ಮೈ ಮೇಲೆ ಸುತ್ತ ಗಾಯಗಳು ಆದಲ್ಲಿ ಈ ಒಂದು ಮನೆಮದ್ದು ಮಾಡಿ ಹಚ್ಚಿ ಸಾಕು … ಸುಟ್ಟ ಕಲೆಗಳನ್ನು ಕೂಡ ಮಾಯಾ ಮಾಡುತ್ತದೆ…

229

ಸುಟ್ಟಗಾಯ ನಿವಾರಣೆಗೆ ಈ ಪರಿಹಾರ ಮಾಡಿ ಹೌದು ಸುಟ್ಟಗಾಯ ನಿವಾರಣೆಗೆ ಮನೆಮದ್ದು ಇದಾಗಿದ್ದು ನೋವು ಇಲ್ಲದೆ ಹೇಗೆ ಗಾಯವನ್ನು ಪರಿಹರ ಮಾಡಿಕೊಳ್ಳೋದು ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ.ನಮಸ್ಕಾರಗಳು ಇಂದಿನ ಈ ಲೇಖನದಲ್ಲಿ ಸುಟ್ಟ ಗಾಯದ ಕುರಿತು ಮಾತನಾಡುತ್ತಿದ್ದು ಸುಟ್ಟಗಾಯ ಎಷ್ಟು ನೋವು ಇರುತ್ತದೆ ಅನ್ನೋದು ಗೊತ್ತೇ ಇರುತ್ತದೆ.ಈ ಲೇಖನದಲ್ಲಿ ಸುಟ್ಟಗಾಯಕ್ಕೆ ತುಂಬ ಸುಲಭವಾಗಿ ಮಾಡಬಹುದಾದ ಹಾಗೂ ಹೆಚ್ಚು ನೋವು ಇಲ್ಲದೆ ಗಾಯ ನಿವಾರಣೆಯಾಗುವಂತಹ ಸುಲಭ ಮತ್ತು ಸರಳ ಮನೆಮದ್ದಿನ ಕುರಿತು ನಾವು ಮಾತನಾಡುತ್ತಿದ್ದೇವೆ ಇದಕ್ಕಾಗಿ ನಿಮಗೆ ಬೇಕಾಗಿರುವುದು ಕೇವಲ ಎರಡೇ ಪದಾರ್ಥಗಳು ಬನ್ನಿ ಸ್ನೇಹಿತರೆ ಸುಟ್ಟಗಾಯಕ್ಕೆ ಈ ಗಾಯ ನಿವಾರಣೆಗೆ ಮತ್ತು ಉರಿ ಬೇಗ ಕಡಿಮೆಯಾಗುವುದಕ್ಕೆ

ಮಾಡಬಹುದಾದ ಮನೆಮದ್ದಿನ ಕುರಿತು ತಿಳಿದುಕೊಳ್ಳೋಣ ಹಳ್ಳಿಕಡೆ ಗಾಯ ಸುಟ್ಟ ತಕ್ಷಣವೇ ಅದಕ್ಕೆ ಕೊಬ್ಬರಿ ಎಣ್ಣೆ ಸವರಿರುತ್ತಾರೆ ಯಾಕೆಂದರೆ ಕೊಬ್ಬರಿ ಎಣ್ಣೆಯಲ್ಲಿ ಆಂಟಿ ಇನ್ ಫ್ಲಮೇಟರಿ ಗುಣ ಇದೆ ಅಥವಾ ರಕ್ತ ಸೋರುತ್ತಿದೆ ಅಂದರೆ ಅರಿಶಿಣ ಲೇಪನ ಮಾಡುತ್ತಾರೆ.ಯಾಕೆ ಅಂದರೆ ಈ ಅರಿಶಿಣದಲ್ಲಿ ಆಂಟಿ ಇನ್ ಫ್ಲಮೇಟರಿ ಗುಣ ಇದೆ ಆ್ಯಂಟಿ ಬ್ಯಾಕ್ಟೀರಿಯಲ್ ಗುಣ ಇದೆ ಆ್ಯಂಟಿವೈರಲ್ ಅಂಶ ಇದೆ ಹಾಗೂ ಇದು ರಕ್ತವನ್ನು ಬೇಗನೆ ಕ್ಲಾಟ್ ಮಾಡುವುದರಿಂದ ಈ ರಕ್ತ ಸೋರಿಕೆ ಬಹಳ ಬೇಗ ಕಡಿಮೆಯಾಗುತ್ತದೆ.

ಹಾಗಾಗಿ ದೇಹದಲ್ಲಿ ಯಾವುದೇ ಭಾಗದಲ್ಲಿ ಈ ರಕ್ತ ಸೋರುತ್ತಿದ್ದರೆ ಅದನ್ನು ನಿಲ್ಲಿಸುವುದಕ್ಕೆ ಅಥವಾ ಸುಟ್ಟ ಗಾಯದ ಮೇಲೆ ಕೊಬ್ಬರಿ ಎಣ್ಣೆ ಲೇಪನ ಮಾಡುವುದು ಈ ಪರಿಹಾರಗಳ ತಕ್ಷಣವೇ ಮಾಡಿ ಮತ್ತು ಸುಟ್ಟ ಗಾಯದ ನೋವು ಮತ್ತು ಉರಿ ಬಹಳ ಬೇಗ ಕಡಿಮೆಯಾಗಬೇಕು ಅಂದಲ್ಲಿ ಈ ಸರಳ ವಿಧಾನ ಪಾಲಿಸಿ ಇದನ್ನು ಮಾಡುವುದು ಹೇಗೆ ಅಂದರೆ ಸುಟ್ಟಗಾಯ ಆದಾಗ ಅದರ ಮೇಲೆ ಅಂದರೆ ಆ ದಿನವೇ ಈ ಪರಿಹರ ಪಾಲಿಸಬೇಡಿ.

ಒಂದೆರಡು ದಿನದ ನಂತರ ಆ ಗಾಯ ತುಂಬಾನೇ ಉರಿಯುತ್ತಿದೆ ಅಥವಾ ಗಾಯ ಇನ್ನೂ ಹಸಿಯಾಗಿಯೇ ಇದೆ ಆ ಗಾಯ ಪರಿಹಾರ ಆಗಬೇಕು ಅಂದಲ್ಲಿಹೀಗೆ ಮಾಡಿ ಈ ಪರಿಹಾರ ಮಾಡಲು ಬೇಕಾಗಿರುವುದು ಬಾಳೆಹಣ್ಣು ಹೌದು ತುಂಬ ಹಣ್ಣಾಗಿರುವ ಬಾಳೆಹಣ್ಣನ್ನು ತೆಗೆದುಕೊಳ್ಳಿ ಉತ್ತಮ ಅಂದರೆ ಚುಕ್ಕಿ ಬಾಳೆಹಣ್ಣು ಆ ಕಳಿತ ಬಾಳೆಹಣ್ಣನ್ನು ತೆಗೆದುಕೊಂಡು, ಅದನ್ನೂ ಪೇಸ್ಟ್ ಮಾಡಿ ಆ ಗಾಯದ ಮೇಲೆ ಲೇಪ ಮಾಡಿ.ಬಾಳೆಹಣ್ಣನ್ನು ಪೇಸ್ಟ್ ಮಾಡಿ ಅದನ್ನು ಗಾಯದ ಮೆಲೆ ಲೇಪ ಮಾಡಿದ ಮೇಲೆ ಆ ಬಾಳೆಹಣ್ಣಿನ ಪೇಸ್ಟ್ ಮೇಲೆ ಅಗಲವಾದ ವಿಳೇದೆಲೆಯನ್ನು ಹಾಕಿ ಬಟ್ಟೆಯ ಸಹಾಯದಿಂದ ಕಟ್ಟಬೇಕು ಈ ರೀತಿ ಮಾಡುವುದರಿಂದ ಬಹಳ ಬೇಗ ಸುಟ್ಟಗಾಯ ಉರಿ ಇವೆಲ್ಲವೂ ಕಡಿಮೆಯಾಗುತ್ತದೆ.

ಈ ನೈಸರ್ಗಿಕ ಮನೆಮದ್ದನ್ನು ಪಾಲಿಸುವುದರಿಂದ ಯಾವುದೇ ಔಷಧೀಯ ಅವಶ್ಯಕತೆ ಇಲ್ಲ ತುಂಬಾ ಸುಲಭವಾಗಿ ಹಾಗೂ ತುಂಬಾ ಬೇಗ ಸುಟ್ಟ ಗಾಯದ ನೋವನ್ನು ನಿವಾರಣೆ ಮಾಡಿಕೊಳ್ಳಬಹುದು ಮತ್ತು ಉರಿ ನೋವು ಎಲ್ಲವೂ ಆಗುವುದರ ಜೊತೆಗೆ ಗಾಯ ಕೂಡ ಬಹಳ ಬೇಗ ಮಾಯುತ್ತದೆ.ಈ ಸರಳ ಪರಿಹಾರವನ್ನು ಪ್ರತಿದಿನ ಮಾಡಿ ಮಲಗುವ ಮುನ್ನ ಈ ಪರಿಹಾರ ಕಾಣಿಸಿದರೆ ಇನ್ನೂ ಒಳ್ಳೆಯದು ಈ ಸರಳ ವಿಧಾನವನ್ನು ನೆನಪಿನಲ್ಲಿಟ್ಟುಕೊಂಡು ಯಾವುದೇ ಸಮಯದಲ್ಲಿ ಇಂಥದ್ದೊಂದು ಸನ್ನಿವೇಶ ಅಂದರೆ ಸುಟ್ಟಗಾಯ ಆದಾಗ ಈ ಪರಿಹಾರ ಪಾಲಿಸಿ ಇದು ನೈಸರ್ಗಿಕ ಮತ್ತು ತುಂಬ ಸುಲಭದ ಮನೆಮದ್ದಾಗಿದೆ.