸುವ ಕ್ರೀಮ್ ಇದೆಲ್ಲದರ ಪ್ರಭಾವ ತ್ವಚೆ ಅಲ್ಲಿರುವ ಆ ಮೃದುತ್ವ ಕಾಂತಿ ಹೊಳಪು ಇದೆಲ್ಲವೂ ಮಾಯವಾಗುತ್ತಾ ಹೋಗುತ್ತದೆ.

ಆದರೆ ಕೆಲವೊಂದು ಪರಿಹಾರಗಳನ್ನು ಮಾಡುತ್ತಾ ಕೆಲವೊಂದು ಆಹಾರ ಕ್ರಮವನ್ನ ಪಾಲಿಸುತ್ತ ಕೆಲವೊಂದು ಜೀವನಶೈಲಿಯನ್ನು ಅಳವಡಿಸಿಕೊಳ್ಳುತ್ತ ಕೆಲವೊಂದು ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ನಮ್ಮ ತ್ವಚೆಯು ಕಾಂತಿಯುತವಾಗಿ ಸಿಕೊಳ್ಳಬಹುದು ಹೌದು ಸಿಕ್ಕಸಿಕ್ಕ ಕ್ರೀಮ್ ಹಚ್ಚುವುದರ ಬದಲು ನಾವು ನಮ್ಮ ತ್ವಚೆಗೆ ಕಾಳಜಿ ಮಾಡುವಂತಹ ಒಳ್ಳೆಯ ಮನೆಮದ್ದು ಪಾಲಿಸ ಬೇಕುಪ್ರತಿದಿನ ಕನಿಷ್ಠ ಪಕ್ಷ 3 ಬಾರಿಯಾದರೂ ಮುಖವನ್ನ ಸ್ವಚ್ಛಮಾಡಬೇಕು ಮುಖ ತೊಳೆಯಬೇಕು ಹಾಗೂ ಹೊರಗೆ ಹೋಗಿ ಬಂದ ಮೇಲೆ ಮುಖವನ್ನು ತೊಳೆಯಬೇಕು ಮುಖವನ್ನ ಮಾಯಿಶ್ಚರೈಸ್ ಮಾಡಬೇಕು ಮತ್ತು ಇಷ್ಟೇ ಸಾಲದು ಒಳ್ಳೆಯ ಆಹಾರ ಪದಾರ್ಥಗಳನ್ನು ಸೇವಿಸಬೇಕು.

ಹೌದು ಇದೆಲ್ಲ ಕ್ರಮವನ್ನ ಪಾಲಿಸಿ ನಾವು ಉತ್ತಮ ಆಹಾರ ಪದಾರ್ಥಗಳ ಸೇವನೆ ಮಾಡದೆ ಹೋದಾಗ ನಮ್ಮ ತ್ವಚೆ ಕಾಂತಿಯುತವಾಗಿ ಕಾಣುವುದಿಲ್ಲ ಹಾಗಾಗಿ ನಾವು ತಿನ್ನುವ ಆಹಾರವೂ ಕೂಡ ನಮ್ಮ ಮುಖದ ಹೊಳಪಿಗೆ ಕಾರಣವಾಗುತ್ತದೆ.ಈಗ ನಾವು ಮನೆಯಲ್ಲೇ ಮಾಡಬಹುದಾದ ತ್ವಚೆಯ ಮೇಲಿರುವ ಕಲೆಗಳನ್ನು ನಿವಾರಿಸಿ ತ್ವಚೆಯನ್ನೂ ಸಾಫ್ಟ್ ಮಾಡುವಂತಹ ಮನೆಮದ್ದಿನ ಕುರಿತು ತಿಳಿಯೋಣ ಈ ಮನೆಮದ್ದು ಮಾಡುವುದಕ್ಕೆ ಬೇಕಾಗಿರುವುದು ಕಡಲೆಹಿಟ್ಟು ಮೊಸರು ಜೇನುತುಪ್ಪ ಮತ್ತು ನಿಂಬೆರಸ.

ಕಡಲೆಹಿಟ್ಟು ಆ್ಯಂಟಿಆಕ್ಸಿಡೆಂಟ್ ಹೊಂದಿದೆ ಮುಖದ ಮೇಲಿರುವ ಕಲೇನ ನಿವಾರಿಸುತ್ತೆ ತ್ವಚೆಯನ್ನು ಮೃದುವಾಗಿಸುತ್ತದೆ ಮುಸುರು ಇದರಲ್ಲಿ ಕೂಡ ಆ್ಯಂಟಿ ಆಕ್ಸಿಡೆಂಟ್ ಇದೆ ಜೊತೆಗೆ ನಿಂಬೆ ರಸ ವಿಟಮಿನ್ ಸಿ ಜೀವಸತ್ವವನ್ನೂ ಹೊಂದಿರುತ್ತದೆ ಹಾಗೆಯೇ ಜೇನುತುಪ್ಪ ಮುಖವನ್ನ ನೈಸರ್ಗಿಕವಾಗಿ ಕಾಂತಿಯುತವಾಗಿಸುತ್ತದೆ ಹೊಳಪಾಗಿಸುತ್ತದೆ.ಈಗ ಈ ಪದಾರ್ಥಗಳನ್ನು ಮಿಶ್ರಣ ಮಾಡಿ ಮುಖಕ್ಕೆ ಲೇಪ ಮಾಡಬೇಕು ಬಳಿಕ ಇದು ಒಣಗಿದ ಮೇಲೆ ಮುಖವನ್ನು ತಣ್ಣೀರಿನಿಂದ ಅಥವಾ ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಬೇಕು

ಈ ಪರಿಹಾರವನ್ನು ದಿನಬಿಟ್ಟು ದಿನ ಮಾಡುತ್ತಾ ಬರುವುದರಿಂದ ತ್ವಚೆ ಸಾಫ್ಟ್ ಆಗುತ್ತದೆ ಕಲೆಗಳು ನಿವಾರಣೆಯಾಗುತ್ತದೆ ಮತ್ತು ನಿಮಗೆ ಯಾವುದೇ ಕ್ರೀಮ್ ಅವಶ್ಯಕತೆಯೇ ಬರುವುದಿಲ್ಲ ಪಿಗ್ಮೆಂಟೇಶನ್ ತೆಗೆದುಹಾಕಲು ಟ್ಯಾನ್ ರಿಮೂವ್ ಮಾಡಲು.ಈ ಸರಳ ಪರಿಹಾರವನ್ನು ನೀವು ಕೂಡ ಪಾಲಿಸಿ ಉತ್ತಮ ಆಹಾರಗಳು ಅಂದರೆ ವಿಟಮಿನ್ ಸಿ ಜೀವಸತ್ವ ವಿಟಮಿನ್ ಎ ಮತ್ತು ವಿಟಮಿನ್ ಇ ಜೀವಸತ್ವ ಹೇರಳವಾಗಿರುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ತ್ವಚೆಯ ಕಾಂತಿ ಹೆಚ್ಚುತ್ತದೆ ತ್ವಚೆಯ ಮೇಲಿರುವ ಕಲೆಗಳು ನಿವಾರಣೆಯಾಗುತ್ತವೆ ಮೊಡವೆ ಸಮಸ್ಯೆ ಪರಿಹಾರವಾಗುತ್ತೆ.