ಮುರುಡೇಶ್ವರದಲ್ಲಿ ತಿಮಿಂಗಿಲದ ವಾಂತಿ ಪತ್ತೆಯಾಗಿದೆ ಅದರ ಬೆಲೆ ಕೇಳಿದ್ರೆ ಶಾಕ್ ಆಗಿ ತಲೆ ತಿರುಗುತ್ತೆ …!!!!

125

ಪ್ರಕೃತಿ ಅಂದರೆ ಹಾಗೆ ಮನುಷ್ಯ ಪ್ರಕೃತಿಗೆ ಬೆಲೆಕಟ್ಟಲು ಸಾಧ್ಯವಿಲ್ಲಾ, ಅದೇ ರೀತಿ ಪ್ರಕೃತಿಗೆ ಬೆಲೆಕಟ್ಟಲು ಸಾಧ್ಯವಿಲ್ಲ ಎಂಬುದಕ್ಕೆ ಮತ್ತೊಂದು ನಿದರ್ಶನವನ್ನು ನಾವು ನಿಮಗೆ ತಿಳಿಸಲಿದ್ದೇವೆ ಇಂದಿನ ಲೇಖನದಲ್ಲಿ ಹೌದು ಈ ಘಟನೆ ನಡೆದಿರುವುದು ನಮ್ಮ ಕರ್ನಾಟಕ ರಾಜ್ಯದಲ್ಲಿಯೇ. ಮುರುಡೇಶ್ವರದಲ್ಲಿ ಸಿಕ್ಕಿರುವ ಈ ಕುರುಹು ಲಕ್ಷಾಂತರ ಬೆಲೆ ಬಾಳುತ್ತದೆ ಎಂದು ಅಧ್ಯಯನಕಾರರು ಇದೀಗ ತಿಳಿಸಿದ್ದಾರೆ ಹೊನ್ನಾವರ ಮೂಲದ ಅರಣ್ಯಾಧಿಕಾರಿಯೊಬ್ಬರು ರಂಗನಾಥ್ ಎಂಬುವವರು ತಿಳಿಸಿರುವ ಪ್ರಕಾರ ಈ ಅಪರೂಪದ ವಸ್ತುವಿನ ಬೆಲೆ ಸುಮಾರು ಲಕ್ಷ₹ಎಂದು ತಿಳಿಸಲಾಗಿದೆ ಇದರ ಬಗ್ಗೆ ಇನ್ನಷ್ಟು ವಿಶೇಷ ಮಾಹಿತಿಗಳು ತಿಳಿದುಕೊಳ್ಳೋಣ ಇವತ್ತಿನ ಈ ಲೇಖನದಲ್ಲಿ ಹಾಗೂ ಈ ವಿಚಾರವನ್ನು ಕುರಿತು ಇನ್ನಷ್ಟು ಮಾಹಿತಿ ಅನ್ನೂ ನೀವು ಸಹ ತಿಳಿದುಕೊಳ್ಳಬೇಕಾದರೆ ಇಂದಿನ ಈ ಮಾಹಿತಿಯಲ್ಲಿ ನೀಡಲಾಗಿರುವ ಈ ವೀಡಿಯೊವನ್ನು ಸಂಪೂರ್ಣವಾಗಿ ನೀವು ಕೂಡ ವೀಕ್ಷಣೆ ಮಾಡಿ.

ಮುರ್ಡೇಶ್ವರ ಮೂಲದ ಮೀನುಗಾರರೊಬ್ಬರು ಸಮುದ್ರ ದಡಕ್ಕೆ ಹೋದಾಗ ಅವರಿಗೆ ಅಲ್ಲಿ ಅಚ್ಚರಿಯೊಂದು ಕಾದಿತ್ತು ಸಮುದ್ರದ ದಡದಲ್ಲಿ ಬಿದ್ದಿದ್ದ ವಸ್ತುವನ್ನು ತೆಗೆದುಕೊಂಡು ನೋಡಿದಾಗ ಅವರಿಗೆ ಅದು ವಿಚಿತ್ರ ಅನಿಸುತ್ತದೆ ಹಾಗೂ ಆ ಮೀನುಗಾರ ಆ ವಸ್ತು ಅನ್ನು ತೆಗೆದುಕೊಂಡು ಹೋಗಿ ತಮ್ಮ ಮನೆಯಲ್ಲಿ ಇರಿಸಿಕೊಂಡು ಮಾರನೆಯ ದಿವಸ ಅರಣ್ಯಾಧಿಕಾರಿಗಳ ಬಳಿ ಹೋಗಿ ಆ ವಸ್ತುವನ್ನು ಅವರಿಗೆ ಸಲ್ಲಿಸಿದ ನಂತರ ಅರಣ್ಯಾಧಿಕಾರಿಯಾದ ರಂಗನಾಥ್ ಎಂಬುವವರು ಅರಣ್ಯ ಇಲಾಖೆ ಅಲ್ಲಿ ಕೆಲಸಕ್ಕೆ ಸೇರಿ ಬಹಳ ವರ್ಷಗಳೇ ಆಗಿದ್ದವು, ತಮ್ಮ ಅನುಭವದ ಮೇಲೆ ಇವರು ಹೇಳುವ ಪ್ರಕಾರ ತಿಮಿಂಗಲದ ವಾಂತಿ ಇದಾಗಿದ್ದು ಸುಮಾರು ಒಂದು ಕೆಜಿಯಷ್ಟು ತೂಕ ಇರುವ ಈ ವಸ್ತು ಲಕ್ಷಾಂತರ ರೂಪಾಯಿ ಬೆಲೆ ಬಾಳುತ್ತದೆ.

ಹೌದು ತಿಮಿಂಗಿಲಗಳು ಸಾಮಾನ್ಯವಾಗಿ ವಾಂತಿ ಮಾಡುವುದಿಲ್ಲ ಅಪರೂಪಕ್ಕೆ ತಿಮಿಂಗಿಲಗಳು ವಾಂತಿ ಮಾಡಿದರು ಆ ವಸ್ತುವು ಗಟ್ಟಿಯಾಗಿರುತ್ತದೆ ಯಾಕೆಂದರೆ ತಿಮಿಂಗಿಲಗಳು ಸೇವಿಸಿದ ಆಹಾರ ಹೊಟ್ಟೆಯಲ್ಲಿಯೇ ರಾಸಾಯನಿಕ ಕ್ರಿಯೆಗೆ ಒಳಗಾಗಿರುತ್ತವೆ. ಯಾವಾಗ ತಿಮಿಂಗಿಲ ವಾಂತಿ ಮಾಡುತ್ತದೆ ಅದರ ಹೊಟ್ಟೆಯಿಂದ ಬರುವ ಆ ವಸ್ತು ಗಟ್ಟಿಯಾಗಿರುತ್ತದೆ ಮತ್ತು ಇದು ಸಾಕಷ್ಟು ಪ್ರಯೋಜನಕರವಾದ ಅವತ್ತು ಆಗಿದ್ದು ಈಗಾಗಲೇ ರಾಸಾಯನಿಕ ಕ್ರಿಯೆಗೆ ಒಳಗಾಗಿರುವ ಈ ವಸ್ತು ಹೆಚ್ಚು ಉಷ್ಣಾಂಶ ಹೊಂದಿದಾಗ ವ್ಯಾಕ್ಸ್ ನಂತೆ ಕರಗುತ್ತದೆ ಆಗ ಇದು ಸ್ವಲ್ಪ ಕೆಟ್ಟ ವಾಸನೆ ಬೀರುತ್ತದೆ ಆದರೆ ಈ ವಸ್ತು ಗಟ್ಟಿಯಾಗಿದ್ದಾಗ ಇದರಿಂದ ಸುವಾಸನೆ ಹೊರಬರುತ್ತದೆ ಎಂದು ಕೂಡ ಹೇಳಲಾಗಿದೆ.

ಮುರ್ಡೇಶ್ವರ ಪ್ರದೇಶದಲ್ಲಿ ದೊರೆತ ಈ ವಸ್ತುವನ್ನು ಹೆಚ್ಚಿನ ಅಧ್ಯಯನಕ್ಕಾಗಿ ಬಳಸಲಾಗುತ್ತದೆ ಎಂದು ಕೂಡ ಇದೀಗ ತಜ್ಞರು ತಿಳಿಸಲಾಗಿದ್ದು, ಇದೀಗ ದೊರೆತಿರುವ ಈ ವಸ್ತು ಸ್ಪರ್ಮ್ ವೇಲ್ ಎಂಬ ಜಾತಿಗೆ ಸೇರಿರುವ ತಿಮಿಂಗಿಲದ ವಾಂತಿ ಎಂದು ತಿಳಿಸಲಾಗಿದೆ. ಇದರ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಈ ಮಾಹಿತಿಯಲ್ಲಿ ನೀಡಲಾಗಿರುವ ವೀಡಿಯೋನ್ನು ಸಂಪೂರ್ಣವಾಗಿ ನೋಡಿ ಧನ್ಯವಾದಗಳು.