ನೀವೇನಾದರೂ ಚಿಕನ್ ಪ್ರಿಯರ, ಹಾಗಾದರೆ ಚಿಕನ್ ಪ್ರಿಯರೇ ನಿಮಗೆ ಒಂದು ಗುಡ್ ನ್ಯೂಸ್. ಹೌದು ಚಿಕನ್ ಲಿವರ್ ತಿನ್ನುವುದರಿಂದ ಎಷ್ಟೆಲ್ಲ ಲಾಭ ಇದೆ ಗೊತ್ತಾ, ಇಂದಿನ ಮಾಹಿತಿಯನ್ನು ನೀವು ಸಂಪೂರ್ಣವಾಗಿ ತಿಳಿದರೆ ನಿಮಗೂ ಕೂಡ ತಿಳಿಯುತ್ತದೆ ಚಿಕನ್ ಲಿವರ್ ಅನ್ನು ತಿನ್ನುವುದರಿಂದ, ಆರೋಗ್ಯಕ್ಕೆ ಏನೆಲ್ಲ ಲಾಭಗಳು ಇವೆ ಅಂತ.
ಎಷ್ಟೋ ಜನರು ಅಂದುಕೊಂಡಿದ್ದಾರೆ ಚಿಕನ್ ಅನ್ನ ತಿನ್ನುವುದರಿಂದ ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಆರೋಗ್ಯವನ್ನು ಕ್ಷೀಣಿಸುತ್ತದೆ ಅಂತ. ಆದರೆ ಇಂದಿನ ಮಾಹಿತಿಯಲ್ಲಿ ನೀವು ತಿಳಿದುಕೊಳ್ಳಿ ಚಿಕನ್ ಲಿವರ್ ಅನ್ನು ನಿಯಮಿತವಾಗಿ ಸೇವನೆ ಮಾಡಿದರೆ ಸಾಕು, ಎಷ್ಟೊಂದು ಆರೋಗ್ಯಕರ ಲಾಭ ದೊರೆಯುತ್ತದೆ ಅಂತ.
ಮೊದಲನೆಯದಾಗಿ ಈ ಚಿಕನ್ ಲಿವರ್ ನ ಬಗ್ಗೆ ಹೇಳುವುದಾದರೆ, ಚಿಕನ್ ಲಿವರ್ ನಲ್ಲಿ ಹೆಚ್ಚಾದ ಕೊಲೆಸ್ಟ್ರಾಲ್ ಅಂಶ ಇದೆ. ಆದರೂ ಕೂಡ ಈ ಚಿಕನ್ ಲಿವರ್ನಲ್ಲಿ ಕೊಲೆಸ್ಟ್ರಾಲ್ ನೊಂದಿಗೆ ಉತ್ತಮ ಗುಣಮಟ್ಟದ ಪ್ರೊಟೀನ್ ಕ್ಯಾಲೊರಿ ಬೀಟಾಕ್ಯಾರೊಟಿನ್ ಸತು ಮೆಗ್ನೀಷಿಯಂ ಫಾಸ್ಫರಸ್ ಕೂಡಾ ಇದೆ.
ಒಂದು ಪ್ಲೇಟ್ ಚಿಕನ್ ಲಿವರ್ ನಲ್ಲಿ ನಲವತ್ತೈದು ಪ್ರತಿಶತದಷ್ಟು ಕ್ಯಾಲರಿ ಇರುತ್ತದೆ. ಇದರ ಜೊತೆಗೆ ಒಂದು ಗ್ರಾಂ ಕೊಬ್ಬು ಹದಿನೈದು ಮಿಲಿ ಗ್ರಾಂ ಸೋಡಿಯಂ ಇದೆ. ಈ ಚಿಕನ್ ಲಿವರ್ ನಲ್ಲಿ ಉನ್ನತ ಮಟ್ಟದ ಪ್ರೋಟಿನ್ ಅಂಶವೂ ಇದೆ, ಆದರೆ ಏಳು ಗ್ರಾಂ ಪ್ರೊಟೀನ್ ಇರುವ ಒಂದು ಪ್ಲೇಟ್ ಚಿಕನ್ ಲಿವರ್ ನಲ್ಲಿ ನೂರ ಎಂಭತ್ತು ಮಿಲಿ ಗ್ರಾಂ ಕೊಲೆಸ್ಟ್ರಾಲ್ ಅಂಶ ಇರುತ್ತದೆ.
ಆದರೆ ಚಿಕನ್ ಲಿವರ್ ಅನ್ನು ತಿನ್ನುವುದರಿಂದ ಯಾರೂ ರಕ್ತ ಹೀನತೆ ಸಮಸ್ಯೆಯಿಂದ ಬಳಲುತ್ತಾ ಇರುತ್ತಾರೆಯೋ ಅಂಥವರು ಪರಿಹಾರವನ್ನು ಪಡೆದುಕೊಳ್ಳಬಹುದು ಚಿಕನ್ ಇವರನ್ನು ಸೇವಿಸುವುದರಿಂದ ಹೌದು ರಕ್ತ ಹೀನತೆ ಸಮಸ್ಯೆ ಕಾಡುತ್ತಿದ್ದರೆ ಸುಸ್ತು ಆಯಾಸ ಕಂಡು ಬರುತ್ತದೆ ಮತ್ತು ಕೆಲಸದಲ್ಲಿ ಆಸಕ್ತಿಯನ್ನು ಕೂಡ ತೋರುವುದಕ್ಕೆ ಆಗುತ್ತಿರುವುದಿಲ್ಲ, ಅಂಥವರು ನಿಮ್ಮ ಪ್ರಿಯವಾದ ಚಿಕನ್ ಲಿವರ್ ಅನ್ನು ಸೇವಿಸಿ ರಕ್ತ ಹೀನತೆ ಸಮಸ್ಯೆಯನ್ನು ದೂರ ಮಾಡಿಕೊಳ್ಳಿ. ಹಾಗೆ ಮನಸ್ಸಿನ ಒತ್ತಡತೆಯನ್ನು ಕೂಡ ದೂರ ಮಾಡುತ್ತದೆ ಈ ಚಿಕನ್ ಲಿವರ್.
ಮೆದುಳಿಗೆ ಸಂಬಂಧಪಟ್ಟ ಅಲ್ಪ ಯಿಮರ್ ಕಾಯಿಲೆಯನ್ನು ಕೂಡ ದೂರ ಮಾಡುತ್ತದೆ ಈ ಚಿಕನ್ ಲಿವರ್. ಹಾಗೆ ಚಿಕನ್ ಲಿವರ್ ನಲ್ಲಿ ಇರುವಂತಹ ಇನ್ನೂರ ಎಂಬತ್ತು ಒಂದು ಪ್ರತಿಶತದಷ್ಟು ವಿಟಮಿನ್ ಎ ಅಂಶವು ಕಣ್ಣಿನ ದೃಷ್ಟಿಯನ್ನು ವೃದ್ಧಿ ಮಾಡುವುದಲ್ಲದೆ, ಇದರಲ್ಲಿರುವ ಬೀಟಾ ಕ್ಯಾರೊಟಿನ್ ಅಂಶವೂ ಅಕ್ಷಿಪಟಲದ ಅವನತಿಯನ್ನು ತಡೆಗಟ್ಟುತ್ತದೆ.
ಚಿಕನ್ ಲಿವರ್ ನಲ್ಲಿ ಇರುವ ಎಪ್ಪತ್ತೆರಡು ಪ್ರತಿಶತದಷ್ಟು ಕಬ್ಬಿಣದ ಅಂಶವು ದೇಹದಲ್ಲಿ ಕೆಂಪು ರಕ್ತ ಕಣಗಳ ಉತ್ಪನ್ನವನ್ನು ಹೆಚ್ಚು ಮಾಡುತ್ತದೆ. ಚಿಕನ್ ಲಿವರ್ ನಲ್ಲಿ ಸತು ಮೆಗ್ನೀಷಿಯಂ ಫಾಸ್ಫರಸ್ ಹೇರಳವಾಗಿ ಸಿಗುತ್ತದೆ. ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ಹಲ್ಲು ನೋವಿನ ಸಮಸ್ಯೆಯನ್ನು ಕೂಡ ದೂರ ಮಾಡುವ ಶಕ್ತಿಯನ್ನು, ಈ ಚಿಕನ್ ಲಿವರ್ ಹೊಂದಿರುತ್ತದೆ.
ಚಿಕನ್ ಲಿವರ್ ನಲ್ಲಿ ವಿಟಮಿನ್ ಬೀ ೧೨ ಇರುತ್ತದೆ, ಈ ಚಿಕನ್ ಲಿವರ್ ನಲ್ಲಿ ಪಾಟೆ ಕೊಬ್ಬಿನಾಂಶ ವಿಟಮಿನ್ಸ್ ಹೇರಳವಾಗಿ ಇರುತ್ತದೆ, ಇದು ಉತ್ತಮ ಆರೋಗ್ಯವನ್ನು ನೀಡುವುದರಲ್ಲಿ ಯೋಗ್ಯವಾಗಿರುತ್ತದೆ ಅಂತಾನೆ ಹೇಳಬಹುದು. ಇಷ್ಟೆಲ್ಲ ಆರೋಗ್ಯಕರ ಲಾಭ ಗಳಿರುವ ಚಿಕನ್ ಲಿವರ್ ಅನ್ನು ಹೆಚ್ಚಾಗಿ ಸೇವಿಸಿದರೆ ಇದು ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಬೀರುತ್ತದೆ ನೆನಪಿನಲ್ಲಿ ಇಡೀ ಚಿಕನ್ ಇವರನ್ನು ನಿಯಮಿತವಾಗಿ ಸೇವಿಸಿ.