ನಮಸ್ಕಾರಗಳು ಪ್ರಿಯ ಓದುಗರೆ ನಮ್ಮಲ್ಲಿ ಏನೇ ಸಮಸ್ಯೆಗಳಾದರೂ ಅಥವಾ ಕೆಲವೊಂದು ವಿಚಾರಗಳು ಕೋರ್ಟ್ ತನಕ ಕೂಡ ಹೋಗಿಬಿಡುತ್ತದೆ ಅಂತಹ ವಿಚಾರಗಳನ್ನು ನಾವು ಪರಿಹಾರ ಮಾಡಿಕೊಳ್ಳೋದಕ್ಕೆ ಕಾನೂನು ಮೂಲಕ ಹೋಗ್ತೇವೆ ಅಲ್ವ ಹೌದು ಈ ದಾಯಾದಿಗಳ ವಿಚಾರಗಳೇ ಆಗಿರಲಿ ಅಥವಾ ಆಸ್ತಿ ವಿಚಾರ ಇನ್ಯಾವುದೋ ವಿಚಾರದ ಸಂಬಂಧ ಕೋರ್ಟ್ ಮೆಟ್ಟಿಲನ್ನೂ ಏರಿ ಇರುತ್ತೆವೆ ಆದರೆ ಈ ದೇವಾಲಯದ ವಿಶೇಷತೆ ಕೇಳಿದಾಗ ಖಂಡಿತ ನೀವು ಅಚ್ಚರಿ ಪಡ್ತೀರಾ ಹೌದು ಇಲ್ಲಿಗೆ ಬಂದವರಿಗೆ ನ್ಯಾಯ ಸಿಕ್ಕೇ ಸಿಗುತ್ತದೆ ಅಂತ ಹೌದು ಸಮಸ್ಯೆಯಿಂದ ಬಳಲುತ್ತಾ ಇರುವವರು ಈ ದೇವಾಲಯಕ್ಕೆ ಬಂದು ಮುಖ್ಯ ಕಚೇರಿಗೆ ಪತ್ರ ಬರೆದುಕೊಟ್ಟು ಹೋಗಿರುತ್ತಾರೆ ಬಳಿಕ ದೇವಸ್ಥಾನದ ಸಂಸ್ಥಾನದಿಂದ ಯಾವುದಾದರೂ ನಿಗದಿಪಡಿಸಿದ ದಿನದಂದು ಈ ರೀತಿ ಪಂಚಾಯಿತಿ ಇದೆ ಎಂದು ಇಬ್ಬರಿಗೂ ಕೂಡ ಪತ್ರ ಹೋಗುತ್ತದೆ.
ದೇವಸ್ಥಾನದವರು ನಿಗದಿಪಡಿಸಿದ ದಿನಾಂಕದಂದು ಆ ಇಬ್ಬರೂ ಕೂಡ ದೇವಸ್ಥಾನಕ್ಕೆ ಬರಲೇಬೇಕು ಅಕಸ್ಮಾತ್ ದೇವಸ್ಥಾನಕ್ಕೆ ಬರದೇ ಇದ್ದರೆ ಇಲ್ಲಿ ಇರುವ ನಂಬಿಕೆ ಏನು ಅಂತ ಕೇಳಿದಾಗ ನೀವು ಕೂಡ ಅಚ್ಚರಿ ಪಡ್ತೀರಾ ಹೌದು ಸ್ನೇಹಿತರ ಅಷ್ಟಕ್ಕೂ ಇಲ್ಲಿಯ ಪವಾಡವೇ ಬೇರೆಯಾಗಿದೆ ದೇವಸ್ಥಾನದ ಸಂಸ್ಥಾನವು ಪತ್ರ ಕಳುಹಿಸಿದ್ದರು ಅವರಿಗೆ ಪತ್ರ ತಲುಪಿದ್ದರೂ ಆ ಪತ್ರ ಅವರಿಗೆ ಹೋಗಿಲ್ಲ ಅಂದರೆ ಯಾವುದೋ ಕಣ್ಣಿಗೆ ಕಾಣದಿರುವ ಶಕ್ತಿ ಪಂಚಾಯಿತಿಗೆ ಬರದೇ ಇರುವ ವ್ಯಕ್ತಿಯನ್ನು ಕರೆದು ತರುತ್ತದೆ ಎಂಬ ನಂಬಿಕೆ ಇದೆ ಹೌದು ಈ ದೇವಾಲಯ ಎಲ್ಲಿದೆ ಗೊತ್ತಾ ಮಂಗಳೂರು ಮತ್ತು ಕೇರಳದ ನಡುವೆ ಇರುವ ಕಾಸರಗೋಡಿನಲ್ಲಿದೆ.
ಈ ದೇವಾಲಯದಲ್ಲಿ ಕನಕ ಮಹರ್ಷಿಗಳು ತಪಸ್ಸಿಗೆ ಕುಳಿತಿದ್ದ ಕಾರಣ ಕನಕಂತೂರು ಅಂತ ಸಹ ಈ ದೇವಾಲಯವನ್ನು ಕರೆಯುವುದುಂಟು ಇಲ್ಲಿಯವರೆಗೂ ಬಹಳಷ್ಟು ಮಂದಿ ಈ ದೇವಾಲಯಕ್ಕೆ ಬಂದು ನ್ಯಾಯ ಪಡೆದುಕೊಂಡು ಸಹ ಹೋಗಿದ್ದಾರೆ. ವರುಷಕ್ಕೆ ಸುಮಾರು 3 ಸಾವಿರ ದಷ್ಟು ಮಂದಿ ಇಲ್ಲಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳುತ್ತಾರೆ ಸುಮಾರು 3ಸಾವಿರಕ್ಕೂ ಅಧಿಕ ದೂರುಗಳು ಪ್ರತಿ ವರ್ಷ ಇಲ್ಲಿಗೆ ನ್ಯಾಯ ಪಡೆಯುವುದಕ್ಕಾಗಿ ಬರುತ್ತಾರೆ ಎಂದು ಹೇಳಲಾಗಿದೆ.
ಇರದೆ ಕಾಸರಗೋಡಿನಲ್ಲಿರುವ ಈ ದೇವಾಲಯವು ಯಾವುದೇ ನ್ಯಾಯಾಲಯದಲ್ಲಿ ಸಿಗದಿರುವ ನ್ಯಾಯ ಇಲ್ಲಿಗೆ ಬಂದು ನ್ಯಾಯ ಕೋರಿದರೆ ಇಲ್ಲಿರುವ ಇಲ್ಲಿ ನೆಲೆಸಿರುವ ದೇವರು ಖಂಡಿತವಾಗಿಯೂ ನ್ಯಾಯ ಒದಗಿಸಿ ಕೊಡುತ್ತಾರೆ ಎಂಬ ನಂಬಿಕೆಯಿದೆ. ಇಲ್ಲಿ ನೆಲೆಸಿರುವ ದೇವರು ಯಾರು ಎಂದರೆ ಹೇಗೆ ಇಲ್ಲಿಗೆ ಬಂದು ನೆಲೆಸಿದರು ಅಂದರೆ ಒಮ್ಮೆ ಕರ್ನಾಟಕದ ಚಾರ್ಮುಡಿ ಬೆಟ್ಟದಿಂದ ಇಳಿದ ಮಂಜಲಿ ಎಂಬ ದೈವ ನೆಲೆಯಾಗಲು ಸ್ಥಳ ಹುಡುಕುತ್ತಾ ಧರ್ಮಸ್ಥಳಕ್ಕೆ ಹೋಯಿತು. ಅಲ್ಲಿ ಸಾನಿಧ್ಯ ಕೊಟ್ಟು ಬಳಿಕ ನೇತ್ರಾವತಿ ದಾಟಿ ಸೂಕ್ತ ಸ್ಥಳ ಹುಡುಕುತ್ತಾ ಮುಂದುವರೆಯಿತು ಹೀಗೆ ವಿಷ್ಣು ಮೂರ್ತಿ ದೈವದ ಜೊತೆ ರಕ್ತೇಶ್ವರಿ ಹಾಗೂ ಚಾಮುಂಡಿಯ ಹುಡುಕಿಕೊಂಡು ತೆಂಕಣ ಮುಖ ಮಾಡಿ ಕಾಲಾಂಕೂರು ದೇಗುಲಕ್ಕೆ ಬಂದು ಸೇರುತ್ತದೆ.
ಈ ರೀತಿಯಾಗಿ ಇಲ್ಲಿಗೆ ಬಂದ ಭಕ್ತಾದಿಗಳು ಬಹಳಾನೇ ಸಮಸ್ಯೆಗಳನ್ನು ಎದುರಿಸಿದರೂ ಸಹ ಇಲ್ಲಿಗೆ ಬಂದು ನ್ಯಾಯ ಪಡೆದುಕೊಂಡಿರುವ ನಿದರ್ಶನಗಳು ಬಹಳ ನೈಜ ಹೌದು ನ್ಯಾಯಾಲಯಕ್ಕೆ ಹೋದವರೆಲ್ಲರೂ ಕೂಡ ನ್ಯಾಯ ಪಡೆದುಕೊಂಡಿರುತ್ತಾರೆ ಎಂಬುದು ಸುಳ್ಳು ಆದರೆ ಇಲ್ಲಿಗೆ ಬಂದವರು ಮಾತ್ರ ಖಂಡಿತವಾಗಿಯೂ ಈ ಸನ್ನಿಧಾನದಲ್ಲಿ ನ್ಯಾಯ ಪಡೆದುಕೊಂಡಿದ್ದಾರೆ ಎಂಬ ನಂಬಿಕೆ ಇದೆ ಹೌದು ಯಾರೋ ಈ ಪಂಚಾಯಿತಿಗೆ ಬರುವುದಿಲ್ಲವೋ ಅಂತಹವರಿಗೆ ಯಾವುದೋ ಬೇತಾಳ ಶಕ್ತಿಯೊಂದು ಪಂಚಾಯಿತಿಗೆ ಬರದೇ ಇರುವ ವರನ ಕಾಡುತ್ತದೆ ಎಂದು ದೇವಸ್ಥಾನದ ಸಂಸ್ಥಾನದವರು ನಂಬಿಕೆ ಇಟ್ಟಿದ್ದಾರೆ. ಇದೆಲ್ಲಾ ಕೆಲವರಿಗೆ ಮೂಢನಂಬಿಕೆ ಎನಿಸಬಹುದು ಆದರೆ ಇಲ್ಲಿಗೆ ಬಂದು ನ್ಯಾಯ ಪಡೆದುಕೊಂಡು ಹೋಗಿರುವವರು ದಾಯಾದಿ ನಡುವಿನ ಸಮಸ್ಯೆಗಳು ಗಂಡ ಹೆಂಡತಿಯ ನಡುವಿನ ಕಲಹ ಆಸ್ತಿ ವಿಚಾರ ಇನ್ನೂ ಹಲವಾರು ಸಮಸ್ಯೆಗಳಿಗೆ ನ್ಯಾಯ ಪಡೆದುಕೊಂಡು ಹೋಗಿರುವವರ ಸಂಖ್ಯೆ ಕಡಿಮೆಯೇನೂ ಇಲ್ಲ ನೋಡಿ.